ಟ್ರಾನ್ಸಿಸ್ಟರ್.

3.5

ದೊಡ್ಡ ದೊಡ್ಡ ಅಂಕಣಗಳನ್ನು ಬರೆಯಲು ಸ್ವಲ್ಪ ತಾಳ್ಮೆ ಬೇಕು. ನನ್ನಂತವರಿಗೆ ಅದು ಇರೋದಿಲ್ಲ.
ಅದಕ್ಕೆ ಅಲ್ಲಲ್ಲಿ , ಆ ಕ್ಷಣಕ್ಕೆ ನನ್ನ ಮನಸ್ಸಿಗೆ ಬಂದ ನನ್ನ ಕ್ಷೇತ್ರದ ಪದಗಳನ್ನು ಇಲ್ಲಿ ಬರೆಯಲು ಪ್ರಯತ್ಣ ಮಾಡುತ್ತಿದ್ದೇನೆ.

ಇವತ್ತು... ಟ್ರಾನ್ಸಿಸ್ಟರ್.

ಸಿಂಪಲ್ ಆಗಿ ಹೇಳಬೇಕು ಅಂದ್ರೆ ಇದು ಒಂದು switch.

"ಪ್ರಸಾರ" ಮತ್ತು "ತಡೆ" ( Trasfer ಅಂಡ್ Resist => Transist )
ಹೇಗೆ Resist ಮಾಡುವುದು Resistor .. ಹಾಗೆ Transist ಮಾಡುವುದು ಟ್ರಾನ್ಸಿಸ್ಟರ್ :)

ಆನ್ ಆಗಿದ್ದಾಗ ಸಂದೇಶವನ್ನು ( ಕರೆಂಟ್ ಅತ್ವ ವೊಳ್ಟೇಜು) ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತದೆ ( Transfers) . off ಆಗಿದ್ದಾಗ ಈ ಸಂದೇಶದ ಸಾಗಣೆಗೆ ತಡೆ ಒಡ್ಡುತ್ತದೆ(resists). ಮೂಲತಹ ಡಿಜಿಟಲ್ { ೦ ( off) ಮತ್ತು ೧(on) ಸಂಕೆತಗಳಿಂದ ಮಾತ್ರ ಕೆಲಸಮಾದುವಂತಹುದು!} ವಸ್ತುವಾದ ಈ ಟ್ರಾನ್ಸಿಸ್ಟರ್ ಅನ್ನು analog applications ಗಳಿಗೂ ಹೆಚ್ಚಾಗು ಬಳಸುತ್ತಾರೆ. ನಾನು ಕೆಲಸ ಮಾಡುತ್ತಿರುವದು ಇದೇ ಕ್ಷೇತ್ರವಾದರೂ ಕನ್ನಡದಲ್ಲಿ analog ರೀತಿಯ ಕೆಲಸವನ್ನು ವಿವರಿಸಲು ಬಹಳ ಕಷ್ಟ.

ನಾವು ಕಾಲೇಜಿನಲ್ಲಿ ಓದಿರುವ BJT ಗಳು ಇಂದಿನ IC ಗಳಲ್ಲಿ ಇಲ್ಲವೇನೋ ಎಂಬಷ್ಟು ಕಡಿಮೆ ಬಳಕೆಯಾಗುತ್ತವೆ. BJT ಗಳಲ್ಲದೇ ಇನ್ನೊಂದು ರೀತಿಯ ಟ್ರಾನ್ಸಿಸ್ಟರ್ ಗಳಿವೆ. MOSFET( Metal Oxide Semiconductor Field Effect Transistor) ಅಂತೀವಿ. ಇಂದಿನ ಎಲ್ಲ IC ಗಳ ಜೀವಾಳ ( ಹೃದಯ)ಗಳು ಈ MOSFET ಗಳು.

FET ಕಂಡು ಹಿಡಿದವನು. ..... ಡಾ!. ಜ್ಯುಲಿಯಸ್ ಲಿಲಿಯೆನ್ ಫೀಲ್ಡ್

BJT ಗಿಂತ ಬಹಳ ಮುಂಚೆನೇ FET ( ೧೯೨೬) ಕಂಡು ಹಿಡಿದಿದ್ದರೂ ಬಹಳಷ್ಟು ದಿನ ಇದು ಅಜ್ನಾತವಾಸದಲ್ಲಿತ್ತು. ಸುಮಾರು ೬೦ನೆ ದಶಕದಲ್ಲಿ ಮತ್ತೆ ಹೆಚ್ಚಿನ ( Inegrated Circuit ಗಳಲ್ಲಿ ) ಬಳಕೆಗೆ ಬಂತು. ಹೀಗಂತೂ ಮಾಸ್ ಫೆಟ್ಗಳು BJT ಗಳನ್ನು ಹಿಂದಿಕ್ಕಿ ಒಂದು ಚಿಪ್ ನ ಬಹುತೇಕ ಸ್ತಳವನ್ನು ಆಕ್ರಮಿಸಿ ಕೂತಿವೆ.

ಇನ್ನು ಈ ಮಾಸ್ ಫೆಟ್ಗಳಲ್ಲಿ ಎರಡು ರೀತಿ. p-ಮಾಸ್ ಮತ್ತು n-ಮಾಸ್ ಟ್ರಾನ್ಸಿಸ್ಟರ್ ಎಂದು.

n-ಮಾಸ್ ಟ್ರಾನ್ಸಿಸ್ಟರ್ ಗಳಲ್ಲಿ ( n ಅಂದ್ರೆ negative ) ಎಲೆಕ್ತ್ರಾನ್ ಗಳು ವಿದ್ಯುತ ಹರಿಯಲು ಕಾರಣವಾಗುತ್ತವೆ. ( electron are charge carriers).
p-ಮಾಸ್ ಟ್ರಾನ್ಸಿಸ್ಟರ್ ಗಳಲ್ಲಿ ( p ಅಂದ್ರೆ positive ) ಹೋಲ್ ಗಳು ವಿದ್ಯುತ ಹರಿಯಲು ಕಾರಣವಾಗುತ್ತವೆ. ( holes are charge carriers). ಈ p-ಮಾಸ್ ಟ್ರಾನ್ಸಿಸ್ಟರ್ ಗಳು n-ಮಾಸ್ ಗೆ ಹೋಲಿಸಿದರೆ ಸ್ವಲ್ಪ ನಿಧಾನ.

ಮುಂದೆ ಈ ಸ್ವಿಚ್ಚು ಹೇಗೆ on ಮತ್ತು off ಆಗುತ್ತೆ ಅಂತ ಬರೆಯಕ್ಕೆ ಟ್ರೈ ಮಾಡ್ತೀನಿ!. ಇವುಗಳ ವಿಶೇಷ ಏನು ಅಂತ ಮುಂದೆ ಇದೇ ಬರಹಕ್ಕೆ ಸೇರಿಸುತ್ತಾ ಹೋಗುತ್ತೇನೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸವಿತ್ರು(ನೇಸರ),

ಸಕ್ಕತ್ ಕಣಪ್ಪ...ಮುಂದುವರೆಸು

ಸೇರಿಪು (addendum):-
BJT- Bipolar Junction Transistor
ಎರಡು ಜೋಡಣೆಯಿರುವ ಟ್ರಾನ್ಸಿಸ್ಟರ್ (ಎಜೊಟಿ)

ಅದ್ಯಾಕೊ ಕಾಣೆ ನಂಗೆ ಎಜೊಟಿ ನೆ ಇಶ್ಟ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>BJT- Bipolar Junction ಟ್ರಾನ್ಸಿಸ್ಟರ್ ಎರಡು ಜೋಡಣೆಯಿರುವ ಟ್ರಾನ್ಸಿಸ್ಟರ್ (ಎಜೊಟಿ)

ಇಲ್ಲಿ ಜೋಡಣೆ ಪದ ತಪ್ಪಾಗುತ್ತದೆ.
bi-polar =>> ಎರಡೂ ರೀತಿಯ "ಚಾರ್ಜ್" ( ಎಲೆಕ್ತ್ರಾನ್ಸ್ ಮತ್ತು ಹೊಲ್ಸ್) ಗಳು ವಿದ್ಯುತ್ ಹರಿಯಲು ಕಾರಣವಾಗುವುದರಿಂದ ಈ ರೀತಿಯ ಹೆಸರು. polarity ಗೆ ಕನ್ನಡದ ಪದವನ್ನು ತಿಳಿದವರು ಬರೆಯಿರಿ.

>ಅದ್ಯಾಕೊ ಕಾಣೆ ನಂಗೆ ಎಜೊಟಿ ನೆ ಇಶ್ಟ.

ಎರಡಕ್ಕೂ ತನ್ನದೇ ಆದ ಉತ್ತಮ ಗುಣಗಳಿವೆ . ಆದ್ರೆ ಮಾಸ್ಫೆಟ್ನ ಗಾತ್ರವನ್ನು ಕುಗ್ಗಿಸಲು ಸಹಾಯಕವಾಗುವ ಗುಣ ( scalability) ಮತ್ತು ಸೊನ್ನೆ Gate current , BJT ಯ ಉಳಿದ ವಲ್ಲ ಗುಣಗಳಿಗಿಂತ ಆಕರ್ಷಕ.

ತಂತ್ರಜ್ಞಾನ 90nm, 65nm,35nm.. ಹೀಗೆ ಕಿರಿದಾದಂತೆ BJT ಯ ಕಡೆ ಮತ್ತೆ ಆಸಕ್ತಿ ಹೊರಳುತ್ತಿದೆ.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೇಸರ,
ಅಲ್ಲಿರುವುದು ಎರಡು ತರದ ಚಾರ್ಜ್ ದಿಟ. ಆದ್ರೆ ಅದರಲ್ಲಿ ಎರಡು p-n junction(ಜೋಡಣೆಗಳು) ಇರುವುದು ಅಶ್ಟೆ ದಿಟ.
ಎರಡು ಜೋಡಣೆ ಅಂದರೆ bipolar junction ಅಲ್ಲ, bi-junction ಅಂತ ವಸಿ ಸರಳಿಸಿ ಹೇಳಿದಾಗ ಆಗುತ್ತದೆ ಆಟೆ.
ಈ ಸರಳಿಸುವಿಕೆ ಅರ್ತ ಬೇರೆಯಾಗಿಲ್ಲ ಆದರೆ ಸರಳಗೊಂಡಿದೆ ಅಂತ ನನ್ನ ಅನಿಸಿಕೆ

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.