ಹಳೇ ಗಂಡನ ಪಾದವೇ ಗತಿ !

0

ಹಳೇ ಗಂಡನ ಪಾದವೇ ಗತಿ ! ಅನ್ನುವ ಗಾದೆ ಮಾತನ್ನು ನೀವು ಕೇಳಿರಬೇಕು . ಇದಕ್ಕೇನಾದರೂ ಹಿನ್ನೆಲೆ , ಉದಾಹರಣೆ ಇರಬೇಕಲ್ವೇ ? ನಮ್ಮ ಸಮಾಜದಲ್ಲಂತೂ ಹೊಸ ಗಂಡ , ಹಳೆ ಗಂಡ ಅಂತೆಲ್ಲ ಇರುತ್ತಿರಲಿಲ್ಲ ಅಲ್ಲವೇ ? ( ಈಗಿನ ಮತ್ತು ಇನ್ನು ಮುಂದಿನ ಕತೆ ಬೇರೆ !)
ಹೊಸ ಹೆಂಡತಿ , ಹಳೆ ಹೆಂದತಿ ಸಾಧ್ಯ ಇರುತ್ತಿತ್ತು . ಹಾಗಿದ್ದಾಗೆ ’ಹಳೇ ಗಂಡನ ಪಾದವೇ ಗತಿ’ ಎಂಬ ಮಾತು ಹೇಗೆ ಚಾಲ್ತಿಯಲ್ಲಿ ಬಂದಿರಬಹುದು ?
....
....
....
ಶಚಿ ದೇವಿ ಇಂದ್ರನ ಹೆಂಡತಿ . ಆದರೆ ಇಂದ್ರ ಅನ್ನೋದು ಒಂದು ಪದವಿ . ಆಗಾಗ ಅನೇಕರು ಘೋರ ತಪಸ್ಸು ಮಾಡಿ ಅದಕ್ಕೆ ಪ್ರಯತ್ನಿಸ್ತಿದ್ದರು . ಹೀಗೊಂದ್ಸಲ ಒಬ್ಬ ಧೃಡಕಾಯದ ಸುಂದರ ತರುಣ ತಪಸ್ವಿ ತಪಸ್ಸು ಮಾದ್ತಿರ್ತಾನಂತೆ . ಆಗ ಸದ್ಯದ ಇಂದ್ರನಿಂದ ಬೋರ್ ಆದ ಶಚಿಯು ಹೊಸ ಇಂದ್ರನ ಕನಸು ಕಾಣ್ತಿರ್ತಾಳಂತೆ . ಆಗ ಹಾಲೀ ಇಂದ್ರನು ರಂಭೆ , ಮೇನಕೆ, ತಿಲೋತ್ತಮೆ ಅಂಥ ಅಪ್ಸರೆಯರನ್ನ ಬಳಸಿ ಅವರ ತಪೋಭಂಗ ಮಾಡ್ತಾನೆ . ಅದು ಅವನ ಮಾಮೂಲು ಉಪಾಯ . ಹೀಗಾಗಿ ಆ ತಪಸ್ವಿ ಇಂದ್ರನಾಗೋ ಚಾನ್ಸ್ ಕಳೆದುಕೊಂಡು , ಶಚೀದೇವಿಗೆ ಹಳೇ ಗಂಡನ ಪಾದವೇ ಗತಿಯಾಗುತ್ತೆ ! :)
( ರಾ.ಶಿ.ಯವರ ಪುಸ್ತಕದಲ್ಲಿ ಓದಿದ್ದು)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.