ಶಾಸ್ತ್ರ ಓಕೆ 'ಶಾಸ್ತ್ರ ಜಡತ್ವ' ಯಾಕೆ?

0

http://sampada.net/blog/%E0%B2%B9%E0%B3%87%E0%B2%AE-%E0%B2%AA%E0%B2%B5%E0%B2%BE%E0%B2%B0%E0%B3%8D/24/01/2011/30133
ಈ ಬರಹದ ನಂತರದ ಚರ್ಚೆ ಓದಿದಾಗ ಒಂದು Zen ಕಥೆ ನೆನಾಪಯ್ತು. ಬರೆದು ಹಾಕೋಣ ಅಂತ ಅನ್ಕೊತಾ ಇದ್ರೂ ಅದ್ಯಾಕೋ ಬರಿಯೋಕೆ ಆಗೇ ಇರಲಿಲ್ಲ. ಈ ಕಥೆ ಇಂಟರ್ನೆಟ್ನಲ್ಲಿ ಈಗಾಗಲೇ ಇರಬಹುದು. ಹುಡ್ಕೊದ್ಕಿಂತ ಬರಿಯೋದೆ ವಾಸಿ ಅಂತ ಬರೀತಾ ಇದ್ದೀನಿ!   


ಸರಿ, ಓವರ್ ಟು ಕಥೆ!!
.......................


ಇಬ್ರು ಯುವ ಸನ್ಯಾಸಿಗಳು ಎಂದಿನಂತೆ walking ಮುಗಿಸಿಕೊಂಡು ತಮ್ಮ ಆಶ್ರಮಕ್ಕೆ ವಾಪಸಾಗ್ತಾ ಇದ್ರು.


( ಸ್ವಲ್ಪ offline talk
..... ಸನ್ಯಾಸಿಗಳು ಅಂದ್ರೆ ಗೊತ್ತಲ್ಲವ?!  (ಅನೇಕ ಮತ ಧರ್ಮಗಳಲ್ಲಿ) ಬ್ರಹ್ಮಚರ್ಯವೂ ಸನ್ಯಾಸದ ಭಾಗವೇ. ಇನ್ನು ಬ್ರಹ್ಮ ಚರ್ಯದ definition ಅಂತೂ ನಿಮಗೆ ಗೊತ್ತೇ ಇದೆ ಆಲ್ವಾ!! ;) )


ವಾಪಾಸ್ ಬರ್ಬೇಕಿದ್ರೆ ಒಂದು, ಹಳ್ಳನೋ ಕೊಳ್ಳನೋ ಏನೋ ಒಂದು!! ದಾಟಿ ಬರಬೇಕಿತ್ತು. ಅಲ್ಲಿ ನೋಡಿದರೆ ಸಕತ್ತಾಗವ್ಳೆ!, ಸುಮ್ನೆ ನಗ್ತವ್ಳೆ!!,ಅಂತ ಊರ್ ತುಂಬಾ ಬಯ್ಮಾತಗಿರೋ, ಚಲುವಾಂತ ಚನ್ನಿ ಒಬ್ಳು, ಇವರಿಗೆ ಕಾಯ್ತಾ ಇರ್ತಾಳೆ. ಹೊಳೆ ದಾಟೋಕೆ ನಮ್ಮ ಬ್ರಹ್ಮಚಾರಿಗಳ ಹೆಲ್ಪ್ ನೂ ಕೇಳ್ಬಿಡ್ತಾಳೆ! 


ಸಹಾಯ ಕೇಳಿದ್ರೆ ಯಾರ್ ಸುಮ್ನಿರ್ತಾರೆ? ಹೇಳಿ. ಅದೂ ಚಲುವಾಂತ ಚನ್ನಿ ಕೇಳಿದ್ರೆ!!!. ...ಸರಿ ಒಬ್ಬ ಸನ್ಯಾಸಿ ಆಕೆಯ ಕೈ ಹಿಡಿದು ಹೊಳೆ ದಾಟುಸ್ತಾನೆ.      
ನಂತರ ಇಬ್ರೂ ಆಶ್ರಮಕ್ಕೆ ವಾಪಾಸಗ್ತಾರೆ.


ಇಲ್ಲಿಗೆ ವಿರಾಮ!  ಮುಂದೆ ಆಶ್ರಮದಲ್ಲಿ ಸಿಗೋಣ! ;)


.


.


.


.


.


.


 
ವಿರಾಮದ ನಂತರ ಸ್ವಾಗತ..... ನಮ್ಮಾಶ್ರಮಕ್ಕೆ !


ಎರಡನೆಯವ ಮೊದಲನೆ ಸನ್ಯಾಸಿನ  ಕೇಳ್ತಾನೆ...."ಅಲ್ವೋ ನಮ್ಮ ಗುರುಗಳು ಏನು ಹೇಳಿ ಕೊಟ್ಟಿದ್ದಾರೆ, XX ಶಾಸ್ತ್ರ ಏನು ಹೇಳುತ್ತೆ, XXX ಪುರಾಣ ಏನು ಹೇಳುತ್ತೆ. ನಿನಗೇನೂ ಬುದ್ದಿ ಇಲ್ವಾ.. ಒಬ್ಳು ಯುವತಿಯ ಕೈಮುಟ್ಟಿ ನದಿ ದಾಟಿಸಲು!!!"  ಅಂತ ತನ್ನ ಶಾಸ್ತ್ರ ಪಾಂಡಿತ್ಯವನ್ನು ಪ್ರದರ್ಶಿಸಿದ್ದೇ ಪ್ರದರ್ಶಿಸಿದ್ದು!!!


 *ಬನ್ನಿ ಸ್ವಲ್ಪ  offline ನಲ್ಲಿ ಮಾತಾಡೋಣ!
ನೋಡಿ ನಾವು ಎಲೆಕ್ಟ್ರಾನಿಕ್ಸ್ ಮಂದಿ, ಅದರಲ್ಲೂ DiGital  ಎಲೆಕ್ಟ್ರಾನಿಕ್ಸ್ ಪ್ರಿಯರು. ಇಲ್ಲಿ k  map  ಬಳಸ್ಬೇಕಿದ್ರೆ dont care condition ಗೆ X  ಅಂತಾನೆ ಬಳಸೋದು ಹಾಗಾಗಿ X ಬಳಕೆ...ಕಾಮಾಲೆ ಕಣ್ಣು ಜಾಗೃತ ಆಗೋದು ಬೇಡ! ;)  ಮತ್ತೆ online ಗೆ ಗ ಹೋಗೋಣ ಸಿದ್ದರಾಗಿ.
.


.


.


.


.
welcome back, online!!!


ಅದಕ್ಕೆ ಮೊದಲ ಸನ್ಯಾಸಿ ಕೇಳ್ತಾನೆ "ನಾ ಆಕೆನ  ಹೊಳೆ ಬದೀಲೆ ಬಿಟ್ಟು ಬಂದೆ, ನೀನಿನ್ನೂ ಆಕೆಯನ್ನು ಹೊತ್ಕೊಂಡು ಇಲ್ಲಿವರ್ಗೂ ಕರ್ಕೊಂಡು ಬನ್ದಿದಿಯಾ?!"


ಆಗ ಗುರುಗಳು ಅಲ್ಲಿ ಪ್ರತ್ಯಕ್ಶರಾಗಿ... "ಶಾಸ್ತ್ರ ಓಕೆ  'ಶಾಸ್ತ್ರ ಜಡತ್ವ' ಯಾಕೆ?" ಕಣ್ತೆರೆಸುತ್ತಾರೆ !   
 
ಇಲ್ಲಿಗೀ ಕಥೆ ಮುಗಿಯಿತು. :(


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಾರಾಂಶ ಒಂದೆ ಆದರೂ ನಾನು ಓದಿದ ಕತೆ ಸ್ವಲ್ಪಬೇರೆ ಇದೆ. ಅದರಲ್ಲಿ- ಗುರುಗಳು ಮತ್ತು ಶಿಷ್ಯರು ನದಿ ದಾಟೋವಾಗ.... ಗುರುಗಳು ಅಸಹಾಯಕ ತರುಣಿಯನ್ನು ಹೊತ್ತುಕೊಂಡು ನದಿ ದಾಟಿಸುತ್ತಾರೆ. ಶಿಷ್ಯನ ತಲೆಯಲ್ಲಿ ಸಂಶಯ ಕೊರೀತಾ ಇರತ್ತೆ, ಆಮೇಲೆ ಅವನು ಅನ್ಯಮನಸ್ಕನಾಗಿರೋದನ್ನ ನೋಡಿದ ಗುರುಗಳೇ ಕೇಳ್ತಾರೆ. ಆಗ ಶಿಷ್ಯ ಹೇಳ್ತಾನೆ ಬ್ರಹ್ಮಚರ್ಯ ಉಪದೇಶ ಮಾಡೋ ನೀವೇ ಹೀಗ್ ಮಾಡಿದ್ರೆ ಹೇಗೆ? ಆಗ ಗುರುಗಳು - ನಾ ಆಕೆನ ಹೊಳೆ ಬದೀಲೆ ಬಿಟ್ಟು ಬಂದೆ, ನೀನಿನ್ನೂ ಆಕೆಯನ್ನು ಹೊತ್ಕೊಂಡು ಇಲ್ಲಿವರ್ಗೂ ಕರ್ಕೊಂಡು ಬನ್ದಿದಿಯಾ? ------------------------------------------------------- ಸಂಬಂಧಿಸಿ ಎರಡು ಗಾದೆಗಳು ೧) ಶಿಲೆಯ ಮೇಲೆ ಮಲಗಿರ್ಪ ಭೋಗಿಗಳುಂಟು ಮೊಲೆಯ ಮೇಲೆ ಮಲಗಿರ್ಪ ಯೋಗಿಗಳುಂಟು. ೨) ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ! ----------------------------------------------------------------------
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಜೆನ್ ಕಥೆ ಚನ್ನಾಗಿದೆ. ಮೊದಲು ಓದಿದ್ದೆ ಇದನ್ನ (ಸ್ವಲ್ಪ ಬೇರೆ ವರ್ಶನ್ ಇದ್ದಿರಬೇಕು). ಈಗಿನ ಬಹುಸಂಖ್ಯಾತ ’ಬ್ರಹ್ಮಚಾರಿ ಸ್ವಾಮಿ’ಗಳು ಕೇವಲ ಸೋಗಲಾಡಿ ಬ್ರಹ್ಮಚಾರಿಗಳಾಗಿರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಅಂತಹವರಿಗೆ ಜೆನ್ ಕಥೆ ಓದಿ ಹೇಳಿದರೆ ಚೆನ್ನಾಗಿರುತ್ತೆ. :) ಆದರೆ ನೀವು ಕೊಟ್ಟ ಹೇಮ ಪವಾರ್ ಬರೆದ ಬರಹದ ಲಿಂಕಿಗೂ ಈ ಕಥೆಗೂ ಏನು ಸಂಬಂಧ ಅಂತ ಗೊತ್ತಾಗಿಲ್ಲ. ಊಟ ಆಯ್ತೇ ಎಂದು ಕೇಳಿದರೆ ಮುಂಡಾಸು ಮೂರು ಮೊಳ ಎಂದು ಉತ್ತರಿಸಿದನಂತೆ ಯಾವನೋ ಒಬ್ಬ ಭೂಪ. ಹಾಗೆಯೇ ಆಯಿತಲ್ಲವೇ ಇಲ್ಲಿ! ಸಭ್ಯರಾಗಿರುವುದಕ್ಕೂ ಬ್ರಹ್ಮಚರ್ಯಕ್ಕೂ (ಅಂದರೆ ಬ್ರಹ್ಮಚರ್ಯದ ಈಗಿನ ಸೋಗಲಾಡಿ ಅರ್ಥಕ್ಕೂ) ಸಂಬಂಧವಿದೆಯೇ? ನಮ್ಮ ಸಮಾಜ ಇತರರ ಬಗ್ಗೆ ಪೋಲಿ ಜೋಕು ಹೇಳುವ ’ಕವಿ’ಗಳ ಸಂತೆಯಾಗಬೇಕೆಂದು ನಿಮ್ಮ ಅನಿಸಿಕೆಯಾಗಿದ್ದರೆ ಅದಕ್ಕೆ ನಾನೇನು ಹೇಳುವಂತಿಲ್ಲ. ನನಗಂತೂ ಅಂತಹ ಕನಸು ಇಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಈಗ ಅನುಮಾನ, ವೈಚಾರಿಕನಾಗಿರುವುದೆ೦ದರೆ ಸಭ್ಯತನ ಸ೦ಸ್ಕೃತಿಯನ್ನು ಗಾಳಿಗೆ ತೂರುವುದು. ಲ೦ಪಟತನ ಲಫ೦ಗಿತನದ ಒಲವು ಇದ್ದ೦ತೆಲ್ಲ ನಿಮ್ಮ ವೈಚಾರಿಕತೆಯ ಪ್ರಭೆಯು ಹೆಚ್ಚು ಹೆಚ್ಚು ಬೆಳಗುವುದು!! ಛೆ! ಛೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು.. ಇದು ಇನ್ನೊಬ್ಬರ ಬಿಳೀ ಪಂಚೆ ಕದ್ದು ಮಸಿ ಬಳಿದು ತನ್ನ ಕಪ್ಪು ಪಂಚೆಯೆಂದು ಸಾಧಿಸಿದಂತೆ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉಪಮೆ ಸ್ವಂತಿಕೆಯಿಂದ ಕೂಡಿ ಧ್ವನಿಪೂರ್ಣವಾಗಿದೆ. ಮೂಲ ಲೇಖಕರ ಪ್ರಚೋದನೆ ಸಾರ್ಥಕವಾಯಿತು! ಆದರೆ ಚರ್ಚೆಯ ಮಧ್ಯೆ ಸುಳಿದುಹೋದ ಒಂದು Phrase ಬಗ್ಗೆ Doubt. "ಸಭ್ಯಸ್ತನ" ಎಂಬ ನುಡಿಗಟ್ಟು ಅದು. "ಸ್ತನ"ದಲ್ಲಿ ಸಭ್ಯ ಯಾವುದು? ಅಸಭ್ಯ ಯಾವುದು? "ಸಭ್ಯಸ್ಥ"ರಿಗೆ ಸುಲಭವಾಗಿ ಬಗೆಹರಿಹಿಯುವುದಲ್ಲವೇನೋ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹೋ! ಇಲ್ಲಿಗೆ ಇದು ಮುಗಿಯುವುದಿಲ್ಲ. ಪದಗಳಲ್ಲಿ ಪೋರ್ನ್ ಪನ್. ಅದು "ಸಭ್ಯಸ್ತಿಕೆ" ಆಗಿರಬೇಕಿತ್ತು. ಆದರೆ ಹಲವರಿಗೆ ಒ೦ದು ರೀತಿಯ ಆಬ್ಸೆಶನ್ ಇದೆ ಅದಕ್ಕೇ "ಸಭ್ಯಸ್ತನ" ಆಗಿರುವುದು!! ಸ್ವಲ್ಪ ಸಹಿಸಿಕೊಳ್ಳಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹ... ನಿಮ್ಮ ಪ್ರತಿಕ್ರಿಯೆಗಳು ಅದ್ಭುತ ರೀ.. ಎರಡು ಮಾತೇ ಇಲ್ಲ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.