ನುಡಿ - ಪ್ರಶ್ನೆ 4

0

ಕನ್ನಡ ಭಾಷೆಯ "ಅಸ್ತಿತ್ವ" ವನ್ನು "ಖಚಿತ" ವಾಗಿ ತಿಳಿಸುವ ಮೊದಲ  ಆಧಾರ ಯಾವುದು? ಅದರ ವಿಷಯಯವೇನು?

 

 

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಲ್ಮಿಡಿ ಶಾಸನ - ಕ್ರಿಸ್ತಶಕ 450 ಆಸುಪಾಸಿನಲ್ಲಿ ಬರೆಯಿಸಿದ್ದು. ಕದಂಬ ರಾಜ ಕಾಕುಸ್ಥ ವರ್ಮನ ಹೆಸರ ಉಲ್ಲೇಖವಿದೆ. ಕದಂಬ ಮತ್ತು ಪಲ್ಲವ ರ ನಡುವೆ ನಡೆದ ಯುದ್ಧದಲ್ಲಿ ಶೌರ್ಯ ತೋರಿದ ವಿಜರಸನೆಂಬ ಸೈನಿಕನಿಗೆ ಹಲ್ಮಿಡಿ ಮತ್ತು ಮಳವಳ್ಳಿ (?) ಎಂಬ ಎರಡು ಹಳ್ಳಿಗಳನ್ನು ಉಂಬಳಿಯಾಗಿ ಕೊಟ್ಟದ್ದನ್ನು ಹೇಳುತ್ತದೆ. ಇತ್ತೀಚಿಗೆ ಪುದುಕೊಟ್ಟೈನಲ್ಲಿ ದೊರಕಿದ ಕ್ರಿಸ್ತಪೂರ್ವ ಎರಡನೇ ಶತಮಾನದ ತಮಿಳು ಶಾಸನವೊಂದರಲ್ಲಿ ಕೆಲ ಕನ್ನಡ ಶಬ್ದಗಳು ಕಂಡು ಬಂದಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕರ್ ನನಗು ಕನ್ನಡದಲ್ಲಿ ಹಲ್ಮಿಡಿ ಶಾಸನವೇ ಅತ್ಯಂತ ಹಳೆಯ ಕನ್ನಡ ಶಾಸನ ಎಂದು ತಿಳಿದಿದ್ದೆ... ಪುದುಕೊಟ್ಟೈ ಶಾಸನದ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಿದರೆ ಚೆನ್ನ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೆಡ್ಡಿಯವರೇ, ನಿಮ್ಮ ಆಸಕ್ತಿ, ಪ್ರತಿಕ್ರಿಯೆಗಳಿಗೆ ನನ್ನಿ. ಪ್ರೊಫೆಸರ್ ಎ.ವಿ. ನರಸಿಂಹಮೂರ್ತಿ, ಮೈಸೂರು ವಿಶ್ವವಿದ್ಯಾಲಯದ ವಿಭಾಗವಾದ ಪ್ರಾಚೀನ ಚರಿತ್ರೆ ಮತ್ತು ಉತ್ಖನನ ಶಾಸ್ತ್ರದ ಮಾಜಿ ಮುಖ್ಯಸ್ತರು, ಇವರ ಬರಹದಿಂದ ಎತ್ತಿಕೊಂಡ ಮಾಹಿತಿ. ಮೂಲ ಇಲ್ಲಿದೆ. http://www.ourkarnat... "Antiquity of Kannada: Recently some Tamil inscriptions were found at Sittannavasal in Pudukottai district. These inscriptions contained some Kannada words like Gavudi, hosilu, tenku etc. The date of these inscriptions is second century BC. Hence occurrence of these Kannada words in DISTANT Pudukottai is significant. In addition to all these, some early coins have also been discovered. Marshalling all these facts, some important points emerge. Kannada as a literary language was already in vogue during the centuries of pre - Christian era .It was not just localised in the area but had become well known in far South and had even attracted foreign notices. Halmidi inscription is just a firm point in this stage and many more centuries of evolutionary process should have taken place to arrive at the stage of Halmidi record. Thus Halmidi inscription is an important and significant pointer to understand the antiquity of Kannada language. A Kannada record of pre - Halmidi date is bound to be discovered with proper efforts. That should be the aim of future explorations in the field."
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕರ್ ... ವಿವರಗಳಿಗೆ ನನ್ನಿ... ಒಂದು ಭಾಷೆಗೆ ಹೋಲುವ ಪದಗಳು ಇನ್ನೊಂದು ಭಾಷೆಯಲ್ಲಿ ಕಾಣುವುದು ಸಾಮಾನ್ಯ.. ಅದರಲ್ಲು ದ್ರಾವಿಡ ಭಾಷೆಗಳು ಒಂದು ಕಾಂಡದ ಹಲವು ಬಳ್ಳಿಗಳಾದ್ದರಿಂದ ಈ ರೀತಿಯ ಹೋಲಿಕೆ ಕಂಡುಬರುವುದರಲ್ಲಿ ವಿಶೇಷ ಅನಿಸುವುದಿಲ್ಲ. ಕ್ರಿಸ್ತ ಪೂರ್ವದಲ್ಲಿ ಕನ್ನಡ ಲಿಪಿಯಾಗಿ ಬಳಕೆ ಇರುವುದರ ಬಗ್ಗೆ ಬೇರೆ ಏನಾದರು ಮಾಹಿತಿ ಸಿಗಬಹುದಾ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸಕ್ತಿ ತೋರಿದ ಶ್ರೀಕರ್ ಮತ್ತು ಮಂಜುನಾಥರಿಗೆ ಧನ್ಯವಾದಗಳು. ಸಂಬಂದಪಟ್ಟ ಲೇಖನ http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.