ವೈದ್ಯ ಸಂಪದಿಗರೆ.. ಸಹಾಯ ಬೇಕಾಗಿದೆ......

0

(ನೋವನ್ನು ಕೆಲ ಜನರೊಂದಿಗೆ ಹಂಚಿಕೊಂಡರೆ ಪರಿಯಾರ ಸಿಗಬಹುದೆಂದು ಇಲ್ಲಿ ಬರಿದಿದ್ದೇನೆ ದಯವಿಟ್ಟು ಅನ್ಯಥಾ ಭಾವಿಸಬೇಡಿ) ನೆಗಡಿಯಾದ ನಂತರ ೨-೩ ದಿನಗಳಾದ ಮೇಲೆ ಮೂಗಿನಲ್ಲಿ ಕಫವು ಗಟ್ಟಿಯಾಗುತ್ತದೆ ಮತ್ತು ಗಂಟಲಿಗೆ ಇಳಿದು ಬರುತ್ತದೆ. ಆ ಕಫವನ್ನು ನುಂಗುವುದು ಅಸಾಧ್ಯವಾಗಿರುತ್ತದೆ ಮತ್ತು ಒಮ್ಮೊಮ್ಮೆ ಬಹಳ ಗಟ್ಟಿ ಕಫವಿರುವುದರಿಂದ ಗಂಟಲಲ್ಲೆ ಸಿಕ್ಕಿ ಒದ್ದಾಡುವಂತಾಗುತ್ತದೆ. ಈ ವಿಷಯವಾಗಿ ವೈದ್ಯರ ಬಳಿ ತೋರಿಸಿದರೂ ಸಹ ಪರಿಣಾಮಕಾರಿಯಾದ nasal spry, nasal drop ಅಥವಾ syrup ದೊರೆತಿಲ್ಲ. ಮೂಗಿನಲ್ಲಿರುವ ಕಫವನ್ನು ಆಗಿಂದ್ದಾಗ್ಗೆ ಕರಗಿಸುವ nasal spry, nasal drop ಅಥವಾ syrup ಇದ್ದಲ್ಲಿ ದಯವಿಟ್ಟು ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಡಾ. ನಾ. ಸೋಮೇಶ್ವರರಿಗೆ ಖಾಸಗಿ ಮಿಂಚಂಚೆ ಕಳಿಸಿ ನೋಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.... ನಿಮ್ಮ ಸಲಹೆಯಂತೆ ಮುಂದುವರೆಯುತ್ತೇನೆ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಸು ಹೆಗ್ಡೆಯವರಿಗೆ ಧನ್ಯವಾದಗಳು.

ಶ್ರೀನಿವಾಸ್ ಅವರೆ, ಕೆಲವು ಮಾಹಿತಿಗಳು ಬೇಕಾಗುತ್ತವೆ.

೧. ನಿಮಗೆ ಜ್ವರವಿದೆಯೆ?
೨. ಮೂಗಿನಿಂದ ಬರುವ ಸಿಂಬಳ ಅಥವ ಗಂಟಲಿನಿಂದ ಬರುವ ಕಫದ ಬಣ್ಣ ಯಾವುದು?
೩. ತಲೆಯನ್ನು ಕೆಳಗೆ ಬಾಗಿಸಿದಾಗ, ತಲೆ ಭಾರವೆನಿಸುತ್ತದೆಯೆ?

ಜ್ವರವಿದ್ದು, ಮೂಗಿನಿಂದ ಹಾಗೂ ಗಂಟಲಿನಿಂದ ಬರುವ ಕಫವು ಹಳದಿ ಅಥವ ಹಸಿರು ಬಣ್ಣಕ್ಕಿದ್ದರೆ ನಿಮಗೆ ಸೋಂಕಾಗಿರುವ ಸಾಧ್ಯತೆಯಿರುತ್ತದೆ. ಆಗ ಪ್ರತಿಜೈವಿಕ (ಆಂಟಿಬಯೋಟಿಕ್) ಔಷಧಿಗಳು ಬೇಕಾಗುತ್ತವೆ. ಇದರ ಜೊತೆಗೆ ಕಫವನ್ನು ಕರಗಿಸುವ ಹಾಗೂ ಕಫವನ್ನು ಹೊರತರುವ ಔಷಧವನ್ನು ನೀಡಬೇಕಾಗುತ್ತದೆ. ಮತ್ತೆ ಕಫ ಗಟ್ಟಿಯಾಗದಂತೆ ಹೆಚ್ಚು ಹೆಚ್ಚು ನೀರನ್ನು ಸೇವಿಸಬೇಕಾಗುತ್ತದೆ.

ನಿಮಗೆ ಸೋಂಕು ಆಗಿದೆ ಎಂದು ಭಾವಿಸಿ ಈ ಕೆಳಗಿನ ಔಷಧಗಳನ್ನು ಸೂಚಿಸುತ್ತಿದ್ದೇನೆ.

1. Cap Augmentin 625 mg, one capsule in the morning and one capusle in the evening for 5 days
(this is an antibiotic)
2. Tab Chymoral forte, one tablet in the morning, one in the after noon and one in the night for five days (this tablets helps in dissolving thick mucus)
3. Syrup Bromhexine, 10 ml three times a day for five days (this syrup is an expectorant and helps in bringing our the phlegm.
4. Tab Lorfast 10mg, one tablet per day in the evening for 5 days. (This is an anti allergic tabelt)
5. Cap Becelac, one capsule a day for 10 days. This is a B-complex medicine with Lactobacilli. One should take this medicine while takeing Antibiotics.
6. One should drink more water. Hot drinks like tea, kashaaya, warm lemon juice etc will help a lot.

ಶ್ರೀನಿವಾಸ ಅವರೆ, ಇದು ನಿಮ್ಮ ರೋಗಲಕ್ಷಣಗಳನ್ನು ಆಧರಿಸಿದ ಚಿಕಿತ್ಸೆ.
ನೀವು ನನಗೆ ಫೋನ್ ಮಾಡಿ. ೯೮೮೦೪ ೬೫೬೬೧. ನಿಮ್ಮ ಜೊತೆ ಮಾತುಕತೆಯಾಡಿದ ಮೇಲೆ ಸೂಕ್ತ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಬಹುದು.

ನೀವು ಇ.ಎನ್.ಟಿ ತಜ್ಞರನ್ನು ಭೇಟಿಯಾದರೆ ಬಹಳ ಒಳ್ಳೆಯದು.

-ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟ್ರೇ,
ನನ್ನ ನಿರೀಕ್ಷೆಗೂ ಮೀರಿದ ದೀರ್ಘವಾದ ಪ್ರತಿಕ್ರಿಯೆ ನಿಮ್ಮದು.
ಸಂತಸವಾಯಿತು.

ನಿಮ್ಮನ್ನಿನ್ನು ವೈದ್ಯರು@ಸಂಪದ.ನೆಟ್ ಅನ್ನಬಹುದೇನೋ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಸೋಮೇಶ್ವರ್ ಅವರೇ ನಿಮ್ಮ ಸಲಹೆಗೆ ನನ್ನ ವಂದನೆಗಳು. ನಾನು ನಿಮ್ಮ ಅಪ್ಪಟ ಅಭಿಮಾನಿ ಮತ್ತು ನೀವು ನನ್ನ ಸಮಸ್ಯೆಯನ್ನು ಬಗೆಹರಿಸಲು ಸಲಹೆ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಮೊದಲಿನ ದಿನಗಳಲ್ಲಿ ನೆಗಡಿಯಾದಾಗ ಆಗ್ಗಿಂದ್ದಾಗ್ಗೆ Alerid ಅಥವಾ Cinarest + ತೆಗೆದುಕೊಳ್ಳುತ್ತಿದೆ, ಆಗ ಸಿಂಬಳವು ಗಟ್ಟಿಯಾಗಿ ಉಸಿರಾಡಲು ಕಷ್ಟವಾಗುತ್ತಿತ್ತು ಮತ್ತು ಅದರಿಂದ ಊಟವನ್ನು ಮಾಡಲಾಗುತ್ತಿರಲಿಲ್ಲ ಮತ್ತು ನೆಗೆಡಿಯನ್ನು ಬೇಗನೆ ಕಡಿಮೆ ಮಾಡಿಕೊಳ್ಳಲು ಹೋಗಿ ನೆಗಡಿ ಔಷದಿಗಳಿಂದ ಮೂಗನ್ನು ಗಟ್ಟಿಯಾಗಿಸಿಕೊಂಡು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವ ಪ್ರಸಂಗವು ಬಂದಿತ್ತು. ಆದರೆ ಈ ದಿನಗಳಲ್ಲಿ ನೆಗಡಿ ಬಂದಾಗ ಮೊದಲ ೨ ದಿನ ಯಾವುದೇ ನೆಗಡಿಗೆ ಸಂಬಧ ಪಟ್ಟ ಔಷಧಗಳನ್ನು ತೆಗೆದುಕೊಳ್ಳುವುದಿಲ್ಲ ಆದ್ದರಿಂದ ಈಗ ಮೊದಲಿನಷ್ಟು ತೊಂದರೆ ಇಲ್ಲದ್ದಿದ್ದರೂ ಸ್ವಲ್ಪ ಪ್ರಮಾಣದ ತೊಂದರೆ ಇದ್ದೇ ಇದೆ.
ತಮ್ಮ ಪ್ರಶ್ನೆಗಳಂತೆ ನನಗೆ
ನನಗೆ ಜ್ವರವಿರುವುದಿಲ್ಲ, ಆದರೆ ನೆಗಡಿಯಾದ ೨-೩ ದಿನಗಳ ನಂತರ ಸಿಂಬಳ ಸ್ವಲ್ಪ ಗಟ್ಟಿಯಾಗಿಬಿಡುತ್ತದೆ, ತಲೆಯನ್ನು ಕೆಳಗೆ ಬಾಗಿಸಿದಾಗ, ತಲೆ ಭಾರವೆನಿಸುವುದಿಲ್ಲ ಮತ್ತು ಮೂಗಿನಿಂದ ಬರುವ ಸಿಂಬಳವು normal ಬಣ್ಣವಾಗಿರುತ್ತದೆ.

ಧನ್ಯವಾದಗಳು

ಶ್ರೀನಿವಾಸ (ಬೆಳಗಾವಿ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಾಣಾಯಾಮ ಮಾಡಿ, ಗಂಟಲಿಗೆ ಕಫ ಬಂದದನ್ನು ಉಗಿದು ಬಿಡಿ. ನುಂಗಬೇಡಿ. :-) ೨ -೩ ದಿನಗಳಲ್ಲಿ ನಿಮ್ಮ ಗಂಟಲು ನೋವು, ನೆಗಡಿ, ಕಫ ಎಲ್ಲವೂ ಕಡಿಮೆಯಾಗುವುದು.

ಈ ಸಮಯದಲ್ಲಿ ಒಂದು ಜೋಕ್ ನೆನಪಾಗುತ್ತದೆ. ‘ನೆಗಡಿ ಔಷಧಿ ತೆಗೆದುಕೊಂಡರೆ ಒಂದು ವಾರದಲ್ಲಿ ವಾಸಿಯಾಗುತ್ತದೆ. ಇಲ್ಲದಿದ್ದರೆ ಏಳು... ದಿನಗಳು ಬೇಕು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ನಮ್ಮ ಡೈಲಾಗ್ ಹೊಡಿದ್ರೀ....:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ,

ನೀವು ಈ. ಎನ್. ಟಿ. ಸ್ಪೆಶಲಿಸ್ಟ್ ಗೆ ತೋರಿಸಿಕೊಳ್ಳಿ. (ಅಂದರೆ, ಕಿವಿ, ಮೂಗು ಮತ್ತು ಗಂಟಲು ಸ್ಪೆಶಲಿಸ್ಟ್). ನಿಮಗಿರುವ ತೊಂದರೆ, ನೀವು ಬರೆದಂತೆ ನೋಡಿದರೆ, ಸೈನುಸೈಟಿಸ್ ವಿತ್ ನೇಸಲ್ ಕನ್ಜೆಸ್ಚನ್ ಫ್ರಮ್ ಕೋಲ್ಡ್ ಆರ್ ಅಲರ್ಜೀಸ್ ಇದ್ದಂತಿದೆ. ಯೋಗ , ಪ್ರಾಣಾಯಾಮ ದಿಂದ ಈ ತೊಂದರೆಗಳಿಗೆ ನಿವಾರಣೆ ಸಿಗುತ್ತೆ -ಫಾರ್ ಲಾಂಗ್ ಟರ್ಮ್ ಬೆನೆಫಿಟ್ಸ್.

~ಮೀನಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟೇ, ನಿಮ್ಮನ್ನು ಮರೆತೇ ಬಿಟ್ಟಿದ್ದೇ ನೋಡಿ.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರವಾಗಿಲ್ಲ ಸುರೇಶ್ ಅವರೆ,

ನಾವು ನಿಮ್ಮನ್ನೆಲ್ಲಾ ಮರೆಯದಿದ್ದರೆ ಸಾಕು ( ಚಲತಾ ಹೈ, ನೀವೇನು ಅದರ ಬಗ್ಗೆ ಚಿಂತಿಸಬೇಕಿಲ್ಲ) ಅಲ್ವಾ?
~ಮೀನಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು...... ENT ಹತ್ರ ತೋರಿಸ್ತೇನೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂದಿನಸಾರೆ ಎಂಟಿಬಯೋಟಿಕ್ ಬಳಸಲೇ ಬೇಕಾದ ಪ್ರಸಂಗ ಬಂದಲ್ಲಿ ಎಂಟಿಬಯೋಟಿಕ್ ಗಿಂತ ಮೊದಲು ಈ ಔಷಧವನ್ನು ಪ್ರಯೋಗಿಸಿನೋಡಿ.;-
ಒಣ ಶುಂಠಿ - ಸಣ್ಣಹಿಪ್ಪಲಿ- ಕಾಳುಮೆಣಸನ್ನು ಸಮಭಾಗ(ಪ್ರಾಯೋಗಿಕವಾಗಿ ತಲಾ ೧೦ ಗ್ರಾಮ್) ತೆಗೆದುಕೊಂಡು ಬಾಂಡಲಿಯಲ್ಲಿ ಬೆಚ್ಚಗೆ ಮಾಡಿಕೊಂಡು, ಮಿಕ್ಷಿಯಲ್ಲಿ ಸಣ್ಣಗೆ ಪುಡಿಮಾಡಿಕೊಳ್ಳಿ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಇದನ್ನು ದಿನಕ್ಕೆ ಸೊನ್ನೆಯಿಂದ ಮೂರು ಚಮಚದವರೆಗೂ ಸೇವಿಸಬಹುದು.
ಇದನ್ನು ಸೇವಿಸುವಾಗ ಜೇನುತುಪ್ಪದಲ್ಲಿ ಕಲಸಿಕೊಂಡು ನೆಕ್ಕಬೇಕು. ಧಾರಾಳವಾಗಿ ಜೇನುತುಪ್ಪ ಹಾಕಿಕೊಂಡು ದಿನಕ್ಕೆ ಆಗುವಷ್ಟನ್ನು ಒಂದೇ ಸಾರಿ ಕಲಸಿ ಇಟ್ಟುಕೊಳ್ಳಿ. ಆಗಾಗ ಇದನ್ನು ನೆಕ್ಕುತ್ತ ಇರಿ. ಒಂದು ಒಪ್ಪತ್ತಿನಲ್ಲಿ ನಿಮಗೆ ಪರಿಣಾಮ ಕಂಡುಬರುತ್ತದೆ.
ಮೊದಲೇ ತಯಾರಿಸಿ ಇದನ್ನು ಪ್ರಿಜ್ನಲ್ಲಿ ಇಟ್ಟುಕೊಂಡು ಯಾವದೇ ಸಂದರ್ಭದಲ್ಲಿ ಕೆಮ್ಮು ನೆಗಡಿಯ ಲಕ್ಷಣ ಕಂಡಕೂಡಲೇ ಇದನ್ನು ಉಪಯೋಗಿಸಿದಲ್ಲಿ ಎಂಟಿಬಯೋಟಿಕ ಎಂಟಿಹಿಸ್ಟಾಮಿನ್ ಎನಾಲ್ಜಿಸಿಕ್ ಉಪಯೋಗಿಸುವ ಹಾಗು ಅವುಗಳಿಂದ ತೂಕಡಿಕೆ ಎಸಿಡಿಟಿ ತಳಮಳ ಇತ್ಯಾದಿಗಳಿಂದ ಬಳಲುವ ಅವಕಾಶ ಹುಟ್ಟುವುದಿಲ್ಲ.
ನೆಗಡಿ ಬಹಳ ತೀವೃತರದ್ದಾಗಿ ಆಗಾಗ ಭಾಧಿಸುತ್ತಿದ್ದಲ್ಲಿ SEPTELIN ಮಾತ್ರೆಯನ್ನು ದಿನಕ್ಕೆ ಮೂರುಸಾರಿಯಂತೆ ಕೆಲಕಾಲ ತೆಗೆದು ಕೊಳ್ಳಬಹುದು. ಪದೇ ಪದೆ ನಿಮ್ಮ ಶರೀರವು ಎಂಟಿಬಯೋಟಿಕ್ ನ್ನುಸೇವಿಸುವುದನ್ನು ಇದು ಖಂಡಿತವಾಗಿಯೂ ತಪ್ಪಿಸುತ್ತದೆ.
ನೀವು ಸಕ್ಕರೆಕಾಯಿಲೆಯಿಂದ ಬಳಲುತ್ತಿದ್ದಲ್ಲಿ ಪುಡಿಯನ್ನು ನೀರಿನಲ್ಲಿ ಕುದಿಸಿ ಬತ್ತಿಸಿದ ಕಷಾಯ ಇದೇ ರೀತಿ ಸೇವಿಸಬಹುದು, ಆದರೆ ಇದನ್ನು ನಿತ್ಯ ಹೊಸದಾಗಿ ಮಾಡಿಕೊಳ್ಳಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾರ್ ನನಗೂ ಈ ತೊಂದರೆ ಹಗಲೆಲ್ಲಾ ಕಾಡುತ್ತಲೇ ಇರತ್ತೆ. ಉಸಿರಾಟ ಕಷ್ಟವಾಗಿ, ವಾಂತಿ ಬರುವಂತಾಗತ್ತೆ ಮತ್ತು ಹಾಡಲು ಅಸಾಧ್ಯ ಅನ್ನಿಸಿಬಿಡತ್ತೆ. ನಿಮ್ಮ ಔಷಧಿಯನ್ನು ಪ್ರಯತ್ನಿಸಿ ನೋಡುತ್ತೇನೆ. ಧನ್ಯವಾದಗಳು.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಪ್ಪಲಿಯಬಗ್ಗೆ ಒಂದು ಮಾಹಿತಿ. ಮೊದಲು ಸಾರೆ ಪಿಪ್ಪಲಿಸೇವಿಸಿದವರು ನಾಲಿಗೆ ಮೇಲೆ ವಿಚಿತ್ರ ಅನುಭವವನ್ನು ಹೊಂದುತ್ತಾರೆ. ಹಿಪ್ಪಲಿಯು ನಾಲಿಗೆಯನ್ನು ಕೆರೆಯಲು ಸುರುಮಾಡುತ್ತದೆ. ಅದು ಅದರ ಸಹಜಗುಣ. ಭಯಪಡುವ ಅವಶ್ಯಕತೆ ಇಲ್ಲ.
ಒಂದು ಕುಗ್ರಾಮದಲ್ಲಿ ಒಂದು ರೋಗಿಗೆ ಹಿಪ್ಪಲಿ ಇರುವ ಔಷಧ ಒಂದನ್ನು ಕೊಟ್ಟಿದ್ದೆ. ಅವನೊಬ್ಬ ಮಹಾಕುಡುಕ. ಈ ಔಷಧವನ್ನು ಬಾಯಿಗೆ ಹಾಕಿಕೊಂಡಾಗ ವಿಚಿತ್ರ ಅನುಭವ ಆಯಿತು. ’ಓ ಇದು ಸಾಯುವ ಕಾಲದ ಅನುಭವವೆಂದು’ ತಿಳಿದು ಮನೆಯವರಿಗೆ ವಿವರಿಸುತ್ತಿರುವಾಗಲೇ ಮರಣ ಹೊಂದಿದನಂತೆ. ನನಗೆ ಇದು ತಡವಾಗಿ ತಿಳಿಯಿತು. ಹೀಗಾಗಿ ಹಿಪ್ಪಲಿ ಔಷಧಕೊಡುವಾಗಲೊಮ್ಮೆ ನಾಲಿಗೆಯಮೇಲೆ ಇದರ ಪರಿಣಾಮವನ್ನು ಹೇಳುವುದನ್ನು ರೂಡಿಸಿಕೊಂಡಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ನಾಯಕರೇ, ಸಂಪದಿಗರಲ್ಲಿ ಚಿಕಿತ್ಸೆಯ ಬಗ್ಗೆ ಸಲಹೆ ಕೇಳಿದರೆ ಒಂದಕ್ಕೊಂದು ವಿರುದ್ಧವಾದ ಹಲವು ಸಲಹೆಗಳು ನಿಮಗೆ ಸಿಕ್ಕಿವೆ! >>ENT ಹತ್ರ ತೋರಿಸ್ತೇನೆ....<< ಅನ್ನುವ ನಿಮ್ಮ ತೀರ್ಮಾನವೇ ಒಳ್ಳೆಯದು. ಯಾಕೆ ಈ ತೊಂದರೆ ಪದೇ ಪದೇ ಕಾಡುತ್ತಿದೆ, ಆಗಾಗ ಪ್ರತಿಜೈವಿಕ (ಆಂಟಿಬಯೋಟಿಕ್) ಔಷಧಿಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಯಾಕೆ ಉಂಟಾಗುತ್ತಿದೆ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ಸಿನಾರೆಸ್ಟ್, ಆಕ್ಟಿಫೆಡ್ ಇತ್ಯಾದಿಗಳನ್ನು ಬಳಸುವುದರಿಂದ ಕಫವು ಇನ್ನಷ್ಟು ಗಟ್ಟಿಯಾಗಿ ತೊಂದರೆ ಹೆಚ್ಚುತ್ತದೆ.
[quote]ಯೋಗ , ಪ್ರಾಣಾಯಾಮ ದಿಂದ ಈ ತೊಂದರೆಗಳಿಗೆ ನಿವಾರಣೆ ಸಿಗುತ್ತೆ -ಫಾರ್ ಲಾಂಗ್ ಟರ್ಮ್ ಬೆನೆಫಿಟ್ಸ್.[/quote]
ಯೋಗವು ಒಂದು ಚಿಕಿತ್ಸಾಪದ್ಧತಿಯೇ? ಹಾಗನ್ನುವುದಕ್ಕೆ ಎಲ್ಲಾದರೂ ಆಧಾರಗಳಿವೆಯೇ? ಇದ್ದರೆ ದಯವಿಟ್ಟು ಕೊಡಿ, ನಾನು ಹಲವು ತಿಂಗಳುಗಳಿಂದ ಹುಡುಕಾಡುತ್ತಿದ್ದೇನೆ. ಹಾಗೆಯೇ, ಯೋಗ, ಪ್ರಾಣಾಯಾಮದಿಂದ 'ನೆಗಡಿಗೆ' ಪರಿಹಾರ (ಅದೂ ದೀರ್ಘಕಾಲೀನ) ಸಿಗುತ್ತದೆ ಎನ್ನುವುದಕ್ಕೂ ಆಧಾರಗಳಿದ್ದರೆ ದಯವಿಟ್ಟು ಕೊಡಿ.

[quote]ಹಿಪ್ಪಲಿ ಇರುವ ಔಷಧ ಒಂದನ್ನು ಕೊಟ್ಟಿದ್ದೆ... ಈ ಔಷಧವನ್ನು ಬಾಯಿಗೆ ಹಾಕಿಕೊಂಡಾಗ ವಿಚಿತ್ರ ಅನುಭವ ಆಯಿತು. ’ಓ ಇದು ಸಾಯುವ ಕಾಲದ ಅನುಭವವೆಂದು’ ತಿಳಿದು ಮನೆಯವರಿಗೆ ವಿವರಿಸುತ್ತಿರುವಾಗಲೇ ಮರಣ ಹೊಂದಿದನಂತೆ.[/quote]
ಹಿಪ್ಪಲಿಯಿಂದ ಸಾವು ಸಂಭವಿಸಿತೇ ಎನ್ನುವುದು ಸ್ಪಷ್ಟವಾಗಲಿಲ್ಲ; ಸಾವು ಹಿಪ್ಪಲಿಯ ಒಂದು ಸಣ್ಣ 'ಅಡ್ಡ ಪರಿಣಾಮ'ವಿರಬಹುದೇ? ಹೌದೆಂದಾದರೆ ಅದನ್ನು ಇತರರಲ್ಲಿ ಬಳಸುವವರ ಧೈರ್ಯವನ್ನು ಮೆಚ್ಚಲೇಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಪ್ಪಲಿಯು ಅಪಾಯಕಾರಿಯಲ್ಲ. ಆತ ಸತ್ತಿದ್ದು ಹಿಪ್ಪಲಿಯಿಂದ ಅಲ್ಲ. ಆತಸತ್ತಿದ್ದರ ಬಗ್ಗೆ ನಿಖರವಾಗಿ ನನಗೆ ಗೊತ್ತಿಲ್ಲ. ಆದರೆ ಜ್ವರದಿಂದ ಬಳಲುತ್ತಿದ್ದ ಆತನಿಗೆ ಸಾಯುವ ಸಮಯದಲ್ಲಿ ಭಯ ಉಂಟಾಗಿತ್ತು ಜ್ವರದಲ್ಲೂ ಕಂಠಪೂರ್ತಿಕುಡಿದಿದ್ದ ಆತನಿಗೆ ವಿವೇಚನೆ ಇರಲಿಲ್ಲ. ನಾಲಿಗೆ ಮೇಲಾದ ವಿಚಿತ್ರ ಅನುಭವವು ಸಾವಿನ ಲಕ್ಷಣ ಎಂದು ಭಾವಿಸಿದ್ದೇ ಅವನ ಸಾವಿಗೆ ಕಾರಣವಾಗಿರಬಹುದು.
’ಅಮೃತವೂ ವಿಷವಾಗಬಹುದು. ವಿಷವೂ ಅಮೃತವಾಗಬಹುದು’.
ಶ್ರೀನಿವಾಸ ನಾಯಿಕರು ಹೇಳಿರುವ ಲಕ್ಷಣಕ್ಕೆ, ನಾನು ಹೇಳಿದ ಪ್ರಮಾಣದಲ್ಲಿ ಔಷಧವನ್ನು, ನಾನು ಹೇಳಿದ ರೀತಿಯಲ್ಲಿ ಸೇವಿಸಿದರೆ ಯಾವದೇ ತರಹದ ಅಪಾಯವಿಲ್ಲ ಜೊತೆಗೆ ತೊಂದರೆಗಳಿಂದಲೂ ಬಿಡುಗಡೆ ಆಗುತ್ತದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿವರಗಳೇನೂ ಗೊತ್ತಿಲ್ಲದೆ ಮಾಡಿರುವ ತೀರ್ಮಾನವನ್ನು ಇತರರು ಒಪ್ಪಬೇಕಾಗಿಯೂ ಇಲ್ಲ. ಆಯುರ್ವೇದದಲ್ಲಿ ಬಳಸುವ ಔಷಧಗಳು ಸಂಪೂರ್ಣ ಸುರಕ್ಷಿತವೂ ಅಲ್ಲ, >>ಅಮೃತವೂ ವಿಷವಾಗಬಹುದು<< ಅಂದ ಮೇಲೆ ಹಿಪ್ಪಲಿಯೇನು ಮಹಾ? ರೋಗಿಯನ್ನು ಪರೀಕ್ಷಿಸದೆ, 'ಲಕ್ಷಣ ಚಿಕಿತ್ಸೆ'ಯನ್ನು ನೀಡುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ; ಬೇರೆಯವರು ಇದನ್ನು ಒಪ್ಪಬೇಕಿಲ್ಲ. ಅಂತಹಾ ಚಿಕಿತ್ಸೆಯು ಸಂಪೂರ್ಣವಾಗಿ ಪ್ರಯೋಜನಕರ ಹಾಗೂ ಸುರಕ್ಷಿತವೆನ್ನುವುದಕ್ಕೆ ಆಧಾರಗಳೇನು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಅಮೃತವು ವಿಷವಾಗಬಲ್ಲದೆಂಬುದನ್ನು ಮಾತ್ರ ಹೇಳಿಲ್ಲ. ವಿಷವೂ ಅಮೃತವಾಗಿರುತ್ತದೆ ಎಂಬುದನ್ನೂ ಹೇಳಿದ್ದೇನ
E N T ಯವರಿಂದ ಚಿಕಿತ್ಸೆ ಪಡೆಯಬೇಡಿರೆಂದೂ ಹೇಳಿಲ್ಲ. ಮುಂದಿನಸಾರೆ ಎಂಟಿಬಯೋಟಿಕ ಇತ್ಯಾದಿಗಳನ್ನು ಬಳಸಬೇಕಾದ ಪರಿಸ್ಥಿತಿ ಬಂದಲ್ಲಿ ನನ್ನ ಸಲಹೆಗಳನ್ನು ಪರಿಗಣಿಸಿ ಎಂಬುದೇ ನನ್ನ ತಾತ್ಪರ್ಯ.
ನಿನ್ನೆ ಬೆಳಿಗ್ಗೆ ನನಗೆ ವಿಪರೀತ ನೆಗಡಿ ತಲೆನೋವು ಸುರುವಾಯಿತು. ಸಾಯಂಕಾಲದ ಒಳಗೆ ಎರಡೆನೆಯ ಕರವಸ್ತ್ರವನ್ನು ಉಪಯೋಗಿಸುವ ಪ್ರಮೇಯ ಬಂದಿತ್ತು. ನಿಮಗೆ ಸೂಚಿಸಿದ ಔಷಧವನ್ನು ನಾನು ಪ್ರಾರಂಭಿಸಿದೆ. ಇಪ್ಪತ್ತು ನಾಲ್ಕು ಗಂಟೆಯ ಒಳಗೆ ತೊಂದರೆಯಿಂದ ಬಿಡುಗಡೆ ಹೊಂದಿದೆ. ಎಂಟಿ ಹಿಸ್ಟಾಮಿನ ಎನಾಲ್ಜಿಸಿಕ್ ಉಪಯೋಗಿಸಿದ್ದರೆ ಬಹುಷಃ ಇದು ಮೂರುಗಂಟೆಯಲ್ಲೇ ಗುಣವಾಗುತ್ತಿತ್ತು. ಆದರೆ ಅದರ ತೂಕಡಿಕೆ,ಕ್ಲೇಶ ಇತ್ಯಾದಿಗಳಿಂದ ಆಗುವ ತೊಂದರೆಗಳು ನನಗೆ ಇಷ್ಟವಾಗುವುದಿಲ್ಲ. ಶ್ರೀನಿವಾಸ ನಾಯಿಕರವರು ವರ್ಣಿಸಿದ ತೊಂದರೆಗಳು ಇರುವ ಯಾರುಬೇಕಾದರೂ ಈ ಪ್ರಯೋಗ ಮಾಡಬಹುದು. ಅವರಿಗೆ ಗುಣವಾಗುತ್ತದೆ. ಅದಿಲ್ಲದಿದ್ದಲ್ಲಿ ಅವರು ಕಳೆದುಕೊಳ್ಳುವುದು ಕೇವಲ ೫೦ ರೂಪಾಯಿ ಮಾತ್ರ.
- ಪ್ರಯೋಗಿಸುವ ಮನಸ್ಸಿದ್ದವರಿಗೆ.ಪಿಪ್ಪಲಿಯ ಬಗ್ಗೆ ಇಷ್ಟು ಮಾಹಿತಿಯು ಸಾಕಾಗುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಯಕರೆ, ದಯವಿಟ್ಟು ಒಮ್ಮೆ ರಾಜರತ್ನಂ ರವರ " ರನ್ನನ ಪದಗಳನ್ನು" ಆಸಕ್ತಿಯಿಂದ ಓದಿರಲ್ಲ. ಅಲ್ಲಿ ನಿಮ್ಮ ನೆಮ್ಮದಿಗೆಡಿಸಿದ ಖಾಯಿಲೆಗೆ ಸರಿಯಾದ ಔಷಧಿಯಿದೆ. ಇಷ್ಟೊಂದು ಚರ್ಚೆಗಳ ಅಗತ್ಯವೇ ಇಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.