ಕನ್ನಡ: ನಮಗಿರುವ ಆಯ್ಕೆಗಳು

0

ಈ ತಲೆಬರಹದ ಲೇಖನವೊಂದನ್ನು ಈ ತಿಂಗಳ ( ಅಕ್ಟೋಬರ್ ೨೦೦೭) ಮಯೂರದಲ್ಲಿ ಪದಗತಿ ಅಂಕಣದಲ್ಲಿ ಶ್ರೀ ಕೆ.ವಿ.ನಾರಾಯಣ ಅವರು ಬರೆದಿದ್ದಾರೆ . ( ಅದೇಕೋ ಸಂಪದದ ಅವರ ಬ್ಲಾಗ್ ನಲ್ಲಿ ಅವರ ಲೇಖನಗಳು ಇತ್ತೀಚೆಗೆ ಕಾಣುತ್ತಿಲ್ಲ )
ಸಾರಾಂಶ ಹೀಗಿದೆ .
ಕನ್ನಡದಲ್ಲಿ ಅನೇಕ ಬಗೆಗಳಿವೆ. ಪ್ರಮಾಣ(Standard) ಕನ್ನಡವನ್ನು ಎಲ್ಲ ಕನ್ನಡಿಗರ ನಡುವಿನ ಸಂವಹನಕ್ಕಾಗಿ ಶಿಕ್ಷಣದಲ್ಲೂ , ಬರಹದಲ್ಲೂ ಅಳವಡಿಸಿಕೊಂಡೆವು. ಆದರೆ ಈ ಪ್ರಮಾಣ ಕನ್ನಡವು ನಮ್ಮಲ್ಲನೇಕರಿಗೆ ನಮ್ಮದಲ್ಲ ಎನಿಸುತ್ತಿದೆ. ಮಾತಾಡುವ ಕನ್ನಡ , ಬರೆಯುವ ಕನ್ನಡ ಬೇರೆ ಬೇರೆ ಆಗಿಬಿಟ್ಟಿದೆ. ಕಲಿತವರೂ ಪ್ರಮಾಣಕನ್ನಡವನ್ನು ಸರಿಯಾಗಿ ಬರೆಯಲಾಗದ ಮತ್ತು ಮಾತನಾಡಲಾಗದ ಪರಿಸ್ಥಿತಿ ಉಂಟಾಗಿದೆ. ಕನ್ನಡದ ಬಹುತ್ವವನ್ನು ನಿಭಾಯಿಸುವದು ಹೇಗೆ ? ಎಂಬುದು ಸಮಸ್ಯೆ ಆಗಿದೆ. ನಮ್ಮ ಪ್ರಭೇದಗಳನ್ನೂ ಉಳಿಸಿಕೊಳ್ಳಬೇಕಿದೆ. ನಾವು ಎಲ್ಲ ಪ್ರಬೇಧಗಳನ್ನು ಬಳಸಲು ಆಗಲಿಕ್ಕಿಲ್ಲ ; ಆದರೆ ಅವುಗಳ ಪರಿಚಯ ನಮಗಿರಬೇಕು . ಅವುಗಳನ್ನು ಸಹಿಸಿಕೊಳ್ಳುವವರು ಆಗಿರಬೇಕು. ಅದಕ್ಕೆ ಅನುಗುಣವಾಗಿ ನಮ್ಮ ಶಿಕ್ಷಣವನ್ನು ಬದಲಿಸಬೇಕು . ಪ್ರಮಾಣ ಕನ್ನಡವನ್ನೂ ಒಳಗೊಂಡು ಎಲ್ಲ ಕನ್ನಡಗಳನ್ನೂ ತಿಳಿಯಬೇಕು. ಶುದ್ಧತೆಯ ಗೀಳನ್ನು ಬಿಟ್ಟುಕೊಡಬೇಕು .

ಇಡೀ ಬರಹವನ್ನು ಮಯೂರದಲ್ಲಿ ಓದಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೆಲಸದ ಒತ್ತಡದ ನಡುವೆ ಅವರಿಗೆ ಅಪ್ಡೇಟ್ ಮಾಡುವುದು ಸಾಧ್ಯವಾಗುತ್ತಿಲ್ಲ ಎಂಬ ವಿಷಯ ಸ್ನೇಹಿತರ ಮೂಲಕ ನನಗೆ ತಿಳಿದುಬಂತು. ಹೀಗಾಗಿ ಇತ್ತೀಚಿನ ಲೇಖನಗಳು ಯಾವುದೂ ವರ್ಡ್ ವರ್ತ್ ಬ್ಲಾಗಿಗೆ ಸೇರಿಸಲ್ಪಟ್ಟಿಲ್ಲ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.