ವಾಯ್! ಶ್ರೀರಾಮಸೇನೆ ಯಾಕೆ "ಕಪಿಚೇಷ್ಟೆ" ಮಾಡ್ತಾ ಉಂಟು ಮಾರಾಯ?

0

ಶ್ರೀರಾಮಸೇನೆಯೆಂದರೆ ಕಪಿಸೈನ್ಯ ತಾನೆ. ಕಪಿಗಳು ತಾನೆ ಹೀಗೆ ಇಲ್ಲದ ಅವಾಂತರಗಳನ್ನು ಸೃಷ್ಟಿಸುವುದು! ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣ ರಾಷ್ಟ್ರಮಟ್ಟದ ಸುದ್ದಿಯಾದದ್ದು. ಹಾಗೂ ಹಾಗೆ ಆದ ಸುದ್ದಿ ಮುಖ್ಯ ವಿಷಯವನ್ನು ಬಿಟ್ಟು "ರಾಮರಸ" "ಸೋಮರಸ" ಸೇವನೆಯ ಬಗ್ಗೆ ಕೇಂದ್ರೀಕೃತವಾದದ್ದು ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡ ಕಾರಣದಿಂದಾಗಿ. ಇಂದು "ಹಿಂದುತ್ವ"ವನ್ನು ಮುಂದಿಟ್ಟುಕೊಂಡು ಬಹುಸಂಖ್ಯಾತ ಹಿಂದೂಗಳ ಪ್ರತಿನಿಧಿಗಳಂತೆ ವರ್ತಿಸುತ್ತ ದೇಶದೆಲ್ಲೆಡೆ ಇಲ್ಲದ ಅವಾಂತರ ಸೃಷ್ಟಿಸುತ್ತಿರುವ ಈ "ಕೋಮುವಾದಿಗಳು" ಹಾಗೆ ಹಿಂದುತ್ವ ಎಂದು ಕರೆಯುತ್ತಿರುವುದಾದರೂ ಏನನ್ನು? ಇನ್ನು ಪಾಶ್ಚಿಮಾತ್ಯರ ಅನುಕರಣೆಯಿಂದಾಗಿ ನಮ್ಮ ದೇಶದ ಸಂಸ್ಕೃತಿ ಹಾಳಾಗುತ್ತಿದೆ ಎಂದು ಬೊಬ್ಬೆಯಿಡುತ್ತಿರುವ ಈ ಮಂದಿ "ನಮ್ಮ ದೇಶದ ಸಂಸ್ಕೃತಿ" ಎಂದು ಕರೆಯುತ್ತಿರುವುದಾದರೂ ಯಾವುದನ್ನು? ಎಂತ ಹೇಳ್ತೀರಿ ಮಾರಾಯ್ರೆ ನೀವು?

ಇಡೀ ಭಾರತ ದೇಶಕ್ಕೆ ಅದರದ್ದೇ ಆದ ಒಂದು ಸಂಸ್ಕೃತಿ ಎಂಬುದು ಇದೆಯೇ? ಹಾಗಿದ್ದರೆ ಅದು ಯಾವುದು? ಎಂಬುದನ್ನು ಇವರು ತೋರಿಸಬಲ್ಲರೇ? ಇವರು ನಮ್ಮ ಸಂಸ್ಕೃತಿ ಎಂದು ಹೇಳುತ್ತಿರುವುದನ್ನು ಬಹುಸಂಖ್ಯಾತ ಹಿಂದೂಗಳಲ್ಲಿ ಎಷ್ಟು ಜನರು ತಮ್ಮದಾಗಿಸಿಕೊಂಡಿದ್ದಾರೆ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಏಳುತ್ತಲೇ ಹೋಗುತ್ತವೆ. ಭಾರತದ ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದ ಹಾಗೆ ಒಂದೊಂದು ಪುಟವೂ ಒಂದೊಂದು ಸಂಸ್ಕೃತಿಯನ್ನು ನಮ್ಮ ಮುಂದೆ ಬಿಚ್ಚಿಡುತ್ತಾ ಹೋಗುತ್ತದೆ. ಇಂದು ನಲ್ವತ್ತು-ಐವತ್ತು ಕಿಲೋ ಮೀಟರುಗಳಿಗೆ ಒಂದು ನಾಡಿನ ಭಾಷೆ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ ಹೋದ ಹಾಗೆಯೇ ಅಲ್ಲಿನ ಸಂಸ್ಕೃತಿಯೂ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಅಂದ ಮೇಲೆ ಜಗತ್ತಿನ ಏಳನೇ ಅತಿ ದೊಡ್ಡ ದೇಶವಾದ ಭಾರತಕ್ಕೆ ಇವರು ಹೇಳುವಂತ ಅಂತ ಒಂದು ಸಂಸ್ಕತಿ ಇದೆಯೇ?

ಈ "ನಮ್ಮ ಸಂಸ್ಕೃತಿ" ಎಂದು ವಾದವನ್ನು ಮುಂದಿಡುತ್ತಿರುವವರು ಪುರಾತನ ಭಾರತದಲ್ಲಿ ವರ್ಣಾಶ್ರಮ ಪದ್ಧತಿಯನ್ನು ಜಾರಿಗೆ ತಂದು ಹಿಂದೂ ಧರ್ಮಶಾಸ್ತ್ರ ಎಂಬ ಹೆಸರಿನಲ್ಲಿ ನೀತಿಸಂಹಿತೆಯನ್ನು ರೂಪಿಸಿದ ಮನುಮಹಾಶಯನ ಹಿಂ"ಬಾಲಕ"ರಷ್ಟೆ. ಈಗ ನಮ್ಮ ಸಂಸ್ಕೃತಿಯ ಹೆಸರು ಹೇಳಿ ಇವರು ಮರುಪ್ರತಿಷ್ಟಾಪನೆಗೆ ಹೊರಟಿರುವುದು ವರ್ಣಾಶ್ರಮದಂತಹ ಹೀನ ವ್ಯವಸ್ಥೆಯನ್ನಷ್ಟೆ. ಹಾಗೆಯೇ, "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ"(ಯಾವ ಸ್ತ್ರೀಯೂ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ) ಎಂಬ ದಬ್ಬಾಳಿಕೆ, ದೌರ್ಜನ್ಯಗಳ ವಾದವನ್ನಷ್ಟೆ. ಇದು ಒಳ್ಳೆ ಇಲ್ಲ ಮಾರಾಯ್ರೆ!

ಎಲ್ಲದಕ್ಕಿಂತ ವಿಪರ್ಯಾಸದ ಸಂಗತಿಯೆಂದರೆ, ಹೀಗೆ ನಮ್ಮ ಸಂಸ್ಕೃತಿ ಎಂದು ವಾದಿಸುತ್ತ ಶ್ರೀರಾಮನನ್ನ ತಮ್ಮ ಆದರ್ಶವನ್ನಾಗಿ ಇಟ್ಟುಕೊಂಡು ಹೊರಟಿರುವ ಈ ಕಪಿ ಸೈನ್ಯ(ಪದೇ ಪದೇ ಇವರನ್ನು "ಕಪಿಗಳು" ಎಂದು ಕರೆಯುತ್ತಿರುವುದಕ್ಕೆ ಕಪಿಗಳ ಕ್ಷಮೆ ಕೋರುತ್ತೇನೆ. ಅವು ನಾವೆಂದು ಇಂತಹ ಹೀನ ಕೆಲಸ ಮಾಡಿದ್ದೀವಿ. ನಮ್ಮನ್ನು ಹಾಗೆ ಕರೆದಲ್ಲಿ ನಾವು defamation case ಹಾಕ್ತೀವಿ ಎಂದು ನನ್ನ ವಿರುದ್ಧ ಸಿಡಿದೇಳದ್ದಿದ್ದರೆ ಸಾಕು!)ದವರೇ ಮೊದಲನೆಯದಾಗಿ ಅಲ್ಪಸಂಖ್ಯಾತರು. ಈ ಹಿಂದೆ ಇದೇ ಶ್ರೀರಾಮನ ಹೆಸರು ಹೇಳಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಮಹಾನುಭಾವರು ಇವರೇ. ಮತ್ತೊಂದು ಬಹುದೊಡ್ಡ ವಿಪರ್ಯಾಸವೆಂದರೆ, ಸ್ವತಹ ಶ್ರೀರಾಮನೇ ವರ್ಣಾಶ್ರಮದಲ್ಲಿ ಅತಿಶೂದ್ರನೆಂದು ಕರೆಸಿಕೊಳ್ಳುವ ಬೇಡನೊಬ್ಬನ ಪಾತ್ರಸೃಷ್ಟಿ. ಹಾಗೂ ಈ ಶ್ರೀರಾಮನೇ ಒಬ್ಬ ಕ್ಷತ್ರಿಯ.

ಅಂದರೆ, ವರ್ಣಾಶ್ರಮದಲ್ಲಿ ಎರಡನೆಯ ವರ್ಣಕ್ಕೆ ಸೇರಿದವನು. ಅಂತಹದರಲ್ಲಿ ಇವರು ಹೀಗೆ ಶ್ರೀರಾಮನನ್ನು ಇವರು ಹೇಳುವ ಹಿಂದೂ ಧರ್ಮದ ಪ್ರತಿನಿಧಿ ಎಂದು ಕರೆದರೆ ನನ್ನ ಮಂಡೆ ಬಿಸಿಯಾಗ್ತ ಉಂಟು! ಇದು ಒಟ್ರಸಿ Illogic ಅಲ್ವ ಮಾರಾಯ್ರೆ?

ಇವರು ಹಾಗೆ ಶ್ರೀರಾಮನನ್ನ ಹಿಂದೂಗಳ ದೇವರು ಎಂದು ಕರೆಯುವುದಕ್ಕೆ ಕಾರಣ ಬಹುಶಹ ಆತ ವಿಪ್ರನೊಬ್ಬನ ಮಾತು ಕೇಳಿ ತಪಸ್ಸಿಗೆ ಕೂತಿದ್ದ ಶೂದ್ರ ಶಂಭೂಕನನ್ನ ಕೊಂದದ್ದು ಕಾರಣವಿರಬಹುದೇ? ಈ ಶಂಭೂಕನನ್ನು ಪ್ರಧಾನ ಪಾತ್ರವನ್ನಾಗಿಸಿಕೊಂಡು ಕುವೆಂಪುರವರು ಬರೆದ "ಶೂದ್ರತಪಸ್ವಿ" ನಾಟಕ ಅಂದು ಭಾರೀ ವಿವಾದಕ್ಕೆಡೆ ಮಾಡಿಕೊಟ್ಟಿದ್ದನ್ನು ಹಾಗೂ ಅಂದಿನ ಪುರೋಹಿತಶಾಹಿಗಳ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಂಡರೆ ತಪ್ಪೇನಿಲ್ಲವಲ್ಲ! ಹಾಗೆಯೇ, ಇವರು ಹೀಗೆ ಹೆಂಗಸರನ್ನೇ "ಟಾರ್ಗೆಟ್" ಮಾಡುವುದಕ್ಕೆ ಕಾರಣ, ಗರ್ಭಿಣಿ ಹೆಂಗಸನ್ನು ಯಾರದೋ ಮಾತು ಕೇಳಿ ಅಡವಿಗಟ್ಟಿದ ಶ್ರೀರಾಮನ "ಸಂಸ್ಕೃತಿ"ಯನ್ನೇ ನಾವು ಪಾಲಿಸಬೇಕೆಂದೆ? ಶ್ರೀರಾಮನಿಗೆ ಸೀತೆಯ ಮೇಲಿದ್ದ ಸಿಟ್ಟನ್ನೆ ರಾಮಸೇನೆಯವರಾದ ಇವರು ಮಹಿಳೆಯರ ಮೇಲೆ ತೀರಿಸಿಕೊಳ್ಳಬೇಕು ಎಂಬ ಹಟದಿಂದ ಹೀಗೆ ಮಾಡ್ತಾ ಉಂಟಾ ಎಂಬ ಅನುಮಾನ ನನಗೆ?

ಇನ್ನು ಮರಳಿ ಮಂಗಳೂರು ಪಬ್ ಪ್ರಕರಣಕ್ಕೆ ವಾಪಸ್ಸಾಗುವುದಾದರೆ, ಮಂಗಳೂರು ಯೂನಿವರ್ಸಿಟಿಯ ಉಪನ್ಯಾಸಕರಾದ ಪಟ್ಟಾಭಿರಾಮ ಸೋಮಯಾಜಿಯವರು ನೀಡಿದ ಹೇಳಿಕೆ ಇಲ್ಲದ ವಿವಾದ ಸೃಷ್ಟಿ ಮಾಡಿದ್ದು. ಅವರು ಹೇಳಿದ್ದಾದರೂ ಏನು? "ಸಂಸ್ಕೃತಿ ಎಂದರೆ ಪುರುಷರು ಮಹಿಳೆಯರೊಂದಿಗೆ ಹಾಗೂ ಮಹಿಳೆಯರು ಪುರುಷರೊಂದಿಗೆ ವರ್ತಿಸುವ ರೀತಿ. ಪಬ್ ನಲ್ಲಿ ಮಹಿಳೆಯರ ಮೇಲೆ ದಾಳಿ ಮಾಡಿದ ಪುರುಷರು ತಾವೇ ಟೀಶರ್ಟು, ಪ್ಯಾಂಟು ಹಾಕಿಕೊಂಡಿದ್ದರು. ಅದು ಪಾಶ್ಚಾತ್ಯ ದಿರಿಸು ತಾನೆ. ಹಾಗೆಂದ ಮೇಲೆ ಅವರು ಹೊರಗಿನ ಪ್ರಭಾವ ಎಂದು ಕರೆಯುವುದಾದರೂ ಏನನ್ನು". ಈ ಹೇಳಿಕೆಯಲ್ಲಿರುವ ದೋಷವಾದರೂ ಏನು ಸ್ವಾಮಿ?

ಕುಡಿಯುವುದು ಮಾತ್ರ ಪಾಶ್ಚಿಮಾತ್ರ ಪ್ರಭಾವವೇ? ಯಾಕೆ ಹಿಂದೂ ಪುರಾಣಗಳಲ್ಲಿ ಬರುವ ದೇವತೆಗಳು, ದೇವತೆಗಳ ಅಧಿಪತಿಯಾದ ಇಂದ್ರ ಎಲ್ಲರೂ ರಂಭೆ ಊರ್ವಶಿ ಮೇನಕೆಯರ ಗಾನನಾಟ್ಯ ರಸಧಾರೆಯನ್ನು ಸವಿಯುತ್ತ, ಸೇವಿಸುತ್ತಿದ್ದ ರಾಮರಸ, ಸೋಮರಸವೆಲ್ಲ ಯಾವ ಪ್ರಭಾವದಿಂದ ಬಂದದ್ದು? ಇದು ಯಾವ ಪಬ್, ಡಿಸ್ಕೋ ಥೆಕ್, ಲೈವ್ ಬ್ಯಾಂಡ್ ಗಳಿಗೆ ತಾನೇ ಕಮ್ಮಿ ನೀವೇ ಹೇಳಿ?

ಇನ್ನೊಂದು ವಿಚಾರವೇನೆಂದರೆ, ಇಂದು ಹಿಂದೂ ವಾದವನ್ನು ಮುಂದಿಡುತ್ತಿರುವವರು ಹೀಗೆ ಮಹಿಳೆಯರನ್ನು ಮಾತ್ರ "ಟಾರ್ಗೆಟ್" ಮಾಡಿಕೊಂಡಿದ್ದರಲ್ಲಿ ತಪ್ಪೇನಿಲ್ಲ. ಯಾಕೆಂದರೆ, ಇಂದ್ರ ಮಾಡುತ್ತಿದ್ದ ಕೆಲಸವೂ ಅದೇ. ಹಾಗೆಯೇ, ಶ್ರೀಮನ್ನಾರಯಣ ಬೃಂದಾಗೆ(ತುಳಸಿ ಕತೆ) ಮಾಡಿದ್ದು ಅದೇ ತಾನೇ. ಪಾಪ, ನಮಗೆ ಆದರ್ಶವಾಗಬೇಕಾದದ್ದು ಇಂತದೇ ತಾನೇ? ನಮ್ಮ ಕಣ್ಣ ಮುಂದೆಯೇ ಘಟಿಸಿ ಹೋದ ಗಾಂಧಿಯ ಸ್ವದೇಶಿ ಚಳುವಳಿ, ಅಸ್ಪೃಶ್ಯತಾ ವಿರೋಧಿ ಚಳುವಳಿಗಳು ಇವರಿಗೆ ಹೇಗೆ ತಾನೆ ಆದರ್ಶವಾಗಬೇಕು! ಅದಕ್ಕೇ ಏನೋ ಅಲ್ಲಮ ಪ್ರಭು "ಪುರಾಣ ಪುಂಡರ ಗೋಷ್ಠಿ" ಎಂದದ್ದು. ಎಲ್ಲಿಯವರೆಗೂ ಇಂತಹ ಕಂತೆ ಪುರಾಣಗಳು ನಮಗೆ ಆದರ್ಶವಾಗುತ್ತವೆಯೋ ಅಲ್ಲಿಯವರೆಗೂ ನಮ್ಮ ದೇಶ ಹೀಗೆಯೇ.

ಎಂದು ಮಧ್ಯರಾತ್ರಿಯಲ್ಲಿಯೂ ಒಬ್ಬ ಹೆಣ್ಣುಮಗಳು ನಿರ್ಭೀತಳಾಗಿ ರಸ್ತೆಯಲ್ಲಿ ಓಡಾಡುವಂತಾಗುತ್ತದೆಯೋ ಅಂದೇ ರಾಮರಾಜ್ಯ ನೆಲೆಸಿದಂತಾಗುವುದು ಎಂದು ಮಹಾತ್ಮ ಗಾಂಧಿ ಹೇಳಿದ್ದು ಇವರಿಗೆ ಮರೆತು ಹೋಗಿರಬೇಕು! ಹೀಗೆ ಎಲ್ಲೆಂದರಲ್ಲಿ ನುಗ್ಗಿ ಹೆಣ್ಣು ಮಕ್ಕಳ ಮೇಲೆ ದಾಳಿ ಮಾಡುವುದು ನಮ್ಮ ಸಂಸ್ಕೃತಿ ಎಂಬುದನ್ನು ನಾವು ನೀವೆಲ್ಲಾ ಒಪ್ಪಬೇಕೇ ಸ್ವಾಮಿ? ಈ ಮಂಗಳೂರು ಪಬ್ ದಾಳಿ ಪ್ರಕರಣದಲ್ಲಿ ನೋಡಿ, ಕೇವಲ ಪಬ್ ಮಾತ್ರ ಮಾಧ್ಯಮಗಳಲ್ಲಿ ಎಲ್ಲೆಡೆ ಮುಖ್ಯವಾಗಿದೆಯೇ ಹೊರತು ಖಾಸಗಿ ಪಾರ್ಟಿಯಲ್ಲಿ ದಾಳಿಗೊಳಗಾದ ನಾಲ್ವರು ಹುಡುಗಹುಡುಗಿಯರು ಮಾತ್ರ ಮುಖ್ಯವಾಗಲಿಲ್ಲ ನಮಗೆ.

ಬರೀ ಮಂಗಳೂರು ಒಂದರಲ್ಲೇ ಈ ರೀತಿಯ 12 ಪ್ರಕರಣಗಳು 2008ರ ಜುಲೈ ಹಾಗೂ ಡಿಸೆಂಬರ್ ನಡುವೆ ವರದಿಯಾಗಿವೆಯಂತೆ. ಈ ಕಪಿಚೇಷ್ಟೆಯ ತೀವ್ರತೆ ಎಷ್ಟು ಮಟ್ಟಿಗಿರಬಹುದು ಎಂದು ಯಾರು ಬೇಕಾದರೂ ಯೋಚಿಸಬಹುದು. ಇದನ್ನು ಹಲವಾರು ಮಾಧ್ಯಮಗಳು "ತಾಲಿಬಾನೀಕರಣ"(Talibanisation) ಎಂದು ಬಣ್ಣಿಸಿವೆ. ಇಲ್ಲಿಯೂ ನಮ್ಮ ಸಂಸ್ಕತಿಯನ್ನು ಬಿಡದ ಕೆಲವರು "ಕೇಸರೀಕರಣ"(Saffronisation)ಎಂದು ಕರೆದರೆ ಸರಿ ಹೋಗುತ್ತದೆ ಎಂದಿದ್ದಾರೆ. ಅಲ್ಲ, ನಮ್ಮ ರಾಷ್ಟ್ರಧ್ವಜದಲ್ಲಿ ಮೊದಲನೆಯ ಬಣ್ಣವಾದ ತ್ಯಾಗ ಬಲಿದಾನಗಳ ಸಂಕೇತವಾದ ಕೇಸರಿಯನ್ನು ಇಂತಹದಕ್ಕೆ ಹೋಲಿಸುವುದೇ? ಇದು ಸಂಸ್ಕೃತಿಗೆ ಸಂಬಂಧಿಸಿದ ವಿಚಾರವಾದ್ದರಿಂದ "ಸಂಸ್ಕತೀಕರಣ" ಎಂದು ಕರೆದರೆ ಉಚಿತವಾದೀತು!

ಇನ್ನಾದರೂ ಪ್ರಜ್ಞಾವಂತರಾದ ಜನರೆಲ್ಲರೂ ಸುಧಾರಿಸಬೇಕಾಗಿದೆ. ಇಂತಹ ದಾಳಿಗಳ ವಿರುದ್ಧ ಜಾಗೃತರಾಗಿ, ಸಂಘಟಿತರಾಗಿ ಖಂಡಿಸಬೇಕಿದೆ, ಹೋರಾಡಬೇಕಿದೆ. ಅದರಲ್ಲೂ ಮಹಿಳೆಯರು. ಇಲ್ಲವಾದರೆ, ಭಾರತದ ಜನಗಳಾದ ನಾವು ಭಾರತವನ್ನು ಒಂದು (ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ) ಗಣರಾಜ್ಯವಾಗಿ ರಚಿಸಲು ಹಾಗೂ:
ಅದರ ಸಮಸ್ತ ನಾಗರಿಕರಿಗೆ:

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು
ಉಪಾಸನಾ ಸ್ವಾತಂತ್ರ್ಯ;
ಸ್ಥಾನಮಾನ ಮತ್ತು ಅವಕಾಶ ಸಮಾನತೆ
ದೊರೆಯುವಂತೆ ಮಾಡಲು ಮತ್ತು
ವ್ಯಕ್ತಿ ಗೌರವವನ್ನು (ರಾಷ್ಟ್ರದ ಏಕತೆಯನ್ನು ಹಾಗೂ
ಅಖಂಡತೆಯನ್ನು) ಖಾತ್ರಿ ಮಾಡಿ ಅವರಲ್ಲಿ ಎಲ್ಲರಲ್ಲೂ
ಭ್ರಾತೃ ಭಾವನೆಯನ್ನು ವೃದ್ಧಿಗೊಳಿಸುವುದಕ್ಕಾಗಿ
ಶ್ರದ್ಧಾಪೂರ್ವಕವಾಗಿ ದೃಢಸಂಕಲ್ಪ ಮಾಡಿದವರಾಗಿ;
ನಮ್ಮ ಸಂವಿಧಾನ ಸಭೆಯಲ್ಲಿ ಈ 1949 ನೆಯ ಇಸವಿ ನವೆಂಬರು ತಿಂಗಳು ಇಪ್ಪತಾರನೆಯ ತಾರೀಖಾದ ಇಂದಿನ ದಿವಸ ಈ ಮೂಲಕ ಸಂವಿಧಾನವನ್ನು ಅಧಿನಿಯಮಿತಗೊಳಿಸಿ, ಆತ್ಮಾರ್ಪಿತ ಮಾಡಿಕೊಂಡಿದ್ದೇವೆ.

ನಮ್ಮ ಅಂದರೆ ಭಾರತದ ಸಂವಿಧಾನ ಎಷ್ಟು ಉದಾತ್ತ ಆದರ್ಶಗಳನ್ನು ಹೊಂದಿದೆ ಎನ್ನುವುದನ್ನು ಈ ಪ್ರಸ್ತಾವನೆ(Preamble)ಯೇ ಸ್ಪಷ್ಟಪಡಿಸಿಬಿಡುತ್ತದೆ. ಮೇಲಿನ ಪ್ರಸ್ತಾವನೆಯನ್ನು ಓದಿದಾಗ ನಮ್ಮ ಸಂವಿಧಾನವನ್ನು ಯಾವ ಉದ್ದೇಶವಿಟ್ಟುಕೊಂಡು ಯಾರು ಯಾರ ಸಲುವಾಗಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಶಾಸಕಾಂಗ, ಕಾರ್ಯಾಂಗ, ರಾಜ್ಯಾಂಗ ಹಾಗೂ ನಾವು(ಭಾರತದ ಪ್ರಜೆಗಳು) ಈ ಪ್ರಸ್ತಾವನೆಯನ್ನು ಅಗೌರವಿಸುತ್ತಿರುವುದು ಏಕೆ?

(ಈ ವಿಚಾರದ ಬಗ್ಗೆ "ದಿ ಹಿಂದೂ"ವಿನಲ್ಲಿ ಆಯೇಶಾ ಮತ್ತನ್ ಎಂಬಾಕೆ ಬರೆದಿರುವ What lies beneath ಎಂಬ ಲೇಖನವನ್ನು ಓದಿ. Infact, ಈ ನನ್ನ ಬ್ಲಾಗ್ ಬರೆಹಕ್ಕೆ ಅದೇ ಸ್ಫೂರ್ತಿ.)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಶಶಿಕುಮಾರ್,
ಕಪಿಚೇಷ್ಟೆ ಎಂದಾಗ rediffನಲ್ಲಿ ಬಂದ 'ಕಪಿಚೇಷ್ಟೆ' ನೆನಪಾಯಿತು:
http://ishare.rediff.com/filevideo--id-36108.php

-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಮಂಗ ಚೇಶ್ಟೆ ಚಂದ ಉಂಟು ಮಾರಾಯ. ಆದರೆ, ಶ್ರೀ ರಾಮಸೇನೆಯದು ಇಂತಹ ಚೇಶ್ಟೆಯಾ? ನಿಮ್ಮ ಮಂಗನ ವಿಡಿಯೋ ನಿಜಕ್ಕೂ ಚಂದ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ್ ಮಹಸಯರೇ,

Let begin the Comments like this ...
1. The ಸಂಸ್ಕೃತಿ means nothing how we are developed and refleting to the society.There are no restriction any indivisual in any Dharma, it say all about how an indivisual live within his OWN MADE RESTRICTION.
2. Before commenting on any writting (Ex: - Ramayana,Mahabhart)first get the clear picture of what thw author is going to conevy(original one), then follow the others writting(ಶೂದ್ರತಪಸ್ವಿ,comments on Ramaya, etc...)

Finally you are in a very good way of correcting the mistakes but it seems you lage in the knowlege of perticular.
if you really want to know why SriRama send Seeta to Forest will tell. not only that what and all loop hole do find in the Ramayana will tell you, before that read the "ORIGINA VALMIKE RAMAYA" it is not the novel, it is a ಕಾವ್ಯ.......

my personal e-mail id is prasad.eshavasya@gmail.com
let have a healthy disscussion about u r doubt after u r read the originalramayan.

Last but not least, at any point of time have you realised what kind of girls and what stage they were they in the mangalore pub......
If think once being the Man of Indian, which can give respect to other indivisual,belives,regions..... I india is name in the world because of all these values in it.

Yours
Eshavasya

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ನನ್ನಿ. ಆದರೆ, ಕನ್ನಡದಲ್ಲಿ ಉತ್ತರಿಸಿ ಆಯ್ತಾ. ನಿಮ್ಮ ಪ್ರಶ್ನೆಗಳಿಗೆ ನಾನು ನಿಮ್ಮ ಈ-ಮೇಲ್ ವಿಳಾಸಕ್ಕೆ ಉತ್ತರ ಕಳಿಸುವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಡ೦ಬನಾತ್ಮ್ಕಕವಾಗಿರುವ ನಿಮ್ಮ ಲೇಖನ ತು೦ಬಾ ಮನಮುಟ್ಟಿತು. ನಮ್ಮ ದೇಶದ ಸ೦ಸ್ಕ್ರುತಿ ಹಿ೦ದು ಧರ್ಮ ಎನ್ನುವ ಇವರು
ಹಿ೦ದು ಧರ್ಮವೆ೦ದರೇನೆ೦ದೆ ತಿಳಿದಿಲ್ಲ...ಪ್ರಾರ೦ಭದಲ್ಲಿ ವೈದಿಕವಾಗಿದ್ದು, ನ೦ತರ ಪುರಾಣಗಳಿ೦ದ ವರ್ಣಾಶ್ರಮ ಧರ್ಮಕ್ಕೆ ಬದಲಾಗಿ, ನ೦ತರ ಬುದ್ಧನ ಭೋದನೆಯಿ೦ದ ಭೌದ್ಧ ಧರ್ಮಕ್ಕೆ ತಿರುಗಿ, ದಕ್ಷಿಣದಲ್ಲಿ ಜೈನರ ಪ್ರಾಬಲ್ಯದಿ೦ದ ದಿಗ೦ಬರ-ಶ್ವೇತಾ೦ಬರರೂ ಬ೦ದಿದ್ದರು..ಮುಸಲ್ಮಾನರು - ಕ್ರಿಸ್ಚಿಯನ್ನರು ದೇಶದ ಅವಿಭಾಜ್ಯ ಜನತೆ."Valentines Day" ನಮ್ಮದಲ್ಲ ಕ್ರಿಸ್ಚಿಯನರದು ಎನ್ನುವ ಇವರು ಕ್ರಿಸ್ಚಿಯನ್ನರು ಕೇರಳದಲ್ಲಿ ೨೦೦೦ ವರ್ಷಗಳಿ೦ದ ನೆಲೆಸಿದ್ದಾರೆ ಎ೦ಬುದನ್ನು ಮರೆತ ಹಾಗಿದೆ.

ಲೇಖನದ ವೈಖರಿ ಸಹ ತು೦ಬಾ ಚೆನ್ನಾಗಿದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಗೆಳೆಯರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಶಿಯವರೇ ಕೆಲ ಪ್ರಶ್ನೆಗಳು..
-ಭಾರತಕ್ಕೆ ಒಂದು ಸಂಸ್ಕೃತಿಯಿಲ್ಲವೇ? ದಯವಿಟ್ಟು ನಿಮ್ಮ ಸಂಸ್ಕೃತಿ ಎಂಬ ಪದದ ಅರ್ಥ ತಿಳಿಸುವಿರಾ?
-ಮನುಸ್ಮೃತಿಯನ್ನು ಓದಿದ್ದೀರಾ? ಕೇವಲ ಒಂದು ಶ್ಲೋಕದ ಅರ್ಧ ಸಾಲಿನೊಂದಿಗೆ ಇಡೀ ಮನುಸ್ಮೃತಿಯನ್ನು ಅಳೆಯುವುದು ಎಷ್ಟು ಸರಿ? (ಪಿತಾ ರಕ್ಷತಿ ಕೌಮಾರೆ ಭರ್ತಾ ರಕ್ಷತಿ ಯೌವನೆ| ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ|| - ಇದು ಪೂರ್ಣ ಶ್ಲೋಕ)
-ಧರ್ಮವೆಂಬುದನ್ನು ’Define' ಮಾಡಬಲ್ಲಿರಾ? ಹಕ್ಕಿಗೆ ಹಾರುವುದೇ ಧರ್ಮ, ಗಾಳಿಗೆ ಬೀಸುವುದೇ ಧರ್ಮ, ನದಿಗೆ ಹರಿಯುವುದೇ ಧರ್ಮ...
-ರಾಮನು ಸೀತೆಯನ್ನು ಕಾಡಿಗಟ್ಟಿದ್ದರ ಬಗ್ಗೆ ಕಳಕಳಿಯಿದೆಯಾದರೂ, ಆಕೆಯ ಮೇಲೆ ಸಿಟ್ಟಿತ್ತು ಎಂಬ ನಿಮ್ಮ ವಾದಕ್ಕೆ ಯಾವುದರ ಆಧಾರ ನೀಡುತ್ತೀರಿ?
-ಗಾಂಧಿ ಹೇಳಿದ ಹೇಳಿಕೆಯಲ್ಲಿ ’ರಾಮ’ರಾಜ್ಯವಿದೆಯಲ್ಲ?
- ’ಸರ್ವಧರ್ಮ ಸಮನ್ವಯ’, ’ವಿವಿಧತೆಯಲ್ಲಿ ಏಕತೆ’ ಎನ್ನುವುದು ಬೇರೆಲ್ಲಿದೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತರವರೆ,

[quote]-ಮನುಸ್ಮೃತಿಯನ್ನು ಓದಿದ್ದೀರಾ? ಕೇವಲ ಒಂದು ಶ್ಲೋಕದ ಅರ್ಧ ಸಾಲಿನೊಂದಿಗೆ ಇಡೀ ಮನುಸ್ಮೃತಿಯನ್ನು ಅಳೆಯುವುದು ಎಷ್ಟು ಸರಿ? (ಪಿತಾ ರಕ್ಷತಿ ಕೌಮಾರೆ ಭರ್ತಾ ರಕ್ಷತಿ ಯೌವನೆ| ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ|| - ಇದು ಪೂರ್ಣ ಶ್ಲೋಕ) [/quote]

ಈ ಪೂರ್ಣ ಶ್ಲೋಕದ ಅರ್ಥವನ್ನು ದಯವಿಟ್ಟು ಹೇಳುತ್ತೀರ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಿತಾ ರಕ್ಷತಿ ಕೌಮಾರೆ ಭರ್ತಾ ರಕ್ಷತಿ ಯೌವನೆ| ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ|

ಪಿತಾ= ತಂದೆಯು ಕೌಮಾರೇ = ಕೌಮಾರ್ಯದಲ್ಲಿ ರಕ್ಷತಿ = ರಕ್ಷಿಸುತ್ತಾನೆ, ಯೌವನೇ= ಯೌವನದಲ್ಲಿ ಭರ್ತಾ = ಪತಿಯು ರಕ್ಷತಿ = ರಕ್ಷಿಸುತ್ತಾನೆ, ಸ್ಥವಿರೇ = ಮುಪ್ಪಿನಲ್ಲಿ ಪುತ್ರಾ = ಗಂಡುಮಕ್ಕಳು ರಕ್ಷಂತಿ = ಕಾಪಾಡುತ್ತಾರೆ. ಸ್ತ್ರೀ = ಹೆಣ್ಣು ಸ್ವಾತಂತ್ರ್ಯಂ ಸ್ವಾತಂತ್ರ್ಯಕ್ಕೆ ನ ಅರ್ಹತಿ = ಅರ್ಹಳಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾಲ್ಯದಲ್ಲಿ ತಂದೆಯೂ, ಯೌವನದಲ್ಲಿ ಗಂಡನೂ, ಮುಪ್ಪಿನಲ್ಲಿ ಮಕ್ಕಳೂ ಆಕೆಯನ್ನು ಕಾಪಾಡುತ್ತಾರೆ, ಆದ್ದರಿಂದ ಸ್ತ್ರೀ ಗೆ ಸ್ವಾತಂತ್ರ್ಯದ ಅವಶ್ಯಕತೆಯಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತರವರೆ,
ಮನ್ನಿಸಿ ನನಗೆ ಸಂಸ್ಕೃತ ಬರುವುದಿಲ್ಲ. ನನ್ನ ಅಲ್ಪಜ್ಞಾನಕ್ಕೆ ಹೊಳೆದದ್ದು ಇಷ್ಟು-
ಕೌಮಾರ್ಯ != ಬಾಲ್ಯ (ಬಾಲ್ಯ ಮತ್ತು ಯೌವನದ ನಡುವಿನ ಸ್ಥಿತಿ)
ಭರ್ತಾ != ಗಂಡ (ಒಡ ಹುಟ್ಟಿದವ)
ಪುತ್ರಾ != ಮಕ್ಕಳು (ಮಗ)
ಅರ್ಹತೆ != ಅವಶ್ಯಕತೆ ಅಲ್ಲ (ಕೆಲಸಕ್ಕೆ ಅರ್ಹತೆ ಹಾಗು ಕೆಲಸದ ಅವಶ್ಯಕತೆ ಬೇರೆ ಅಲ್ಲವೆ?)

ತಪ್ಪಿದ್ದರೆ ತಿದ್ದಿ. ನಾನು ಈ ಶ್ಲೋಕಕ್ಕೆ ಬೇರೇನೋ ವಿರುದ್ಧಾರ್ಥವಿದೆ ಎಂದುಕೊಂಡು ಕೇಳಿದೆ, ಅಷ್ಟೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ, ನಾನೂ ಸಂಸ್ಕೃತ ಪಂಡಿತಳಲ್ಲ. ತಿಳಿದು ಕೊಂಡದ್ದಿಷ್ಟು, ಹಂಚಿಕೊಳ್ಳುತ್ತೇನೆ..
- ಕೌಮಾರ್ಯ - ಕುಮಾರಿ (ಮದುವೆಯಾಗುವವರೆಗೂ) (ಬಾಲ್ಯ-ಯೌವನ-ಮುಪ್ಪು, ಎಂಬ ವಿಂಗಡನೆಯಿರುವುದರಿಂದ ಹೀಗೆ ಅರ್ಥೈಸಿದೆನಷ್ಟೆ)
- ಭರ್ತಾ - ಗಂಡ (ಬಹುಶ: ನೀವು ಭಾತೃ ಶಬ್ದದೊಂದಿಗೆ ಗೊಂದಲಕ್ಕೊಳಗಾದಿರಿ ಎಂದು ಭಾವಿಸುತ್ತೇನೆ)
- ಪುತ್ರಾ - ಮಕ್ಕಳು (ಒಬ್ಬರಿಗಿಂತ ಹೆಚ್ಚು, ಗಂಡು ಮಕ್ಕಳು ಎಂದು ಹೇಳಿದರೆ ಸರಿಯೆಂದೆನಿಸುತ್ತದೆ)
- ಅರ್ಹತೆ - ಅವಶ್ಯಕತೆ (ಖಂಡಿತಾ, ಇದು ಅಲ್ಲ)
ಸ್ವಾತಂತ್ರ್ಯಕ್ಕೆ ಅರ್ಹಳಲ್ಲ, ಯಾವುದಕ್ಕೆ ಸ್ವಾತಂತ್ರ್ಯ?
ಬಹುಶ: ಮೊದಲು ಹೇಳಿದ ೩ ವಿಷಯಗಳಿಗನುಗುಣವಾಗಿ, ನಾಲ್ಕನೆಯ ವಾಕ್ಯವನ್ನು ಪರಿಗಣಿಸಿದಾಗ ಅವಶ್ಯಕತೆ ಎಂಬ ಅರ್ಥ ಬಂದೀತೇನೊ.
ಮನು ಕೇವಲ ಇದೊಂದೇ ಶ್ಲೋಕದೊಂದಿದೆ ಮನುಸ್ಮೃತಿಯನ್ನು ಮುಗಿಸಿದ್ದರೆ, ವಿರೋಧಿಸುವಲ್ಲಿ ನಾನೇ ಮೊದಲಿಗಳಾಗಿರುತ್ತಿದ್ದೆನೇನೊ!! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತರವರೆ,
ತಿದ್ದಿದ್ದಕ್ಕೆ ಥ್ಯಾಂಕ್ಸ್.
ಮೇಲೆ ರಮೇಶರವರೂ "ಅರ್ಹಳಲ್ಲ" ಎಂದಿದ್ದಾರೆ - ಗಮನಿಸಿ. ೧೯೬೮ರಲ್ಲಿ ಪ್ರಕಟವಾದ ಎನ್.ಕೆ.ನರಸಿಂಹಮೂರ್ತಿಯವರ "ಮನುಸ್ಮೃತಿಸಾರ" ದಲ್ಲೂ "ಅರ್ಹಳಲ್ಲ" ಎಂದೇ ಅರ್ಥೈಸಿದ್ದಾರೆ. ಆದರೆ, ನೀವು ಅವಶ್ಯಕತೆ ಎಂದು ತಿದ್ದಿಕೊಂಡಿದ್ದೀರಿ. ಅದು ನಿಮ್ಮ ಅನುಕೂಲಕ್ಕಷ್ಟೆ ಅಲ್ಲವೆ?
>> ಸ್ವಾತಂತ್ರ್ಯಕ್ಕೆ ಅರ್ಹಳಲ್ಲ, ಯಾವುದಕ್ಕೆ ಸ್ವಾತಂತ್ರ್ಯ?
ಇಲ್ಲಿ ಸ್ವಾತಂತ್ಯ್ರ - freedom ಅಲ್ಲ ಅನಿಸುತ್ತದೆ. ಆಕೆ independent ಆಗಿರಲು ಅರ್ಹಳಲ್ಲ ಎಂಬುದು ಇಂಗಿತ. ಆಕೆ ತನ್ನ ಜೀವನದ ಹಲವು ಸ್ತರದಲ್ಲಿ ರಕ್ಷಿಸಿಕೊಳ್ಳಲು ಬೇರೆ ಗಂಡಸರು ಬೇಕಾಗಿರುವಾಗ - ಯಾವಾಗಲೂ dependent/ಅವಲಂಬಿತಳು ಅಂತ ಅಲ್ಲವೆ?
ಮನುಸ್ಮೃತಿಯನ್ನು ವಿರೋಧಿಸುವುದಿಲ್ಲ ಅಂದರೆ, ಅದರಲ್ಲಿ ಬರುವ ಹತ್ತು ಹಲವಾರು ನೈತಿಕ ನಿರ್ಣಯಗಳು ನಿಮಗೆ ಒಪ್ಪಿಗೆ ಎಂದು ಬಗೆಯಬಹುದಲ್ಲವೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರೂ ಈ ಹೇಳಿಕೆಯನ್ನು out of context ಆಗಿ quote ಮಾಡುತ್ತಾರೆ. ಆದರೆ 'ನಾವು ಮನುಸ್ಮೃತಿಯಲ್ಲಿ ಹೇಳಿದನ್ತೆ ನಡೆದುಕೊಳ್ಳುವವರೆನ್ದು' ಯಾರೂ ಉಸುರಿದನ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಶಿ
ನಿಮ್ಮ ಕಳಕಳಿ ಒಪ್ಪುವಂತದ್ದೆ,ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದ್ದು ತಪ್ಪು.ಆದರೆ,

[quote]ಇವರು ಹೀಗೆ ಹೆಂಗಸರನ್ನೇ "ಟಾರ್ಗೆಟ್" ಮಾಡುವುದಕ್ಕೆ ಕಾರಣ, ಗರ್ಭಿಣಿ ಹೆಂಗಸನ್ನು ಯಾರದೋ ಮಾತು ಕೇಳಿ ಅಡವಿಗಟ್ಟಿದ ಶ್ರೀರಾಮನ "ಸಂಸ್ಕೃತಿ"ಯನ್ನೇ ನಾವು ಪಾಲಿಸಬೇಕೆಂದೆ? ಶ್ರೀರಾಮನಿಗೆ ಸೀತೆಯ ಮೇಲಿದ್ದ ಸಿಟ್ಟನ್ನೆ ರಾಮಸೇನೆಯವರಾದ ಇವರು ಮಹಿಳೆಯರ ಮೇಲೆ ತೀರಿಸಿಕೊಳ್ಳಬೇಕು ಎಂಬ ಹಟದಿಂದ ಹೀಗೆ ಮಾಡ್ತಾ ಉಂಟಾ ಎಂಬ ಅನುಮಾನ ನನಗೆ? [/quote]

ಇಲ್ಲಿ ಹೆಂಗಸರನ್ನೇ ಟಾರ್ಗೆಟ್ ಮಾಡಿದ್ದರೆ ಅಂತ ಹೇಳ್ತಿರಲ್ಲ (ಅದಕ್ಕೆ ಶ್ರೀರಾಮನ ಉದಾಹರಣೆ ಸ್ವಲ್ಪ ಅತಿ ಅನ್ನಿಸಲ್ವಾ?), ಸ್ವಾಮೀ ಆ ದಾಳಿ ನಡೆದಿದ್ದು ಪಬ್ಬಿನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ವಿರುದ್ಧ, ಆದರೆ ಈ ಸೇನೆಯವರು ಅಲ್ಲಿ ಅಧಿಂಕ ಪ್ರಸಂಗವನ್ನ ಮಾಡಿ, ಸುಮ್ಮನೆ ಬುದ್ದಿ ಜೀವಿಗಳ ಬಾಯಿಗೆ ಆಹಾರವಾಗಿದ್ದರೆ. ಕರಾವಳಿಯ ಹೆಣ್ಣುಮಕ್ಕಳ ಮೇಲಿನ ಹಲ್ಲೆಯ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ಅಲ್ಲಿ ಕೆಲವು ಹೆಣ್ಣು ಮಕ್ಕಳ extra curricular activities ಬಗ್ಗೆ ತಿಳಿದುಕೊಳ್ಳಿ,ಹಾಗು ಅವರನ್ನ ಅಂತ activities ಗೆ ಬಳಸಿಕೊಳ್ಳುತ್ತಿರುವ ಬಗ್ಗೆ ತಿಳಿದುಕೊಳ್ಳಿ. ಬರಿ ಸೇನೆಯವರಿಗೆ ಬೈಯುವ ಬದಲು ಸುಮ್ಮನೆ ಇದನ್ನ ಅತಿಯಾಗಿ ವೈಭವಿಕರಿಸಿದ ಮಾದ್ಯಮಗಳಿಗೆ ಸ್ವಲ್ಪ ಬುದ್ದಿ ಹೇಳಿ ನೋಡುವ?

ಸ್ವಾತಂತ್ಯ್ರ ತಪ್ಪಲ್ಲ ಅದನ್ನ ಯಾರೇ ಸ್ವೇಚ್ಚೆ ಮಾಡಿಕೊಂಡರೆ ಅದು ತಪ್ಪು.

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಕರಾವಳಿಯ ಹೆಣ್ಣುಮಕ್ಕಳ ಮೇಲಿನ ಹಲ್ಲೆಯ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ಅಲ್ಲಿ ಕೆಲವು ಹೆಣ್ಣು ಮಕ್ಕಳ extra curricular activities ಬಗ್ಗೆ ತಿಳಿದುಕೊಳ್ಳಿ,ಹಾಗು ಅವರನ್ನ ಅಂತ activities ಗೆ ಬಳಸಿಕೊಳ್ಳುತ್ತಿರುವ ಬಗ್ಗೆ ತಿಳಿದುಕೊಳ್ಳಿ. ಬರಿ ಸೇನೆಯವರಿಗೆ ಬೈಯುವ ಬದಲು ಸುಮ್ಮನೆ ಇದನ್ನ ಅತಿಯಾಗಿ ವೈಭವಿಕರಿಸಿದ ಮಾದ್ಯಮಗಳಿಗೆ ಸ್ವಲ್ಪ ಬುದ್ದಿ ಹೇಳಿ ನೋಡುವ?<<<<

ನಿಮಗೆ ಸಮಯವಿದ್ದರೆ ಇದರ ಬಗ್ಗೆ ಒಂದು ಬ್ಲಾಗ್ ಬರೆಯಿರಿ ಶೆಟ್ರೆ ,ಯಾಕೆಂದರೆ ಅದರ ಬಗ್ಗೆ ಎಳ್ಳಷ್ಟು ನಮಗೆ ತಿಳಿಯದು ಅದಕ್ಕೆ ಕೇಳಿದ್ದು ಮತ್ತು ತಿಳಿದು ಕೊಳ್ಳಬೇಕು ಅನ್ನುವ ಹಂಬಲ ಅಷ್ಟೆ ,ತಪ್ಪಾಗಿ ಭಾವಿಸಬ್ಯಾಡಿ....

--ಗೌಡ್ರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಂಗಸರನ್ನು ಬಳಸಿಕೊಳ್ಳುವವರು ಯಾರು ಹೇಳಿ. ಅಂತಹ ಗಂಡಸರಿರುವುದಕ್ಕೆ ಅಲ್ವಾ ಹೆಂಗಸರು ಅಂತಹ ಕೆಲಸಕ್ಕಿಳಿಯುವುದು. ನಮಗೆ ಹೆಣ್ಣುಗಳ ಮೇಲೆ ಕಣ್ಣು. ಅದಕ್ಕೆ ಅವರ extra curricular activities ಬಗ್ಗೆ ಮಾತಾಡ್ತೇವೆ. ಗಂಡಸರ extra curricular activities ಬಗ್ಗೆ ಮಾತಾಡದವರು ಮನುವಾದಿಗಳೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಶಿ
ಗಂಡಸರು extra curricular activities ಮಾಡಬಹುದು ಅಂತ ನಾನೆಲ್ಲಿ ಹೇಳಿದೆ? ತಪ್ಪು ಯಾರು ಮಾಡಿದರು ತಪ್ಪೇ. ಅದು ನಾನಾಗಲಿ ನೀವಾಗಲಿ ಯಾರೇ ಆಗಲೀ.

[quote]ಹೆಂಗಸರನ್ನು ಬಳಸಿಕೊಳ್ಳುವವರು ಯಾರು ಹೇಳಿ. ಅಂತಹ ಗಂಡಸರಿರುವುದಕ್ಕೆ ಅಲ್ವಾ ಹೆಂಗಸರು ಅಂತಹ ಕೆಲಸಕ್ಕಿಳಿಯುವುದು[/quote]

ನಿಮ್ಮ ವಾದ ಒಂದು ರೀತಿಯಲ್ಲಿ ಸರಿಯೇ, ಆದರೆ ಕರಾವಳಿಯಲ್ಲಿಂದು ವಿವಿಧ ರಾಜ್ಯಗಳಿಂದ ಬರುತ್ತಿರುವ ವಿದ್ಯಾರ್ಥಿಗಳು ಮಾಡುತ್ತಿರುವ ಅನಾಹುತ ಯಾಕೆ ಪ್ರಜ್ಞಾವಂತರು ಅನ್ನಿಸಿಕೊಳ್ಳುವವರಿಗೆ ಕಾಣಿಸುವುದಿಲ್ಲ ಅನ್ನುವುದೇ ಪ್ರಶ್ನೆ.

ಇನ್ನು ನಿಮ್ಮ 'ಮನುವಾದ' ಎಲ್ಲ ನಂಗೆ ತಿಳಿದಿಲ್ಲ. ನಾನು ವಾಸ್ತವ ಸಂಗತಿಗಳ ಬಗ್ಗೆ ಮಾತ್ರ ಚರ್ಚಿಸಬಲ್ಲೆ.ಹಾಗೆ ರಾಮ ಸೇನೆಯನ್ನು ಬೈಯ್ಯಿರಿ ಅದಕ್ಕೆ ಶ್ರೀರಾಮ ಯಾಕೆ?? ಅದು ಹಲವರ ನಂಬಿಕೆಯ ಮೂರ್ತಿ, ಇನ್ನೊಬ್ಬರ ನಂಬಿಕೆಯ ಬಗ್ಗೆ ಹೀಯಾಳಿಸುವುದು ಆರೋಗ್ಯಕರ ಚರ್ಚೆಯ ದಾರಿ ತಪ್ಪಿಸುತ್ತದೆ ಅಂತ ನನ್ನ ಅನಿಸಿಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀರಾಮನ ಉದಾಹರಣೆಯನ್ನ ನಾನು ಸಮರ್ಥಿಸಿಕೊಳ್ತೇನೆ. ಅದಕ್ಕೆ ಇನ್ನೂ ಗಟ್ಟಿಯಾದ ಆಧಾರಗಳನ್ನು ಕೂಡ ಒದಗಿಸ್ತೇನೆ ಮಾರಾಯ. ಗಂಡಸರು ನೀವು ಹೇಳುವ extra curricular activities ಮಾಡಬಹುದು ಅಲ್ವ? ಅದನ್ನು ಯಾಕೆ ತಡೆಯಬಾರದು. ಹೆಂಗಸರೇ ಯಾಕಾಗಬೇಕು? ಇನ್ನು ಮಾಧ್ಯಮದವರಿಗೆ ಬುದ್ಧಿ ಹೇಳುವ ಕೆಲಸ ಮಾಡಲೇಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.