ಕಾವ್ಯ - 'ಮರೆತ ಸಾಲು'ಗಳಿಂದ ಆಯ್ದ ಸಾಲುಗಳು

0

ಎಚ್. ಎಸ್. ವೆಂಕಟೇಶಮೂರ್ತಿ ಯವರು ಅನೇಕ ಒಳ್ಳೆಯ ಕವನಗಳನ್ನು ಭಾವಗೀತಗಳನ್ನು ಕೊಟ್ಟಿದ್ದಾರೆ . 'ತೂಗುಮಂಚ' ಸೀಡೀ ಅಥವಾ ಕ್ಯಾಸೆಟ್ ಕೇಳಿದ್ದೀರ ತಾನೇ ? ಇಲ್ವೇ , ನಿಮ್ಮ ಜನ್ಮ ವ್ಯರ್ಥ ಅಂತ ಯಾರೋ ರವಿಬೆಳಗೆರೆಗೆ ಹೇಳಿದ್ರಂತೆ ! ಅವರ ' ಮರೆತ ಸಾಲುಗಳು' ಕವನ ಸಂಕಲನ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಸಿಕ್ತು . ಅಲ್ಲಿನ ಕೆಲವು ಸಾಲು ನಿಮ್ಮ ಜತೆ ಹಂಚ್ಕೋಬೇಕಂತ ಅನಿಸ್ತು . ಹೇಗೂ ನಿಮ್ಮಲ್ಲಿ ಕೆಲವರು ಕವಿತೆ-ಕಾವ್ಯದ ಬಗ್ಗೆ ಚರ್ಚೆ ಮಾಡ್ತಾ ಇದ್ರಲ್ಲ ?

ಒಂದು ಕವನ :
===========
ಯಾರೊ ಉತ್ತು ಯಾರೊ ಬಿತ್ತಿ ಎಲ್ಲೊ ಬೆಳೆದ
ತುತ್ತು
ನಮ್ಮದು ಈ ಹೊತ್ತು
ಎಲ್ಲೊ ಬಗಿದು ಏನೋ ಒಗೆದು ಎಂದೊ ತೆಗೆದ
ಚಿನ್ನ
ಇಂದು ನಮ್ಮದಣ್ಣ
ಯಾರ ನೋವೋ ಯಾರ ನಲವೊ ಆಗಿ ರಸದ
ಭಟ್ಟಿ
ನಮ್ಮದಿಂದು ಬಿಟ್ಟಿ
ಯಾರೋ ಕವಿ ಎಂದೊ ಏಕೋ ಮರೆತು ಹೋದ
ಸಾಲು
ಇಂದು ನಮ್ಮ ಪಾಲು

'ಕವಿತೆ'ಯ ಕುರಿತು
==============

ಪದಗಳ ಮೆಲೆ ಪದಗಳನಿಕ್ಕುತ
ಬಂದ ಮುದ್ದು ಮಗುವೆ
....
ಚೋಟುದ್ದದ ನಿನಗೆ ಏಟುದ್ದದ ನೆರಳು !

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಯಾರೋ ಕವಿ ಎಂದೊ ಏಕೋ ಮರೆತು ಹೋದ
ಸಾಲು
ಇಂದು ನಮ್ಮ ಪಾಲು<<

<<ಪದಗಳ ಮೆಲೆ ಪದಗಳನಿಕ್ಕುತ
ಬಂದ ಮುದ್ದು ಮಗುವೆ>>

ಆಹಾ! ಎಂಥ ಮುದ್ದು ಕಲ್ಪನಾಗುಚ್ಚ !

"ನೀನು ಬಂದರೆ

ಕೊರಡು ಹಾದಿ ಕೊನರಿಟ್ಟೀತು...

ಹಸುರಾಗಿ.. ಹೂವಾಗಿ... ಹಣ್ಣು ತೂಗಿ...

ನೀ ಬರದೇ ಹೋದರೆ...

ದಾರಿ ನನ್ನೆದೆ ತೂರಿ...

ನಿನ್ನ ಕೊರಳಿನ ಪದಕ.. ನನ್ನ ಹೃದಯ!!!"

ಇದೂ ಹೆಚ್ಚೆಸ್ವಿ ಯವರದು.ಸಿ. ಅಶ್ವಥ್ ರು ತಮ್ಮ ಕಂಠದಲ್ಲಿ ನೋವು ತುಂಬಿ ಹಾಡುತ್ತಿದ್ದರೆ, ದುಃಖದ ಸಮಯಗಳಲ್ಲಿ ಈ ಸಾಲುಗಳನ್ನು ನೆನೆನೆನೆದು ಖುಷಿಪಟ್ಟಿದ್ದೇನೆ.

ಅವರ ಕಲ್ಪನೆಯ, ಕವನದ ಸಾಲುಗಳನ್ನು ನಮ್ಮ ಪಾಲಾಗಿಸಿದ್ದಕ್ಕೆ ನಾನಂತೂ ಇಬ್ಬರಿಗೂ ಸದಾ ಋಣಿಯಾಗಿರುವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.