ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)

0

ಮೊದಲು ಮಹೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರ :
ಅವರು ಕೇಳಿದ್ದು .
೧. ನಾನು ನಿನಗೆ ಕಾಗದ ಬರೆಯುತ್ತಾ ಇದೆ.
೨. ನಾನು ಮಗುವಿಗೆ ಸ್ನಾನ ಮಾಡಿಸ್ತಾ ಇದ್ದೀನಿ
೩. ಅವರು ಅವನಿಗೆ ಹೊಡೆಯುತ್ತಾ ಇದ್ರು..
ಇದನ್ನೆಲ್ಲ ಧಾರವಾಡದಲ್ಲಿ ಹೇಗೆ ಹೇಳುತ್ತೀರಿ ? ಅಂತ

ಉತ್ತರ :
೧. ನಾನು ನಿನಗ ಪತ್ರ (/ಪತ್ರಾ) ಬರೀಲಿಕ್ಕೆ ಹತ್ತೇನಿ ( /ಬರೀಲಿಕ್-ಹತ್ತೇನಿ) .
೨. ನಾನು ಕೂಸಿಗೆ ಸ್ನಾನಾ ಮಾಡಿಸ್ಲಿಕ್ಕೆ ಹತ್ತೇನಿ (/ಮಾಡಿಸ್ಲಿಕ್-ಹತ್ತೇನಿ) .
೩. ಅವರು ಅವಗ ಹೊಡೀಲಿಕ್ಕೆ ಹತ್ತಿದ್ರು (/ಹೊಡೀಲಿಕ್-ಹತ್ತಿದ್ರು) .

ಮಾಡುತ್ತಾ ಇರು , ಮಾಡುತ್ತಿರು - ಇವುಗಳಿಗೆ ಅಷ್ಟೇ ಅಲ್ಲದೇ ,
ಮಾಡತೊಡಗು , ಮಾಡಲು ಶುರುಮಾಡು ಇವುಗಳಿಗೆ ಬದಲಾಗಿ ( ಗಮನಿಸಿ )
ಮಾಡಲಿಕ್ಕೆ ಹತ್ತು , ಮಾಡಲಿಕ್-ಹತ್ತು ಎಂದು ಬಳಸುತ್ತಾರೆ.
(ಮಾಡತೊಡಗು = ಮಾಡಹತ್ತು ಎಂಬುದನ್ನೂ ನೆನಪಿನಲ್ಲಿಡಿ)

ನಾನು ಮಾಡಲಿಕ್ಕೆ ಹತ್ತೀನಿ ( ಮಾಡಲಿಕ್ ಹತ್ತೀನಿ)
ನೀನು ....... ಹತ್ತೀದಿ .
ಅವ ... ಹತ್ಯಾನ
ಅಕಿ ... ಹತ್ಯಾಳ
ಅವರು ... ಹತ್ಯಾರ ...

ನಾನು .... ಹತ್ತಿದೆ ( ಮಾಡತೊಡಗಿದೆ ಅನ್ನುವದಕ್ಕೆ )
ಅವ ... ಹತ್ತಿದ ( ಮಾಡತೊಡಗಿದ)
ಅಕಿ ... ಹತ್ತಿದ್ಲು / ಹತ್ತಿದ್ಳು ... ( ಮಾಡತೊಡಗಿದಳು )

ನಾನು ... ಹತ್ತಿದ್ದೆ ... ( ಮಾಡ್ತಾ ಇದ್ದೆ , ಶುರು ಮಾಡಿದ್ದೆ)
ಅವ ... ಹತ್ತಿದ್ದ ( ಎರಡೂ ಅರ್ಥದಲ್ಲಿ )
ಅಕಿ... ಹತ್ತಿದ್ಲು / ಹತ್ತಿದ್ಳು ( ಎರಡೂ ಅರ್ಥದಲ್ಲಿ ) ಮೂರು ಸಾಲು ಮೇ‍ಲಿನದನ್ನೂ ಗಮನಿಸಿ .

ಇನ್ನೂ ಬೇರೆ ಬೇರೆ ರೂಪಗಳೂ ಇವೆ ..
ಹೊಡಿಯಾಕ (ಹೊಡ್ಯಾಕ ) / ಮಾಡಾಕ / ಬರಿಯಾಕ , ಇವೆ ನಿಜ .
ಆದರೆ ನಾನು ಆ ಕನ್ನಡವನ್ನು ಆಡುವದಿಲ್ಲ ಆದ್ದರಿಂದ ಆ ರೂಪಗಳನ್ನು ತಿಳಿಸಿಲ್ಲ ; ಯಾಕೆಂದರೆ ನಾನು ಬರೆಯುವದು ತಪ್ಪಾಗಬಹುದು .
ಬಲ್ಲವರು ಇಲ್ಲಿ ಟಿಪ್ಪಣಿ ಮಾಡಿ .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನು ನನ್ನ ಹುಬ್ಬಳ್ಳಿ ಗೆಳೆಯರ ಬಾಯಿಂದ ಕೇಳಿರೋ ಪ್ರಕಾರ

ಅವರು ಅವಗ ಹೊಡೀಲಿಕ್ಕೆ ಹತ್ತಿದ್ರು

ಅವರು ಅಂವ್ಗ್ಗ ಹೊಡೀಲಿಕ್ಕೆ ಹತ್ತಿದ್ರು

ಇಲ್ಲಿ ಅಂವ( ಮೂಗುಲಿ) ಬಿಟ್ತಿಹೋಗಿದೆ ಅಲ್ವ ?

ಹುಬ್ಬ್ಬಳ್ಳಿ/ದಾರವಾಡ ಕಡೆ ಹಾರುವ ಮತ್ತು ಹಾರುವರಲ್ಲದ ಮಂದಿ ಆಡುನುಡಿಯಲ್ಲಿ ಬಲು ಬೇರೆತನಗಳಿವೆ
ಬರಹಗನ್ನಡ ಹಾರುವ(ದಾರವಾಡ) ಹಾರುವರಲ್ಲದ(ದಾರವಾಡ)
----------------------------------------------------------
ಇದೆ ಅದ ಐತಿ
ಅದರಲ್ಲಿ ಅದ್ರೊಳಗ ಅದ್ರಾಗ
ಕೂತಿಕೊ ಕೂತ್ಕೊ ಕುಂತ್ಕ

ಗಮನಿಸಿ: ಹಾರುವರಲ್ಲದವರಲ್ಲಿ ಮೂಗುಲಿ ಹೆಚ್ಚು

ಇದರ ಬಗ್ಗೆ ಮೆಲ್ಬರ್ನ್ ಯೂನಿವರ್ಸಿಟಿಯವರು ಅರಯ್ಯು ಮಾಡಿದ್ದಾರೆ.
"Towards a General Model for Linguistic paradigms" ...ಇದರ ಬಗ್ಗೆ ಗೂಗಲಿಸಿದರೆ ನಿಮಗೆ ಇದರ pdf ಸಿಗುವುದು.

ಮೂಗುಲಿ = ಅನುನಾಸಿಕ ( ಶಂಕರ ಬಟ್ಟರ ನೆಗಳ್)

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

1. "ಹುಬ್ಬ್ಬಳ್ಳಿ/ದಾರವಾಡ ಕಡೆ ಹಾರುವ ಮತ್ತು ಹಾರುವರಲ್ಲದ ಮಂದಿ ಆಡುನುಡಿಯಲ್ಲಿ ಬಲು ಬೇರೆತನಗಳಿವೆ
ಬರಹಗನ್ನಡ ಹಾರುವ(ದಾರವಾಡ) ಹಾರುವರಲ್ಲದ(ದಾರವಾಡ) "

ಹೌದು, ನಾನು ಹಾರುವನಾದ್ದರಿಂದ ಆ ನುಡಿಯ ಕುರಿತು ಬರೆಯುತ್ತಿದ್ದೇನೆ .

2. " ಹಾರುವರಲ್ಲದವರಲ್ಲಿ ಮೂಗುಲಿ ಹೆಚ್ಚು"

ಇದು ಸರಿ ಇರಲಿಕ್ಕಿಲ್ಲ ; ನಾನು ಅವ/ಅಂವ ಅನ್ನುವಾಗ ಅನುಸ್ವಾರ ಬಳಸ್ತೀನಿ .

ಹಾಗೇ ಆರಯ್ಯು ಬಗ್ಗೆ ತಿಳಸ್ತೀರಾ ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರಯ್ = ಸಂಶೋದನೆ ( ಮಾಯ್ಸ :) ಹೇಳಿದ್ದು)

ನಿಮಗೆ ಗೂಗಲಿಸಿದಾಗ ಆ ಪಿಡಿಎಪ್ ಸಿಕ್ಕಿತೆ? ಅದನ್ನ ಓದಿ

2. " ಹಾರುವರಲ್ಲದವರಲ್ಲಿ ಮೂಗುಲಿ ಹೆಚ್ಚು"
ಇದು ಸರಿ ಇರಲಿಕ್ಕಿಲ್ಲ ; ನಾನು ಅವ/ಅಂವ ಅನ್ನುವಾಗ ಅನುಸ್ವಾರ ಬಳಸ್ತೀನಿ

ಆದ್ರೂ ನನ್ನ ಕೆಲವು ಹುಬ್ಬಳ್ಳಿ ಬೇಟಿಗಳಲ್ಲಿ ನನಗೆ ಹೀಗೆ ಅನ್ನಿಸಿತು. ಮತ್ತು ಆ ಪಿಡಿಎಪ್ ನಲ್ಲೂ ಹಾಗೆ ಇದೆ.

-----------

ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ನೀವು ಹೇಳೂದು ಖರೆ:
ಉದಾ:
ಗ್ರಾಂಥಿಕ - ಹಾರುವ - ಬಹುಜನ
ಇದೆ - ಅದ - ಐತಿ
ಜೋಳದ ರೊಟ್ಟಿ - ಭಕ್ಕರಿ - ರೊಟ್ಟಿ
??? - ಥಾಲಿಪೆಟ್ಟು - ಧಪಾಟಿ
ಕೇಶವ
Visit my blog:
http://kannada-nudi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ

ಕನ್ನಡ ನಾಡಿನ ಬೇರೆ ಬೇರೆ ಇಕ್ಕೆಗಳ/ಸ್ತಳಗಳ ಆಡುನುಡಿಗಳ ಬಗ್ಗೆ ಒಂದು ಒಳ್ಳೆ ಅರಯ್ಯು ಮಾಡಲು ಹೇಳಿ ಮಾಡಿಸಿದ ವಿಸ್ಯ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಗೊ, ಪಿಡಿಎಪ್ ಬಂತು
http://www.ldc.upenn.edu/sb/home/papers/paradigms.pdf

------
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಮ್ಮೆ ನಾನು ನಿಪ್ಪಾಣಿಯನಾದ ಗೆಳೆಯನ ಜೊತೆಗೆ ಮಾತನಾಡಕೊತ "ಮಂಗ್ಯಾ ಮರಾ ಹೆಂಗ ಇಳೀಲಿಕ್ಕಹತ್ತದ ನೋಡ್ರಿ" ಅಂದೆ. ಆ ಮಾತನ್ನು ಮತ್ತೊಬ್ಬ ಬೆಂಗಳೂರಿಗ ಮಿತ್ರನೊಬ್ಬನೂ ಕೇಳಿಸಿಕೊಂಡಿದ್ದ. ಸ್ವಲ್ಪ ಹೊತ್ತಿನ ಮ್ಯಾಲ ಆವ ನನ್ನ ಕೇಳಿದ, ಮಂಗ ಮರ ಇಳೀಲಿಕ್ಕೆ ಹತ್ತಬೇಕು ಯಾಕ ಅಂತ, ನಮ್ಮ ಭಾಷೆಯ ಹತ್ಯಾರ, ಹತ್ತೆದ ಇವುಗಳ ಅರ್ಥ ಹೇಳಿದ ಮೇಲೆ ಅವನಿಗೆ ನಾನು ಹೇಳಿದ್ದು ಅರ್ಥ ಅಯ್ತು ಅಂದ.