ನಾನು 'ಟ'ಗೆ 'ಟ' ಅನ್ನೋದು!

0

ಈ ತುಂಗಾ ಅಕ್ಷರಶೈಲಿಯಲ್ಲಿ ಕೆಲವು ಅಕ್ಷರಗಳು ಸರಿಯಾಗಿ ಕಾಣುವದಿಲ್ಲ . ಹೀಗಾಗಿ ನನಗೆ ಈ ಕಾರ್ಟೂನು ಸರಣಿ ನೆನಪಿಗೆ ಬಂತು. ಇದು ಅಬಿದ್ ಸುರ್ತಿಯವರದು.

ಒಬ್ಬ ಹೇಳುತ್ತಾನೆ - ನಾನು 'ಟ'ಗೆ 'ಟ' ಅನ್ನೋದು!
ಇನ್ನೊಬ್ಬ - ಅದ್ರಲ್ಲೇನು ? ಎಲ್ರೂ ಹಾಗೇ ಹೇಳೋದು .
ಆಗ ಮೊದಲಿನವನು ಹೇಳುತ್ತಾನೆ---
.
.
.
.
.
.
.
.
.
.
.
'ಹಾಗಲ್ಲ , ನನ್ನ ಮಾಟು ನಿಮಗೆ ಟಿಳಿಯಲಿಲ್ಲ!
!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೆ ಹೆ. ಬಹಳ ಪ್ರಸ್ತುತವಾಗಿದೆ. :)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ. ನನಗೆ "ಎಲೆಕ್ಟ್ರಿಕಿಟಿ, ಕೆಪಾಕಿಟಿ" ಜೋಕು ನೆನಪಿಗೆ ಬಂತು. ಅದೂ ಇದೇ ಹಾದಿಯಲ್ಲೇ ಸಾಗುತ್ತೆ.

- ಶ್ಯಾಮ್ ಕಿಶೋರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತಹ ಪುಟ್ಟ ಹುಡುಗನೊಬ್ಬ ಪಕ್ಕದ್ಮನೆಗೆ ಹೋದಾಗೆಲ್ಲ ಅಲ್ಲಿನ ಪುಟ್ಟ ಹುಡುಗಿ ಅಳುವುದಕ್ಕೆ ಶುರುಮಾಡುತ್ತಿದ್ದಳು. ಆ ಹುಡುಗನಿಗೋ ಅದೇಕೆ ಎಂದು ತಿಳಿಯದು. ತನ್ನ ಮಾ'ಟು'ಗಳಲ್ಲೇ ಪಕ್ಕದ್ಮನೆಯ ಹಿರಿಯರಲ್ಲಿ ಹೀಗೆ ನಿವೇದಿಸಿದ:

ಜಭೀ ಮೇಂ 'ಆಟಾ'ಹೂಂ ವೊ 'ರೊಟಿ' ಹೈ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ದೂರವಾಣಿ ಆಪರೇಟರ್ ಆಗಿದ್ದಾಗ 'ಕ' ಗೆ 'ತ ಅನ್ನುವ ಆಸಾಮಿ ಲೈನಿನಲ್ಲಿ ಕಾಲ್ ಕೇಳಿದ್ದು  "ತಾರವಾರ ಮಾರನಾಡುವದು ತುಮಟ ಒಂದು ತೋಡತಣಿ (ಕೋಡಕಣಿ ಅನ್ನುವ ಊರು ) ನಂಬರ್ ತೊಡಿ!!,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.