ಟೀವಿ , ಇಂಟರ್ನೆಟ್ಟು , ಕೇಬಲ್ಲು ....ಇವೆಲ್ಲ ನಮಗೆ ಬೇಕೇ ?

5

ಬೆಳಗಾದರೆ ನೂರು ನೂರೈವತ್ತು ಪುಟಗಳ ಎರಡು ಪತ್ರಿಕೆಗಳು ..ಓದುವದು ಇರಲಿ .. ಸುಮ್ಮನೆ ಪುಟ ತಿರುವಲೂ ಅರ್ಧ ಗಂಟೆ ಬೇಕು . ಮೊದಲೆಲ್ಲ ನಾವು ೮-೧೦ ಪುಟಗಳ ಕನ್ನಡ ಪತ್ರಿಕೆ ಒಂದನ್ನೇ ಓದಿಕೊಂಡು ಇರಲಿಲ್ಲವೇ ? ಈ ನೂರೈವತ್ತು ಪುಟಗಳಿಂದ ನಾನು ಜಾಣನಾಗುವದಾದರೂ ಸಾಧ್ಯವೇ ? (ಕಸ್ತೂರಿಯವರು ಅನರ್ಥಕೋಶದಲ್ಲಿ ಅಂದೇ ಬರೆದಿದ್ದಾರೆ - ಪತ್ರಿಕೆ - ದಿನವೂ ನಮ್ಮ ಮನೆ ಬಾಗಿಲಿಗೆ ತಂದಿಡುವ ಜಗತ್ತಿನ ಕಸದ ಬುಟ್ಟಿ ಅಂತ !)

ಇನ್ನು ಟೀವಿ ಸೆಟ್- ಟಾಪ್ ಬಾಕ್ಸಿನ ಮೂಲಕ ಎರಡು ನೂರು ಚಾನೆಲ್ಲುಗಳು . ಇಪ್ಪತ್ತು ಇಂಗ್ಲೀಷ್ ಸಿನೇಮಾ ವಾಹಿನಿಗಳು ( ಮೂರರಲ್ಲಿ ದೊಡ್ಡೋರ ಸಿನೆಮಾ ನೋಡಬಹುದು - ಎಲ್ರೂ ಪೂಜೆ ಪುನಸ್ಕಾರ ಮಾಡೋ ಹೊತ್ತಲ್ಲಿ! ) , ಹತ್ತು ಹಿಂದಿ ಸಿನೇಮಾ ವಾಹಿನಿಗಳು , ಹತ್ತು ಹಿಂದಿ ಧಾರಾವಾಹಿ ವಾಹಿನಿಗಳು , ಅಮೇರಿಕಾ , ಆಸ್ಟ್ರೇಲಿಯಾ, ರಶಿಯಾ , ಅರಬ್ ದೇಶ ಸೇರಿದಂತೆ ೧೦ ಇಂಗ್ಲೀಷ್ ವಾಹಿನಿಗಳು ......ನಾಲ್ಕು ಕನ್ನಡ ......

ರಿಲಯನ್ಸ್ ನವರು ಎರಡುನೂರು ರೂಪಾಯಿಗೆ ಒಂದು ಸಾವಿರ ವಾಹಿನಿಗಳನ್ನು ಕೊದಲಿದ್ದಾರಂತೆ ! ಒಂದು ಚಾನೆಲ್ ಮೇಲೆ ಒಂದು ನಿಮಿಷ ಖರ್ಚು ಮಾಡಿದರೂ ... ಹತ್ತು ಗಂಟೆ .....
ಒಂದು ಕಾಲಕ್ಕೆ ಒಂದೇ ಚಾನೆಲ್ಲು .. ( ಅದರ ಹಿಂದೆ ಅದೂ ಇರಲಿಲ್ಲ ! ) ಆಗ ನೋಡಿದಷ್ಟೂ ಟೀವೀ ಈಗ ನೋಡ್ತಾ ಇಲ್ಲ ... ಆಗಿನಷ್ಟೂ ಸಂತೋಷವೂ ಆಗ್ತಾ ಇಲ್ಲ ...

ಇನ್ನು ಹತ್ತು ಎಫ್ ಎಂ ರೇಡಿಯೋ ವಾಹಿನಿಗಳು .

ಈಗಾಗಲೇ ಕಂಪ್ಯೂಟರ್ ಮನೆಗೆ ಬಂದಿದ್ದು ಅನ್ಲ್ಲಿಮಿಟೆಡ್ ಬ್ರಾಡ್ ಬ್ಯಾಂಡ್ ಮನೆಗೆ ಬರಲಿದೆ !!

ಇದೆಲ್ಲದರಿಂದ ನನಗೇನಾದರೂ ಹೆಚ್ಚು ಜಾಣತನ / ಮನರಂಜನೆ ಸಿಗುತ್ತಿದೆಯೇ ?

ನಾನು ಅವನ್ನೆಲ್ಲ ಬಳಸಿಕೊಳ್ತಿದೀನೋ ಅಥವಾ ಅವು ನನ್ನನ್ನ ?
ಭೋಗಾ ನ ಭುಕ್ತಾ: ವಯಮೇವ ಭುಕ್ತಾ:
ಅನ್ನಾ: ನ ಜೀರ್ಣಾ: , ವಯಮೇವ ಜೀರ್ಣಾ:
ಕಾಲೋ ನ ಯಾತ: ವಯಮೇವ ಯಾತ: ... ( ಮುಂದಿನ ಸಾಲು ಗೊತ್ತಿಲ್ಲ ; ನಿಮಗೆ ಗೊತ್ತಿದ್ದರೆ ಹೇಳಿ ) . ನೆನಪಿಗೆ ಬರುವದು.

ನನ್ನೊಬ್ಬ ಗೆಳೆಯ ಇಲ್ಲಿದ್ದ ; ಅವನು ಮನೆಯಲ್ಲಿ ಕೇಬಲ್ ಕನ್ನೆಕ್ಷನ್ ಇರಲಿ , ಟಿವಿ ಕೂಡ ಇಟ್ಟುಕೊಂಡಿರಲಿಲ್ಲ .
’ಸಾಫ್ಟ್ ವೇರ್ ಬಿಡಿ , ಹಾರ್ಡ್ ವೇರ್ ಕೂಡ ಇಲ್ಲ’ ಅಂತ ನಗ್ತಾ ಹೇಳ್ತಿದ್ದ .
’ಮತ್ತೆ ಮನೇಲಿ ಏನ್ಮಾಡ್ತೀಯಾ’ ಅಂದ್ರೆ ...’ಸೂರು ನೋಡ್ಕೊಂಡು ಮಕ್ಕೋತೀನಿ ’ ಅಂತಿದ್ದ

ನನಗೂ ಅದೇ ಸರಿ ಅನಿಸ್ತಿದೆ ....
ಮನೆ ಶಾಂತವಾಗಿಟ್ಟುಕೊಂಡು , ಮನಸ್ಸನ್ನು ಖಾಲಿ ನೀಲಿ ಆಕಾಶದ ಹಾಗೆ ಖಾಲಿ ಆಗಿಟ್ಕೊಂಡು ದೂರದಲ್ಲಿನ ವಾಹನದ ಸದ್ದು ದ , ಎಲ್ಲೋ ಹಕ್ಕಿಯ ಚಿಲಿಪಿಲಿ , ಕೇಳ್ತಾ ಇರೋದು ಎಷ್ಟು ಸುಖಾ ಅನ್ನಿಸ್ತಿದೆ .

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.