ಸಂಸ್ಕೃತಿ - ಕನ್ನಡತೆ - Culture

0

ನಾನು ಅಗೊಮ್ಮೆ ಈಗೊಮ್ಮೆ ಸಂಸ್ಕೃತಿ ,ಹಿಂದೂ ಧರ್ಮ ಇತ್ಯಾದಿಗಳ ಬಗ್ಗೆ ನೆಟ್ ನಲ್ಲಿ , ವಿಕಿಯಲ್ಲಿ ನೋಡ್ತಾ ಇರ್ತೀನಿ. ನಾನು ಗಮನಿಸಿದಂತೆ ನಮ್ಮ ಹಲವರಿಗೆ ಈ ಸಂಸ್ಕೃತಿ ,ಹಿಂದೂ ಧರ್ಮ ಇವುಗಳ ಬಗ್ಗೆ ತಿಳಿವಳಿಕೆ ತುಂಬಾ ಸೀಮಿತ.  ವೈದಿಕ ಮತವಶ್ಟೇ ಹಿಂದೂ ಧರ್ಮ ಅನ್ತ ತಿಳಿದುಕೊಂಡೆ ವಿಕಿಯಲ್ಲಿ ಬರಹವಿದೆ. ಅಲ್ಲಿ ವೈದಿಕ ಮತ ಗ್ರಂಥಗಳು ಇಡೀ ಎಲ್ಲ ಹಿನ್ದುಗಳಿಗೆ ಆದರ್ಶ ಅನ್ನೋ ರೀತಿಯ ವ್ಯಾಖ್ಯಾನ ಕಂಡು ಅವರ ಬಗ್ಗೆ ಮರುಕ ಉಂಟಾಗಿದೆ.


 


ಇಲ್ಲಿಯೂ ಸಂಪದದಲ್ಲಿಯೂ ಅನೇಕ ಬಾರಿ ನೋಡಿದ್ದೇನೆ ವೈದಿಕದೊಳಗಣ ೪ ವರ್ಣಗಳ ಒಳಗೆ ಎಲ್ಲ ಹಿನ್ಧೂಗಳನ್ನು ಬಲಾತ್ಕಾರವಾಗಿ FIT ಮಾಡುವ ಪ್ರತಿಕ್ರಿಯೆಗಳೂ ಆಗಾಗ ಕಾಣ್ತ ಇರ್ತವೆ. ಎಲ್ಲರೂ ಈ ವರ್ಣಾಶ್ರಮ ಧರ್ಮದೊಳಗೆ ಬರ್ತಾರೆ, ಪಾಲಿಸುತ್ತಾರೆ ಅನ್ನೋ ಅವಿವೇಕ.


 


ಒಮ್ಮೆಯಂತೂ ದೇವಗೌಡರಿಗೆ ಹಿನ್ಧೂ ಧರ್ಮ ಗೊತ್ತಿಲ್ಲ ಅಂತ ಒಬ್ಬ ಬ್ರಹ್ಮಾಣ್ದಿ ಭಾಶಣ  ಬಿಗಿದಿದ್ದ. ದೇವೇಗೌಡರಿಗೆ 'ಇವರ ಮನೆಯೊಳಗಿನ ಸೊ ಕಾಲ್ಡ್ ಹಿಂದೂ ಧರ್ಮ' ಯಾಕೆ ಗೊತ್ತಿರಬೇಕು ಅನ್ನೋ ಸಣ್ಣ ತಿಳುವಳಿಕೆಯಿಲ್ಲದ ಮುಗ್ಧ ಆತ. ಆದ್ರೂ ಇಡೀ ಹಿಂದೂ ಧರ್ಮದ ಗುತ್ತೆಗೆದಾರನ ತರದ ಮಾತುಗಳು! ಈ ವಿಶಯದಲ್ಲಿ ದಟ್ಸ್ ಕನ್ನಡ ಅತಿರೇಕಕ್ಕೆ ಹೋಗಿದೆ. ಅಲ್ಲಿ ಇದು ಖಂಡಿತವಾಗಿಯೂ ಆ ಸೈಟ್ ನ ಸಂಪಾದಕನ ಕುಮ್ಮಕ್ಕು ಆಶೀರ್ವಾದ ದೋಡನೆ ಮುನ್ದೆ ಸಾಗಿದೆ ಅಂತ, ಇಷ್ಟು ದಿನ ಆ ಸೈಟ್ ಅನ್ನು ಆಗಾಗ್ಗೆ ಗಮನಿಸಿದ ನನಗೆ ಪಕ್ಕಾ ಆಗಿದೆ.


 


ವೈದಿಕ ಮತ / ಸಂಸ್ಕ್ರುತಿ ದೊಡ್ಡ ಹಿಂದೂ ಧಾರೆಯಲ್ಲಿ ಒನ್ದು ಸಣ್ಣ ಕವಲಶ್ಟೇ.ಇದನ್ನು ನಾವು ಇಲ್ಲಿ ಹೇಳಕ್ಕೂ ಇತ್ತೀಚೆಗೆ ಹೆದರಿಕೆ ಶುರು ಆಗಿದೆ. ಪ್ರತಿವಾದಗಳಿಗಲ್ಲ!... ಬದಲಿಗೆ ನಾನು 'ವೈದಿಕ ದ್ವೇಷಿ', 'ಸಗಣಿ ಎರಚೋನು' ಅನ್ನೊ ಬಿರುದು ಬಾವಲಿಗಳು ಎಲ್ಲಿ ಕೊಡಮಾಡಲ್ಪಡುತ್ತವೋ ಅಂತ.


 


ಸಂಸ್ಕ್ರುತಿ ಬಗ್ಗೆ ಒನ್ದು ಚಿಂತನೆ ಇಲ್ಲಿದೆ. ಈ ನೆಪದಲ್ಲೇ ನನ್ನ ಮೇಲಿನೆರದು ಮಾತುಗಳು.  
 


http://www.vijaykarnatakaepaper.com//svww_zoomart.php?Artname=20110311a_009101003&ileft=363&itop=782&zoomRatio=130&AN=20110311a_009101003
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.