shreekant.mishrikoti ರವರ ಬ್ಲಾಗ್

ಹಳೆಯ ಚಂದಮಾಮದಲ್ಲಿ ಕಳ್ಳರ ಕಥೆ, ನಕ್ಕು ನಕ್ಕು ಸುಸ್ತು!!

ಒಬ್ಬ ರಾಜ. ಅವನ ರಾಜ್ಯದಲ್ಲಿ ದಿನೇದಿನೇ ಕಳ್ಳರ ಕಾಟ ಹೆಚ್ಚಾಗುತ್ತಿತ್ತು. ರಾಜನು ಮಾರು ವೇಷದಲ್ಲಿ ಒಂದು ಹಳ್ಳಿಗೆ ಹೋದ.

ಅಲ್ಲಿ ಅರಳಿಕಟ್ಟೆಯಲ್ಲಿ ಕೂತ ಹಿರಿಯರೊಂದಿಗೆ ಕೇಳಿದ. 'ನಿಮ್ಮಲ್ಲಿ ಕಳ್ಳತನ ಬಹಳ ಎಂದು ಕೇಳಿದ್ದೇನೆ, ನೀವೆಲ್ಲ ಹೇಗೆ ಬದುಕುತ್ತಿರುವಿರೋ, ಪಾಪ' ಎಂದ. ಅವರು 'ಹಣವಂತರಿಗೆ ಕಳ್ಳರ ಭಯ, ನಮಗೇತರ ಭಯ ? ನಮ್ಮನ್ನು ರಾಜರ ಕಡೆಯವರು ಎಂದೋ ಲೂಟಿ ಮಾಡಿ ಬಿಟ್ಟಿದ್ದಾರೆ' ಎಂದರು!

'ದಿನಾ ಕಳ್ಳತನ ಮಾಡಿದರು ಕಳ್ಳರು ಏಕೆ ಸಿಗುತ್ತಿಲ್ಲ? ' ಎಂಬ ರಾಜನ ಪ್ರಶ್ನೆಗೆ ಅವರು 'ದೊಡ್ಡ ಕಳ್ಳರನ್ನು ರಾಜರ ಕಡೆಯವರು ಕಾಪಾಡುತ್ತಾರೆ, ಸಣ್ಣ ಕಳ್ಳರನ್ನು ಜನಸಾಮಾನ್ಯರು ಕಾಪಾಡುತ್ತಾರೆ' ಎಂದರು!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ನಾನು ನೋಡಿದ ಹಳೆಯ ಸಿನಿಮಾ- ಶ್ರೀ ರಾಮಾಂಜನೇಯ ಯುದ್ಧ(ಕನ್ನಡ ಕುಲ ಪುಂಗವ ಹನುಮನ ಜಯಂತಿ ಪ್ರಯುಕ್ತ)

ಇದು ರಾಜಕುಮಾರ್ ಅವರ 50ನೇ ಚಿತ್ರ . ಶ್ರೀರಾಮಚಂದ್ರ ನಾಗಿ ಅವರು ನಟಿಸಿದ ಮೊದಲನೇ ಸಿನಿಮಾ ಅಂತೆ. ಶ್ರೀ ರಾಮ ಮತ್ತು ಆಂಜನೇಯ ಏಕೆ ಯುದ್ಧ ಮಾಡಿದರು ಸರಿ ನೋಡೋಣ ಅಂತ ನೋಡಲಾರಂಭಿಸಿದೆ.
ಮೊದಲ ದೃಶ್ಯದಲ್ಲಿ ಆಂಜನೇಯನು ರಾಮನನ್ನು ಬಿಟ್ಟು ಹೋಗಲು ಸಿದ್ಧನಿಲ್ಲ. ಆದರೆ ರಾಮ ಒತ್ತಾಯಿಸಿ ಅವನನ್ನು ಕಳುಹಿಸುತ್ತಿದ್ದಾನೆ, ಏಕೆ? ಆತನ ತಾಯಿ ಅವನನ್ನು ಕಳಿಸುವಂತೆ ಅಂಗಲಾಚುತ್ತಿದ್ದಾಳೆ ಅಂತ. ಮತ್ತೆ ಅಂಗದ ಸುಗ್ರೀವ ಮುಂತಾದವರು ಒತ್ತಾಯಿಸುತ್ತಿದ್ದಾರೆ. ಅನಿವಾರ್ಯವಾಗಿ ಶ್ರೀರಾಮ ಅವನನ್ನು ಕಳಿಸುತ್ತಿದ್ದಾನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಅವಸರದ ಮನುಷ್ಯ ಜಗತ್ತು ಮತ್ತು ಹಾರಲಾಗದ ಪಾರಿವಾಳ

ಮುಂಬೈಯಲ್ಲಿ ಬಹುಪಾಲು ಜನ ಓಡಾಡುವುದು ಲೋಕಲ್ ಟ್ರೈನ್ ಗಳ ಮೂಲಕವೇ. ಹಾಗಾಗಿ ಎಲ್ಲರೂ ಮುಂಜಾನೆ ಹೊತ್ತು ಸ್ಟೇಷನ್ ಗಳತ್ತ ಧಾವಿಸುತ್ತ ಇರುತ್ತಾರೆ . ನಿನ್ನೆಯೂ ಹಾಗೆಯೇ . ನಾನು ಎಲ್ಲರ ಹಾಗೆ ಅವಸರದಲ್ಲಿ ಅಂಧೇರಿ ಸ್ಟೇಷನ್ ಕಡೆ ಹೋಗುತ್ತಿದ್ದೆ. ಆ ಬೀದಿಯೋ ಬಲು ಇಕ್ಕಟ್ಟು . ಆ ಇಕ್ಕಟ್ಟಿನ ರಸ್ತೆಯಲ್ಲಿಯೇ ತಲೆ ಮೇಲೆ ಮೆಟ್ರೋ ಹಾದು ಹೋಗಿದೆ. ( ರಸ್ತೆಯನ್ನು ಅಗಲಗೊಳಿಸಲು ಅಲ್ಲಿನ ವ್ಯಾಪಾರಿಗಳು ವಿರೋಧಿಸಿದರು . ರಸ್ತೆಯನ್ನು ಅಗಲ ಮಾಡದೆಯೇ ಮೆಟ್ರೋ ರೈಲಿನ ನಿರ್ಮಾಣ ಆಯಿತು ) ಎರಡೂ ಪಕ್ಕದಲ್ಲಿ ಅಂಗಡಿಗಳು. ಆ ರಸ್ತೆ ಒನ್ ವೇ ಇರುವುದರಿಂದ ಎದುರಿನಿಂದ ಬರುವ ಬಸ್ಸುಗಳು ಆಟೋಗಳು ಮುಂತಾದವು ಒಮ್ಮೆ ಆ ಮೆಟ್ರೋ ಕಂಬಗಳ ಎಡ ಪಕ್ಕದಲ್ಲಿ, ಇನ್ನೊಮ್ಮೆ ಬಲಪಕ್ಕದಲ್ಲಿ , ಹೇಗೆ ಹೇಗೋ ಜಾಗ ಮಾಡಿಕೊಂಡು ಓಡುತ್ತಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊಸ ನಗೆಹನಿ- ೫೪ ನೇ ಕಂತು

ಬೇಡಿದ್ದನ್ನ ಈಡೇರಿಸೊ ಬಾವಿಯಲ್ಲಿ ಗಂಡನು ಒಂದು ನಾಣ್ಯ ಹಾಕಿ ಏನನ್ನೋ ಮನಸಿನಲ್ಲಿ ಬೇಡಿಕೊಂಡ. ನಂತರ ಹೆಂಡತಿಯೂ ಅದರಲ್ಲಿ ನಾಣ್ಯ ಎಸೆಯಲು ಹೋಗಿ ಕಾಲು ಜಾರಿ ಬಿದ್ದು ಮುಳುಗಿ ಬಿಟ್ಟಳು.
ಗಂಡ ಉದ್ಗರಿಸಿದ - ಅರೆ, ಇದೆಲ್ಲ ನಿಜಾನಾ ಹಾಗಾದರೆ ? ಕುರುಡು ನಂಬಿಕೆ ಅಂತ ತಿಳಿದಿದ್ದೆನಲ್ಲ?!
********
- ಆದಿ ಪುರುಷ ಆಡಂ ನನ್ನು ದೇವರು ಮೊದಲು ಸೃಷ್ಟಿಸಿದ್ದು ಏಕೆ ?
- ಅವನಿಗೆ ಏನನ್ನಾದರೂ ಹೇಳುವ ಅವಕಾಶ ಕೊಡಲು!
******
ಸೈನ್ಯಾಧಿಕಾರಿ ಸೈನಿಕನಿಗೆ ಕೇಳಿದ- ಏನಯ್ಯ ನಿನ್ನ ಹತ್ತಿರ ನೂರು ರೂಪಾಯಿಗೆ ಚಿಲ್ಲರೆ ಇದೆಯೆ?
ಸೈನಿಕ - ಇದೆ, ಕಣಯ್ಯ.
ಸೈನ್ಯಾಧಿಕಾರಿ- ಮೇಲಧಿಕಾರಿ ಜತೆ ಹೀಗೇನಯ್ಯ ಮಾತಾಡೋದು? ಈಗ ಇನ್ನೊಮ್ಮೆ ಪ್ರಯತ್ನಿಸೋಣ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಹೊಸ ನಗೆಹನಿ- ೫೩ ನೇ ಕಂತು

ಒಬ್ಬ ವಿಜ್ಞಾನಿ ಮತ್ತು ಒಬ್ಬ ತತ್ವಜ್ಞಾನಿಗಳನ್ನು ಒಂದು ಸಿಂಹ ಬೆನ್ನು ಹತ್ತಿತ್ತು . ವಿಜ್ಞಾನಿ ಹಿಂತಿರುಗಿ ನೋಡಿ ಬೇಗ ಬೇಗ ಲೆಕ್ಕ ಹಾಕಿ ತತ್ವಜ್ಞಾನಿಗೆ ಹೇಳಿದ - ನಾವು ಸಿಂಹವನ್ನು ಹಿಂದೆ ಹಾಕಲು ಸಾಧ್ಯವಿಲ್ಲ.
ತತ್ವಜ್ಞಾನಿ ಹೇಳಿದ- ನಾನು ಹಿಂದೆ ಹಾಕಲು ಪ್ರಯತ್ನಿಸ್ತಿ ರೋದು ಸಿಂಹವನ್ನಲ್ಲ , ನಿನ್ನನ್ನು !

*****

ಅವರಿವರ ಬಗ್ಗೆ ಆಡಿಕೊಳ್ಳುವ ಅವಳು ಅವನ ಬಗ್ಗೆ ಹೇಳಿದಳು - ಅವನು ಮಹಾ ಕುಡುಕ , ಅವನ ಕಾರು ಸೆರೆಯಂಗಡಿಯ ಮುಂದೆ ನಿನ್ನೆ ಇಡೀ ದಿನ ನಿಂತಿತ್ತು.
ಅವನ ಕಿವಿಗೆ ಇದು ಬಿತ್ತು. ಅವಳತ್ತ ದುರುಗುಟ್ಟಿ ನೋಡಿದ.
ಅವತ್ತು ರಾತ್ರಿ ತನ್ನ ಕಾರನ್ನು ಅವಳ ಮನೆ ಮುಂದೆ ನಿಲ್ಲಿಸಿ ಹೋಗಿ ಬಿಟ್ಟ!!

*****

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - shreekant.mishrikoti ರವರ ಬ್ಲಾಗ್