ಯಾರು ಯಾರಿಲ್ಲಿ?

4.5

ಫ್ಯಾಷನ್ ಶೋನಲ್ಲಿ 
ಹಾಕಲೇ ಇಲ್ಲವೆಂಬಂತೆ
ಬಟ್ಟೆ ತೊಟ್ಟು ಜಗಕ್ಕೆ ಮೈಯೊಡ್ಡುವ 
ಚರ್ಮ ಎಲುಬುಗಳ ಸುಂದರಿಯರು(?);
ದಾರಿಯ ಬದಿಯಲ್ಲಿ
ಬಟ್ಟೆಯೇ ನೋಡದ 
ರಸ್ತೆ ಅಗೆಯುವ ಕಾರ್ಮಿಕಳ 
ಆ ಸಣ್ಣ ಮಗು 
ನಗ್ನ ಯಾರಿಲ್ಲಿ??
ಹಾರ್ಲೆಕ್ಸ್, ಬೂಸ್ಟ್ ಕುಡಿದು
ಅನುದಿನ ಓದಿ ಕಲಿತು
ಪ್ರಥಮ ಪ್ರಶಸ್ತಿ ಗಿಟ್ಟಿಸಿದ 
ಬೋರ್ಡಿಂಗ್ ಶಾಲೆಯ ವಿದ್ಯಾರ್ಥಿ;
ಹೆತ್ತವರ ಮುಖವೇ ನೋಡದ
ಕ್ರೂರ ಜಗವನು ಮೆಟ್ಟಿ ನಿಂತು 
ದಿನ ದಿನ ಬದುಕುಳಿದ 
ಆ ಬೂಟ್ ಪಾಲಿಷ್ ಹುಡುಗ
ಪ್ರತಿಭಾವಂತ ಯಾರಿಲ್ಲಿ??
ಕೋಟಿಗಳನ್ನು ನುಂಗಿ ಜೀರ್ಣಿಸಿ 
ಚಪ್ಪಲಿ ಹಾಕದೇ, ಮನೆ ಮನೆಗೆ ಹೋಗಿ
ಕೈಮುಗಿದು, ಕೃತಕವಾಗಿ ನಕ್ಕು
ಅಧಿಕಾರ ಗದ್ದುಗೆಗೇರಿದ ಮಂತ್ರಿ;
ಜನನಿಬಿಡ ದಾರಿಯಲ್ಲಿ
ಒಂದು ಹೊತ್ತಿನ ಬ್ರೆಡ್ದಿಗಾಗಿ
ಶಾಲು ಹರಡಿ ಮೌನವಾಗಿ ಕುಳಿತಿರುವ
ಆ ಅಂಗವಿಕಲ
ಭಿಕ್ಷುಕ ಯಾರಿಲ್ಲಿ??
ದೇವನ ಹೆಸರಿನಡಿಯಲ್ಲಿ
ತನ್ನ ಕಾಮದ ಗರಡಿಯಲ್ಲಿ
ಅಶ್ಲೀಲತೆ ಮೆರೆಯುವ ಸ್ವಾಮಿ;
ಅಲ್ಪ ಸಾಲ ತೀರಿಸಲಾಗದೆ
ಆತ್ಮಸಾಕ್ಷಿಯು ಬೆಂಬಿಡದೆ ಕಾಡಿ
ಆತ್ಮಹತ್ಯೆಗೆ ಶರಣಾದ 
ಆ ಬಡ ರೈತ
ನಿಷ್ಠ ಯಾರಿಲ್ಲಿ??
ಸಹಸ್ರಾರು ಕೋಟಿ, ನೂರಾರು-
ಕಂಪೆನಿಗಳು, ವಶದಲಿದ್ದರೂ
ಉಳಿದುದೊಂದು ನನಗೇ ಬೇಕೆಂದು
ಕಚ್ಚಾಡುತ್ತಿರುವ ಸಹೋದರರು;
ದಿನವಿಡೀ ಬೆವರು ಸುರಿಸಿ
ದುಡಿದು ತಂದ ರೊಟ್ಟಿಯನ್ನು
ಸಮಪಾಲು ಹಂಚಿ, ಉಂಡು ಮಲಗುವ
ಆ ಜೋಪಡಿ ಕುಟುಂಬ
ಬಂಧು ಯಾರಿಲ್ಲಿ??
-ಶಫಿ 

ಫ್ಯಾಷನ್ ಶೋನಲ್ಲಿ

 ಹಾಕಲೇ ಇಲ್ಲವೆಂಬಂತೆ

ಬಟ್ಟೆ ತೊಟ್ಟು ಜಗಕ್ಕೆ ಮೈಯೊಡ್ಡುವ 

ಚರ್ಮ ಎಲುಬುಗಳ ಸುಂದರಿಯರು(?);

ದಾರಿಯ ಬದಿಯಲ್ಲಿ

ಬಟ್ಟೆಯೇ ನೋಡದ 

ರಸ್ತೆ ಅಗೆಯುವ ಕಾರ್ಮಿಕಳ 

ಆ ಸಣ್ಣ ಮಗು 

ನಗ್ನ ಯಾರಿಲ್ಲಿ??

ಹಾರ್ಲೆಕ್ಸ್, ಬೂಸ್ಟ್ ಕುಡಿದು

ಅನುದಿನ ಓದಿ ಕಲಿತು

ಪ್ರಥಮ ಪ್ರಶಸ್ತಿ ಗಿಟ್ಟಿಸಿದ 

ಬೋರ್ಡಿಂಗ್ ಶಾಲೆಯ ವಿದ್ಯಾರ್ಥಿ;

ಹೆತ್ತವರ ಮುಖವೇ ನೋಡದ

ಕ್ರೂರ ಜಗವನು ಮೆಟ್ಟಿ ನಿಂತು 

ದಿನ ದಿನ ಬದುಕುಳಿದ

ಆ ಬೂಟ್ ಪಾಲಿಷ್ ಹುಡುಗ

ಪ್ರತಿಭಾವಂತ ಯಾರಿಲ್ಲಿ??

ಕೋಟಿಗಳನ್ನು ನುಂಗಿ ಜೀರ್ಣಿಸಿ

 ಚಪ್ಪಲಿ ಹಾಕದೇ, ಮನೆ ಮನೆಗೆ ಹೋಗಿ

ಕೈಮುಗಿದು, ಕೃತಕವಾಗಿ ನಕ್ಕು

ಅಧಿಕಾರ ಗದ್ದುಗೆಗೇರಿದ ಮಂತ್ರಿ;

ಜನನಿಬಿಡ ದಾರಿಯಲ್ಲಿ

ಒಂದು ಹೊತ್ತಿನ ಬ್ರೆಡ್ದಿಗಾಗಿ

ಶಾಲು ಹರಡಿ ಮೌನವಾಗಿ ಕುಳಿತಿರುವ

ಆ ಅಂಗವಿಕಲ

ಭಿಕ್ಷುಕ ಯಾರಿಲ್ಲಿ??

ದೇವನ ಹೆಸರಿನಡಿಯಲ್ಲಿ

ತನ್ನ ಕಾಮದ ಗರಡಿಯಲ್ಲಿ

ಅಶ್ಲೀಲತೆ ಮೆರೆಯುವ ಸ್ವಾಮಿ;

ಅಲ್ಪ ಸಾಲ ತೀರಿಸಲಾಗದೆ

ಆತ್ಮಸಾಕ್ಷಿಯು ಬೆಂಬಿಡದೆ ಕಾಡಿ

ಆತ್ಮಹತ್ಯೆಗೆ ಶರಣಾದ

ಆ ಬಡ ರೈತ

ನಿಷ್ಠ ಯಾರಿಲ್ಲಿ??

ಸಹಸ್ರಾರು ಕೋಟಿ, ನೂರಾರು-

ಕಂಪೆನಿಗಳು, ವಶದಲಿದ್ದರೂ

ಉಳಿದುದೊಂದು ನನಗೇ ಬೇಕೆಂದು

ಕಚ್ಚಾಡುತ್ತಿರುವ ಸಹೋದರರು;

ದಿನವಿಡೀ ಬೆವರು ಸುರಿಸಿ

ದುಡಿದು ತಂದ ರೊಟ್ಟಿಯನ್ನು

ಸಮಪಾಲು ಹಂಚಿ, ಉಂಡು ಮಲಗುವ

ಆ ಜೋಪಡಿ ಕುಟುಂಬ

ಬಂಧು ಯಾರಿಲ್ಲಿ??

-ಶಫಿ 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಖಂಡಿತ ಏನು ಪ್ರತಿಕ್ರಿಯೆ ನೀಡಬೇಕೆಂದು ತಿಳಿಯುತ್ತಿಲ್ಲ ಶಫಿ ಯವರೇ , ಇಷ್ಟಂತೂ ಹೇಳಬಲ್ಲೆ ನಿಮ್ಮ ಹೋಲಿಕೆ ಮತ್ತು ವಿಶ್ಲೇಷಣೆ ಚಿಂತೆ ಹಚ್ಚುವುದಂತು ಖಂಡಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜಕ್ಕು ಅಧ್ಬುತ..ಹೋಲಿಕೆ...ಇಷ್ಟವಾದ ಕವನ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಫಿ ಅವರೇ, ಈ ಕವನಕ್ಕಾಗಿ ನಿಮಗೊಂದು ಸಲಾಂ! ಇನ್ನೊಂದಿಷ್ಟು ಒಪ್ಪ ಮಾಡಿದರೆ, ಸಂಪದದಲ್ಲಿನ ಅತಿ ಶ್ರೇಷ್ಠ ಕವನಗಳಲ್ಲಿ ಒಂದಾಗಬಲ್ಲುದು ಎಂದು ನನ್ನ ಅನಿಸಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲದೂ ತುಂಬಾ ಚೆನ್ನಾಗಿದೆ. ಬಂಧು ಯಾರಿಲ್ಲಿ?? ಹೆಚ್ಚು ಇಷ್ಡ ಆಯ್ತು. ಧನ್ಯವಾದಗಳೊಂದಿಗೆ, -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ ಶಫಿ ಅವರೇ ...ತುಂಬಾ ಇಷ್ಟವಾಯಿತು.. -ಪ್ರದೀಪ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತು೦ಬಾ ಇಷ್ಟವಾದ ಕವಿತೆ. ನೀವು ಹೋಲಿಸಿದ ರೀತಿಯ೦ತೂ ಮನಮುಟ್ಟುವ೦ತಿದೆ.ಬಹಳ ದಿನಗಳ ನ೦ತರ ಉತ್ತಮ ಕವಿತೆ ಓದಿದ ಅನುಭವವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನನ್ನು ಬಹಳವಾಗಿ ಕಾಡುವ ಸಮಾಜದ ಎರಡು ಮುಖಗಳಿವು... ಕವನ ರೂಪದಲ್ಲಿ ಹಂಚಿಕೊಂಡೆ... ಓದಿ ಮೆಚ್ಚಿದ ಎಲ್ಲರಿಗೂ ನಾ ಆಭಾರಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲವನ್ನು ನೋಡಿದಾಗ ಮನದಲ್ಲಿ ಇಂಥದೇ ಭಾವನೆಗಳು ಮತ್ತೆ ಮತ್ತೆ ಮೂಡುವುದು ಸಹಜ. ಆದರೆ ಇದೇ ಬದುಕು ಇದೇ ಪ್ರಪಂಚ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಫಿಯವರೇ, ನಿಮ್ಮ ಕವನ ಬಹಳ ಚೆನ್ನಾಗಿ ಮೂಡಿ ಬಂದಿದೆ ನೀವು ಇನ್ನು ಚೆನ್ನಾಗಿ ಬರೆಯುವ ಸಾದ್ಯತೆ ಸಜವಗಿಯೇ ನಿಮ್ಮೊಳಗಿನ ಕವಿಮನಸ್ಸಿಗಿದೆ ಮುಂದುವರೆಸಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಹಾ ! ಶಫೀಯವರೇ ನೀವು ವಿಶ್ಲೇಷಿಸಿದ ರೀತಿ ನಿಜಕ್ಕೂ ಚೆನ್ನಾಗಿದೆ. - ಸದಾನಂದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.