ಕೊಸರಿನ ಕಮಲ

0

ಕೊಸರಿನಲ್ಲಿ ಹೊಳೆವ ಕಮಲ
ಕೊಸರಿಗಂಜಿ ಅಳುವುದೇ
ಕೊಸರಿನಿಂದ ಬರುವುದೆಂದು
ಯಾರು ಅದನು ಬಗೆವರು

ಕೆಂಪು, ಬಿಳುಪು, ಹಳದಿ
ಬಣ್ಣ ದರಿಸಿ ಸೆಳೆವ ಗುಲಾಬಿ
ಮುಳ್ಳು ಜೊತೆಗೆ ಇರುವುದೆಂದು
ಯಾರು ಅದನು ತೊರೆವರು

ಹಾಲು, ಮೊಸರು, ಬೆಣ್ಣೆ, ತುಪ್ಪ
ಎಲ್ಲ ಇದನು ಸವಿಯುವರು
ಹುಲ್ಲು ತಿಂದು ಹಾಯುವುದೆಂದು
ಭಯದಿ ಹಸುವನ್ಯಾರು ಜರಿವರು

ಒಂದು, ಎರಡು, ಮೂರು, ನಾಕು
ಮಗುವಿಗಿಷ್ಟು ಹೆಸರು ಸಾಕೆ
ಒಂದು, ಎರಡು ಮಾಡಿತೆಂದು
ಯಾರು ಅದಕೆ ಸಿಡಿವರು
****

( ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ. )

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೊಸರಿನ ಕಮಲ, ಕೆಸರಿನ ಕಮಲ ಎಂದು ಇರಬೇಕಿತ್ತಾ ಅಥವ ಕೊಸರಿನ ಕಮಲಕ್ಕೇನಾದರು ಬೇರೆ ಅರ್ಥವಿದೆಯೆ?ಹಾಗೆ 'ನನ್ನಿ' ಎಂದರೆನೆಂದೂ ತಿಳಿಸಿ...ನಾನು ಸಂಪದಕ್ಕೆ ಹೊಸಬಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕವನಕ್ಕೆ ಪ್ರತಿಕ್ರಯಿಸಿದ ಸಂಪದ ಮಿತ್ರರಿಗೆ,

ನಿಮ್ಮ ಸಲಹೆಯಂತೆ ಸರಿಪಡಿಸಿದ್ದೇನೆ.

ಇದನ್ನು ನನ್ನ ಬ್ಲಾಗಲ್ಲಿ ಕಾಣ ಬಹುದು.

www.koogu.blogspot.com

ಧನ್ಯವಾದಗಳೊಂದಿಗೆ,

ಚಂದಿನ

ಕೂಗು...
ಎನ್ನ ಮನುಕುಲಕೆ!!!
http://www.koogu.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.