ನಮಸ್ಕಾರ V/ಸ್ Good morning !!??

0

ಹಡಗು ನಿರ್ಮಾಣದ ಪ್ರೊಜೆಕ್ಟ್ಗಗಾಗಿ ಮೂರು, ನಾಲ್ಕು ತಿಂಗಳ ಕಾಲ ದೇಶ ಬಿಟ್ಟು ಇಲ್ಲೆ ಪಕ್ಕದಲ್ಲಿರುವ united arab emirates in short UK ಗೆ ಬಂದಿದೀನಿ.. K ಎಲ್ಲಿಂದ ಬಂತು ಅಂತನಾ ?? ಇಲ್ಲಿ ಬಂದು ನೋಡಿದ್ರೆ ಅಥವಾ ಕೇಳಿದ್ರೆ ನಿಮಿಗೇ ಗೂತ್ತಾಗುತ್ತೆ, ಅರಬರಿಗಿಂತ ಇಲ್ಲಿ ನಮ್ಮ ಮಲಬಾರಿಗಳದ್ದೆ ಹೆಚ್ಚಿನ ಕಾರೊಬಾರ್ so UK ಅಂದ್ರೆ united keralites :).. ಕಾರ್ ಡ್ರೈವರ್ ಗಳಿಂದ ಹಿಡಿದು ಒಂದು ಕಂಪನಿಯ ಮಾಲೀಕರ ವರೆಗೂ ಇವರೇ ..ಆದ್ರೆ ತಮ್ಮ ಭಾಷೆಯನ್ನ ಮಾತ್ರ ಈ ದೇಶದ ನಾಡ ಭಾಷೆಯಾಗಿ ಮಾಡಿದ್ದಾರೆ .

ಇಲ್ಲಿರುವ ಹೆಚ್ಚಿನ ಭಾರತೀಯ ಜನರಿಗೆ, ನಮ್ಮ ಊರು ಬೆಂಗಳೂರು ಅಂದೆರೆ ಸ್ವಲ್ಪ ಹೆಚ್ಚಿನ ಒಲವು. garden city, अच्च मौसम् !! ಅಂಥ ಕೆಲವರ ಹೇಳಿಕೆಯಾದರೆ, IT capital, ಸ್ವಚ್ಚ ನಗಿರಿ ಅಂಥಾ ಇನ್ನು ಕೆಲವರ ಭರಟೆ, ಇನ್ನು ಪಾಕಿಸ್ತಾನಿಗಳು ಮತ್ತು ಬಾಂಗ್ಲದೇಶ ದವರು ಸಹ ನಮ್ಮ ಊರಿನ ಬಗ್ಗೆ ಇದೇ ರೀತಿಯ ಪ್ರತಿಕ್ರಿಯೆ ತೊರ್ಸಿದ್ರು (ಅವ್ರಿಗೆ ಯಾಕ್ ನಮ್ಮೂರ್ ಬಗ್ಗೆ ಪ್ರೀತಿ ಗೊತ್ತಿಲ್ಲ).. IPLಅಲ್ಲಿ ಅಂತು ಎಲ್ರು RC supporters ಸೆ .. ಧೊನಿ, ಯುವರಾಜನಿಗಿಂತ ನಮ್ಮೂರ್ ಹುಡ್ಗ ದ್ರಾವಿಡ್ fan club ಯೆ ದೊಡ್ದು ..ವಾರೆ ವಹ್ !! ಸೂಪರ್ ಅಲ್ವ .. :) ಒಟ್ನಲ್ಲಿ ಬೆಂಗಳೂರ್ ಹೆಸ್ರಲ್ಲಿ, ನಾವು ಎಲ್ಲಮ್ಮನ ಜಾತ್ರೆ ಮಾಡ್ತಾ ಇದೀವಿ ..

ಆಫೀಸಲ್ಲು ಸಹ ಎಲ್ರಿಗೂ ಬೆಂಗಳೂರ್ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯನೆ .. ಯಾಕಂದ್ರೆ ಇಲ್ಲಿ ಕೆರಳದವರೇ ತುಂಬಾ so ಹೀಗೆ .. ಕನ್ನಡದವರು, ismail (ಸಂಪದಿಗರು:ismailmkshimogga) ಸಾಹೆಬ್ರು ಅಂತವರು google search ಮಾಡಿದ್ರೆ ಒಂದ್ ನಾಲ್ಕ್ ಜನ ಸಿಗ್ಬೋದೇನೋ.. ಆ ನಾಲ್ಕ್ರಲ್ಲಿ ಇನ್ನು ಇಬ್ಬ್ರು ನಮ್ಮ ಅದ್ರುಷ್ಟಕ್ಕೆ ನಮ್ಮ office ಅಲ್ಲೆ ಇದ್ದ್ರು.. ನನಗಂತು ಖುಶಿಯೊ ಖುಶಿ ಅಬ್ಬ ಮಾತಾಡ್ಲಿಕ್ಕೆ ಇನ್ನೊಂದಿಷ್ಟು ಜನ ಕನ್ನಡದವರು ಸಿಕ್ರು ಅಂತ.(ಒಬ್ಬ ನನ್ನ ಸಂಗಡಿಗ ಅರ್ಧ ಕನ್ನಡಿಗ, ಬಿಜು ಎಂಬ ನಾಮಧೆಯ)..

ಹೀಗಿರುವಾಗ

ನಮ್ಮ ಕನ್ನಡದವರನ್ನು ಭೇಟಿ ಮಾಡಿದ ಮೊದಲ ದಿನ

ನಾನು: ನಮಸ್ಕಾರ ಸಾರ್, ನೀವು ಕನ್ನಡದವರಂತೆ.. ಖ್ಹುಶಿ ಆಯ್ತು ನಿಮ್ಮನ್ನ ಭೇಟಿಯಾಗಿ ..

ನಮ್ಮ ಕನ್ನಡದವ( ಇಲ್ಲಿ ಹೆಸರು ಬೇಡ-ಊರು ಬೇಡ): hay good morning ..so u r from bangalore..

ನಾನು: ಹೌದು,

ನಮ್ಮ ಕನ್ನಡದವ: ho great .. howz things here .. enjoying the stay ??

ನಾನು: ಪರವಾಗಿಲ್ಲ .. ಊಟದ ವ್ಯವಸ್ಥೆ ಚೆನ್ನಾಗಿದೆ..(ಅದಿದ್ರೆ ಎಲ್ಲಾ ಚೆನ್ನಾಗಿರುತ್ತೆ :)) .. ಮತ್ತೆ ನೀವು ??

ನಮ್ಮ ಕನ್ನಡದವ: I am here since 2 yrs .. going well .. yeah ...

ನಾನು: ಹಾಗಿದ್ರೆ ಇಲ್ಲೆ settle ಅಗೋ plan ಮಾಡಿದೀರ ??

ನಮ್ಮ ಕನ್ನಡದವ: ನಾಟ್ ರಿಯಲ್ಲಿ ..ಆದ್ರೆ ಇನ್ನೊಂದ್ ಎರ್ಡ್ ವರ್ಷ ನೊಡ್ಬೇಕು ..

ನಾನು: not bad .. not bad .. :) (ಮನಸ್ಸಲ್ಲಿ: ಪರವಾಗಿಲ್ಲ ಶಿಷ್ಯಂಗೆ ಕನ್ನಡ ಬರುತ್ತೆ)

ನಮ್ಮ ಕನ್ನಡದವ: ಮತ್ತೆ ಬೆಂಗಳೂರು ಹೇಗಿದೆ ??

ನಾನು: superb .. its rocking as it always does..
(ಅರೆ ವಾಹ್!! ಗುರುಗಳು ಕನ್ನಡ ಕಲ್ತಿದಾರೆ, ಆದರೆ ಅವರ ಕನ್ನಡ ಕೇಳೋದಕ್ಕೆ ನಾನು ಕನ್ನಡ ಬಿಡ್ಬೇಕು ಅಷ್ಟೆ !!)

ನಮ್ಮ ಕನ್ನಡದವ: ok man .. see you some other time ..

ನಾನು: ok ..ಸಿಕ್ಕೋಣ .. later ... what when where why ???? ಹ್ಮ್ಮ್ಮ್ ..

ಇದುವೇ ನಮ್ಮವರ ಕನ್ನಡಭಿಮಾನ ..ಕೇಳಿ ಸಂತೋಷ ಆಯ್ತು ..
ಯಾಕೆ ಹೀಗೆ ನಮ್ ಜನ ..?? ಇವರೊಬ್ಬರೆ ಆಗಿದ್ದರೆ adjust ಮಾಡ್ಕೊಬೊದಿತ್ತು ಆದ್ರೆ ಇರುವ ಇನ್ನೊಬ್ಬ ಶಿಷ್ಯಂದೂ ಇದೇ ಕಥೆ ....

ಈ ತಿಂಗಳಾಂತ್ಯದಲ್ಲಿ ವಾಪಸ್ ಬಂದ್ ಮೇಲೆ .. ನಾನು മനസിലായോ?? എന്തുന്ദദ് വിശേഷം ?? ಅನ್ನದಿದ್ದರೆ ನನಗೆ ಸಾಕು ...:)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.