ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

0

ಮೊಟ್ಟ ಮೊದಲು ಅಕ್ಷರಮಾಲೆಯಿಂದ ಸುರು ಮಾಡೋಣ ! ( ಸುರು=ಶುರು , ಪ್ರಾರಂಭ )
ಅಕ್ಷರಮಾಲೆ ಹೀಗಿದೆ ..... ಅ,ಆ,ಇ,ಈ .....
ಅದರಲ್ಲೇನು ವಿಶೇಷ ಅಂದ್ರಾ ....
ತಡೀರಿ , ಹೇಳ್ತೀನಿ ....
ನಾವು ’ಅ’ ಅನ್ನು ’ಅ’ ಎಂದು ಉಚ್ಚಾರ ಮಾಡುತ್ತೇವೆ .
ಅದರಲ್ಲೇನು ? ಎಲ್ರೂ ಹಾಗೇ ಮಾಡೋದು ಅಂತೀರಾ ?
ಇದೊಳ್ಳೆ ತಮಾಷೆ ... ( ನಾನು 'ಟ'ಗೆ 'ಟ' ಅನ್ನೋದು --> http://sampada.net/blog/shreekant_mishrikoti/15/02/2007/3192 ನೋಡಿ)

ನಾನು ಹೇಳ್ತಾ ಇರೋದು ಏನಂದ್ರೆ ...
ಈಗ ಒಂದು ಶಬ್ದವನ್ನು ತೆಗೆದುಕೊಳ್ಳಿ - ಅರಸ ... ಇದನ್ನು ಉಚ್ಚರಿಸೋವಾಗ ಈ ಶಬ್ದದ ಒಳಗಡೆ ’ಅ’ ಅನ್ನು ಹೇಗೆ ಉಚ್ಚರಿಸ್ತೇವೋ ಹಾಗೆ ಒಂಟಿ ಅಕ್ಷರ ’ಅ’ ಅನ್ನೂ ಹಾಗೇ ಉಚ್ಚರಿಸೋದು .....
ಈಗಲೂ ನಿಮಗೆ ತಿಳಿಯದಿದ್ದರೆ ಬೆಂಗಳೂರು ಕಡೆಗಳಲ್ಲಿ ಅ , ಆ , ಇ , ಈ ಅನ್ನು ಹೇಗೆ ಉಚ್ಚರಿಸ್ತಾರೆ ಗಮನಿಸಿ ..ಅಲ್ಲಿ ಆ, ಆಆ , ಇ , ಈ ಅಂತಾರೆ .....( ಉಳಿದ ಕಡೆ ಹೇಗೋ ? ನಾನು ಗಮನಿಸಿಲ್ಲ)

ಇದೇ ರೀತಿ ಕ, ಖ , ಗ, ಘ ಇತ್ಯಾದಿ ವ್ಯಂಜನಗಳನ್ನು ಅಕಾರಾಂತವಾಗೇ ಹ್ರಸ್ವವಾಗಿ ಉಚ್ಚರಿಸ್ತೀವಿ .

ಮುಂದಿನ ಕಂತಿನಲ್ಲಿ ... ಅ , ಆ ನಡುವಿನ ಇನ್ನೊಂದು ಸ್ವರ ? ಕುರಿತು ತಿಳಿಸುವೆ .

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ಮ ಊರು ಮಲೆನಾಡು ( ಚಿಕ್ಕಮಗಳೂರು ) ಜಿಲ್ಲೆ ಯ ಬಯಲು ಸೀಮೆ!

ನನಗೆ ನೆನಪಿರುವ ಮಟ್ಟಿಗೆ ( ನನ್ನ ಬಾಲ್ಯದ ಶಿಕ್ಷಣ - ಕನ್ನಡ ಮಾಧ್ಯಮ) ನಾವು ಹೇಳುತ್ತಾ ಇದ್ದದ್ದು ಅ , ಆ ಎಂದೇ!..

ಮೇಷ್ಟ್ರು ಚಿಕ್ಕ ಮಕ್ಕಳಿಗೆ ಬಾಯೀ ಪಾಠ ಮಾಡಿಸುವಾಗ ಅಥ್ವಾ ಜೋರಾಗಿ ಹೇಳಿಕೊಡುವಾಗ ಆ, ಆಆ , ಈ ಈಈ ಆಗಬಹುದು. ಇದು ತಿಳಿಯದೇ, ಗಮನಕ್ಕೆ ಬಾರದೇ ಆಗುವ, ಕೆಲವು ಮೇಷ್ಟ್ರುಗಳಿಂದ ಮಾತ್ರ ( ಅಂದರೆ ಒಂದು ಭಾಗದ ಎಲ್ಲರಿಂದಲೂ ಆಗದ) ಆಗುವ ತಪ್ಪು.

ಅ ಆ ಎನ್ನುವುದಕ್ಕಿಂತಲೂ .. ಆ, ಆಆ ಎನ್ನುವುದರಲ್ಲೇ ಏನೋ ಮಜ!!?.. ಅ ಅನ್ನಬೇಕಾದರೆ ಉಸಿರನ್ನು ಆರ್ದಕ್ಕೆ ನಿಲ್ಲಿಸಬೇಕು... ಸ್ವಲ್ಪ ಪ್ರಯತ್ನವನ್ನು ಬೇಡುತ್ತೆ! ಆದ್ರೆ ಆ, ಆಆ ಎನ್ನಬೇಕಾದರೆ ಮನಸ್ಸು ನಿರಮ್ಮಳ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

veena.

ಧಾರವಾಡದಲ್ಲಿ ಕೆಲವೊಂದು ಅಂಗಡಿಗಳ ತಲೆಬರಹವನ್ನು ನೋಡಿ ಈ ರೀತಿ ಇರುತ್ತದೆ.
ಮಧು ಪಾನ ಶಾಪ (ಮದು ಪಾನ್ ಶಾಪ್)
ಪ್ರೀತಿಸ ಬೇಕರಿ (ಪ್ರೀತೀಸ್ ಬೇಕರಿ) ಈ ಬರಹ ಬಸ್ ಸ್ಟ್ಯಾಂಡ್ ಪಕ್ಕ ಇದೆ.
ಹೋಟೆಲ ಸಿಲ್ವರ ಪ್ಲೇಟ (ಹೋಟೆಲ್ ಸಿಲ್ವರ್ ಪ್ಲೇಟ್)
ಅಷ್ಟೇ ಅಲ್ಲ್ ಇಲ್ಲಿಯ ಜನ ತರಂಗವನ್ನು ತರಂಗ್ ಎಂದೂ ಕರ್ಮವೀರ, ನಾಟಕ, ಕನ್ನಡವನ್ನು
ಕರ್ಮವೀರ್, ನಾಟಕ್ , ಕನ್ನಡ್ ಎಂದೂ ಹೇಳುತ್ತಾರೆ. ಈ ವಿಷಯವಾಗಿ ನನ್ನ ಸಹೋದ್ಯೋಗಿಗಳಲ್ಲಿ
ಸಾಕಷ್ಟು ಬಾರಿ ಚರ್ಚೆಗೆ ಇಳಿದಿದ್ದು ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.