ಅಂತ್ಯದ ಹಾದಿ..

0

ತಾನು ತನದೆಂಬ

ಶ್ರೇಷ್ಠತೆಯು ಮೂಡಿ

ಸಹಬಾಳ್ವೆ ಕಮರಿ

ದೌರ್ಜನ್ಯಗಳು ಬಹುವಾಗಿ  

ಸಹನೆಯು ಮೀರಿ 

ಮನಗಳು ಕದಡಿ 

ಶಾಂತತೆ ಕಲಕಿ

ಕೋಪಾಗ್ನಿ ಉಕ್ಕಿದಾಗ

ರೋಷವೇ ಸಂಗಾತಿ

ಮೌನಗಳು ಶಬ್ದಗಳಾಗಿ

ಶಬ್ದಗಳೇ ಮಾತಾಗಿ

ಮಾತಿಗೆ ಮಾತುಗಳು ಬೆಳೆದು

ವಿಕಾರ ಪ್ರತಿಕ್ರಿಯೆಯಾಗಿ ಹೊಮ್ಮಿ

ಪ್ರತಿಕ್ರಿಯೆಗಳು ಕ್ರಿಯೆಯಾಗಿ

ಕ್ರಿಯೆಗಳು ಕ್ರೂರವಾಗಿ

ಕ್ರೂರತನದ ಭೀಕರತೆಯೇ

ಮಾನವೀಯ ಮೌಲ್ಯಗಳ ಅಂತ್ಯ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಶ್ರೀಕಾಂತ್ ರವರೆ ವಾಸ್ತವದ ಸತ್ಯ. ಸುಂದರ ಕವನ . ಇಷ್ಟವಾಯಿತು.ವಂದನೆಗಳು ನಿಮಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕ್ರೂರತನದ ಭೀಕರತೆಯೇ ಮಾನವೀಯ ಮೌಲ್ಯಗಳ ಅಂತ್ಯ<< ತುಂಬಾ ಚೆನ್ನಾಗಿದೆ ಈ ಸಾಲುಗಳು ಶ್ರೀಕಾಂತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದಗಳು ಕೋಮಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದಗಳು ಭಾಗ್ವತ್ ಮಾನವೀಯ ಮೌಲ್ಯಕ್ಕೆ ಹಾನಿಯ ಪರಿ ಈ ರೀತಿಯೇ ಅಲ್ಲವೇ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕೇ "ಕೋಪ ವೆಂಬುದು ಕೇಳು ಪಾಪದಾ ನೆಲಗಟ್ಟು..." ಅಂತ ಬರೆದಿದ್ದಾರಲ್ಲ ಹಿರಿಯರು ಚೊಕ್ಕ ಕವನ ಶ್ರೀಕಾಂತರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದಗಳು ಗೋಪಿನಾಥರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನವೀಯ ಮೌಲ್ಯಗಳ ಕೊಲೆ ಇ೦ದು ಸರ್ವೆ ಸಾಮಾನ್ಯವಾಗಿರುವಾಗ ಉತ್ತಮ ಕವನ ಶ್ರೀಕಾ೦ತರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಧನ್ಯವಾದಗಳು ಮಂಜಣ್ಣ ಇಲ್ಲಿ ಕವಿಯ ಭಾವನೆ ಏನೆಂದರೆ ಜಾತಿ ಮತ ಗಳಲ್ಲಿ ಇದೆ ಎಂದು ಕೊಚ್ಚಿಕೊಳ್ಳುವ ಶ್ರೇಷ್ಠತೆ ವಿನಾಶಕ್ಕೆ ದಾರಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಕವನ ಸೋದರರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಕವನ ಶ್ರೀಕಾಂತ್. ರೋಶ ರೋಷವಾಗಬೇಕಲ್ಲ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿ ಪಡಿಸಿದ್ದೇನೆ ಚೇತನ್ ಧನ್ಯವಾದ ಮೆಚ್ಚಿದ್ದಕ್ಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತ್, ಇದು ಅಂತ್ಯದ ಹಾದಿಯೇನೋ ಸರಿ. ಆದರೆ, ಅಂತ್ಯದಲ್ಲೇ ಮುಂದಿನದರ ಆದಿಯೂ ಇದೆ ಎಂದು, ನಿಮ್ಮ ಕವನದ ಕೊನೆಯ ಎಂಟು ಸಾಲುಗಳು ಮಾರ್ಮಿಕವಾಗಿ ಸೂಚಿಸುತ್ತಿರುವಂತಿದೆ. ಏಕೆಂದರೆ ಮೊದಲ ಸಾಲಿನ ಅಂತ್ಯದ ಪದವೇ ಮುಂದಿನ ಸಾಲಿನ ಆದಿಯಲ್ಲಿದೆ. ಎಲ್ಲದಕ್ಕೂ ಅಂತ್ಯ ಇದೆ. ಹಾಗೆಯೇ ಪ್ರತೀ ಅಂತ್ಯದಲ್ಲಿ ಹೊಸದೊಂದರ ಆದಿಯಿದೆ. ಈ ಶೈಲಿ ಬಹಳ ಇಷ್ಟವಾಯಿತು. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶರೆ, ಆದಿ ಎನ್ನುವುದಕ್ಕೆ ಆದಿ ಎಂಬುದಿಲ್ಲ ಒಂದರ ಅಂತ್ಯವೇ ಇನ್ನೊಂದರ ಆದಿ..ನಿರಂತರ ಪ್ರಕ್ರಿಯೆ.. ಒಂದರ ಅಂತ್ಯ ಮತ್ತೊಂದು ಒಳ್ಳೆಯದಕ್ಕೆ ಆದಿಯಾದರೆ ಚೆನ್ನ.. ಆದರೆ ಮೌಲ್ಯಗಳ ಅಂತ್ಯ ಯಾವ ಒಳ್ಳೆಯದಕ್ಕೂ ಆದಿಯಾಗಲಾರದು.ಅಲ್ಲವೇ ? ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಈ ರೀತಿಯ ಶೈಲಿಯಲ್ಲಿ ಕೆಲ ದಿನಗಳ ಹಿಂದೆ ಗೋಪಿನಾಥರು ಸಂಪದಿಗರ ಸಹಾಯದಿಂದ ಕವನ ಬರೆಸಿದ್ದರು..ಆಗ ಹೆಚ್ಚಿಗೇ ಬರೆಯಲು ಬಂದಿರಲಿಲ್ಲ.. ಈಗ ಮತ್ತೆ ಪ್ರಯತ್ನಿಸಿದೆ(ನಡುವೆ ಸ್ವಲ್ಪ ಹಳಿ ತಪ್ಪಿದೆ ;).. ನೀವು ಗಮನಿಸಿ ಮೆಚ್ಚಿದ್ದು ನಿಜಕ್ಕೂ ಅತೀವ ಸಂತಸ ತಂದಿದೆ..ಧನ್ಯವಾದಗಳು http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಿ ಕಟ್ಟು ಕಟ್ಟಳೆಗಳಿಗಿರಬೇಕಿತ್ತು ಸೂಕ್ತ ಇಲ್ಲಿ ಹಾಗಲ್ಲ ಎಲ್ಲವೂ ಮುಕ್ತ ಮುಕ್ತ ಮುಕ್ತ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನವೀಯ ಮೌಲ್ಯಗಳು ಸಾಮಾಜಿಕವಾಗಿ ಮನುಷ್ಯ ಬದುಕಲು ಕಲಿತಾಗ ರೂಡಿ ಮಾಡಿಕೊಂಡ ವಿಚಾರಗಳು. ಯಾವಾಗ ತಾನೇ ಸೃಷ್ಟಿಸಿದ್ದೋ ಅದನ್ನು ನಾಶ ಮಾಡುವುದೂ ಸುಲಭ. ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಪ್ಪಿದೆ ಸಂತೋಷ್, ಆದರೆ ಆ ಮೌಲ್ಯಗಳನ್ನು ಹೇಗೆ ಕಲಿತುಕೊಂಡನೋ ಆ ರೀತಿ ಬದುಕಲಾರದೇ ಕಳೆದುಕೊಳ್ಳುತ್ತಿರುವುದು ವಿಪರ್ಯಾಸವಲ್ಲವೇ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ರೂರತನದ ಭೀಕರತೆಯೇ ಮಾನವೀಯ ಮೌಲ್ಯಗಳ ಅಂತ್ಯ. ಕ್ರೂರತನ ಭೀಕರತೆಯನ್ನು ಪಡೆದಾಗ ಎಲ್ಲಾ ಮೌಲ್ಯಗಳ ಅಂತ್ಯ. ಒಳ್ಳೆ ಸಾಲುಗಳು , ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ಧನ್ಯವಾದ ರಘು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ, ಶ್ರೀಕಾಂತ್, ಕ್ರೋಧಾಗ್ನಿ ಜ್ವಲಿಸಿದಾಗ ಕಣ್ಣು ಕುರುಡಾಗಿ, ಕಿವಿಯು ಕಿವುಡಾಗಿ, ವಿವೇಕ ಮರೆಯಾಗಿ, ಬುದ್ಧಿ ಮಂಕಾಗಿ, ನರನಲ್ಲಿ ಅಸುರ ಮೈದಾಳುತ್ತಾನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಾಗರಾಜರೇ, ಕೋಪವೆಂಬುದು ತನ್ನ ಸುಡದೇ ಪರರ ಸುಡುವುದು ಎಂದು ಅಂದುಕೊಳ್ಳುತ್ತಾನೆ.. ಅವಿವೇಕಿ ಆಗುವುದು ಇದೆ ವೇಳೆಯಲ್ಲಿ.. ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.