ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?

4.5

೧. ಕನ್ನಡ ತಾಯಿ ಭುವನೇಶ್ವರಿಯ ಗುಡಿ ಇರೋದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭುವನಗಿರಿಯಲ್ಲಿ .
೨. ತಮಿಳು ಭಾಷಿಕರು ಕರ್ನಾಟಕದಲ್ಲಿ ಕಮ್ಮಿಯಾದರೂ ತಮಿಳು / ತಮಿಳರ ಕುರಿತು ನಮ್ಮಲಿ ಏಕೆ ಆತಂಕ ?
೩. ಕನ್ನಡ ಮಕ್ಕಳು ಇಂಗ್ಲೀಷ್ ರೈಮ್ಸ್ ಹೇಳಿದರೆ ಕನ್ನಡಿಗರಲ್ಲಿ ಕನ್ನಡದ ಭವಿಷ್ಯ ಕುರಿತು ಆತಂಕ . ಸೋಲಿಗರ ಮಗು ’ ನಮ್ಮ ನಾಡು ಕನ್ನಡ , ನಮ್ಮ ನುಡಿಯು ಕನ್ನಡ’ ಎಂದು ಹಾಡಿದರೆ ಸೋಲಿಗರಲ್ಲಿ ಆತಂಕ .
ಕನ್ನಡ ಭಾಷೆ ಮುಂದೂ ಉಳಿಯುವದು . ಆದರೆ ಕನ್ನಡವಷ್ಟೇ ಉಳಿದರೆ ಸಾಕೆ ? ಉಳಿದೆಲ್ಲ ಭಾಷೆಗಳೂ ಉಳಿಯಬೇಕು . ಭಾಷೆಯಲ್ಲಿನ ಅಡಕವಾದ ಸಂಸ್ಕೃತಿ , ಜ್ಞಾನ , ಎಲ್ಲವೂ ಉಳಿಯಬೇಕು . ಯಾವುದೇ ಭಾಷೆಯನ್ನು ಅಳಿಯಲು ಬಿದಬಾರದು . ಆದರೆ ಹೇಗೆ ?

ಈ ಬಗ್ಗೆ ನಿನ್ನೆಯ ಪ್ರಜಾವಾಣಿ ( ೧-ನವಂಬರ್ -೨೦೦೭) ಯಲ್ಲಿ ಬರಹಗಳಿವೆ . ಹೆಚ್ಚಿನ ವಿವರ ತಿಳಿಯಲು ಹುಡುಕಿಕೊಂಡು ಓದಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕನ್ನಡ ನಾಡಲ್ಲಿ ಕನ್ನಡ ಕಲಿಕೆ ಎಲ್ಲ ಶಾಲೆಗಳಲ್ಲೂ ಮಾಡಬೇಕೆಂಬ ಸುಲಭ ಸಾಧ್ಯವಾದದನ್ನೇ ನಾವು ಜಾರಿಗೊಳಿಸಿಲ್ಲ...

ಇದು ಆಗುವವರೆಗು ನಮ್ಮ ಕೂಗು ಬರಿ ’ಕನ್ನಡ ಉಳಿಸಿ’ ಎಂದು ಉಳಿಯುತ್ತದೇ ಹೊರತು ’ಕನ್ನಡ ಬಳಸಿ’ ಎಂದಲ್ಲ....
ಛೇ! :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಲವು ಕಡೆ ಕನ್ನಡ ನಾಡಲ್ಲಿ ಶಾಲೇಲಿ ಕನ್ನಡ ಮಾತಾಡಿ ಮಕ್ಕಳು Fine(ದಂಡ) ಹಾಕಿಸ್ಕೋತಾರಂತೇ..ಇದು ದಿಟವಾ?
ಕನ್ನಡಿಗರು ತೆಪ್ಪಗೆ ದಂಡ ಕಟ್ ತಾರಂತೆ...ಹೌದಾ??? :(

-ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಬಹುದು- ಯಾಕೆಂದರೆ ನಮ್ಮ ಮಕ್ಕಳು ಎಲ್ಲರ ಹತ್ತಿರ ಇಂಗ್ಲೀಷ್ ಮಾತನಾಡಿದರೆ ನಮ್ಮ ಘನತೆ ಗೌರವಗಳು ಹೆಚ್ಚಾಗುತ್ತವೆಂದು ನಂಬಿದವರು ಮಾಡಿರುವ ಕಟ್ಟುನಿಟ್ಟಿನ ಶಿಸ್ತು. ಇದನ್ನು ಸಡಿಲಿಸಿದರೆ ತೊಂದರೆಯಾದೀತೆಂದು ಕನ್ನಡ ಮಾತನಾಡಿದರೆ ದಂಡ ಹಾಕುವುದಿರಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.