ಬರಹದ ವಿಮರ್ಶೆ ನಡೆಯಲಿ, ಬರಹಗಾರನದ್ದಲ್ಲ!.

4

ಸೈದ್ದಾಂತಿಕ ಬೇರೆತನ ಸಹಜ. ಅವು ಆಗೊಮ್ಮೆ ಈಗೊಮ್ಮೆ ಎದುರಬದುರಾದಾಗ ಕಾವೇರುವುದು ಸಹಜ.


ವಾದಗಳಲ್ಲಿ, ಚರ್ಚೆಗಳಲ್ಲಿ ಗೆಲ್ಲಲಾಗದಾಗ ಎದುರು ಪಕ್ಷದ ವ್ಯಕ್ತಿಯ ಬಗ್ಗೆ personal attack ಮಾಡೋದು ಒಂದು ಕೆಟ್ಟ ಚಾಳಿ. ಪ್ರತಿವಾದಿಯಲ್ಲಿ ಇಲ್ಲದ ಗುಣಗಳನ್ನೆಲ್ಲ ಆರೋಪಿಸಿ ಆತನ ಚಾರಿತ್ರ ವಧೆ ಮಾಡೋದು ಅಸಹ್ಯಕರ.


ಯಾಕೋ ಇತ್ತೀಚಿಗೆ ಬರಹಗಳ ವಿಮರ್ಶೆ ಬಿಟ್ಟು ಬರಹಗಾರನ ವಿಮರ್ಶೆ ಹೆಚ್ಚಾಗ್ತಾ ಇದೆ.


ಈ ಕಾವು ಇಳಿದ ಮೇಲೆ "ವಿಷಯದ ಮೇಲೆ" ಚರ್ಚೆ ಮಾಡೋಣ. ಅಲ್ಲಿವರಗೆ ನಾನು ಬರೆಯದ ವಿಷಯಗಳನ್ನೆಲ್ಲ ಆರೋಪಿಸ್ಕೊಂಡು ಬರೆಯದೆ, ಪ್ರತಿಕ್ರಿಯೆಗಳು ನಾನು ಬರೆದ ವಿಷಯಕ್ಕಷ್ಟೇ ಸೀಮಿತವಾಗಿರಲಿ ಅನ್ನೋ ಕೋರಿಕೆ.


 


...


ನನ್ನ ಕೆಲಸದ ವಿಷಯಕ್ಕೆ ಸಂಬಂಧಪಟ್ಟಂತೆ ವಿಷಯಗಳನೆಕವನ್ನು ನಾನು ಓದಬೇಕಿದೆ. ಅವನ್ನು ಮುಗಿಸೋಕೊಂಡು ನಿಧಾನವಾಗಿ ಬರ್ತೀನಿ. ( ಆನ್ಲೈನ್ ಅಂತೂ ಇರ್ತೀನಿ!!)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ವಾದಗಳಲ್ಲಿ, ಚರ್ಚೆಗಳಲ್ಲಿ ಗೆಲ್ಲಲಾಗದಾಗ ಎದುರು ಪಕ್ಷದ ವ್ಯಕ್ತಿಯ ಬಗ್ಗೆ personal attack ಮಾಡೋದು ಒಂದು ಕೆಟ್ಟ ಚಾಳಿ. ಪ್ರತಿವಾದಿಯಲ್ಲಿ ಇಲ್ಲದ ಗುಣಗಳನ್ನೆಲ್ಲ ಆರೋಪಿಸಿ ಆತನ ಚಾರಿತ್ರ ವಧೆ ಮಾಡೋದು ಅಸಹ್ಯಕರ.>> ಇದು ಸ್ವಗತವೆ? ಇಂತಹ ಮಂಥನ ತಮ್ಮಲ್ಲಾಗಿದ್ದರೆ ನಿಜಕ್ಕೂ ಒಳ್ಳೆಯದು. ಇಂತಹ ಮಹತ್ತರ ಬದಲಾವಣೆ ಒಳ್ಳೆಯದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ವ್ಯಕ್ತಿಗತ ಆರೋಪ ಮಾಡಿದ ಕೆಲವು ಉದಾಹರಣೆಗಳು ಇಲ್ಲಿವೆ ನೋಡಿ : <ರೀ ಸ್ವಾಮಿ ಎಷ್ಟನೆ ಕ್ಲಾಸು ಓದಿದ್ದೀರಿ ನೀವು! ನಿಮಗೆ ಕನ್ನಡ ಓದಕ್ಕೆ ಬಂದ್ರೆ?! ನಾನು ಎಲ್ಲಿ ಸಂಸ್ಕೃತ ಅವೈಜ್ಞಾನಿಕ ಅಂತ ಹೇಳಿದೀನಿ ಅಂತ ತೋರ್ಸಿ> <ಇವು ಯಾವೂ ಅರ್ಥ ಆಗಲಿಲ್ಲ ಅಂದ್ರೆ ವ್ಯಾಕರಣ ಪುಸ್ತಕೆ ತೆಗೆದು ಓದಿಕೊಂಡು ಬನಿ> <ಇನ್ನು ಮುಂದೆ ಆದರೂ ವಿಷಯದ 'ಅ ಆ ಇ ಈ' ನಾದ್ರೂ ತಿಳಿಯದೆ ಚರ್ಚೆಗೆ ಬರಬೇಡಿ> <ನೋಡ್ರೀ ಹರೀಶ್ ವಿಷಯ ಗೊತ್ತಿದ್ರೆ ಚರ್ಚೆಯಲ್ಲಿ ಭಾಗವಹಿಸಿ ಸರಿ/ ತಪ್ಪು ಅಂತ ವಾದಿಸಿ> <ಇಷ್ಟು superficial knowledge ಇಟ್ಟುಕೊಂಡು ಭಾಷಾವಿಜ್ಞಾನದ ಆಳ ಚರ್ಚೆಗೆ ಬರ್ತೀರಲ್ರೀ> ಅಂದ ಹಾಗಿ ಈ ನಿಂದನಾ ಬರಹಗಳನ್ನ ಬರೆದವರು ಸ್ವತಹಾ ಸವಿತೃ ಅವರೇ! ಅವರು ಇದಕ್ಕಿಂತಲೂ ಕೆಟ್ಟದಾಗಿ ಬರೆದ (ಉತ್ತರ ಕರ್ನಾಟಕದ ನಾರಿಗೆ ಭಾರತೀಯ ಸಂಸ್ಕೃತಿಯೇ ಮುಳುವಾಗಿದೆ ಎಂಬ ಲೇಖನದಲ್ಲಿ)‌ ಕೆಲವು ಪ್ರತಿಕ್ರಿಯೆಗಳು ಎಷ್ಟು ಕೆಟ್ಟದಾಗಿದ್ದವೆಂದರೆ ಅವುಗಳನ್ನು ಸಂಪದದಿಂದಲೇ ಅಳಿಸಿ ಹಾಕಲಾಗಿದೆ! ಇನ್ನಾದರೂ ತಾವು ಬರೆಯುವಾಗ ಯೋಚಿಸಿ, ಶಾಂತವಾಗಿ ಬರೆಯಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವರೊಡನೆ ವಾದಿಸುತ್ತ.. ಮರೆತು ಅವರ ತರಾನೆ behave ಮಾಡಿದ್ನಾ ಅಂತ ನನಗೆ ಬೇಜಾರು ಆಗಿದ್ದು ಕಂಡಿತ. ಅದಕ್ಕೆ ಇನ್ಮುಂದೆ ಅಂತವರ ಅಂತ ಪ್ರತಿಕ್ರಿಯೆಗಳಿಂದ ದೂರ ಇರ್ಬೇಕು ಅಂತ ಡಿಸೈಡ್ ಮಾಡಿದೀನಿ. ಇನ್ನೂ ಹೆಚ್ಚು ಇಲ್ಲಿ ಪ್ರತಿಕ್ರಿಯಿಸಲ್ಲ. ಇದು ಮುಗಿದು ಹೋದ ಅಧ್ಯಾಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಈ ಕಾವು ಇಳಿದ ಮೇಲೆ "ವಿಷಯದ ಮೇಲೆ" ಚರ್ಚೆ ಮಾಡೋಣ. ಅಲ್ಲಿವರಗೆ ನಾನು ಬರೆಯದ ವಿಷಯಗಳನ್ನೆಲ್ಲ ಆರೋಪಿಸ್ಕೊಂಡು ಬರೆಯದೆ, ಪ್ರತಿಕ್ರಿಯೆಗಳು ನಾನು ಬರೆದ ವಿಷಯಕ್ಕಷ್ಟೇ ಸೀಮಿತವಾಗಿರಲಿ ಅನ್ನೋ ಕೋರಿಕೆ.>> ಇದು ಶೇಕಡಾ ನೂರಕ್ಕೆ ನೂರು ಈ ಬರಹದ ಲೇಖಕ ಮಹಾಶಯರಿಗೇ ಸಲ್ಲುತ್ತ್ತದೆ. ಅ೦ತೂ ಒಳಗಿನ ಆತ್ಮಸಾಕ್ಷಿ ಮೆಲ್ಲಗೆ ಜಾಗೃತವಾಗುತ್ತಿದೆ!. Good sign, A healthy sign. Better late than never.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಬ್ಬರು ಮೌನಾವಾದಾಗ ಇಬ್ಬರು ಕಾಣೆಯಾಗ್ತಾರೋ ಸಂಪದದಂಗಳದಿಂದ...? ಎರಡು ಹೆಸರುಗಳಿಂದ ಒಬ್ಬರೇ ಬರೆಯುತ್ತಿದ್ದರೇ ಇದುವರೆಗೆ ಮರೆಯಿಂದ...? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಕತಾಳೀಯವಾಗಿ ಇಬ್ಬರೂ ಮತ್ತೆ ಜೊತೆಗೇ ಪ್ರತ್ಯಕ್ಷ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ..ಹ..ಸಕತ್.. ಮತ್ತೆ ಪರ್ಫೆಕ್ಟ್.. :)..ಹ..ಹ... :) ನಿಮ್ಮೊಲವಿನ, ಸತ್ಯ..:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಯ್ತಲ್ಲ! ಹಳೆಯದನ್ನು ದೂರವಿಟ್ಟು, ವೈಯಕ್ತಿಕ ವಿಮರ್ಶೆ/ದೋಷಾರೋಪಣೆ ಇಲ್ಲದೆ ವಿಚಾರ ವಿನಿಮಯ ನಡೆಯುವುದೆಂದು ನಾವೆಲ್ಲಾ ಒಪ್ಪಿಕೊಂಡಿದ್ದೇವೆ ತಾನೇ? Great! ‘ಸಂಪದ’ಕ್ಕೆ ಜಯವಾಗಲಿ! ಸಂಪದಿಗರ ಸದ್ಗುಣ ಸಂಪನ್ನತೆ ಕಿರೀಟಪ್ರಾಯವಾಗಲಿ! :):):):):)!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.