ಅಂಬರದೆತ್ತರ

0

ಎತ್ತರ ಎತ್ತರ ಅಂಬರದೆತ್ತರ
ನಿಲ್ಲದೆ ಏರಿದೆ ನೆಲದ ಬೆಲೆ
ಏನಿದೆ, ಎಲ್ಲಿದೆ, ಎಸ್ಟಿದೆ ಚದರ
ಲೆಕ್ಕವ ಹಾಕಲು ಜನರ ಕಾತುರ

ಹಗಲು ವೇಷ, ಹಲವು ಮುಖದವರು
ಆದಷ್ಟು ಬೇಗ, ಅಧಿಕ ಲಾಭಕೆ ಇವರು
ಬೆವರು ಸುರಿಸದೆ ಮಾಡುವರು ಜೋರು
ತಳಮಳಿಸುತಿಹರು ಮಂಕು ಬಡಿದವರು

ವೇಗದಲಿ ಏರಿದವರು ಮೇಲಿನಂತಸ್ತು
ಪ್ರದರ್ಶನಕ್ಕಿಟ್ಟು ಹಲವಾರು ವಸ್ತು
ಮೋಜು ಮಾಡುವರು ಮಸ್ತು ಮಸ್ತು
ಇವರ ಕಂಡವರಿಗೆಲ್ಲಾ ಸುಸ್ತು ಸುಸ್ತು

ಕಂಗಾಲಾಗಿ ಕೂಡುವ ಬಡವರು
ಎಟುಕದ ದ್ರಾಕ್ಷಿ ಹುಳಿ ಎನ್ನುತಾ
ಬೇಸರದಿ ಮನವನ್ನು ಸಂತೈಸುತಾ
ಬಿಡುವರು ಸಮಾಧಾನದ ನಿಟ್ಟುಸಿರು
****

( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.