ಬಂತು , ಬಂತು, ಕಡೆಯ ಕಂತು ! (ಸತ್ಯಕಾಮ -ಭಾಗ ೫)

0

ಹಿಂದಿನ ಭಾಗ ಇಲ್ಲಿದೆ - http://www.sampada.net/blog/shreekantmishrikoti/22/11/2007/6376

ನಮ್ಮ ಕಥಾ ನಾಯಕ ಕೊನೆಯ ಉಸಿರು ಎಳೆಯುವಾಗ ಅವನ ಅಪ್ಪ ಬಂದಿದ್ದಾನೆ . ಮಗನ ’ಮದುವೆ’ , ’ಹೆಂಡತಿ’ , ’ಮಗ’ ಇವರ ಬಗ್ಗೆ ಅವನಲ್ಲಿ ಅಸಮಾಧಾನ ಇದ್ದರೂ ಮಗನ ಬಗ್ಗೆ ಅವನಲ್ಲಿ ಪ್ರೀತಿ ಇದೆ . ಅವನ ಆದರ್ಶಗಳಿಗಾಗಿ ಹೆಮ್ಮೆ , ಅಭಿಮಾನ ಇದೆ. ಆಪ್ತ ಗೆಳೆಯನೂ ಅಲ್ಲಿದ್ದಾನೆ . ಇವರೆಲ್ಲರ ನಡುವೆ ನಮ್ಮ ಸತ್ಯವೃತನು ತನ್ನ ಕೊನೆಯ ಉಸಿರು ಎಳೆಯುವನು .

ಕತೆ ಮುಗಿಯಿತೇ ? ಇನ್ನೂ ಇಲ್ಲ .
ಅವನ ಅಂತ್ಯಕ್ರಿಯೆಯನ್ನು ವಾಡಿಕೆಯ ಪ್ರಕಾರ ಮಗನು ಮಾಡಬೇಕು . ಹೀಗೆಂದು ಪುರೋಹಿತನು ಸೂಚಿಸುವನು . ಆಗ ಅಲ್ಲಿ ಎಲ್ಲರೂ ಇದ್ದಾರೆ . ಸತ್ಯವೃತನ ಅಪ್ಪ - ’ ಆ ಮಗು ಬಹಳ ಚಿಕ್ಕದು - ಕರ್ಮಗಳೆಲ್ಲವನ್ನೂ ನಾನೇ ಮಾಡುವೆನು’ ಅನ್ನುವನು .

ಆಗ ,
ಸಿಡಿಲಿನಂತೆ ,
ಆ ಏಳೆಂಟು ವರ್ಷದ ಮಗುವು
’ ಅಜ್ಜಾ , ನೀನು ಸುಳ್ಳು ಹೇಳ್ತಿದ್ದೀಯಾ , ಸುಳ್ಳು ಹೇಳೋದು ಪಾಪ ಅಂತ ನೀನೇ ಹೇಳಿದ್ದೆ ’ ಎಂದು ಕಿರಿಚುವನು .
ಆಗ ಅಪ್ರತಿಭನಾದ ಅವನು ’ ಏನು ? ನಾನೆಲ್ಲಿ ಸುಳ್ಳು ಹೇಳಿದೆ? ’ ಎಂದು ಕೇಳಿದಾಗ
" ನಾನು ಚಿಕ್ಕವ ಎಂದು ನೀನು ’ನಾನು ಕರ್ಮ ಮಾಡೋದು ಬೇಡ’ ಅನ್ನಲಿಲ್ಲ ; ನಾನು ಅಪ್ಪನ ಮಗ ಅಲ್ಲ ಅಂತ ಈ ಮಾತನ್ನು ಹೇಳಿದಿ!"
’ಆಂ? ಯಾರು ಇದನ್ನು ಹೇಳಿದರು? ’
’ ನನಗೆ ಎಲ್ಲ ಗೊತ್ತು ; ನನ್ನ ತಾಯಿಯೇ ಈ ವಿಷಯ ಹೇಳಿದ್ದಾಳೆ ’
...
ಆಗ ಇದೆಲ್ಲದರಿಂದ ವಿಚಲಿತನಾದ ಆ ಮುದುಕ ’ ನನ್ನ ಕಣ್ಣು ತೆರೆಸಿದೆಯಪ್ಪಾ ಮಗೂ ; ಹುಟ್ಟಿನಿಂದ ಯಾರೂ ದೊಡ್ಡವರಾಗುವದಿಲ್ಲ ; ಸತ್ಯವನ್ನು ತಿಳಿಯಲೂ , ಒಪ್ಪಿಕೊಳ್ಳಲೂ , ಎದುರಿಸಲೂ ತುಂಬಾ ಧೈರ್ಯ ಬೇಕು ’ ಎಂದೂ ’ ನೀನು ನನ್ನ ಮೊಮ್ಮಗನೇ ಸರಿ ; ನಿನ್ನ ತಾಯಿ ನನ್ನ ಸೊಸೆಯೇ ಸೈ ’ ಎಂದು ಒಪ್ಪಿ , ತನ್ನ ಜತೆಗೆ ಹಳ್ಳಿಗೆ ಕರೆದುಕೊಂಡು ಹೋಗುವನು ...

...
ಕತೆ ಇಲ್ಲಿಗೂ ಮುಗೀಲಿಲ್ಲ ; ಇಂಥ ಜನಗಳು ಈ ಜಗತ್ತಿನಲ್ಲಿ ಹುಟ್ಟಿ ಬರ್ತಲೇ ಇರ್ತಾರೆ ...
...
ಈಗ ಮೊದಲ ಭಾಗ ( http://www.sampada.net/blog/shreekantmishrikoti/20/11/2007/6340 ) ಓದಿ . ಅಲ್ಲಿ ಸತ್ಯಕಾಮ ಜಾಬಾಲಿಯ ಕತೆಯನ್ನು ನಾನೇಕೆ ಹೇಳಿದೆ ಎಂದೂ , ಈ ಸಿನಿಮಾದ ಹೆಸರು ಸತ್ಯಕಾಮ್ ಎಂದು ಏಕಿದೆ ಎಂದೂ ಗೊತ್ತಾಗುವದು !

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.