Shrikantkalkoti ರವರ ಬ್ಲಾಗ್

ಸಾಲಿಮಠ ರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

 ಸಂಪದಿಗ ಮಿತ್ರ ಶ್ರೀಹರ್ಷ ಸಾಲಿಮಠ  ರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..

ನೀವು ನಡೆಯುತ್ತಿರುವ ಪಥದಲ್ಲಿ ಸಂಪೂರ್ಣ ಯಶಸ್ಸು ಸಿಗಲಿ.ಕಷ್ಟಗಳನ್ನು ಎದುರಿಸಿ ಮುನ್ನಡೆಯಲು ಛಲ,ದೇವರ,ಗುರು ಹಿರಿಯರ  ಆಶೀರ್ವಾದ ಗೆಳೆಯರ ಬೆಂಬಲ, ಸದಾ ಇರಲಿ.. 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಚೈನೀಸ್ 'ಪ್ರೇಮಿಗಳ ದಿನ' !

ಒಂದಾನೊಂದು ಕಾಲದಲ್ಲಿ ನಿಯ್ಲೊಂಗ್(niu long) ಎಂಬ ದನ ಕಾಯುವ ಸುಂದರ ತರುಣ ಇದ್ದ .ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದರಿಂದ ತನ್ನ ದೊಡ್ಡಣ್ಣ ಮತ್ತು ಅತ್ತೆಯ ಜೊತೆಗೆ ವಾಸಿಸುತ್ತಿದ್ದ.ಅವನ ಅಣ್ಣ,ಅಪ್ಪನ ಜಮೀನನ್ನೆಲ್ಲ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದರಿಂದ ನಿಯ್ಲೊಂಗ್ ನ ಪಾಲಿಗೆ ಒಂದು ಆಕಳು ಮಾತ್ರ ಬಂದಿತ್ತು.ಅಣ್ಣನ ಮನೆಯಲ್ಲಿ ಇದ್ದರೂ ಜೀತದಾಳಿನಂತಿದ್ದ.

ಆ ಸಮಯದಲ್ಲಿನ ದೇವಲೋಕದ ರಾಜನಿಗೆ ೭ ಜನ ಹೆಣ್ಣು ಮಕ್ಕಳು.ಅವರಲ್ಲಿ ಏಳನೆಯ ಮಗಳ ಹೆಸರು ಝಿನು (zhi nu)ಎಂದು.ತುಂಬಾ ಸುಂದರಿ ಅಷ್ಟೇ ಅಲ್ಲ ಅವಳಲ್ಲಿ ಒಂದು ಅದ್ಭುತ ಕಲೆ ಇತ್ತು.ಅವಳು ಮೋಡಗಳನ್ನು ಹಾಗೂ ಕಾಮನ ಬಿಲ್ಲುಗಳನ್ನು ಸುಂದರವಾಗಿ ಸೃಷ್ಠಿಸಬಲ್ಲವಳಾಗಿದ್ದಳು.ಅದಕ್ಕೇ ರಾಜನಿಗೆ ಅವಳ ಮೇಲೆ ಅತಿಯಾದ ಪ್ರೀತಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಅಂತ್ಯದ ಹಾದಿ..


ತಾನು ತನದೆಂಬ

ಶ್ರೇಷ್ಠತೆಯು ಮೂಡಿ

ಸಹಬಾಳ್ವೆ ಕಮರಿ

ದೌರ್ಜನ್ಯಗಳು ಬಹುವಾಗಿ  

ಸಹನೆಯು ಮೀರಿ 

ಮನಗಳು ಕದಡಿ 

ಶಾಂತತೆ ಕಲಕಿ

ಕೋಪಾಗ್ನಿ ಉಕ್ಕಿದಾಗ

ರೋಷವೇ ಸಂಗಾತಿ


 

ಮೌನಗಳು ಶಬ್ದಗಳಾಗಿ

ಶಬ್ದಗಳೇ ಮಾತಾಗಿ

ಮಾತಿಗೆ ಮಾತುಗಳು ಬೆಳೆದು

ವಿಕಾರ ಪ್ರತಿಕ್ರಿಯೆಯಾಗಿ ಹೊಮ್ಮಿ

ಪ್ರತಿಕ್ರಿಯೆಗಳು ಕ್ರಿಯೆಯಾಗಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನು ಬರೆದ ಮೊದಲ ಕಥೆ ..

‘ಏನ್ರಿ ಮೂರ್ತಿ,ಎಷ್ಟು ಬಾರಿ ಹೇಳಬೇಕು ?ದಿನವೂ ಇದೆ ಕಥೆ ಆಯ್ತಲ್ಲ ನಿಮ್ದು.ಆಫೀಸಿಗೆ ವಾರಪೂರ್ತಿ ತಡವಾಗೆ ಬರ್ತೀರಾ.ಜವಾಬ್ದಾರಿ,ಸಮಯ ಪಾಲನೆ ಅನ್ನೋದು ಇಲ್ಲವೇ ಇಲ್ಲ.ನನಗಂತೂ ಹೇಳಿ ಹೇಳಿ ಸಾಕಾಯ್ತು’ ಎಂದು ಕೆಲ ಕಡತಗಳಿಗೆ ಸಹಿ ಪಡೆಯಲು ಹೋದ ಮೂರ್ತಿಗೆ ಎಂದಿನಂತೆ ಬಾಸ್ ನಿಂದ ಮುಖಕ್ಕೆ ಮಂಗಳಾರತಿ..ಇದೇ ರೀತಿ ಆದರೆ ಕೆಲಸ ಉಳಿಯುವ ಬಗ್ಗೆ ಗ್ಯಾರಂಟಿ ಕೊಡಲಾರೆ ಎಂಬ ಎಚ್ಚರಿಕೆಯ ಸೇರ್ಪಡೆ ಸಹ ಆಯಿತು..ಮೂರ್ತಿಗೆ ದಿನವೂ ಇದನ್ನೇ ಕೇಳಿ ಕೇಳಿ ಬೇಜಾರೇನೋ ಆಗಿತ್ತು ,ಆದರೆ ಕಚೇರಿ ಸೇರಿ ಒಂದು ವರ್ಷ ವಾಗಿದ್ದರೂ ಅವನಲ್ಲಿ ಯಾವುದೇ ಬದಲಾವಣೆ ಸಹ ಬಂದಿರಲಿಲ್ಲ.ದಿನವೂ ಒಂದಿಲ್ಲೊಂದು ಕಾರಣದಿಂದ ತಡವಾಗೇ ಬರುತ್ತಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to RSS - Shrikantkalkoti ರವರ ಬ್ಲಾಗ್