ದ್ರಾವಿಡ ನುಡಿ ಕೂಟ

3 

ದ್ರಾವಿಡ ನುಡಿಗಳು ಸಂಸ್ಕೃತದಿಂದ ಹುಟ್ಟಿಲ್ಲ, ಮತ್ತು ಅವು ಬೇರೆಯದೇ ಭಾಷಾ ವರ್ಗಕ್ಕೆ ಸೇರಿವೆ ಅಂತ ಮೊತ್ತಮೊದಲಿಗೆ ಪ್ರದಿಪಾದಿಸಿದ ವ್ಯಕ್ತಿ ಯಾರು?.

 

ಅನ್ನೋ ಪ್ರಶ್ನೆಗೆ ಹಲವರು ಪ್ರತಿಕ್ರಿಯಿಸಿದರು. ಇಂತ ಸಂದರ್ಭದಲ್ಲೂ ತಲೆಗೆ ಬಂದ ಕೆಲ ಮಾತುಗಳು.

................................

> 1816 ರಲ್ಲಿ  Alexander D. Campbell ನ    " A grammer of the teloogoo language  " ಅನ್ನುವ ಪ್ರಬಂಧ  / ಪುಸ್ತಕದಲ್ಲಿ ಈ ವಿಷಯ ಬರುತ್ತೆ.

>  Sir. Francis White Ellis ಈ ಬಗ್ಗೆ ತನ್ನ ವಾದವನ್ನು ಇಡುತ್ತಾನೆ. 

> ೧೮೫೬ ರಲ್ಲಿ Robert Caldwell ತನ್ನ Comparative grammar of the Dravidian or South-Indian family of languages ನಲ್ಲಿ ಇದಕ್ಕೆ ತಕ್ಕ ಪುರಾವೆ ಒದಗಿಸಿ ಈ ವಾದವನ್ನು ಗಟ್ಟಿಗೊಳಿಸಿದ. 

>ಈಗಂತೂ ದ್ರಾವಿಡ ಭಾಷೆಗಳು ಬೇರೆಯದೇ ವರ್ಗದ ಭಾಷೆಗಳು ಅಂತ ಎಲ್ಲ ಭಾಶತಜ್ನರೂ ಒಪ್ಪಿಕೊಂಡಿದ್ದಾರೆ.  

 

..........................................................

 

ಸ್ವಲ್ಪ ಒಗ್ಗರಣೆ.

> ಇದಕ್ಕೂ ಮುಂಚೆ ಎಲ್ಲ ಭಾರತೀಯ ಭಾಷೆಗಳೂ ಸಂಸ್ಕೃತದಿಂದ ( ಇಂಡೋ ಯೂರೋಪಿಯನ್ ಭಾಷ ವರ್ಗ) ಹುಟ್ಟಿವೆ ಅಂತ ಪುರಾಣ ಪುಣ್ಯ ಕಥೆಗಳು ಸಾರುತ್ತಾ ಇದ್ದವು. 

>ಪುರಾಣ ಪುಣ್ಯಕಥೆಗಳನ್ನು, ಅಲ್ಲಿನ ಕೆಲ ಪಾತ್ರಗಳ ಮ್ಯಾಜಿಕ್ ಗಳನ್ನು  ಪರಮ ಸತ್ಯವೆಂದೂ ನಂಬಿಕೊಂಡ ಬಂದ ನಮ್ಮ ಜನ ಅಂತದೆ ಜನರೇಳಿದ  ಸಂಸ್ಕೃತವೆ  ಎಲ್ಲ ಭಾಷೆಗಳಿಗೂ ತಾಯಿ ಅನ್ನೋ ಕಥೆ ಯನ್ನು ಅಕ್ಷರಶ: ನಂಬಿಬಿಟ್ಟರು.

>ಈಗಲೂ ಸಂಸ್ಕೃತವೇ ದೇವ ಭಾಷೆ , ಇತರ ಭಾಷೆಗಳು ಕೀಳು / ಅಪಬ್ರಂಶ ವಷ್ಟೇ ಅನ್ನೋ ಮೂರ್ಖರೂ, ಮತ್ತು ಕನ್ನಡವೂ ಸೇರಿದಂತೆ ಅನ್ಯ ಭಾಷೆಗಳನ್ನು ಸಂಸ್ಕೃತಕ್ಕೆ ತಕ್ಕಂತೆ ಹೊಂದಿಸಿಕೊಂಡು ಬಳಸುವ ಒತ್ತಡ ಹೇರುವ, ಸಂಸ್ಕೃತ ಶೈಲಿಯಲ್ಲಿ ಮಾತನಾಡದ ಜನರನ್ನು ಕೆಳಜಾತಿ  ಅಂತ ಮೂದಲಿಸುವ ಪರಮ ಮೌಡ್ಯರು ಅನಾಗರೀಕ ಜನರೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

>ಸಾಮಾನ್ಯರನ್ನು ಬಿಟ್ಟು ಹಾಕಿ... ನಮ್ಮ ಹೆಮ್ಮೆಯ ಕೇಶಿರಾಜನೆ ಕನ್ನಡ ಸಂಸ್ಕೃತದಿಂದ ಹುಟ್ಟಿದೆ ಅನ್ನೋ ಭ್ರಮೆ ಇಟ್ಟುಕೊಂಡು ತನ್ನ ಶಬ್ದ ಮಣಿ ದರ್ಪಣವನ್ನು ಬರೆದಿದ್ದಾನೆ  ಅನ್ನುವ ವಾದ ಇದೆ.

>ನಮ್ಮ ಕನ್ನಡದ ಎಲ್ಲ ಹಿಂದಿನ ಲಾಕ್ಷಣಿಕರೂ , ವೈಯಾಕರನಿಗಳೂ ಸಂಸ್ಕೃತವೇ ಕನ್ನಡದ ತಾಯಿ ಭಾಷೆ ಅಂದು ನೇರವಾಗಿ / ಪರೋಕ್ಷವಾಗಿ ಒಪ್ಪಿಕೊಂಡು , ಸಂಸ್ಕೃತಕ್ಕೆ ಹೊಂದಿಸ್ಕೊಂಡು ಕನ್ನಡ ವ್ಯಾಕರಣವನ್ನು ಬರೆದಿದ್ದಾರೆ. 

>ನಮ್ಮ ಶಾಲೆಗಳಲ್ಲೂ ಹಿಂದಿಗೂ ಕನ್ನಡ ಭಾಷೆಯ ವಿಷಯದಲ್ಲಿ ಕನ್ನಡ ವ್ಯಾಕರಣದ ಬದಲು ಸಂಸ್ಕೃತ ವ್ಯಾಕರಣವನ್ನೇ ಕಲಿಸುತ್ತಾರೆ. ಇನ್ನು ಈ ಕನ್ನಡದಲ್ಲಿ?! ಬರೆದ ವಿಜ್ಞಾನದ technical words ಗಳೆಲ್ಲವೂ ಸಂಸ್ಕೃತವೇ.. ನನಗಂತೂ ಈ ಕನ್ನಡದಲ್ಲಿನ (?)  ವಿಜ್ಞಾನ ಕಬ್ಬಿಣದ ಕಡಲೆ. 

>ನಾವು ಕನ್ನಡಿಗರು ಇಷ್ಟು ದಿನ ಸಂಸ್ಕೃತವನ್ನು ಕನ್ನಡದ ತಲೆ ಮೇಲೆ ಇಟ್ಟು ಕೀಳಿರಿಮೆಯಿಂದ ನರಳಿದದಾಯ್ತು. ಇನ್ನು ಮುಂದಾದರೂ ನಮಗೆ ನಮ್ಮದೇ ಆದ ಪರಂಪರೆ, ಹಿನ್ನಲೆ ಇದೆ, ಸಂಸ್ಕೃತದ ಹಂಗು ಇಲ್ಲ ಅಂತ ಸಾರಿ ಸಾರಿ ಹೇಳುವ ಅವಕಾಶ ಇತ್ತೀಚಿಗೆ ನಮಗೆ ಸಿಕ್ಕಿದೆ. 

>ಕನ್ನಡವನ್ನು ಸಂಸ್ಕೃತದ (ದೈವ ಭಾಷೆ ಅನ್ನೋ ಹೆಸರಲ್ಲಿ) ಕೆಳಗೆ ಹಾಕಿ ,ಸಂಸ್ಕೃತ ಬಲ್ಲದವರನ್ನು ತುಂಬಾ ಕೀಳಾಗಿ ಕಂಡ / ಕಾಣುವ ಒಂದು ಕ್ಷುದ್ರ ಪರಂಪರೆಯೇ ನಮ್ಮಲ್ಲಿದೆ. ಅಂತವರಿಗೆ ಬುದ್ದಿ  ಹೇಳುವ ಶಕ್ತಿ ಕನ್ನಡಿಗರಿಗೆ ಬರಲಿ. 

>"ದೇವ ಭಾಷೆ"ಯ ಎದುರು "ಶಿವ ಭಾಷೆ" ಹೆಮ್ಮೆಯಿಂದ ಮೆರೆಯಬೇಕು. ಇನ್ನು ಮುಂದಾದರೂ ಈ ಪ್ರಯತ್ನಗಳು ಸಾಗಲಿ.

 

  

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸವಿತೃ ಅವರೇ ವಿಷಯದ ಒಟ್ಟು ತಿರುಳನ್ನು ಚೆನ್ನಾಗಿ ತಿಳಿಸಿದ್ದೀರಿ. ಕನ್ನಡವು 'ಶಿವ ಭಾಷೆ' ಎಂಬುದರ ಬಗ್ಗೆ ಇನ್ನಷ್ಟು ವಿವರ ಕೊಡುತ್ತೀರಾ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃರವರೇ, ಕನ್ನಡವೇ ಮಾತೃಭಾಷೆ ಎನ್ನುವುದರ ಬಗ್ಗೆ ಇನ್ನೂ ಹೆಚ್ಚಿನ ಸ೦ಶೋಧನೆಯನ್ನು ಕೈಗೊ೦ಡಿಲ್ಲವೇ? ಯಾ ಪರಿಪೂರ್ಣವಾಗಿದ್ದಲ್ಲಿ ನಮಗೆ ಆ ಹೆಚ್ಚಿನ ಮಾಹಿತಿಗಳು ಎಲ್ಲಿ ಲಭಿಸುತ್ತವೆ? ನಾವು ಕನ್ನಡಿಗರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಎನ್ನುವುದು ಸತ್ಯವಾದ ಮಾತು. ವ೦ದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃ ಅವರೆ, ನಿಮ್ಮ ಬರಹ ನನ್ನಲ್ಲಿ ಒಂದೆರಡು ಪ್ರಶ್ನೆಗಳನ್ನು ಹುಟ್ಟುಹಾಕಿತು. >>> ಇದಕ್ಕೂ ಮುಂಚೆ ಎಲ್ಲ ಭಾರತೀಯ ಭಾಷೆಗಳೂ ಸಂಸ್ಕೃತದಿಂದ ( ಇಂಡೋ ಯೂರೋಪಿಯನ್ ಭಾಷ ವರ್ಗ) ಹುಟ್ಟಿವೆ ಅಂತ ಪುರಾಣ ಪುಣ್ಯ ಕಥೆಗಳು ಸಾರುತ್ತಾ ಇದ್ದವು. ಪುರಾಣಗಳಲ್ಲಿ ಈ ಬಗ್ಗೆ ಬರೆದಿರುವ ದಾಖಲೆ ಇದೆಯೇ? ಗೊತ್ತಿದ್ದರೆ ದಯವಿಟ್ಟು ತಿಳಿಸಿ. >>>ಸಾಮಾನ್ಯರನ್ನು ಬಿಟ್ಟು ಹಾಕಿ... ನಮ್ಮ ಹೆಮ್ಮೆಯ ಕೇಶಿರಾಜನೆ ಕನ್ನಡ ಸಂಸ್ಕೃತದಿಂದ ಹುಟ್ಟಿದೆ ಅನ್ನೋ ಭ್ರಮೆ ಇಟ್ಟುಕೊಂಡು ತನ್ನ ಶಬ್ದ ಮಣಿ ದರ್ಪಣವನ್ನು ಬರೆದಿದ್ದಾನೆ ಅನ್ನುವ ವಾದ ಇದೆ.’ ಇದರಲ್ಲಿ ವಾದದ ಪ್ರಶ್ನೆಯೇ ಇಲ್ಲ ಅನ್ನಿಸುತ್ತೆ. ಅವನು ಹಾಗೇ ತಿಳಿದಿದ್ದು, ಪದಗಳ ವ್ಯುತ್ಪತ್ತಿಯನ್ನೂ ಹಾಗೇ ತೋರಿಸುವ ಪ್ರಯತ್ನ ಮಾಡುತ್ತಾನೆಂದು ಓದಿದ್ದ ನೆನಪು ( ಶಬ್ದಮಣಿದರ್ಪಣವನ್ನು ನಾನು ನೇರವಾಗಿ ಓದಿಲ್ಲ) - ಉದಾಹರಣೆಗೆ "ಇದು ಪಾಪವೇ ಮೈದಾಳಿದಂತೆ ಇರುವುದರಿಂದ ಇದು ’ಪಾವು’" -> ಹಾವು ಇತ್ಯಾದಿ >>>ನಾವು ಕನ್ನಡಿಗರು ಇಷ್ಟು ದಿನ ಸಂಸ್ಕೃತವನ್ನು ಕನ್ನಡದ ತಲೆ ಮೇಲೆ ಇಟ್ಟು ಕೀಳಿರಿಮೆಯಿಂದ ನರಳಿದದಾಯ್ತು. ಕನ್ನಡದಲ್ಲಿ ಕವಿರಾಜಮಾರ್ಗದಿಂದ ೨೦ ನೇ ಶತಮಾನದವರೆಗಿನ ಬರವಣಿಗೆ ನೋಡಿದರೆ ಅಂತಹ ಕೀಳರಿಮೆಗೊಳಗಾದವರಂತೆ ಕಾಣುವುದಿಲ್ಲ ನನಗೆ. ಸಂಸ್ಕೃತದ ಪದಭಂಡಾರವನ್ನು ಬಹಳವಾಗಿ ಬಳಸುವ ಪುರಂದರದಾಸರಂಥವರ (ಅಥವಾ ಇತರ ದಾಸರೇ ಇರಲಿ) ಬರವಣಿಗೆಯಲ್ಲೂ ಕೂಡ ಸಂಸ್ಕೃತ ಶೈಲಿಯಲ್ಲದೆ, ಕನ್ನಡದ್ದೇ ಧಾಟಿಯೇ ಎದ್ದು ಕಾಣುತ್ತದೆ ಅಂತ ನನ್ನ ಅನಿಸಿಕೆ. >>>>ಇನ್ನು ಮುಂದಾದರೂ ನಮಗೆ ನಮ್ಮದೇ ಆದ ಪರಂಪರೆ, ಹಿನ್ನಲೆ ಇದೆ, ಸಂಸ್ಕೃತದ ಹಂಗು ಇಲ್ಲ ಅಂತ ಸಾರಿ ಸಾರಿ ಹೇಳುವ ಅವಕಾಶ ಇತ್ತೀಚಿಗೆ ನಮಗೆ ಸಿಕ್ಕಿದೆ. ’ಸಂಸ್ಕೃತದ ಹಂಗಿಲ್ಲ’ ಎಂದು ಸಾರಿ ಹೇಳುವ ಹೊಸದಾದ ಅವಕಾಶ ನಮಗೆ ದೊರೆತಿರುವುದು ಏನು ಅಂತ ತಿಳಿಯಲಿಲ್ಲ. ಸ್ವಲ್ಪ ವಿವರಿಸುವಿರಾ? >>>"ದೇವ ಭಾಷೆ"ಯ ಎದುರು "ಶಿವ ಭಾಷೆ" ಹೆಮ್ಮೆಯಿಂದ ಮೆರೆಯಬೇಕು. ಇನ್ನು ಮುಂದಾದರೂ ಈ ಪ್ರಯತ್ನಗಳು ಸಾಗಲಿ. ಇದರ ತಿಳಿವಾಗಲಿಲ್ಲ - ಶಿವಶರಣರ ನುಡಿಯೆಂದು ಶಿವ ಭಾಷೆ ಎಂದು ಹೇಳುತ್ತಿದ್ದೀರಾ? ಅಥವಾ ’ಒಳಿತನ್ನುಂಟು ಮಾಡುವ’ ಅನ್ನುವ ಅರ್ಥದಲ್ಲಿ ಹೇಳುತ್ತಿದ್ದೀರಾ? (ಶಿವ = ಮಂಗಳಕಾರಿ = ಒಳಿತನ್ನುಂಟುಮಾಡುವ, ಹಿತವಾದ) ಕಾಲ್ಡ್ವೆಲ್ ನಂತಹವರು ಮಾಡಿದ ಅಧ್ಯಯನವೇನೋ ಒಳ್ಳೆಯದೇ - ಆದರೆ ತಮಿಳು ನುಡಿಯೇ ದ್ರಾವಿಡ ನುಡಿಗಳಿಗೆಲ್ಲ ಮೂಲ ಅನ್ನುವ ಇನ್ನೊಂದು ತಪ್ಪು ತಿಳುವಳಿಕೆ ಮೂಡಿಸಿರುವುದೂ ಅಂತಹ ಅಧ್ಯಯನಗಳೇ ಅನ್ನುವುದೂ ನೆನಪಿಡಬೇಕಾದ ವಿಚಾರವೇ. -ಹಂಸಾನಂದಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಪುರಾಣಗಳಲ್ಲಿ ಈ ಬಗ್ಗೆ ಬರೆದಿರುವ ದಾಖಲೆ ಇದೆಯೇ? ಗೊತ್ತಿದ್ದರೆ ದಯವಿಟ್ಟು ತಿಳಿಸಿ. <<ಇಲ್ಲ ನನಗಂತೂ ಕಂಡು ಬಂದಿಲ್ಲ. ಆದರೆ ಈ ಪುರಾಣಗಳ ಬಗ್ಗೆ ಪುನ್ಖಾನುಪುನ್ಕವಾಗಿ ಮಾತನಾಡುವ ಜನರ ಬಾಯಲ್ಲಿ, / ಬರವಣಿಗೆಯಲ್ಲಿ ಈ ಮಾತನ್ನು ಕೇಳಿದ್ದೇನೆ / ಓದಿದ್ದೇನೆ. ಇದು ನಮ್ಮ ನಡುವಿನ "ಅತ್ಯಂತ ಜನಪ್ರಿಯ ನಂಬಿಕೆ". ಈ ನಂಬಿಕೆಯ ಮೂಲ ಯಾವುದು? ... ಅನ್ನುವುದು ನಿಮಗೆ ಮುಂದೆ ಯಾವತ್ತಾದರೂ ತಿಳಿದಾಗ ದಯವಿಟ್ಟು ಹಂಚಿಕೊಳ್ಳಿ. sanskrit is mother of all languages ಅನ್ನೋದು ಗೂಗಲಿಸಿ ನೋಡಿದರೆ ಈ ನಂಬಿಕೆ ಅದೆಷ್ಟು ಜನಪ್ರಿಯ ಅನ್ನೋದು ತಿಳಿಯುತ್ತೆ. ................................... >>ಅವನು ಹಾಗೇ ತಿಳಿದಿದ್ದು <<ನಿಜ ಪ್ರತಿಯೊಂದು ವಿಷಯದಲ್ಲೋ ಆಟ ಸಂಸ್ಕೃತ ವ್ಯಾಕರಣವನ್ನು ಆದರ್ಶವಾಗಿ ತೆಗೆದುಕೊಂಡಿದ್ದಾನೆ. ......................... >>ಕನ್ನಡದಲ್ಲಿ ಕವಿರಾಜಮಾರ್ಗದಿಂದ ೨೦ ನೇ ಶತಮಾನದವರೆಗಿನ ಬರವಣಿಗೆ ನೋಡಿದರೆ ಅಂತಹ ಕೀಳರಿಮೆಗೊಳಗಾದವರಂತೆ ಕಾಣುವುದಿಲ್ಲ <<ಕನ್ನಡ ಪದಗಳು ಗೊತ್ತಿದ್ದೂ "ಸಂಸ್ಕೃತ ಭೂಯಿಷ್ಟ" ವಾಗಿ ಬರೆಯುವುದು ಕನ್ನಡ ದ ಬಗ್ಗೆ ಹೆಮ್ಮೆಯೇ? ನಿಮಗೆ ಪಂಪ ರನ್ನರಾದಿಯಾಗಿ ೧೨ ನೆ ಶತಮಾನಕ್ಕೂ ಮುಂಚಿನ ಸಾಹಿತ್ಯದ ಸಂಸ್ಕೃತ ತುರುಕುವೆಕೆಯ ಬಗ್ಗೆ ನಾನು ಹೇಳುವ ಅವಶ್ಯಕತೆಯಿಲ್ಲ. ನಿಮಗೀಗಾಲೇ ತಿಳಿದಿದೆ ಅಂದು ಕೊಳ್ಳುತ್ತೇನೆ. ಇನ್ನು ದಾಸರ ಮೇಲೆ ಶರಣರ ಪ್ರಭಾವ ಬುದ್ದಿರುವುದರಿಂದ ಅವರಲ್ಲಿ ಕನ್ನಡ ಶೈಲಿ ಇದೆ ಅನ್ನಬಹುದು. ಅಲ್ಲದೆ ದಾಸರಲ್ಲಿ ಸಾಂಸ್ಕೃತಿಕವಾಗಿ ಸ್ವಂತಿಕೆ ಎಷ್ಟಿದೆ ಅನ್ನುವ ಬಗ್ಗೆ ನನಗೆ ಅನುಮಾನವಿದೆ. ಇವೆಲ್ಲ ಕೆಲ exceptions >>ದೇವ ಭಾಷೆ"ಯ ಎದುರು "ಶಿವ ಭಾಷೆ" ಬಗ್ಗೆ ಎರಡೂ ಕಾರಣಕ್ಕೆ ...( ಕನ್ನಡ ಏಕೆ ಶಿವ ಭಾಷೆ ಅಂತ ಮುಂದೆ ಬರೆಯುತ್ತೇನೆ )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.