ನಾನೂ ಉಬುಂಟು ಹಾಕ್ಕೊಂಡೆ ( ಕನ್ನಡದಲ್ಲಿ ಕಂಪ್ಯುಟರ್ ಪಾಠ! )

0

ನಿನ್ನೆ ನಾನು ಹೇಳ್ದೆ , ಮೊದಲು ನಾನು ಉಬುಂಟುವಿನ ೬.೦೬ ಆವೃತ್ತಿಯನ್ನು ತರಿಸ್ಕೊಂಡಿದ್ದೆ ಅಂತ .
ಈ ನಡುವೆ ಕಚೇರಿಯಲ್ಲಿ ಖಾಲೀ ಬಿದ್ದಿದ್ದ ಒಂದು ಲ್ಯಾಪ್ ಟಾಪ್ ಅನ್ನು ಮನೆಗೆ ತಕೊಂಡು ಹೋದೆ.
ಕಂಪ್ಯೂಟರ್ ಗಳಲ್ಲಿ ಅನೇಕ ಪ್ರಕಾರಗಳು -
ದೊಡ್ಡ ದೊಡ್ಡ ಗಣಕಗಳು - ಸರ್ವರ್ ಗಳು .
ನೀವು ಸಾಮಾನ್ಯ ವಾಗಿ ಟೇಬಲ್ ಮೇಲೆ ನೋಡೋದು ಡೆಸ್ಕ್-ಟಾಪ್ ಕಂಪ್ಯೂಟರ್ ಗಳು - ಇವಕ್ಕೆ ಪರ್ಸನಲ್ ಕಂಪ್ಯೂಟರ್ - ಖಾಸಾಗಣಕ ಅಂತಾರೆ .
ಬೇಕು ಬೇಕಾದಲ್ಲಿ ತಕೊಂಡು ಹೋಗುವಂತೆ ಲ್ಯಾಪ್-ಟಾಪ್ ಗಳು ( ತೊಡೆಗಳ ಮೇಲೆ ಇಟ್ಟು ಬಳಸುವರು) ತೊಡೆ-ಗಣಕ ಅನ್ನೋಣವೇ ?.
ಅದೇ ತರಹ ನೋಟ್‌ಬುಕ್ ಗಳು (( ಲ್ಯಾಪ್ ಟಾಪ್ ಗೂ ನೋಟ್ ಬುಕ್ ಗೂ ಏನ್ವತ್ಯಾಸ ಅಂತ ಒಂದಿನ ಪತ್ತೆ(ದಾರಿ ) / ರೀ-ಸರ್ಚ್ ಮಾಡಿ ಬರೀತೀನಿ ! )

ಅದರಲ್ಲಾಗಲೇ ವಿಂಡೋಸ್ ಇತ್ತು ; ನಾನು ಕಳ್ಕೊಳ್ಳೋದು ಏನೂ ಇರಲಿಲ್ಲ :) ( ಕಾರಣ - ಅದು ಕಚೇರಿಯದು :) ಮತ್ತು ಅದರಲ್ಲಿ ಏನೂ ಅಂಥ ವಿಶೇಷ ಡಾಟಾ ( ಮಾಹಿತಿ) ಇರಲಿಲ್ಲ ) ಆದ್ದರಿಂದ ಉಬುಂಟು ಹಾಕಿ ನೋಡಿದೆ .
ಈಗಾಗಲೇ ನಿಮ್ಮ ಕಂಪ್ಯೂಟರ್ ನಲ್ಲಿ ವಿಂಡೋಸ್ ಅಥವಾ ಬೇರೆ ಕಾರ್ಯಕಾರೀ ವ್ಯವಸ್ಥೆ ಇದ್ದಿರಬಹುದು .
ಅದರ ಜತೆಗೇ ಉಬುಂಟು ಲೈನಕ್ಸ್ ಅನ್ನೂ ಹಾಕಿಕೊಂಡು , ಕಂಪ್ಯೂಟರ್ ಶುರು( ಬೂಟ್) ಮಾಡುವಾಗ ನಿಮಗೆ ಯಾವುದು ಬೇಕೋ ಅದನ್ನು ಆರಿಸಿಕೊಂದು ಶುರುಮಾಡಬಹುದು . ಈ ವ್ಯವಸ್ಥೆಗೆ ಮಲ್ಟಿ-ಬೂಟ್ ಅನ್ನುತ್ತಾರೆ .

ಅದರಲ್ಲಿರುವ ಹಾರ್ಡ್ ಡಿಸ್ಕ್ ಗಳೂ , ಡ್ರೈವ್ ( C , D ಇತ್ಯಾದಿ) ಗಳ ಒಟ್ಟು ಜಾಗ (space !) , ಖಾಲೀ ಜಾಗ ಎಷ್ಟು ಎಂಬ ವಿವರ ಬರೆದಿಟ್ಟುಕೊಳ್ಳಿ . ಉಬುಂಟು ಲೋಡ್ ಮಾಡುವಾಗ ಬೇಕಾಗುತ್ತದೆ .
ಒಂದು ಡ್ರೈವ್ ಅನ್ನು ಖಾಲಿ ಮಾಡಿಟ್ಟುಕೊಳ್ಳಿ .

ಹಾಗೇ ನಿಮ್ಮ ಕಂಪ್ಯೂಟರ್ ಗೆ ಜಾಲ / ಅಂತರ್ಜಾಲ ಸಂಪರ್ಕ ಇದ್ದರೆ ಅದು ಹೇಗೆ ಸಂಪರ್ಕ ಪಡೆಯುತ್ತದೆ ಎಂಬುದನ್ನೂ ತಿಳಿದಿಟ್ಟುಕೊಳ್ಳಿ ; ಸಂಬಂಧಿಸಿದ ಸೆಟ್ಟಿಂಗ್ಸ್ ಅನ್ನೂ ಬರೆದಿಟ್ಟುಕೊಳ್ಳಿ .

ಒಂದು ಕಂಪ್ಯೂಟರ್ ಅನ್ನು ಬೂಟ್ ಮಾಡೋದು ಫ್ಲಾಪ್ಪಿ ಯಿಂದ ಮಾಡಬಹುದು ; ಹಾಗೇ ಸಿ.ಡಿ. ಇಂದನೂ ಮಾಡಬಹುದು .
ಕಂಪ್ಯೂಟರ್ ಶುರು ಮಾಡುವಾಗ ಈ ಸಂಬಂಧ ಕೆಲವು ಅಯ್ಕೆಗಳನ್ನು ಮಾಡಬೇಕಾಗುತ್ತದೆ .
ಕಂಪ್ಯೂಟರ್ ಶುರು ಆಗುವಾಗ ತೆರೆಯ ಮೇಲೆ ಕೆಲವು ಸಂದೇಶ ಬರುತ್ತವೆ .. ಅಲ್ಲಿ ಗಮನಿಸಿದರೆ , ಮಾಮೂಲಿನಂತೆ ಶುರುವಾಗುವದನ್ನು ತಡೆಯಲು ಇಂಥಿಂಥ ಕೀಯನ್ನು ಒತ್ತಿ ಅಂತ ಇರುತ್ತದೆ . ಅಲ್ಲಿ ಇಂಥ ಆಯ್ಕೆಗಳನ್ನು ಮಾಡಬೇಕಾಗಬಹುದು .

ನಾನು ಉಬುಂಟು ಸೀ.ಡೀ ಅನ್ನು ಅದರ ಡ್ರೈವ್ ನಲ್ಲಿಟ್ಟು ನನ್ನ ಲ್ಯಾಪ್ಟಾಪ್ ಕಂಪ್ಯೂಟರ್ ಅನ್ನು ಶುರು ಮಾಡಿ ಮೇಲೆ ಹೇಳಿದ ಬದಲಾವಣೆಗಳನ್ನು ಮಾಡಿ ಸೀಡೀಯಿಂದ ಶುರು ಆಗುವ ಹಾಗೆ ನೋಡಿಕೊಂಡೆ .
ಏನೂ ತೊಂದರೆ ಇಲ್ಲದೆ ತೆರೆಯ ಮೇಲೆ ಮೂಡಿ ಬಂದಿತು ಉಬುಂಟು .
ಅಲ್ಲಿ ಇನ್ಸ್ಟಾಲ್ ಐಕಾನ್ ಇತ್ತು .
( ಇನ್‌ಸ್ಟಾಲ್ - ಗೆ ಪ್ರತಿಷ್ಟಾಪಿಸು , ನೆಲೆಗೊಳಿಸು , ಇನ್‌ಸ್ಟಾಲ್ ಅಂತೆಲ್ಲ ಬೇರೇ ಶಬ್ದ ಯಾಕೇ ? ಹಾಕಿಕೋ ಅನ್ನೋದೇ ಇರುವಾಗ ? :)

ಅದನ್ನು ಕ್ಲಿಕ್ಕಿಸಿದರೆ ಇನ್ಸ್ಟಾಲ್ ಪ್ರಕ್ರಿಯೆ ಶುರು ಆಯಿತು -
ಇನ್‌ಸ್ಟಾಲ್ ಮಾಡದೇನೇ ಉಬುಂಟು ಬಳಸಬಹುದು ನೆನಪಿರಲಿ . ಅದಕ್ಕೆ ಲೈವ್ ಸೀಡೀ ಅಂತಾರೆ ; ಆದರೆ ಸೀಡೀಯು ಡ್ರೈವ್ ನಲ್ಲೇ ಇರಬೇಕಾಗುತ್ತದೆ .

ಇನ್ಸ್ಟಾಲ್ ಪ್ರಕ್ರಿಯೆ ಬಹಳ ಸುಲಭ ಇದೆ .
ನಿಮ್ಮ ಕಂಪ್ಯೂಟರ್ ನ ಎಲ್ಲ ಭಾಗಗಳನ್ನು ಸರಿಯಾಗೇ ಗುರುತಿಸುವದು . ನಿಮ್ಮ ದೇಶ-ಕಾಲ ನೀವು ತಿಳಿಸಬೇಕಾಗುತ್ತದೆ . ಕೆಲವು ಹಂತ ಸುಮ್ಮನೆ ಮುಂದಕ್ಕೆ ಹೋದರಾಯಿತು .

ಒಂದೆಡೆ ಮಾತ್ರ ಹುಶಾರಾಗಿ ಹೆಜ್ಜೆ ಇಡಬೇಕಾಗುವದು - ಇಲ್ಲದಿದ್ದರೆ ಈಗಾಗಲೇ ಕಂಪ್ಯೂಟರ್ ನಲ್ಲಿ ಇರೋದನ್ನೆಲ್ಲ ಕಳಕೋಬೇಕಾದೀತು .
ಅದೇ ಪಾರ್ಟಿಶನಿಂಗ್ ಹಂತ ; ಎರಡು ಮೂರು ಅಯ್ಕೆಗಳಿದ್ದರೂ , ನಾನೇ ನಿರ್ದೇಶಿಸಬಹುದಾದ ಗೈಡೆಡ್ ರೀತಿ ಅಯ್ದುಕೊಂಡು , ಖಾಲೀ ಇರುವ ಹಾರ್ಡ್ -ಡಿಸ್ಕ್ ಭಾಗವನ್ನು ಗುರುತಿಸಿ ಅದರಲ್ಲಿ ext3 ಫೈಲ್ ಸಿಸ್ಟಮ್ ಅನ್ನು "/" ಎಂದು ಗುರುತಿಸಿದೆ. ಇಲ್ಲಿ ಕಡೇ ಪಕ್ಷ ಎರಡು ಜೀಬಿ (Giga bytes) ಬೇಕೆಂದಿದ್ದರೂ ಉದಾರವಾಗಿ ಹತ್ತು ಜೀಬಿ ಕೊಟ್ಟೆ . swap ಗೆಂದು 256 MB ( Mega Bytes ) ಕಡೇಪಕ್ಷ ಬೇಕಿದ್ದರು ಎರಡು ಜೀಬಿ ಕೊಟ್ಟೆ .
ಈ ಹಂತದಲ್ಲಿ ಹಾರ್ಡ್ ಡಿಸ್ಕ್ ಅನ್ನು ’ಚೆನ್ನಾಗಿ’ ಗುಡಿಸಿ ರಂಗೋಲಿ ಹಾಕಿದ ಹಾಗೆ ಬಳಸಲು ಸಿದ್ಧಗೊಳಿಸುತ್ತದೆ. ಇದುವೇ ಫಾರ್ಮ್ಯಾಟ್ಟಿಂಗ್ ; ಫಾರ್ಮ್ಯಾಟ್ ಮಾಡುವದು . ಆದ್ದರಿಂದ ಇಲ್ಲಿ ಎಚ್ಚರಿಕೆ ಅವಶ್ಯ . ನಂತರ ... ಸುಮಾರು ೧೦ ನಿಮಿಷ ತಗೊಂಡು ರೀಬೂಟ್ (ಮರುಶುರು) ಮಾಡಲು ಹೇಳುತ್ತದೆ . ಈ ಹಂತದಲ್ಲಿ ನೀವು ಆ ಸೀಡೀ ಯನ್ನು ಕಂಪ್ಯೂಟರಿನಿಂದ ಹೊರತೆಗೆಯಬೇಕು ...
ಅಷ್ಟೇ ..
( ಹಿಂದೆ ಯಾವಾಗಲೂ ಈ ಪಾರ್ಟೀಷನ್ ವ್ಯವಹಾರಕ್ಕೆ ನಾನು ಕೈ ಹಾಕಿರಲಿಲ್ಲ ; ಈಗ ಪಾರ್ಟಿಶನಿಂಗ್ ಬಗ್ಗೆ ತಿಳಿದಂತಾಯ್ತು ! )

ಕಂಪ್ಯೂಟರ್ ಬಂದ್ ಆಗಿ --- ( ಇದೇ ಶಟ್-ಡೌನ್ ) ಮತ್ತೆ ಶುರು (ಬೂಟ್ ) ಆಗುತ್ತದೆ .
ಈ ಹಂತದಲ್ಲಿ ಪ್ರಾರಂಭಕ್ಕೆ ನಿಮ್ಮ ಉಬುಂಟು ಮತ್ತು ಇತರ ಕಾರ್ಯಕಾರೀ ವ್ಯವಸ್ಥೆ ಗಳು ತೆರೆಯ ಮೇಲೆ ಕಂಡು - ನಿಮ್ಮ ಆಯ್ಕೆಗೆ ಸಮಯಾವಕಾಶ ಇರುತ್ತದೆ . ಏನೂ ಮಾಡದಿದ್ದರೆ - ಡಿಫಾಲ್ಟ್ - ಆಗಿ ( .... ಈ ಡಿಫಾಲ್ಟ್ ಶಬ್ದಕ್ಕೆ ಇನ್ನೂ ಕನ್ನಡ ಶಬ್ದ ಸಿಕ್ಕ ಹಾಗಿಲ್ಲ - ಪೂರ್ವ ನಿಯೋಜಿತವಾಗಿ ಎಂಬ ಶಬ್ದ ಸದ್ಯಕ್ಕೆ ಇಟ್ಟುಕೊಳ್ಳಬಹುದು . "ಪೂರ್ವ ನಿಯೋಜಿತ" - ಸಂಸ್ಕೃತ ತಿಳಿಯದಿದ್ದರೆ , ಇಂಗ್ಲೀಷ್ಜಿನ "ಡಿಫಾಲ್ಟ್ " ಏ ಗತಿ! ಅದನ್ನೇ ತಿಳ್ಕೊಳ್ಳಿ :) ? )

ಹೀಗೆ ನನ್ನ ಲ್ಯಾಪ್ ಟಾಪಲ್ಲಿ ಉಬುಂಟು ಹಾಕ್ಕೊಂಡೆ. ಮನೆಯಲ್ಲಿ ಇಂಟರ್ನೆಟ್ ಇಲ್ಲವಾದ್ದರಿಂದ ಅದರಲ್ಲಿನ ಹೊಸ ಆಟಗಳು ಮನೆಯವರಿಗೆ ಕೆಲವು ಕಾಲ ಆಡಲು ಸಿಕ್ಕವು . ಡಾಕ್ಟರ್ ಹೆಂಡತಿಗೆ ಔಷಧ-ರೋಗ ವಿಚಾರ ಒಂದಿಷ್ಟು ಗೊತ್ತಾಗೋ ಹಾಗೆ , ಮನೆಯಲ್ಲಿರೋರ್ಗೆ OS , linux, ubuntu ಗೊತ್ತಾಗುವವು :)

ಉಬುಂಟು ಜತೆ MS-Office ನಂಥ ತಂತ್ರಾಂಶವೂ ಲೋಡ್ ಆಗುವದು .

ನಾಳೆ ಉಬುಂಟು ೭.೧ ಆವೃತ್ತಿ ವಿಚಾರ ಹೇಳುವೆ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.