ನಾನು ಉಬುಂಟು ೯.೦೪ ಹಾಕ್ಕೊಂಡಿದ್ದು

0

ನಾನು ಉಬುಂಟು ೮.೦೪ ಹಾಕ್ಕೊಂಡಿದ್ದೆ . ೯.೦೪ ರ ಆವೃತ್ತಿಗೆ ಅಪ್ಗ್ರೇಡ್ ಮಾಡೂವ ಮೊದಲು ೮.೧೦ ರ ಆವೃತ್ತಿಗೆ ಅಪ್ಗ್ರೇಡ್ ಮಾಡಬೇಕಂತೆ . ಹಾಗಾಗಿ ನೆಟ್ ಮೂಲಕ ಅಪ್ಡೇಟ್ ಮಾಡ್ಕೊಂಡೆ . ಸುಮಾರು ಸಾವಿರ ಎಂಬಿ ಅಂದರೆ ಸುಮಾರು ಸಾವಿರ ರೂಪಾಯಿ ಖರ್ಚು ಆಯ್ತು ಅನ್ನಿ . ೯.೦೪ ಗೆ ನೆಟ್ ಮೂಲಕ ಅಪ್ಡೇಟ್ ಮಾಡೋದು ಬೇಡ . ಎಲ್ಲಾದ್ರೂ ಸೀಡೀ ಸಿಕ್ಕೇ ಸಿಗುತ್ತದೆ , ಕಾದು ನೋಡೋಣ ಅಂತ ಬಿಟ್ಟೆ .
ಮೊನ್ನೆ ಉಬುಂಟು.ಕಾಂ ನಲ್ಲಿ ಸೀಡಿಯನ್ನು ಆರ್ಡರ್ ಮಾಡಿದೆ . ಸಂಜೆಯೇ ಲಿನಕ್ಸ್ ಫಾರ್ ಯೂ ಮ್ಯಾಗಝೀನ್ ಜತೆಗೆ ಉಬುಂಟು ಸೀಡಿ ಕೊಟ್ಟಿರೋದು ನೋಡಿ ೧೦೦ ರೂಪಾಯಿ ಕೊಟ್ಟು ಖರೀದಿ ಮಾಡಿದೆ .
ಮನೆಯಲ್ಲಿ ಸೀಡಿಯಿಂದ ಅಪ್ಗ್ರೇಡ್ ಮಾಡಲು ಹೋದೆ . ಏನೋ ಎರರ್ ಬಂತು . ಹೋಗಲಿ ಅಂತ ಸೀಡಿ ತೆಗೆದು ಮೊದಲಿನಂತೆ ಬೂಟ್ ಮಾಡಲು ಪ್ರಯತ್ನಿಸಿದೆ . ೮.೧೦ ಕ್ಕೆ ಬೂಟ್ ಆಗಲಿಲ್ಲ . ಏನೋ ಎರರ್ ಬಂತು . ಅಯ್ಯೋ ಈಗೇನು ಮಾಡೋದು ? ನನ್ನ ಕಡತಗಳ ಬ್ಯಾಕಪ್ ಬೇರೆ ಇಟ್ಟುಕೊಂಡಿಲ್ಲ . ಮೊದಲು ವಿಂಡೋಸ್ ಎಕ್ಸ್ ಪಿ ಶುರು ಆಗುತ್ತೋ ಅಂತ ನೋಡಿದೆ. ಅದಕ್ಕೇನು ತೊಂದರೆ ಇರಲಿಲ್ಲ . ಅರ್ಧ ಜೀವ ಬಂತು . ಆಮೇಲೆ ಬೂಟ್ ಆಯ್ಕೆ ಬದಲಿಸಿ ಸೀಡಿಯನ್ನು ಬೂಟ್ ಡ್ರೈವ್ ಮಾಡಿ , ಉಬುಂಟು ಸೀಡಿ ಅಲ್ಲೇ ಇಟ್ಟು ಬೂಟ್ ಮಾಡಿದೆ . ಅದನ್ನ ಲೈವ್ ಸೀಡೀ ಅಂತಾರೆ ಅಲ್ವೇ ? ಇನ್ಸ್ಟಾಲ್ ಮಾಡದೇ ಉಬುಂಟು ಪ್ರಯತ್ನಿಸೋದು. ಅದು ನನ್ನ ಹಿಂದಿನ ಉಬುಂಟು ಡ್ರೈವ್ ಮತ್ತೆ ಅಲ್ಲಿನ ಕಡತಗಳನ್ನ ತೋರಿಸ್ತಾ ಇತ್ತು . ನೇರವಾಗಿ ೯.೧೦ ಅನ್ನು ಇನ್ಸ್ಟಾಲ್ ಮಾಡೋಣ ಅಂದ್ರೆ ಈ ಪಾರ್ಟೀಶನ್ ಫಾರ್ಮ್ಯಾಟ್ ಕಡತಗಳೆಲ್ಲ ಕಳೆದು ಹೋಗುವವೋ ಏನೋ ? ಬ್ಯಾಕಪ್ ಈಗಲಾದ್ರೂ ತಕ್ಕೊಳ್ಳೋಣ ಅಂದ್ರೆ ಯೂ ಎಸ್ ಬಿ ಪೆನ್ ಡ್ರೈವ್ ಕcಏರಿಯಲ್ಲಿ ಬಿಟ್ಟು ಬಂದಿದೀನಿ. ಹೋಗಲಿ ವಿಂಡೋಸ್ ಪಾರ್ಟಿSಅನ್ ಗೆ ಕಾಪಿ ಮಾಡೋಣ ಅಂತ ಪ್ರಯತ್ನ ಮಾಡಿದೆ . ಎಲ್ಲ ಕಡತ ಕಾಪಿ ಆಗುತ್ತಾ ಇಲ್ಲ ; ಪರ್ಮಿಷನ್ ಇಲ್ಲ ಅಂತ ಎರರ್ . ಕೊನೆಗೆ ಎಲ್ಲಾ ಪರ್ಮಿಶನ್ (777- read , write, execute ) ಗಳನ್ನು ಎಲ್ಲಾ ಕಡತಗಳಿಗೆ , ಕಡತಕೋಶಗಳಿಗೆ , ಒಳಗೊಂಡ ಎಲ್ಲವಕ್ಕೂ chmod ಆದೇಶ ಬಳಸಿ ಕೊಟ್ಟೆ . ಆಮೇಲೆ ಕಾಪಿ ಮಾಡಿದೆ . ಆಯಾ ಕಡತಕೋಶಗಳ ಗಾತ್ರ ನೋಡಿಕೊಂಡೆ . ಮ್ಯಾಚ್ ಆಗುತ್ತಿದ್ದವು . ಸದ್ಯ , ನಿಟ್ಟುಸಿರು ಬಿಟ್ಟೆ . ಆಮೇಲೆ ಹಳೇ ಉಬುಂಟು ಪಾರ್ಟಿಶನ್ ಮೇಲೆ ಯೇ (ಸ್ವಲ್ಪ ಗಾತ್ರ ಹೆಚ್ಚಿಸಿ ) ಇನ್ಸ್ಟಾಲ್ ಮಾಡಿದೆ ಬೇಗ ಆಯ್ತು . ವಿಂಡೋಸ್ ನಿಂದ ಆ ಕಡತಕೋಶಗಳನ್ನು , ಕಡತಗಳನ್ನು ಉಬುಂಟುಗೆ ವರ್ಗಾಯಿಸಿದೆ .
ಇದಕ್ಕೆಲ್ಲ ಸುಮಾರು ಎರಡು ಗಂಟೆಯೇ ತಕೊಂಡ್ತು . ರಾತ್ರಿ ೧೧.೩೦ ಆಗಿತ್ತು . ಏನ್ ಮಾಡ್ತಾ ಇದ್ರಿ ಅಂತ ಹೆಂಡತಿ ಕೇಳಿದಳು ; ನಿನಗದೆಲ್ಲ ತಿಳಿಯೋದಿಲ್ಲ ಬಿಡು ; ನಿನಗೆ ಉಬುಂಟು ಗೊತ್ತಲ್ಲಾ , ಅದರ ಹೊಸ ವರ್ಶನ್ ಹಾಕಿದೆ . ಅಂತ ಹೇಳಿದೆ. 'ನೀವೊಬ್ರು , ಪ್ರಮೋಶನ್ ಅಭ್ಯಾಸ ಮಾಡೋದು ಬಿಟ್ಟು ... ' ಅಂತ ಗೊಣಗಿದಳು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾಡಿದ್ದು ಫೆಡೋರಾ ೧೧ ಬರಲಿದೆ. ಕಾಯ್ತಾ ಇರಿ.

ಪಾರ್ಟೀಶನ್ ಮಾಡಿಕೊಳ್ಳಲು gparted-live ಬಳಸಿ. ತುಂಬಾ ಚೆನ್ನಾಗಿದೆ ಹಾಗೂ ಉಚಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಲಹೆ: ಸಾಮಾನ್ಯವಾಗಿ ಒಂದು ಕಾಮನ್ ಪಾರ್ಟಿಶನ್ ಇಟ್ಟುಕೊಳ್ಳಿ. FAT32 ಆದರೆ ಒಳ್ಳೆಯದು. ಆಗ ಆ ಪಾರ್ಟಿಶನ್ನು ಎರಡೂ OSಗಳಿಂದ ಉಪಯೋಗಿಸಲು ಸುಲಭ. ಹಾಗೆಯೇ ನಿಮ್ಮ OS ಮತ್ತು ನಿಮ್ಮ Data ಬೇರೆ ಪಾರ್ಟಿಶನ್ನುಗಳಲ್ಲಿ ಇಟ್ಟುಕೊಳ್ಳಿ. /Home, /opt ಕೂಡ ಬೇರೆ ಪಾರ್ಟಿಶನ್ಗಳಲ್ಲಿ ಇಟ್ಟುಕೊಳ್ಳೋದು ಒಳ್ಳೆಯದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಹನೆಯಿಂದ ನನ್ನ ಬರಹ ಓದಿದ್ದಕ್ಕೂ , ಒಳ್ಳೇ ಸಲಹೆ ಕೊಟ್ಟದ್ದಕ್ಕೂ ತುಂಬಾ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಶ್ರೀನಿಧಿ.
[quote=ಶ್ರೀನಿಧಿ]ಸಾಮಾನ್ಯವಾಗಿ ಒಂದು ಕಾಮನ್ ಪಾರ್ಟಿಶನ್ ಇಟ್ಟುಕೊಳ್ಳಿ. FAT32 ಆದರೆ ಒಳ್ಳೆಯದು.[/quote]
ಯಾಕೆ? NTFSಕಿಂತ FAT32 ಹೇಗೆ ಒಳ್ಳೆಯದು?
[quote=ಶ್ರೀನಿಧಿ]/Home, /opt ಕೂಡ ಬೇರೆ ಪಾರ್ಟಿಶನ್ಗಳಲ್ಲಿ ಇಟ್ಟುಕೊಳ್ಳೋದು ಒಳ್ಳೆಯದು[/quote]
ಇದು ತಿಳಿಲಿಲ್ಲ. ದಯವಿಟ್ಟು ಬಿಡಿಸಿ ಹೇಳುತ್ತಿರಾ?

ಹಾಗೇ, Synaptic Package Managerನಿಂದ ಹೊಸ ತಂತ್ರಾಂಶ ಹಾಕುವಾಗ, ಯಾವ ಫೋಲ್ಡೆರ್‌ನಲ್ಲಿ ಇನ್ಸ್ಟಾಲ್ ಆಗ್ಬೇಕೂಂತ ಕೊಡಬಹುದಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಯಾಕೆ? NTFSಕಿಂತ FAT32 ಹೇಗೆ ಒಳ್ಳೆಯದು?[/quote]
ಒಂದಕ್ಕಿಂತ ಹೆಚ್ಚು OS ಇದ್ದರೆ FAT32 ಅನುಕೂಲ ಆಗುತ್ತದೆ. ಎರಡೂ Microsoftನವರದ್ದೇ. ಒಂದೆರಡು ವರ್ಷಗಳ ಹಿಂದೆ NTFS partitionಗೆ ಗ್ನು/ಲಿನಕ್ಸಿನಿಂದ ಬರೆಯಲು ಸ್ವಲ್ಪ ತಿಣುಕಾಡಬೇಕಿತ್ತು. ಆದರೆ ಈಗ ಆ ತೊಂದರೆಗಳು ಇಲ್ಲ. ಎರಡಕ್ಕೂ ಅದರದ್ದೇ ಆದ ಅನುಕೂಲ, ಅನಾನುಕೂಲಗಳಿವೆ. NTFS vs FAT32 ಅಂತ ಗೂಗ್ಲಿಸಿ. ಸಾಕಷ್ಟು ಮಾಹಿತಿ ಸಿಗುತ್ತದೆ. ಸದ್ಯಕ್ಕೆ ಉಬುಂಟು ಉಪಯೋಗಿಸಬೇಕೆಂದಿದ್ದರೆ, NTFS partition ಅನ್ನು ಲಿನಕ್ಸನಲ್ಲಿ ಉಪಯೋಗಿಸಲು ಗಂಭೀರವಾದ ತೊಂದರೆ ಏನೂ ಇಲ್ಲ.
NTFS-3G ಅನ್ನೋ implementation ಇದೆ. ಇದರ ಬಗ್ಗೆ ಓದಿ.

[quote]/Home, /opt ಕೂಡ ಬೇರೆ ಪಾರ್ಟಿಶನ್ಗಳಲ್ಲಿ ಇಟ್ಟುಕೊಳ್ಳೋದು ಒಳ್ಳೆಯದು
ಇದು ತಿಳಿಲಿಲ್ಲ. ದಯವಿಟ್ಟು ಬಿಡಿಸಿ ಹೇಳುತ್ತಿರಾ?[/quote]
ಇಲ್ಲಿ ವಿವರವಾಗಿ ಕೊಟ್ಟಿದ್ದಾರೆ. ಹಾಗೇ /home ನಲ್ಲಿ ನಿಮ್ಮ Data ಇರುತ್ತದೆ. /opt ಯಲ್ಲಿ third party softwareಗಳನ್ನು ಹಾಕಬಹುದು. ಇವೆರಡೂ ಸಾಮಾನ್ಯವಾಗಿ ಬೇರೆ ಗ್ನು/ಲಿನಕ್ಸಿನ ಆವೃತ್ತಿಗಳಿಂದ ಹೊರತಾಗಿರುತ್ತವೆ. ಇದಕ್ಕಾಗಿ ಹೀಗೆ ಬೇರೆ partition ಮಾಡಿಕೊಂಡರೆ ಒಳ್ಳೆಯದು

[quote]ಹಾಗೇ, Synaptic Package Managerನಿಂದ ಹೊಸ ತಂತ್ರಾಂಶ ಹಾಕುವಾಗ, ಯಾವ ಫೋಲ್ಡೆರ್‌ನಲ್ಲಿ ಇನ್ಸ್ಟಾಲ್ ಆಗ್ಬೇಕೂಂತ ಕೊಡಬಹುದಾ?[/quote]
ಯಾಕೆ ಅಂತ ಕೇಳಬಹುದಾ? Root ನಲ್ಲಿ ಹೆಚ್ಚು ಜಾಗ ಇಲ್ಲವೇ? ನಿಮ್ಮ ಪ್ರಶ್ನೆಗೆ ಉತ್ತರ/ಉತ್ತರಗಳು ಇಲ್ಲಿವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಹಿತಿಗೆ ನನ್ನಿ. ನೀವು ಕೊಟ್ಟಿರೋ ಕೊಂಡಿ ನೋಡ್ತಿನಿ. ಏನಾದ್ರೂ ಸಂದೇಹ ಇದ್ರೆ ಮತ್ತೆ ಕೇಳ್ತಿನಿ :-)
rootನಲ್ಲಿ ಈಗ ಜಾಗ ಇದೆ. ಇರದಿದ್ರೆ ಅಂತ ಕೇಳಿದ್ದು ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

sudo ಕಮಾ೦ಡ್ ಬಳಸಿ ಕಾಪಿ ಮಾಡಿದ್ದರೆ ಪರ್ಮಿಶನ್ ಬದಲಾಯಿಸೋ ಅವಶ್ಯಕತೆ ಇರುತ್ತಿರಲಿಲ್ಲ ಅ೦ತ ಅನಿಸುತ್ತೆ.
ಉ.ದಾ:
sudo cp -R /home/backup /mnt/windows

-amg

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.