ಒಯ್ದರಾತನ ದಂಡಿನಾಳ್ಗಳು

0

ಒಯ್ದರಾತನ ದಂಡಿನಾಳ್ಗಳು
ಹೊಯ್ದರಾತನ ಬಾರು ಹಗ್ಗದಿ
ಗೆಯ್ದರಾತನ ಹಾಸ್ಯರಾಜನ ಸೋಗು ತೊಡಿಸುತಲಿ
ಕೊಯ್ದರಾತನ ತಲೆಯ ಮುಳ್ಳಿಂ
ಬಯ್ದರಾತಗೆ ರಾಜ ಎನುತಲಿ
ಕೈದುವೆನುತಲಿ ಕೊಟ್ಟಾ ಬೆತ್ತದಿ ಹೊಡೆದರಾತನಿಗೆ

ಈ ಷಟ್ಪದಿ ಯಾರದಿರಬಹುದು ಊಹಿಸಬಲ್ಲಿರಾ? ಇದು ಜರ್ಮನಿಯಿಂದ ಧಾರವಾಡಕ್ಕೆ ಬಂದು ಕನ್ನಡ ಕಲಿತು ಕನ್ನಡಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ರೆವೆರೆಂಡ್ ಕಿಟ್ಟೆಲ್‍ರವರದ್ದು. ಅವರ ಹೆಸರು ವಿಶ್ವವಿಖ್ಯಾತವಾಗಲು ಅವರ ಕನ್ನಡ-ಇಂಗ್ಲೀಷ್ ಡಿಕ್ಶನರಿ ಕಾರಣವಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಷಟ್ಪದಿಯನ್ನು ಏಸುವಿನ ಕುರಿತಾಗಿ ಬರೆದಿರೋದು ಅಲ್ವಾ? ರೆವೆರೆಂಡ್ ಕಿಟ್ಟಲರ ಕೃತಿಗಳ ಬಗ್ಗೆ ಇನ್ನೂ ಸಾಕಷ್ಟು ಬೆಳಕು ಚೆಲ್ಲಿ,ಸಾರ್. ಎಲ್ಲಿಂದಲೋ ಧರ್ಮ ಪ್ರಚಾರಕ್ಕೆಂದು ಬಂದ ಮಹನೀಯರು ನಮ್ಮ ಭಾಷೆಯನ್ನು ಕಲಿತು ನಮಗೇ ಕಲಿಸಿ ಮರಳಿ ತಾಯ್ನಾಡಿಗೆ ಹೋದರು.

ಅಕ್ಷರಶ: ಇವರು ಪ್ರಾತ:ಸ್ಮರಣೀಯರು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
[:http://asraya.net]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.