ಮರಳಿ ಓದಿಗೆ !

0

'ನಾನು ಸಂಪದಕ್ಕೆ ವಿದಾಯ ಹೇಳಲೇ' ಅಂತ ವಿದಾಯ ಹೇಳುವವರು ಮರಳಿ ಬಂದ ಹಾಗೆ ನಾನೂ ಓದು ಸಾಕಿನ್ನು ಅಂತ ನಿಲ್ಲಿಸುವ ವಿಚಾರ ಮಾಡಿದ್ದೆ . ಆದರೆ ನಾನೂ ಓದಿಗೆ ಮರಳಿ ಬರಲಿದ್ದೇನೆ !

ನಾನ್ಯಾಕೆ ಓದಬೇಕು ? ಎಲ್ರೂ ಓದ್ಕೊಂಡೇ ಇದ್ದಾರಾ ? ಸಾಕು ಓದಿದ್ದು ಅಂತೆಲ್ಲ ವಿಚಾರ ಮಾಡ್ತಿದ್ದೆ .

ಆದರೆ

ಓದಿನಿಂದಲೇ ಅಲ್ಲವೇ ನನಗೆ ಒಳ್ಳೆಯ ಮಾರ್ಕ್ಸ್ ಬಂದಿರೋದು ? ಒಳ್ಳೆಯ ಕೆಲ್ಸ ಸಿಕ್ಕಿರೋದು? ಓದಿನಿಂದಲೇ ಅಲ್ಲವೇ ನನಗೆ ಗೌರವ ಸಿಕ್ಕಿರೋದು ? ನೆಮ್ಮದಿಯ ಜೀವನ ಸಿಕ್ಕಿರೋದು? ಓದಿಕೊಂಡಿರಲು ಅನುಕೂಲ ಇರುವಾಗ ಓದಿಕೊಂಡೇ ಇದ್ದರಾಯ್ತು !

ನನಗೆ ದಿನಾಲೂ ಒಂದಿಷ್ಟು ಸಮಯ ಸಿಗುತ್ತದೆ. ಓದುವುದನ್ನು ಬಿಟ್ಟು ಆ ಸಮಯದಲ್ಲಿ ಬೇರೇನನ್ನೂ ಮಾಡಲು ನನಗೆ ಮನಸ್ಸಿಲ್ಲ; ಬೇರೇನನ್ನೂ ಮಾಡಲೂ ಆಗದು ಅಂತ ಇಟ್ಟುಕೊಳ್ಳಿ..

ನನ್ನ ಕೆಲ್ಸ/ಕಾರ್ಯಕ್ಷೇತ್ರದ ಬಗ್ಗೆ ಓದಬೇಕು.
ಡಿಜಿಟಲ್ ಲೈಬ್ರರಿಯಿಂದ ಪುಸ್ತಕ ಇಳಿಸಿ ಓದಬೇಕು.
ಅವಧಿ ಕೆಂಡಸಂಪಿಗೆ ತಾಣಗಳಲ್ಲಿ ಎಷ್ಟೊಂದೆಲ್ಲ ಓದೋದಿದೆ .
ನನ್ನ ಸುತ್ತ ಮುತ್ತ ಎಷ್ಟೆಲ್ಲ ಪುಸ್ತಕ ಸಿಗುತ್ತವೆ! ಎರಡು ಮೂರು ಲೈಬ್ರರಿ ಇವೆ .

ಕೇ.ಫ. ಅವರ ಶೌರಿ ಪಾತ್ರ ನಿಮಗೆ ಗೊತ್ತಿದೆಯೋ ಇಲ್ಲವೋ . 'ಶೌರಿ ಬಂದ' ಪುಸ್ತಕ ಓದಿದ್ದೆ . ( ಅದು ನನ್ನ ಹತ್ತಿರ ಈಗ ಇಲ್ಲ :( ) ವಿಶಿಷ್ಟ ವ್ಯಕ್ತಿತ್ವದ ಶೌರಿ ಒಬ್ಬ ಡಾಕ್ಟರರ ಹತ್ತಿರ ಕಂಪೌಂಡರ್ ಅಂತ ಕೆಲಸ ಮಾಡುತ್ತಿರುವಾಗ ಲೇಖಕರಿಗೆ ಪರಿಚಯ ಆಗುತ್ತಾನೆ . ಆಮೇಲೆ ಆ ಡಾಕ್ಟರರು ಪರದೇಶಕ್ಕೆ ಹೋಗಬೇಕಾಗಿ ಬಂದು ತಮ್ಮ ದವಾಖಾನೆಯನ್ನು ಮುಚ್ಚಿರುತ್ತಾರೆ . ಆಮೇಲೆ ಒಂದು ಸಲ ಈ ಶೌರಿ ಲೇಖಕರಿಗೆ ಪೇಟೆಯಲ್ಲಿ ಸಿಗುತ್ತಾನೆ . ' ಏನಯ್ಯ ಮಾಡ್ತಾ ಇದ್ದೀಯ ಈಗ ' ಅಂತ ಕೇಳಿದರೆ ಶೌರಿ ಏನು ಹೇಳ್ತಾನೆ ಗೊತ್ತೇನ್ರಿ ?
..
..
..
..
..
..
..
..
..
' ವಾರ್ ಅಂಡ್ ಪೀಸ್ ಮುಗ್ಸಿದೀನಿ; ಈಗ ಅನ್ನಾ ಕರೀನಾ ಓದ್ತಿದೀನಿ' ಅಂತ !
'ಅಲ್ಲಯ್ಯ , ಹೊಟ್ಟೆಗೆ ಏನ್ ಮಾಡ್ತಿದ್ದೀಯ? ಉದ್ಯೋಗ ಏನು ? ' ಅಂತ ಲೇಖಕರು ಸ್ಪಷ್ಟವಾಗಿ ಕೇಳಬೇಕಾಯ್ತು !!

ನಾನೂ ಇನ್ನು ಸ್ವಲ್ಪ ದಿನಕ್ಕೆ ಶೌರಿ ತರಹ ಹೇಳಿಯೇನು ! ( ಅಂದ ಹಾಗೆ ಈ 'ಅನ್ನಾ ಕರೀನಾ' - ೧೧೦೦ ಪುಟದ ಪುಸ್ತಕ ಡಿಜಿಟಲ್ ಲೈಬ್ರರಿಯಲ್ಲಿ ಇದೆ. ಅದರಲ್ಲಿ ಇರೋದಾದ್ರೂ ಏನು ? ಅಂತ ಓದಿ ನೋಡಬೇಕು. )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಓದು ಒಂಥರಾ ದೋಸೆ ತಿಂದ ಹಾಗೆ. ದಿನಾಲು ತಿಂದರೂ ಬೇಜಾರಾಗಲ್ಲ. ದೋಸೆ ತಿನ್ನೋದು ಬಿಡೋದು ಏನಾದ್ರು ನೆನಸಿ ಕೊಳ್ಳಕ್ಕೆ ಸಾಧ್ಯನ? ಅಯ್ಯಯಪ್ಪ. ಪ್ರಾಣ ಬೇಕಾದರು ಬಿಟ್ಟೇನು :)

ಮೊನ್ನೆ ಬೀಚಿಯವರ ಹುಚ್ಚು-ಹುರುಳು ಓದ್ತಾ ಇದ್ದೆ. 1951 ರಲ್ಲಿ ಪಬ್ಲಿಶ್ ಆಗಿದ್ದು. ಅದರಲ್ಲಿ ಬಾರೋ ಹು- ವಿಟಮಿನ್ ಇರೋ ಹುಚ್ಚು ಹಣ್ಣಿನ(ಟೊಮೇಟೊ) ಪ್ರಸಂಗನ ಓದಿ ಎಂಥ ಮಜಾ ಬಂತು ಅಂದ್ರೆ, ಇಮಾಜಿನ್ ಮಾಡ್ಕೊಳೋದು ಅಸಾಧ್ಯ. ಓದೇ ತೀರಬೇಕು ತಿಳಿಬೇಕು ಅಂದ್ರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೂ ಹೀಗೆ ಅನ್ನಿಸುತ್ತಿರುತ್ತೆ. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೇಫ - ಶೌರಿ ನೆನಪಿಸಿ ಕಣ್ಣು ಮಂಜಾಗಿಸಿದ್ರಿ :P. ಸುಧಾದಲ್ಲಿ ಬಹಳ ಹಿಂದೆ ಶೌರಿ ಮತ್ತು ಆತನ ಬುಲ್-ಬುಲ್ ತರಂಗ್ ಬಗ್ಗೆ ಓದಿದ್ದು ನೆನಪಿಗೆ ಬಂತು. ನನಗೇಕೋ ಶೌರಿ PG Wodehouse ಅವರ Bertie Wooster ಪಾತ್ರ ನೆನಪಿಸುತ್ತೆ. ಅಂದಹಾಗೆ ನಿಮ್ಮ ಪುಸ್ತಕದ ಹುಚ್ಚು ’H’ ಆಗಲಿ ಅಂತ ನನ್ನ ಹಾರೈಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಕೇ.ಫ., ಅರಾಸೇ ಅವರುಗಳ ಫ್ಯಾನು . ಮೂವತ್ತಕ್ಕೂ ಹೆಚ್ಚು ವರ್ಷದಿಂದ ಉದಯವಾಣಿ /ಪ್ರಜಾವಾಣಿ / ಸುಧಾ ವಾರ್ಷಿಕ ವಿಶೇಷಾಂಕ ಕೈಗೆ ಬಂದ ಕೂಡಲೆ ಪರಿವಿಡಿ ನೋಡೋದು ಈ ಹೆಸರುಗಳಿಗಾಗಿ . ಅಲ್ಲಿ ಅವರ ಲೇಖನ ಇದ್ದರೆ ಮೊದಲು ಓದಿ ನಂತರ ಉಳಿದದ್ದನ್ನ ನೋಡುತ್ತಿದ್ದೀನಿ .
ಕೇ.ಫ. ಅವರು ಬರೆದಿರೋದು PG Wodehouse ಮಾದರಿಯಲ್ಲೇ . ನಾನು PG Wodehouse ಓದಿಲ್ಲ ; ಎರಡೂ ಓದಿದ ನನ್ನ ಗೆಳೆಯ ಕೇ.ಫ.ರನ್ನೇ ಹೆಚ್ಚಾಗಿ ಮೆಚ್ಚೋದು.
ಕೇ.ಫ. ಅವರ ಎರಡು ಪುಸ್ತಕ ನನ್ನ ಹತ್ತಿರ ಇದ್ದವು . 'ಶೌರಿ ಬಂದ ' ಮತ್ತು 'ಸರಿ, ಶೌರಿ' ಇವೆರಡೂ ಪುಸ್ತಕ ಎಲ್ಲೋ ಕಳೆದುಕೊಂಡಿದ್ದೀನಿ :( . ಆದರೆ ಈಗ ಪೇಟೆಯಲ್ಲಿ ' ಬೆಸ್ಟ್ ಆಫ್ ಕೇ.ಫ' ' ಇದೆ . ಓದಿ ಎಂಜಾಯ್ ಮಾಡಿ.

ಬೆಸ್ಟ್ ಆಫ್ ಅ.ರಾ.ಸೇ ಮರೆಯಬೇಡಿ ಮತ್ತೆ . ಸೂಪರ್ ಆಗಿದೆ ಅದು.
ಈ ಎರಡೂ 'ಬೆಸ್ಟ್ ಆಫ್ ....' ಅಂಕಿತ ಪ್ರಕಾಶನ ಪ್ರಕಟಿಸಿದ್ದು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ಛೊಲೋ ಆಯ್ತು ಶೌರಿ' ನನ್ನ ಹತ್ತಿರ ಇರುವ ಇನ್ನೊಂದು ಪುಸ್ತಕ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.