ಬೆಂಗಳೂರಿನಲ್ಲಿ 2-3 ದಿನ ನೀರಿಗೆ ಹಾಹಾಕಾರ!

0

ಬೆಂಗಳೂರಿನ ಬಾಂಧವರೇ,

ಇತ್ತೀಚೆಗೆ ಬಂದ ಸುದ್ದಿಯೊಂದರ ಪ್ರಕಾರ ಬೆಂಗಳೂರಿನೆಲ್ಲೆಡೆ ಇನ್ನೂ 2-3 ದಿನಗಳ ಕಾಲ ಬರ ಉಂಟಾಗಲಿದೆ.

ಕಾವೇರಿ 4ನೇ ಹಂತದಲ್ಲಿ ಪ್ರಮುಖ ನೀರು ಪೂರೈಕೆ ಲೈನನ್ನು ಮರುಜೋಡಿಸುವ ಕೆಲಸ ನಡೆಯಲಿರುವುದರಿಂದ ಉಚ್ಚನ್ಯಾಯಾಲಯದ ನಿರ್ದೇಶನದಂತೆ ನೀರು ಪೂರೈಕೆಯನ್ನು ನಿಲ್ಲಿಸಲಾಗುವುದು ಎಂದು ತಿಳಿದುಬಂದಿದೆ.

ಉತ್ತರಹಳ್ಳಿ-ಕೆಂಗೇರಿ ರಸ್ತೆಯಲ್ಲಿ ಚನ್ನಸಂದ್ರದ ಬಳಿ ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಬಳಿ ಹಾದುಹೋಗುವ ಈ ಪೂರೈಕೆ ಮಾರ್ಗವನ್ನು ಒಪ್ಪಿತ ಕಾರಿಡಾರ್ ಜೋಡಣೆಯಂತೆ ಈಗಾಗಲೇ ನಿಗದಿಯಾಗಿರುವಂತೆ ಸ್ಥಳಾಂತರಿಸಲಾಗುವುದು. ಈ ವ್ಯಾಜ್ಯವು ಬಹಳ ದಿನಗಳ ಕಾಲದಿಂದ ನಡೆಯುತ್ತಿದ್ದು, ಉಚ್ಚನ್ಯಾಯಾಲಯವು BWSSBಗೆ ಈ ಪೂರೈಕೆ ಮಾರ್ಗವನ್ನು ಮರುಜೋಡಿಸುವಂತೆ ನಿರ್ದೇಶಿಸಿದೆ.

ಈ ವರ್ಗಾವಣೆಗೆ ಈಗಾಗಲೇ ಇರುವುದರ ಜೊತೆಗೆ ಹೊಸ ಮಾರ್ಗವನ್ನು ಜೋಡಿಸುವ ಅಗತ್ಯವಿದೆ. ಈ ಉದ್ದೇಶಕ್ಕಾಗಿ, ಮೂರು ದಿನಗಳ ಕಾಲ ಪಂಪುಗಳನ್ನು ನಿಲ್ಲಿಸಲಾಗುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

BWSSB ಸಾರ್ವಜನಿಕರು ಸಾಕಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಸೂಚನೆ ನೀಡಿದೆ. ಜುಲೈ 20ರಿಂದ ಎಂದಿನಂತೆ ನೀರು ಪೂರೈಕೆಯಾಗಲಿದೆ.

ನೀರು ಪೂರೈಕೆ ವ್ಯತ್ಯಯ ಉಂಟಾಗುವ ಪ್ರದೇಶಗಳೆಂದರೆ:

ಉತ್ತರ ವಿಭಾಗ: ಸಹಕಾರ ನಗರ, ಬ್ಯಾಟರಾಯನಪುರ, ಯಲಹಂಕ, ವಿದ್ಯಾರಣ್ಯಪುರದ ಕೆಲ ಭಾಗಗಳು, ದಾಸರಹಳ್ಳಿ, ಜಾಲಹಳ್ಳಿ ಕೆಲ ಭಾಗಗಳಿ, ಸಿದ್ಧಾರ್ಥನಗರ, ಬಿಐಎಎಲ್

ದಕ್ಷಿಣ ವಿಭಾಗ: ಬಿಟಿಎಂ ಬಡಾವಣೆ, ಜೆಪಿ ನಗರ, ಮಾರುತಿನಗರ, ವಿಜಯಬ್ಯಾಂಕ್ ಬಡಾವಣೆ, ಎಲೆಕ್ಟ್ರಾನಿಕ್ಸ್ ಸಿಟಿ

ದಕ್ಷಿಣ-ಪೂರ್ವ ವಿಭಾಗ: ನಂಜರೆಡ್ಡಿ ಕಾಲೋನಿ , ಮುರುಗೇಶ್ ಪಾಳ್ಯ, ವಿನಾಯಕ ಬಡಾವಣೆ, ದೊಮ್ಮಲೂರು, ಅಮರಜ್ಯೋತಿ ಬಡಾವಣೆ, ಇಸ್ರೋ ಬಡಾವಣೆ, ಎನ್ಎಎಲ್, ಕೋಡಿಹಳ್ಳಿ,ಮ ಐಐಎಂ ವಿಮಾನನಿಲ್ದಾಣ, ಕೋರಮಂಗಲ ಮೊದಲನೇ ಬ್ಲಾಕ್, ಟೀಚರ್ಸ್ ಕಾಲೊನಿ, ಜಕ್ಕಸಂದ್ರ ಬಡಾವಣೆ, ಸಿಪಿಡಬ್ಲುಡಿ ಕ್ವಾರ್ಟ್ರಸ್, ಕೆಎಸ್ಆರ್ಪಿ ಕ್ವಾರ್ಟ್ರಸ್ (4ನೇ ಬ್ಲಾಕ್ ವರೆಗೆ), ಎಚ್ ಎಸ್ ಆರ್ ಬಡಾವಣೆ

ಕೇಂದ್ರ ವಿಭಾಗ: ಓಕಳೀಪುರಂ

ಪೂರ್ವ ವಿಭಾಗ: ಕೊನೇನ ಅಗ್ರಹಾರ, ಬಿಡಿಎ ಬಡಾವಣೆ, ಎ ಎಚ್ ಎಲ್ ಫ್ಯಾಕ್ಟರಿ, ಮಾರತಹಳ್ಳಿ ಡಿಫೆನ್ಸ್ ಕ್ವಾರ್ಟ್ರಸ್, ಆಕಾಶ್ ವಿಹಾರ್ ಕೆಲ ಭಾಗಗಳು, ಎ ಇ ಸಿ ಎಸ್ ಬಡಾವಣೆ, ಗರುಡಾಚಾರ್ ಪಾಳ್ಯ, ಮಹಾದೇವಪುರದ ಕೆಲ ಭಾಗಗಳು, ಬಿ-ನಾರಾಯಣಪುರ, ಕೆಐಎಡಿಬಿ ಪ್ರದೇಶ, ಐಟಿಪಿಎಲ್.

ಪಶ್ಚಿಮ ವಿಭಾಗ: ನಾಗರಬಾವಿ (ಎಲ್ಲಾ ಹಂತಗಳು), ಚಂದ್ರ ಬಡಾವಣೆ, ವಿಜಯನಗರ, ಹಂಪಿನಗರ, ಆರ್ ಆರ್ ನಗರ, ಕೆಂಗೇರಿ, ಡಬ್ಲುಸಿಆರ್ 2ನೇ ಹಂತ, ಮಹಾಲಕ್ಷ್ಮಿ ಬಡಾವಣೆ, ಮಾಗಡಿ ರಸ್ತೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದರ ಜೊತೆಗೆ ಕರೆಂಟು ಕೂಡ ಹೋಗುತ್ತಿದೆ ಮತ್ತೆ ಮತ್ತೆ. ಲೋಡ್ ಶೆಡ್ಡಿಂಗ್ ಅಂತೆ! :-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ hpn ಅವರಿಗೆ. ಇತ್ತೀಚೆಗೆ ಕರೆಂಟು ತುಂಬಾ ತೆಗೀತಿದ್ದಾರೆ. ಆದ್ರೆ, ಇದು ಪರೀಕ್ಷೆ ಸಮಯ ಅಲ್ವಲ್ಲ ಆದ್ರೂ ಯಾಕೆ ಕರೆಂಟು ತೆಗೀತಿದ್ದಾರೆ ಅಂತ ಗೊತ್ತಾಗ್ತಿಲ್ಲ! ನಿನ್ನೆಯಂತೂ 2 ಗಂಟೆ ಕಾಲ ಗಾಢಾಂಧಕಾರದಲ್ಲಿ ಮುಳುಗಿದ್ವಿ. ಕರೆಂಟು ಇಲ್ಲ ಅಂದ್ರೆ ಅಟ್ ಲೀಸ್ಟ್ ಮಲಗ್ಬೋದು. ಆದ್ರೆ, ನೀರಿಲ್ಲ ಅಂದ್ರೆ ಏನ್ ಮಾಡೋದು? ಸಂಪದ ಬಳಗದೋರಿಗೋಸ್ಕರ ನೀವೇ ಏನಾದ್ರೂ ವ್ಯವಸ್ಥೆ ಮಾಡಿ ಪ್ಲೀಸ್.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿಯವರು ಮನಸು ಮಾಡಿದರೆ ಸಂಪದದಲ್ಲಿ ನೀರು ಡೌನ್ ಲೋಡಿಂಗ್ ವ್ಯವಸ್ಥೆ ಮಾಡಬಹುದೇನೋಪಾ :)

**************************
http://vikasavada.blogspot.com/
**************************

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದೌದು. ಸಂಪದಿಗರಿಗೋಸ್ಕರ ಹರಿಯವರು ನೀರು, ವಿದ್ಯುತ್ ಮುಂತಾದ ಮೂಲಸೌಕರ್ಯದ ವ್ಯವಸ್ಥೆಯನ್ನು ಒದಗಿಸಬೇಕು. ಯಾಕಂದ್ರೆ, ನಾವು(ಸಂಪದಿಗರು) "ಭಕ್ತ ಪ್ರಹ್ಲಾದ"ನ ಹಾಗೆ "ಹರಿ"ಯನ್ನೇ ನಂಬಿಕೊಂಡಿದ್ದೇವೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದದ ಮೂಲಕ ನೀರಿನ ವ್ಯವಸ್ಥೆ ಹೇಗೆ?

ಒಂದೆರಡು ’ಕರುಳು ಸಿರೀಸ್’ ಕಥೆಗಳನ್ನು ಹಾಕಿ ಸಂಪದಿಗರು ಕಣ್ಣೀರ್ಗರೆಯುವಂತೆ ಮಾಡುವುದು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಕರುಳು ಸೀರೀಸ್ ಕತೆ"ಗಳನ್ನ ಹೆಣೆಯೋಕೆ ಹರಿಯವರು ಅನುಮತಿ ನೀಡಲಾರರೇನೋ! ಯಾಕಂದ್ರೆ, ಸಂಪದದ ಪುಟಗಳೆಲ್ಲ ನೆಂದು ಹೋದ್ರೆ ಅವರಿಗೇ ಸಮಸ್ಯೆಯಲ್ವ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಯುವಪ್ರೇಮಿಯವರಿಗೆ,

ಹಾಗಾದ್ರೆ ನಾನು ಇನ್ಮೇಲೆ ನಮ್ಮನೇಲಿ ನೀರಿಗೆ ತಾಪತ್ರಯ ಆದಾಗಲೆಲ್ಲ ನಿಮ್ಮ ಮನೆಗೆ ಸ್ನಾನಕ್ಕೆ ಬರ್ತೇನೆ. ಸೇರಿಸ್ತೀರಲ್ವ? ನಾನು ಬೆಳಗ್ಗೆ ನೀರು ಬರ್ತದೋ ಇಲ್ವೋ ಅಂತ ಕಳೆದ ರಾತ್ರಿ 11 ಗಂಟೆಗೆ ಸ್ನಾನ ಮಾಡಿದೆ.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.