culture = ಕನ್ನಡತೆ ?

0

ಮೊನ್ನೆ ಒಬ್ರು ಕನ್ನಡ ಮೇಷ್ಟ್ರು, ತಮಾಷೆಯಾಗಿ ಹೇಳ್ತಾ ಇದ್ರು.

 

ಅವರು ಒಬ್ದ್ರು ಸಂಸ್ಕೃತ ಮೇಷ್ಟ್ರು ಜೊತೆ ಮಾತಾಡ್ತಾ ಇದ್ರಂತೆ. ಸಂಸ್ಕೃತ ಮೇಷ್ಟ್ರು ಕನ್ನಡ ಮೇಷ್ಟ್ರಿಗೆ, ಮಾತಿನ ನಡುವೆ  "ನಿಮಗೆ ಸಂಸ್ಕೃತ ಬರಲ್ವಾ? ಹಾಗಾದ್ರೆ ನೀವು ಸುಸಂಸ್ಕ್ರುತರಲ್ಲ!!" ಅಂತ ಡೈಲಾಗ್ ಹೊಡೆದ್ರಂತೆ!. ಅದಕ್ಕೆ ಈ ಕನ್ನಡ ಮೇಷ್ಟ್ರು  ಸುಮ್ನೆ ಒಂದು smaile ಕೊಟ್ಟಿರಬಹುದು!. ;)

 

ಇರಲಿ, ವಿಷಯ ಮೇಲಿನದಲ್ಲ.... ಕೆಳಗಿನದ್ದು!

 

ಪಾಶ್ಚಾತ್ಯರ "culture" ಅನ್ನೋ ಪದಕ್ಕೆ ಸಂವಾದಿಯಾಗಿ ನಾವು "ಸಂಸ್ಕೃತಿ" ಅನ್ನೋ ಪದವನ್ನು ಉಪಯೋಗಿಸುತ್ತಿದ್ದೇವೆ. ಸಂಸ್ಕೃತಿ ಅನ್ನೋ ಪದ ಸ್ಪಷ್ಟವಾಗಿ ಸಂಸ್ಕೃತ ಪದ.

 

("culture " ಮತ್ತು ಆ ಸ್ಥಾನದಲ್ಲಿ ನಾವು ಉಪಯೋಗಿಸುತ್ತಿರುವ "ಸಂಸ್ಕೃತಿ" ಅಂದ್ರೆ  ನನ್ನ ದೃಷ್ಟಿಯಲ್ಲಿ ಏನು ಅಂತ ಮುಂದೆ ಯಾವಾಗಲಾದರು, ಅತ್ವ ಈ ಚರ್ಚೆ ಇದನ್ನು ಒಳಗೊಂದರೆ ಇದೆ ಚರ್ಚೆಯಲ್ಲಿ , ಪ್ರತಿಕ್ರಿಯೆಯ ರೂಪದಲ್ಲಿ ಬರೆದೇನು!.

ಮತ್ತು ಇಲ್ಲಿ ನಾವು civilization (ಮತ್ತು ಆ ಸ್ತಳದಲ್ಲಿ ನಾವು ಉಪಯೋಗಿಸುವ ನಾಗರೀಕತೆ) ಗೂ ಈ culture ಗೂ  ವ್ಯತ್ಯಾಸ ವಿದೆ ಅನ್ನೋದನ್ನು ಮಾತ್ರ ಇಲ್ಲಿ highlight ಮಾಡ್ತಾ ಇದ್ದೇನೆ) 

 

ಯಾಕೋ ಏನೋ ನನಗೆ ಈ ಸಂಸ್ಕೃತಿ ಅನ್ನೋ ಪದದ ಅರ್ಥವನ್ನು ತಿಳಿದುಕೊಳ್ಳಲು ಶುರು ಮಾಡಿದಿಂದಲೂ culture ( ಅತ್ವ ಸಂಸ್ಕೃತಿಗೆ ) ಗೆ ಸಮಾನಾಂತರವಾಗಿ "ಕನ್ನಡತೆ" ಅನ್ನೋ ಪದ ಹೆಚ್ಚು ಸೂಕ್ತ ಅನ್ನಿಸುತ್ತಿದೆ.

 

ಸಂಸ್ಕೃತಿ .. ಚನ್ನಾಗಿ ಕಟ್ಟಲ್ಪಟ್ಟಿರುವುದು...   ಅನ್ನೋ ಅರ್ಥದಲ್ಲಿ ನನಗೆ ಯಾವ ವಿರೋಧ ಇಲ್ಲದಿದ್ದೂರೋ ಅದು "ನಮ್ಮ" ಕನ್ನಡ ಸಂಸ್ಕೃತಿಯನ್ನು, "ನಮ್ಮ" ಜಾನಪದ ಸಂಸ್ಕೃತಿ ಯನ್ನು, "ನಮ್ಮ ಸ್ವಂತಿಕೆ" ( culture ಯಾವಾಗಲೂ ಸ್ವನ್ತಿಕೆಯುಳ್ಳದ್ದು ಅನ್ನೋದನ್ನು ಗಮನದಲ್ಲಿಟ್ಟುಕೊಂಡು)  ಯನ್ನು ಪ್ರತಿನಿಧಿಸುವುದಿಲ್ಲ ಅಂತಾನೆ ನನ್ನ ನಿಲುವು.

 

"ನಮ್ಮತನ"ದ  ಸ್ವಂತಿಕೆಯನ್ನು, ಆಚಾರ ವಿಚಾರ, ಪ್ರಬುದ್ದತೆಯನ್ನು...........  ಕಣ್, ಕಂಪು, ಕನ್ನಡ, ನಡತೆ ಪದಗಳನ್ನೊಳಗೊಂಡ "ಕನ್ನಡತೆ" ಅನ್ನೋ ಪದ ಸಮರ್ಥವಾಗಿ ಪ್ರತಿನಿಧಿಸುತ್ತೆ ಅಂತ ನನ್ನ ಅಭಿಪ್ರಾಯ.

 

ಕಣ್ .. ಕನ್ನಡ ಮೂಲ ಜನಾಂಗವನ್ನು ( ಕಣ್ಣರು) ಪ್ರತಿನಿಧಿಸುತ್ತೆ. 

( ಶಂಬಾ ಜೋಶಿಗಳ ಕಣ್ಣ ಜನಾಂಗ ವಾದವನ್ನು ಅನೇಕರು, ನಾನು ಸೇರಿಸ್ಕೊಂಡು  ಒಪ್ಪಲ್ಲ.. ಅದು ಸದ್ಯಕ್ಕೆ ಚರ್ಚೆಯಾಚೆ ಇರಲಿ. ಆಸಕ್ತಿ ಇದ್ರೆ ಬೇರೆ ಕಡೆ ಚರ್ಚೆ ಮಾಡೋಣ.)

 

"ನಡತೆ" ಅಲ್ಲಿ chaaracter ಅನ್ನೋ ಅರ್ಥವಿದೆ. ನಮ್ಮ ಕನ್ನಡಿಗರ ಆಚಾರ ವಿಚಾರ, ನಂಬಿಕೆ ಜೀವನ ಶೈಲಿ,ಯನ್ನು ನಡತೆ ಅನ್ನೋ ಪದ ನ್ನೋತ್ತು ಮಾಡುತ್ತೆ.

 

ಎಂತ ನಡತೆ ಅಂತ ಬಂದಾಗ ...ಅದಕ್ಕೆ ಕಂಪು ಉತ್ತರ ಕೊಡುತ್ತೆ.

ಕಂಪು ಅಂದರೆ ವಾಸನೆ, ಆದರೆ ಈ ಪದ ಸಾಮಾನ್ಯವಾಗಿ +ve ಅರ್ಥದಲ್ಲೇ ಬಳಸಲಾಗಿದೆ. ಸುವಾಸನೆ, ಸುಗಂಧ ಅನ್ನೋ ಅರ್ಥದಲ್ಲಿ!. 

ಕಂಪು... ಕನ್ನಡದ ಕಂಪು, ನಮ್ಮ ರೈತಾಪಿ ಜನರ ಬೆವರಿನ , ಆಚಾರ ವಿಚಾರಗಳ ಪ್ರಬುದ್ದತೆಯ ಕಂಪು. ಇದೂ ಸಹ ಸ್ಪಷ್ಟವಾಗಿ ಕನ್ನಡ ಪದ.

 

 ನಮ್ಮ  ಸಮಾಜದ character ಅನ್ನು ಕನ್ನಡತೆ ಯನ್ನು ನಮ್ಮತನವನ್ನು ನಮ್ಮ ಭಾಷೆಯ ಈ "ಕನ್ನಡತೆ"  ಪದ ಅಂತ್ಯಂತ ಯಶಸ್ವಿ ಯಾಗಿ ಪ್ರತಿನಿಧಿಸುತ್ತೆ .

 

ಕನ್ನಡದ ಬಗ್ಗೆ , ಸಂಸ್ಕೃತಿಯ ಬಗ್ಗೆ ಬಲ್ಲ ಹಲವರು ಇಲ್ಲಿದ್ದಾರೆ.  ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕಾಗಿ ವಿನಂತಿ.

 

(ದಯವಿಟ್ಟು ಶಾಸ್ತ್ರಜಡರು ಇಲ್ಲಿಂದ ದೂರ ಇರಿ. ಇಲ್ಲಿ ಬೈದಾಡಲು ನನಗೆ ತಾಳ್ಮೆ, ಸಮಯವಿಲ್ಲ.)

 

ಸರಿ ತಪ್ಪು ಪರ ವಿರೋಧ ( ಸಕಾರಣ ಗಳೊಡನೆ ) ಎಲ್ಲಕ್ಕೂ ಸ್ವಾಗತ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕನ್ನಡತೆ - ‘ಕನ್ನಡ’ದ ಜೊತೆ ಗೊಂದಲ ಉಂಟುಮಾಡಬಹುದು, ಸನ್ನಡತೆ ಏಕಿರಬಾರದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

mnsrao ಅವರೇ ನಿಮ್ಮ ಸನ್ನಡತೆ ಪದದ suggestion ಧನ್ಯವಾದಗಳು. ಸನ್ನಡತೆ ಪದದ ಬಗ್ಗೆ ನನಗನಿಸಿದ್ದು. ಇದು ಸಂಸ್ಕೃತದ 'ಸತ್' ಹೊಂದಿದೆ. ಪಕ್ಕಾ ಕನ್ನಡೀಕರಣ ( ನಮ್ಮ culture ಗೆ ಹೊಂದಿಸಲು ) ಮಾಡಿದರೆ "ಚನ್ನಡತೆ" ಯೂ ಆಗಬಹುದು. ಆದರೆ ಈ ಪದಗಳು "ಗುಣವಾಚಕದ ರೀತಿ" ಕಾಣುತ್ತದೆ. ಬಹುಶ ಈ ಬರಹದ ಮೊದಲಿನ ಮೇಷ್ಟ್ರು ಸಂವಾದವನ್ನು ನೀವು ಓದಿದ್ದೀರುತೀರಿ. ಅಲ್ಲಿನ ಸಂಸ್ಕೃತ ಮೇಷ್ಟರ ಮನಸ್ತಿತಿ uncomman ಏನೂ ಅಲ್ಲ. ಇಲ್ಲೂ, ಸಂಪದದಲ್ಲೂ, ವೈದಿಕ ಸಂಸ್ಕೃತಿಯಷ್ಟೇ ಭಾರತೀಯ ಸಂಸ್ಕೃತಿ, ವೈದಿಕ ಮತವಷ್ಟೇ ಹಿಂದೂ ಧರ್ಮ ಅಂತ ಈಗಲೂ ನಂಬಿಕೊಂಡು ಜಗಳಕ್ಕಿಳಿಯುವವರನ್ನು ನಾನು ನೋಡಿದ್ದೇನೆ, face ಸಹ ಮಾಡಿದ್ದೇನೆ. ಹಿಂದೆ ಕೆಲವು ತಿಂಗಳುಗಳ ಹಿಂದೆ ಸಂಸ್ಕೃತ ವಿಶ್ವ ವಿಧ್ಯಾನಿಲಯದ ಬಗ್ಗೆ ಚರ್ಚೆ ನೆಡೆಯುವಾಗ ಹಲವರು ಕನ್ನಡ ಸಂಸ್ಕೃತಿ ಅಂದರೆ ಅದು ಸಂಸ್ಕೃತವೇ!, ಸಂಸ್ಕೃತ ಸಂಸ್ಕೃತಿಯೇ!!, .. ಕನ್ನಡಕ್ಕೆ, ಕನ್ನಡಿಗರಿಗೆ ಸ್ವನ್ತಿಕೆಯಿಲ್ಲ ಅಂತ ವಾದಿಸಿದ್ದರು. ಅಲ್ಲಿ ಅವರು ಸಂಸ್ಕೃತ ಮತ್ತು ಸಂಸ್ಕೃತಿ ಪದಗಳ ಬಗ್ಗೆಗಿನ ಸಾಮ್ಯತೆಗೆ ಒತ್ತುಕೊಟ್ಟೆ ತಮ್ಮ ವಾದಗಳನ್ನು ಇಡುತ್ತಿದ್ದರು. ಸಂಸ್ಕೃತಿಗೆ ( culture ಗೆ ಅಲ್ಲ!) ಸಂಸ್ಕೃತದ ನಂಟು ಇರಬೇಕಾದರೆ ಕನ್ನಡತೆಗೆ ಕನ್ನಡದ ನಂಟು ಇರಲಿ ಅನ್ನೋದೇ ನನ್ನ ಅಭಿಪ್ರಾಯ. ಅಲ್ಲದೆ 'ಕನ್ನಡ' ಪದದ ಅರ್ಥ 'ಒಂದು ಭಾಷೆ' ಅನ್ನೋದರಿಂದ ಮೇಲೆತ್ತಲ್ಪಟ್ಟು ಒಂದು ಜನಾಂಗದ, ಪರಂಪರೆ, ಆಚಾರ ವಿಚಾರ ನಂಬಿಕೆಗಳನ್ನು ಪ್ರತಿನಿಧಿಸಲಿ ಅನ್ನುವ ಆಸೆಯೂ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡತೆ - ಸನ್ನಡತೆ - ಚೆನ್ನಡತೆ, ಇವು ಗುಣವನ್ನು ತೋರುವ ಪದಗಳೆನಿಸುತ್ತದೆ. ಹಾಗಾಗಿ ‘ಆಚಾರ ಅಥವ ಪರಂಪರೆ ‘ ಪದ ಬಳಕೆ ಉಚಿತವೊ...?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಮಮೋಹನರೆ ನಿಮ್ಮ ಆಸಕ್ತಿಗೆ ಧನ್ಯವಾದಗಳು. ಇಲ್ಲಿಯೇ culture ಅನ್ನೋ ಪದದ ಅರ್ಥ ಏನು ಅನ್ನೋದು ಉದ್ಭವಿಸೋದು. ಆಚಾರ ಪರಮ್ಪರೆಗಳು culture ನ ಒಂದು ಭಾಗವೇ. ಮತ್ತು ಇವಷ್ಟೇ culture ಆಗಲ್ಲ ಅನ್ನೋದೂ ನಿಜವೇ.. ಇನ್ನು "ಕನ್ನಡತೆ" ಬಗ್ಗೆ "ಕನ್ನಡ" ಪದಕ್ಕೆ 'ತೆ' ಪ್ರತ್ಯಯ ಸೇರಿಸಿ ಓದಿಕೊಳ್ಳಿ. ಆಗ ಕನ್ನಡತ ತನ ಅನ್ನೋ ಅರ್ಥ ಬರುತ್ತೆ ಆ ಅರ್ಥದಲ್ಲಿ ಕನ್ನಡತನವನ್ನು ಕನ್ನಡತೆ ಚನ್ನಾಗಿ ಪ್ರತಿನಿಧಿಸುತ್ತೆ. ಕನ್ನಡದ culture ಅಂದ್ರೆ "ಕನ್ನಡದೆಲ್ಲವೂ"! ಕನ್ನಡದ ಎಲ್ಲವನ್ನೂ ಕನ್ನಡ ಪದಕ್ಕಿಂತ ಉತ್ತಮವಾಗಿ ಬೇರೆ ಯಾವ ಪದ ಪ್ರತಿನಿಧಿಸುತ್ತೆ?!.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೌಜನ್ಯಯುತ ಸೌಮ್ಯ ಕಮೆ೦ಟಿಗೆ ನನ್ನ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾದ-ವಿವಾದಗಳ ನಡುವೆ ಯಾವುದೇ ಕಾರಣಕ್ಕೂ ಯಾವುದೆ ರೀತಿಯಲ್ಲೂ ಕನ್ನಡಕ್ಕೆ ಅಪಮಾನವಾಗಬಾರದು, ಅಪಮಾನವಾದರೆ ಸಹಿಸಲು ಸಾದ್ಯವಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಮ ಮೋಹನರೆ ಅವರು ನನ್ನ ಮೇಲಿನ ವೈಯಕ್ತಿಕ ಸಿಟ್ಟನ್ನು "ಕನ್ನಡ" ದ ಮೇಲೆ ತೀರಿಸ್ಕೊಂಡರು. ಹೋಗಲಿ ಬಿಡಿ ಅವರಿಗೆ ಭಾಷೆ, ವ್ಯಾಕರಣ, ಕನ್ನಡತೆಯ ಪರಿಚಯ ಏನೂ ಗೊತ್ತಿಲ್ಲ. ಕ್ಷಮಿಸಿಬಿಡೋಣ. ಇನ್ನು "ಕನ್ನಡತೆ" ಅನ್ನೋ ಪದವನ್ನು ಕನ್ನ + ಡತೆ ಅಂತ ಬಿಡಿಸಲು ಸಾಧ್ಯವಿಲ್ಲ. ಡತೆ ಅನ್ನೋ ಪದಕ್ಕೆ ಯಾವ ಅರ್ಥವೂ ಇಲ್ಲ. .......... "ಕನ್ನ" ವಿಷಯಕ್ಕೆ ಸಂಬಂಧಪಟ್ಟಂತೆ ಇನ್ನು ಶಂಬಾ ಜೋಶಿಗಳ ವಾದಕ್ಕೆ ಹೋದರೆ ಶಿವ ದಕ್ಷಿಣ ಮೂಲದ ದೇವರು. ಅಂದರೆ ದ್ರಾವಿಡರ ದೇವರು. ( ಈಗ ಬಿಡಿ ಎಲ್ರೂ ಪೂಜಿಸ್ತಾರೆ. ) ರುದ್ರಾದ್ಯಾಯದಲ್ಲಿ ಶಿವನನ್ನು "ತಸ್ಕರ" ( ಬಹುಷ....ತಸ್ಕರಾಭ್ಯಾಂ ನಮ: ಅಂತಾನೋ ಅತ್ವ ಓ ತಸ್ಕರ ನನ್ನನ್ನು ಹಿಂಸಿಸ ಬೇಡ ಅಂತಾನೋ.. ನೋಡಬೇಕು! ) ಅಂತ ಕರೆದಿದ್ದಾರೆ. ತಸ್ಕರ ಅಂದ್ರೆ ಕಳ್ಳ. ಕನ್ನಡಿಗರು ಮೂಲತಹ ರೈತಾಪಿ ಜನಾಂಗದವರು. ಹಸು, ಕರು ಸಾಕಿಕೊಂಡು ಬಾಳುತ್ತಿದ್ದವರು. ಕನ್ನಡದಲ್ಲಿ "ಕಳ್" ಅಂದ್ರೆ ಹಾಲು. ಹೀಗೆ ಹಾಲು ಮಾರಿ, ಪಶುಪಾಳನೆಯಿಂದ ಬದುಕುತ್ತಿದ್ದ ಜನಾಂಗ ಕಣ್ಣ ಜನಾಂಗ. ಹೀಗೆ ಕಳ್ ರು.. ಕಣ್ಣರು...ಕನ್ನಡಿಗರು ಆದರು. ಕನ್ನಡದಲ್ಲಿ ಕಳ್ಳ, ಕಳವು ಅನ್ನೋ ಪದವೂ ಇದೆ. ಜೋಷಿಯವರು ಕಳ್ ರು > ಕಂಣರು ಅನ್ನೋ ಪದವನ್ನು ಕಳ್ಳರು ಅನ್ನೋ ಪದಕ್ಕೆ ಆರೋಪಿಸಿಕೊಂಡು , ಜೊತೆಗೆ ಮೇಲಿನ ರುದ್ರಾಧ್ಯಾಯದಲ್ಲಿ ಶಿವನನ್ನು ತಸ್ಕರ ಅಂತ ಕರೆದಿದ್ದನ್ನೂ ತೆಗೆದುಕೊಂಡು ಕನ್ನಡ ಪದದ ವ್ರುತ್ಪತ್ತಿ ಕೊಟ್ಟರು. ( ಈಗ ಈ ವಾದ ಬಿದ್ದು ಹೋಗಿದೆ) ನೆನಪಾಯ್ತು ಬರೆದೆ. "ಕನ್ನ" ಹಾಕೋ ನಡತೆ ಅಂದಿದ್ದಕ್ಕೆ ಬೇಜಾರು ಮಾಡಿಕೊಲ್ಲೋದರ ಬದಲು ಇಂತವರಿಗೆ ತಿಳಿಸಿ ಹೇಳುವುದು ಉತ್ತಮ. .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಕನ್ನ" ಚೆನ್ನಾಗಿಯೇ ಹಾಕಿದ್ದಾರೆ ಜ೦ಜಡದಲ್ಲಿ ಸಿಲುಕಿರುವವರು. ಕನ್ನಡ ಇವರ ಸ್ವತ್ತಾ? ನೆಟ್ಟಗೆ ಬರೆದಾಗ ಗುರ್ ಎನ್ನುವವರಿ೦ದಲೇ ಕನ್ನಡಕ್ಕೆ ಅಪಮಾನ ಎ೦ದು ನಾನು ಭಾವಿಸುವೆ. ಎಲ್ಲ ಬಲ್ಲೆನೆ೦ಬಾತನ ಮಾತು ಬರಿ ಗುಲ್ಲು ನೋಡಾ ಸರ್ವಜ್ಞ|
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

’ಕನ್ನಡತೆ’ ಗಿಂತಲೂ ’ಅವೈದಿಕತೆ’ ಹೆಚ್ಚು ಸೂಕ್ತವಾಗಿದೆ. LoL ಅದು ತಮ್ಮ ವಾದವೇ ತಾನೆ. ಇನ್ನೊಂದರ ಬಗ್ಗೆ ದ್ವೇಷ ಕಟ್ಟಿಕೊಂಡು ಏನೇ ಮಾಡಿದರೂ ಅದು ಕಾಲ ಕಸವಾಗಿ ಹೋಗುವುದರಲ್ಲಿ ಅನುಮಾನವಿಲ್ಲ. ಇರಲಿ ತಮ್ಮ ಪ್ರಯತ್ನ ಮಾಡಿ, ತಡೆಯುವವರಾರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧. ಅವೈದಿಕತೆ ( ಮತ್ತು ವೈದಿಕತೆ) ಅಂದರೇನು? ಮತ್ತು ನಾನು ಅವೈದಿಕತೆಯನ್ನು ಪ್ರತಿಪಾದಿಸುತ್ತಿದ್ದೇನೆ ಅಂತ ನೀವು ಹೇಗೆ ಹೇಳ್ತಾ ಇದೀರಿ? ವೇದಗಳು ನನ್ನಂತ ಕನ್ನಡಿಗನಿಗೆ ಏಕೆ ಆದರ್ಶವಾಗಬೇಕು? (( (ಅ)ವೈದಿಕತೆಯ reference ತೆಗೆದುಕೊಂಡ ಕಾರಣ ಈ ಪ್ರಶ್ನೆ) ನಿಮ್ಮನ್ನು ಯಾರಾದರೂ ಅ-christian , ಅ-ಇಸ್ಲಾಂ, ಅ-ಪಾರ್ಸಿ, ಅ-ಜೈನ, ಅ-ಬೌದ್ದ ಅಂತ ಯಾರಾದರೂ ಬೊಟ್ಟು ಮಾಡಿದ್ದಾರ?.. ಮಾಡಿಲ್ಲದಿದ್ದರೆ ಅವೈದಿಕ ಪ್ರಸ್ತಾಪ ಏಕೆ? ೨. ದ್ವೇಷದ ಬಗ್ಗೆ ನಂತರ ಮಾತಾಡೋಣ... ಅದು ನನ್ನಲ್ಲಿದೆಯೋ ತಮ್ಮಲ್ಲಿದೆಯೋ ಅಂತ ಮುಂದೆ ನಿಮಗೆ ತಿಳಿಯುತ್ತೆ. .. ಇದೆ ಚರ್ಚೆ ಮುಂದುವರೆದಲ್ಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

{ನಾನು ಅವೈದಿಕತೆಯನ್ನು ಪ್ರತಿಪಾದಿಸುತ್ತಿದ್ದೇನೆ ಅಂತ ನೀವು ಹೇಗೆ ಹೇಳ್ತಾ ಇದೀರಿ?} ಇದಕ್ಕೆ ಉತ್ತರ ನಿಮ್ಮದೇ ನಂತರದ ವಾಕ್ಯದಲ್ಲಿದೆ ನೋಡಿ : "ವೇದಗಳು ನನ್ನಂತ ಕನ್ನಡಿಗನಿಗೆ ಏಕೆ ಆದರ್ಶವಾಗಬೇಕು?" ಅಂದರೆ ಇಲ್ಲಿ "ಕನ್ನಡಿಗನಿಗೆ" ಅಂತ ಒತ್ತಿ ಹೇಳಿದ್ದೀರಿ ತಾನೆ. ಇದರ ಭಾವಾರ್ಥ "ನಾನು ಕನ್ನಡಿಗನಾಗಿದ್ದರಿಂದ ನನಗೂ ವೇದಕ್ಕೂ ವೈರುಧ್ಯ" ಎಂದಾಯಿತಲ್ಲವೇ? ಉದಾಹರಣೆಗೆ "ಏಸು ನನ್ನಂಥಾ ಹಿಂದುವಿಗೆ ಏಕೆ ಆದರ್ಶವಾಗಬೇಕು?" ಎಂದರೆ ಇದರ ಅರ್ಥವೇನು ಊಹಿಸಿ. ಏಸುವಿನ ಮೇಲೆ ನನಗೆ ದ್ವೇಷ ಇದೆ ಅಂತಲ್ಲ. ಆದರೆ ಏಸು 'ಅಹಿಂದು' ವಾಗಿರುವುದರಿಂದ ನನಗೆ ಆತ ಆದರ್ಶವಾಗಲಾರ ಎಂದು. ಇದನ್ನೇ ನಿಮ್ಮ ವಾಕ್ಯಕ್ಕೆ ಅನ್ವಯಿಸಿದರೆ "ವೇದ ಕನ್ನಡತೆಗೆ ವಿರುಧ್ಧವಾಗಿರುವುದರಿಂದ (ಅಥವಾ ಹಾಗೆ ನೀವು ತಿಳಿದುಕೊಂಡಿರುವುದರಿಂದ) ನನಗೆ ಅದು ಆದರ್ಶವಾಗಲಾರದು" ಎಂದಾಗುತ್ತದೆ. ಹೌದೇ ಅಲ್ಲವೇ ಎಂದು ಕೇಳುವ ಸೌಜನ್ಯ ನನ್ನಲ್ಲಂತೂ ಇದೆ. ಆದರೆ ನಿಮಗರಿಯದೇ ಉದುರಿದ ನಿಮ್ಮ ಮಾತಿನ ಮುತ್ತುಗಳನ್ನು ಹಿಂದೆಗೆಯುವಂತೆ ಇಲ್ಲ. ಒಂದುವೇಳೆ ನಾನೊಬ್ಬ ಸಾಮಾನ್ಯ ಮನುಷ್ಯನಾಗಿದ್ದು, ವೇದದ ಬಗ್ಗೆ ಗೊಡವೆ ಇಲ್ಲದವನಾಗಿದ್ದರೆ ನಾನು "ವೇದಗಳು ನನ್ನಂಥ ಸಾಮಾನ್ಯನಿಗೆ ಏಕೆ ಆದರ್ಶವಾಗಬೇಕು?" ಅಂತ ಕೇಳುತ್ತಿದ್ದೆ (ವೇದ ಸಾಮಾನ್ಯ ಮನುಷ್ಯನಿಗೆ ಏಕೆ ಪ್ರಸ್ತುತ ಅಲ್ಲ ಎನ್ನುವ ಪ್ರಶ್ನೆ ಇಲ್ಲಿ ಬೇಡ). ಇದಕ್ಕೂ ನೀವಂದಿದ್ದಕ್ಕೂ ವ್ಯತ್ಯಾಸ ನೋಡಿ. ಅಂದರೆ ನಿಮ್ಮೊಳಗೆ ಅದೇಕೋ ವೇದದ ಬಗ್ಗೆ ವೈರತ್ವ ಇದೆ. ಇದಕ್ಕೆ ಕಾರಣ ಏನೋ ಗೊತ್ತಿಲ್ಲ. ಇದೇ ವೈರತ್ವ ಬೇರೆ ಲೇಖನಗಳಲ್ಲೂ ಸಾಕಷ್ಟು ಬಾರಿ ಪ್ರಕಟಗೊಂಡಿದೆ. ವೈರತ್ವ ಎಂದಿಗೂ ಒಳ್ಳೆಯದಲ್ಲ. ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Blind ವೈದಿಕ ದ್ವೇಷವೇ ಹಲವರ ಪರಮ ಗುರಿ. ಅದರ ನಿಟ್ಟಿನಲ್ಲಿ ಅವರು ಸವೆಸುವ ಜಾಡೆಲ್ಲ ಜ೦ಜಡದ್ದು! ಹಾಳಾದ್ದು ಈ ವೈದಿಕತೆಯನ್ನು ಎಷ್ಟೆಷ್ಟು ತುಳಿದರೂ ಅಪಮಾನಿಸಿದರೂ ಅದು ಅಳಿಯುತ್ತಿಲ್ಲ.. ಛೆ! A Haunting spectre...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸ್ವವರಲ್ಲಿ ನನ್ನದೊಂದು ಕೋರಿಕೆ. ಇಲ್ಲಿ ಕೆಲವರಿಗೆ ನನ್ನ ಮೇಲೆ ಅತಿ ಪ್ರೀತಿ ಅನ್ಸುತ್ತೆ ;) . ಬಹುಶ ಇದಕ್ಕೆನೇ ನಾನು ಬರೆದ ವಿಷಯಗಳ ವಿಮರ್ಶೆ ಬಿಟ್ಟು ನನ್ನ ವಿಮರ್ಶೆಗೆ ಇಳಿಯುತ್ತಾರೆ. ದಯವಿಟ್ಟು ವಿಷಯದ ವಿಮರ್ಶೆ ಮಾಡಿ ಅಂತ ಕೋರಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇರೊಬ್ಬರಿಗೆ ಡಿಕ್ಟೇಟ್ ಮಾಡೋ ದುಶ್ಚಟ, ಅಪಮಾನಿಸುವ ಸ್ಯಾಡಿಸಮ್ ಬಿಟ್ಟರೆ ಅಲ್ಲಿ ಒ೦ದು ಅರ್ಥಪೂರ್ಣ ಚರ್ಚೆ ಖ೦ಡಿತ ಸಾಧ್ಯ. ಇನ್ನು ನಿಮ್ಮ ಮೇಲೆ ಪ್ರೀತಿ ಗೀತಿ...ಬಿಡಿ ಏನೂ ಇಲ್ಲಪ್ಪ.. ಧರ್ಮ ಸ೦ಸ್ಥಾಪನಾರ್ಥಾಯ ಸ೦ಭವಾಮಿ ಯುಗೇ ಯುಗೇ| ಕಳೆಕೀಳಲು ಹೊಲವೆಲ್ಲಾ ಸುತ್ತಬೇಕಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತ್ರುರವರೇ ಸಂಪದಕ್ಕೆ ಬಂದಾಗಿನಿಂದ ತಮ್ಮ ಬರಹಗಳನ್ನು ಗಮನಿಸುತ್ತಾ ಬಂದಿದ್ದೇನೆ. "ವಿದ್ಯಾ ದಧಾತಿ ವಿನಯಂ",ವಿದ್ಯಾವಂತನಿಗೆ ವಿನಯವೇ ಭೂಷಣ ಎಂಬ ಸಂಸ್ಕೃತ ಸುಭಾಷಿತವನ್ನು ತಾವು ಕೇಳಿರಬಹುದು. ತಮ್ಮಲ್ಲಿ ನಿಜಕ್ಕೂ ನಾನು ವಿನಯವನ್ನು ಕಾಣಲೇ ಇಲ್ಲ.ಹಿರಿಯರಾಗಲೀ,ಕಿರಿಯರಾಗಲೀ ನಿಮ್ಮಮಾತಿನ ಬಾಣಗಳಿಂದ ಅವರನ್ನು ಘಾಸಿಗೊಳಿಸುವ ಹಾಗೂ ನಿಮ್ಮ ವಾದಗಳನ್ನು ಸಮರ್ಥಿಸಿಕೊಳ್ಳುವಾಗ ನಿಮ್ಮಂಥ ಅಧ್ಯಯನ ಶೀಲರು ಬೇರೆ ಯಾರೂ ಇಲ್ಲವೆಂಬಂತೆ ಬರೆಯುವ ಪರಿಯನ್ನು ಇಡೀ ಸಂಪದಲ್ಲಿ ತಮ್ಮ ಬರಹಗಳಲ್ಲಿ ಮಾತ್ರ ನಾನು ಕಂಡಿದ್ದೇನೆ. <<ರಾಮ ಮೋಹನರೆ ಅವರು ನನ್ನ ಮೇಲಿನ ವೈಯಕ್ತಿಕ ಸಿಟ್ಟನ್ನು "ಕನ್ನಡ" ದ ಮೇಲೆ ತೀರಿಸ್ಕೊಂಡರು. ಹೋಗಲಿ ಬಿಡಿ ಅವರಿಗೆ ಭಾಷೆ, ವ್ಯಾಕರಣ, ಕನ್ನಡತೆಯ ಪರಿಚಯ ಏನೂ ಗೊತ್ತಿಲ್ಲ. ಕ್ಷಮಿಸಿಬಿಡೋಣ.>> ಇದರ ಅರ್ಥವೇನು ನರಸಿಂಹ ಭಂಗಿಯವರಿಗೆ ವ್ಯಾಕರಣ ಗೊತ್ತಿಲ್ಲ ಎಲ್ಲವನ್ನು ತಿಳಿದವರು ತಾವು ಮಾತ್ರ ಅಲ್ಲವೇ?ಭಂಗಿಯವರು ಬರೆಯುವಾಗಿನ ಭಾಷಾ ಸೌಂದರ್ಯ ತಮ್ಮ ಬರವಣಿಗೆಯ ಸೌಂದರ್ಯಕ್ಕಿಂತಾ ಉತ್ತಮವಾಗಿದೆ ಇದನ್ನು ಬಹುಶಃ ತಾವು ಗಮನಿಸಿಕ್ಕಿರಲಿಲ್ಲ. ನಿಜಕ್ಕೂ ನಾನಂತೂ ವ್ಯಾಕರಣ ಶಾಸ್ತ್ರದಲ್ಲಿ ತಮ್ಮಷ್ಟು ಅಧ್ಯಯನ ಮಾಡಿಲ್ಲ.ಏಕೆಂದರೆಇನ್ನೊಬ್ಬರಿಗೆ <<ಭಾಷೆ, ವ್ಯಾಕರಣ, ಕನ್ನಡತೆಯ ಪರಿಚಯ ಏನೂ ಗೊತ್ತಿಲ್ಲ. ಕ್ಷಮಿಸಿಬಿಡೋಣ.>>ಎನ್ನುವಷ್ಟು ದಾರ್ಷ್ಟ್ಯ ಖಂಡಿತಾ ನನ್ನಲ್ಲಿಲ್ಲ. ಇನ್ನು ಋಷಿ ಪ್ರಣೀತವಾದ ಪಾಣಿನಿಯ ವ್ಯಾಕರಣ ಶಾಸ್ತ್ರದ ಒಂದು ಭಾಗವಾದ ಲಿಂಗ ನಿರ್ಣಯವನ್ನೇ ತಾವು ಅವೈಜ್ಞಾನಿಕ ಎಂದುಬಿಟ್ಟಿರಿ. ಇದರಲ್ಲಿ ಅನೇಕ ವಾದ ವಿವಾದಗಳನ್ನು ನಾನು ಗಮನಿಸಿದಾಗ ಕಂಡದ್ದು ನೀರ್ಕಜೆಯವರಿಗೆ ತಾವು ಬರೆದದ್ದು <<ನೀರ್ಕಜೆ ಮೊದಲು 'ವ್ಯಾಕರಣ' ಅಂದ್ರೆ ಏನು , 'ಭಾಷಾವಿಜ್ಞಾನ' ಅಂದ್ರೆ ಏನು ಅಂತ ಸ್ವಲ್ಪ ನಾದ್ರೂ ಓದಿಕೊಂಡು ಚರ್ಚೆಗೆ ಬನ್ನಿ. ಇನ್ನು ಮುಂದೆ ಆದರೂ ವಿಷಯದ 'ಅ ಆ ಇ ಈ' ನಾದ್ರೂ ತಿಳಿಯದೆ ಚರ್ಚೆಗೆ ಬರಬೇಡಿ.>> ಕಿತ್ತಾಡಕ್ಕೆ ನಿಮ್ಮಷ್ಟು ಸಮಯವಿಲ್ಲ. ವಿಷಯ ಇದ್ರೆ ಮುಂದುವರೆಯಿ>> <<ರೀ ಸ್ವಾಮಿ ಎಷ್ಟನೆ ಕ್ಲಾಸು ಓದಿದ್ದೀರಿ ನೀವು! ನಿಮಗೆ ಕನ್ನಡ ಓದಕ್ಕೆ ಬಂದ್ರೆ?! ನಾನು ಎಲ್ಲಿ ಸಂಸ್ಕೃತ ಅವೈಜ್ಞಾನಿಕ ಅಂತ ಹೇಳಿದೀನಿ ಅಂತ ತೋರ್ಸಿ. ನಾನು ಹೇಳ್ತಾ ಇರೋದು ಸಂಸ್ಕೃತದಲ್ಲಿ ಲಿಂಗ ನಿರ್ಧಾರ ಅವೈಜ್ನಾನಿಕ ಅಂತ!.>> ಇದನ್ನು ಓದಿದಾಗ ನಿಜಕ್ಕೂ ನನಗೆ ಖೇದವೆನಿಸಿತು. ಎಷ್ಟೇ ತಿಳಿದ ಮನುಷ್ಯನಾದರೂ ಅವನಲ್ಲಿ ವಿನಯ ಬೇಕು. ನನಗೆ ಯಾವುದೇ ಪೂರ್ವಾಗ್ರಹ ವಿಲ್ಲ. ತಮ್ಮ ಅಧ್ಯಯಯನವನ್ನು ನಾನು ಪ್ರಶ್ನಿಸುವುದೂ ಇಲ್ಲ ನಿಮ್ಮ ವ್ಯಾಕರಣ ಜ್ಞಾನವನ್ನು ಗ್ರಂಥವೊಂದರ ಮೂಲಕ ತಾವೇಕೆ ಹಂಚಿ ಕೊಳ್ಳಬಾರದು. ಇಂತಹ ಅನವಶ್ಯಕ ಚರ್ಚೆಗಳಿಗಿಂತ ಅದು ಮುಂದಿನ ಪೀಳಿಗೆಗೆ ಅನುಕೂಲ ವಾಗುವುದಲ್ಲವೇ? ಇನ್ನು ಸಂಸ್ಕೃತಿಯೆಂಬ ಶಬ್ದದ ಬದಲಾವಣೆಯ ಅಗತ್ಯವೇನಿದೆ? ಅಥವಾ ನೀವು ಬರೆಯುವುದರಿಂದ ಯಾರೂ ಅದನ್ನು ಬದಲಾಯಿಸುವುದೂ ಇಲ್ಲ. ತಮಗೇನು ಸಂಸ್ಕೃತ ದ್ವೇಷವೇ? ಯಾವ ಅಧ್ಯಯನಶೀಲನಾದ ಸಂಸ್ಕೃತ ಪಂಡಿತನೂ ಸಂಸ್ಕೃತ ಕಲಿತರೆ ಮಾತ್ರ ಸಂಸ್ಕೃತಿ ಬರುತ್ತೆ ಅಂತ ಹೇಳಿದ್ದನ್ನು ನಾನಂತೂ ಇಲ್ಲಿಯ ತನಕ ಕೇಳಿಲ್ಲ, ಹಾಗೆ ಹೇಳಿದ ನಿಮ್ಮ ಮೇಷ್ಟೃ ಹಾಗೂ ಅವರ ವಿಚಾರಗಳ ಬಗ್ಗೆ ನನಗೆ ಕನಿಕರವೆನಿಸುತ್ತದೆ. ನಾವೂ ಕನ್ನಡಿಗರು ಕನ್ನಡ ನಮ್ಮ ಮಾತೃ ಭಾಷೆ ಕನ್ನಡವನ್ನು ಮನಸಾರೆ ಪ್ರೀತಿಸುತ್ತೇವೆ. ಆದರೆ ಪ್ರತಿಯೊಬ್ಬ ಬರಹಗಾರನೂ ತನ್ನಿಂದ ಸಾಧ್ಯವಾದಷ್ಟು ಎಲ್ಲ ಭಾಷೆಗಳಲ್ಲಿರುವ ರಸವನ್ನು ಸವಿದು ತನದೇ ಆದ ಹೊಸ ಆವಿಷ್ಕಾರವನ್ನು ಸಾಹಿತ್ಯ ಜಗತ್ತಿಗೆ ಕೊಟ್ಟಾಗ ಅದು ಹೆಚ್ಚು ರಸಪೂರ್ಣವಾಗಿರಬಹುದು. ಕಲ್ಚರ್ ಎಂಬ ಶಬ್ದವನ್ನು ಸಂಸ್ಕೃತಿಗೆ ಬದಲಾಗಿ ಕನ್ನಡತೆಯೆನ್ನುವದಕ್ಕಿಂತಾ ಕನ್ನಡನಾಡಿನ ಸಂಸ್ಕೃತಿಯನ್ನು ಕನ್ನಡತೆಯೆಂದು ಕರೆಯಬಹುದು ಇದು ನನ್ನ ಅಭಿಪ್ರಾಯ ಇದೇ ಸರಿ ಎಂದು ನಾನು ಹೇಳಲಾರೆ ಏಕೆಂದರೆ ನನ್ನ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ವಿದ್ಯಾರ್ಥಿಯೇ ಎಷ್ಟು ಕಲಿತರೂ ವಿದ್ಯೆಯ ಭಂಡಾರ ಮುಗಿಯಲಾರದು. ನಿಮ್ಮ ಪ್ರಕಾರ ಇನ್ನು ಕನ್ನಡ ಸಂಸ್ಕೃತಿ ಇಲಾಖೆಯವರು ಹೆಸರು ಬದಲಿಸಬೇಕು ಎಂತೆಂಥ ದೊಡ್ಡ ಕವಿಗಳೂ ಸಹ ಎಷ್ಟು ವಿನಯಶೀಲರಾಗಿದ್ದಾರೆ ರಘುವಂಶವನ್ನು ಬರೆದ ಕಾಳಿದಾಸ ಹೇಳುತ್ತಾನೆ "ಮಂದಃ ಕವಿಯಶಃ ಪ್ರಾರ್ಥೀ ಗಮಿಷ್ಯಾಮ್ಯುಪಹಾಸ್ಯತಾಮ್" ಅಂದರೆ ಕವಿಗಳ ಯಶಸ್ಸನ್ನು ಪಡೆಯಲು ಬಯಸುವ ಮಂದ ಬುದ್ಧಿಯಾದ ನಾನು ಉಪಹಾಸಕ್ಕೊಳಗಾದೇನು! ಇಂತಹ ವಿನಯ ಶೀಲತೆಯಿಂದ ಅವನ ಕಾವ್ಯಗಳು ಇವತ್ತಿಗೂ ಜಗದ್ವಿಖ್ಯಾತವಾಗಿವೆ. ತಮ್ಮಲ್ಲಿ ನನ್ನ ಕೋರಿಕೆಯಿಷ್ಟೇ ತಮ್ಮ ವಿದ್ಯೆಗೆ ತಕ್ಕಂಥ ವಿನಯ ತಮ್ಮಲ್ಲಿ ಬಂದಲ್ಲಿ ನಿಜಕ್ಕು ತಮ್ಮ ಪ್ರತಿಭೆಗೆ ಮುಕುಟವಿಟ್ಟಂತೆ. ಯಾರನ್ನೂ ನೋಯಿಸುವ ಉದ್ದೇಶ ನನ್ನದಲ್ಲ .ಆದರೆ ಕಣ್ಣೆದುರು ನಡೆಯುವುದನ್ನು ನೋಡಿಯೂ ಇದು ನನಗೆ ಸಂಬಂಧವೇ ಇಲ್ಲ ಎನ್ನುವಂತೆ ಇರುವುದೂ ಸಾಧ್ಯವಿಲ್ಲ. ತಪ್ಪೇನನ್ನಾದರೂ ಬರೆದಿದ್ದರೆ ಸಂಪದಿಗರು ಕ್ಷಮಿಸಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯ ಎ೦ಬುದು ಇದ್ದರೆ ಅದು ಇಲ್ಲ್ಲಿ ಇಲ್ಲಿ..ಈ ಪ್ರತಿಕ್ರಿಯೆಯಲ್ಲಿ. ನಾಗರತ್ನರವರ ಈ ಪ್ರತಿಕ್ರಿಯೆ ಅಹ೦ನಿದ ತು೦ಬಿತುಳುಕಾಡುತ್ತಿರುವ ಎಲ್ಲ ಪೊಳ್ಳು ವಿದ್ವಾ೦ಸ ಸ೦ಪದಿಗರ ಕಣ್ಣು ತೆರೆಸಬೇಕು. ವಿನಯ ಸಭ್ಯತನವಿಲ್ಲದ ಅಹ೦ಕಾರದ ವಿದ್ವತ್ತು ಹೊಲಸಿಗೆ ಸಮಾನ. ಮಾಗಿದ ಫಲ ತು೦ಬಿದ ಕೊ೦ಬೆ ಹೇಗೆ ಬಾಗಿರುತ್ತದೆಯೋ ಹಾಗೆ ವಿನಯತೆಯ ನ್ನು ಸಾಕ್ಷಾತ್ಕರಿಸಿಕೊ೦ಡ ಪ೦ಡಿತರು ಬಾಗುತ್ತಾರೆ. ಇದೊ೦ದು ಸ೦ಸ್ಕೃತದ ಸುಭಾಷಿತದ ಸೂಕ್ತಿ. ನಿಜ, ನಾನು ಹಲವಾರು ಬಾರಿ ಕಟಕಿಯಾಡಿದ್ದೇನೆ. ಆ ಕಟಕಿಯ ಹಿ೦ದೆ ಒ೦ದು ಸದುದ್ದೇಶವಿದೆಯೇ ವಿನಃ ನನಗೆ ಯಾವ ದುರುದ್ದೇಶವೂ ಇಲ್ಲ. ಅಹ೦ಕಾರರಹಿತವಾದ, ನಾನು ಇನ್ನೂ ಕಲಿಯಬೇಕೆ೦ಬ ಹುಮ್ಮಸ್ಸ್ಯು ಇರುವ ಮನಸ್ಸು ಶ್ರೇಷ್ಠ ಮನಸ್ಸು. ಯಾವ ಪೂರ್ವಾಗ್ರಹಗಳಿಲ್ಲದ ಒ೦ದು ಸ್ವಸ್ಥ ಸಮಾಜದ ಕಾಳಜಿಯೇ ನಮ್ಮ ಗುರಿಯಾಗಬೇಕು. ಈಗ ಸ೦ಸ್ಕೃತಿ ಪದ ಏನಾಗಿದೆ. ಅದಕ್ಕೆ ಪರ್ಯಾಯ ಪದದ ಅಗತ್ಯವಿದೆಯಾ? ಸ೦ಸ್ಕೃತ, ಸ೦ಸ್ಕೃತಿಯನ್ನು ನಾನು ದ್ವೇಷಿಸಬೇಕು. ಇಷ್ಟೇ ನನ್ನ ಕಾಳಜಿ ಎ೦ದು ಹೊರಟವನಿಗೆ ಮುಕ್ತತೆಯ, ಸಹೃದತೆಯ ಮಾರ್ಗವನ್ನೂ ತೋರಿಸಬೇಕಾದ ಅನಿವಾರ್ಯತೆಯೂ ಇದೆ ಎ೦ಬುದನ್ನು ನ೦ಬುವವ ನಾನು. ಈ ನಿಟ್ಟಿನಲ್ಲಿ ನಾಗರತ್ನರವರ ಈ ಪ್ರತಿಕ್ರಿಯೆ ಸಕಾಲಿಕ, ಸತ್ವಪೂರ್ಣ, ಸಾತ್ವಿಕವಾದದ್ದು. ಅಹ೦ ನಾಶವೇ ಆಧ್ಯಾತ್ಮತಿಕತೆಯ ಜೀವಾಳ, ಮನುಷ್ಯನ ಅ೦ತಿಮ ಬೆಳವಣಿಗೆ.. (ನಾಗರತ್ನರವರ ಸು೦ದರ ಭಾವೋದ್ರೇಕವಿಲ್ಲದ ಕಮೆ೦ಟಿಗೆ ಯಾವ ಕಟಕಿಯೂ ಬರಲಾರದೆ೦ಬ ಪ್ರಾಮಾಣಿಕ ಅನಿಸಿಕೆ ನನ್ನದು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯ ಎ೦ಬುದು ಇದ್ದರೆ ಅದು ಇಲ್ಲ್ಲಿ ಇಲ್ಲಿ..ಈ ಪ್ರತಿಕ್ರಿಯೆಯಲ್ಲಿ. ನಾಗರತ್ನರವರ ಈ ಪ್ರತಿಕ್ರಿಯೆ ಅಹ೦ನಿದ ತು೦ಬಿತುಳುಕಾಡುತ್ತಿರುವ ಎಲ್ಲ ಪೊಳ್ಳು ವಿದ್ವಾ೦ಸ ಸ೦ಪದಿಗರ ಕಣ್ಣು ತೆರೆಸಬೇಕು. ವಿನಯ ಸಭ್ಯತನವಿಲ್ಲದ ಅಹ೦ಕಾರದ ವಿದ್ವತ್ತು ಹೊಲಸಿಗೆ ಸಮಾನ. ಮಾಗಿದ ಫಲ ತು೦ಬಿದ ಕೊ೦ಬೆ ಹೇಗೆ ಬಾಗಿರುತ್ತದೆಯೋ ಹಾಗೆ ವಿನಯತೆಯ ನ್ನು ಸಾಕ್ಷಾತ್ಕರಿಸಿಕೊ೦ಡ ಪ೦ಡಿತರು ಬಾಗುತ್ತಾರೆ. ಇದೊ೦ದು ಸ೦ಸ್ಕೃತದ ಸುಭಾಷಿತದ ಸೂಕ್ತಿ. ನಿಜ, ನಾನು ಹಲವಾರು ಬಾರಿ ಕಟಕಿಯಾಡಿದ್ದೇನೆ. ಆ ಕಟಕಿಯ ಹಿ೦ದೆ ಒ೦ದು ಸದುದ್ದೇಶವಿದೆಯೇ ವಿನಃ ನನಗೆ ಯಾವ ದುರುದ್ದೇಶವೂ ಇಲ್ಲ. ಅಹ೦ಕಾರರಹಿತವಾದ, ನಾನು ಇನ್ನೂ ಕಲಿಯಬೇಕೆ೦ಬ ಹುಮ್ಮಸ್ಸ್ಯು ಇರುವ ಮನಸ್ಸು ಶ್ರೇಷ್ಠ ಮನಸ್ಸು. ಯಾವ ಪೂರ್ವಾಗ್ರಹಗಳಿಲ್ಲದ ಒ೦ದು ಸ್ವಸ್ಥ ಸಮಾಜದ ಕಾಳಜಿಯೇ ನಮ್ಮ ಗುರಿಯಾಗಬೇಕು. ಈಗ ಸ೦ಸ್ಕೃತಿ ಪದ ಏನಾಗಿದೆ. ಅದಕ್ಕೆ ಪರ್ಯಾಯ ಪದದ ಅಗತ್ಯವಿದೆಯಾ? ಸ೦ಸ್ಕೃತ, ಸ೦ಸ್ಕೃತಿಯನ್ನು ನಾನು ದ್ವೇಷಿಸಬೇಕು. ಇಷ್ಟೇ ನನ್ನ ಕಾಳಜಿ ಎ೦ದು ಹೊರಟವನಿಗೆ ಮುಕ್ತತೆಯ, ಸಹೃದತೆಯ ಮಾರ್ಗವನ್ನೂ ತೋರಿಸಬೇಕಾದ ಅನಿವಾರ್ಯತೆಯೂ ಇದೆ ಎ೦ಬುದನ್ನು ನ೦ಬುವವ ನಾನು. ಈ ನಿಟ್ಟಿನಲ್ಲಿ ನಾಗರತ್ನರವರ ಈ ಪ್ರತಿಕ್ರಿಯೆ ಸಕಾಲಿಕ, ಸತ್ವಪೂರ್ಣ, ಸಾತ್ವಿಕವಾದದ್ದು. ಅಹ೦ ನಾಶವೇ ಆಧ್ಯಾತ್ಮತಿಕತೆಯ ಜೀವಾಳ, ಮನುಷ್ಯನ ಅ೦ತಿಮ ಬೆಳವಣಿಗೆ.. (ನಾಗರತ್ನರವರ ಸು೦ದರ ಭಾವೋದ್ರೇಕವಿಲ್ಲದ ಕಮೆ೦ಟಿಗೆ ಯಾವ ಕಟಕಿಯೂ ಬರಲಾರದೆ೦ಬ ಪ್ರಾಮಾಣಿಕ ಅನಿಸಿಕೆ ನನ್ನದು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರತ್ನ ಅವರೇ ಪ್ರತಿಕ್ರಿಯೆಗೆ ಮತ್ತು "ನನ್ನ" ವಿಮರ್ಶೆಗೆ ಧನ್ಯವಾದಗಳು. ೧. ನನ್ನಲ್ಲಿ ವಿನಯವಿಲ್ಲ ಅಂತ ಹೇಳಿದಿರಿ. ನಾನು ಇಲ್ಲಿ 'ಕೆಲವರು' ವಿಷಯ ತಿಳಿಯದೆ (im )moral policing ಇಳಿಯುವ ಜನರಿಗಷ್ಟೆ "ನೇರವಾಗಿ" ಹೇಳಿದ್ದೇನೆ. ಇವರನ್ನು ನಾನು "ಶಾಸ್ತ ಜಡ" ಅಂತ ಗುರ್ತಿಸಿದ್ದೇನೆ. ಅಂತಹ Id ಗಳಲ್ಲಿ ನರಸಿಂಹ ಭಂಗಿ ಮತ್ತು ಮಹೇಶ ನೀರ್ಕಜೆಯವರವು ಕೆಲವು. ದಯವಿಟ್ಟು ನರಸಿಂಹ ಭಂಗಿಯವರ ಪ್ರತಿಕ್ರಿಯೆ/ಬರಹಗಳನ್ನು ಓದಿ. ಅಲ್ಲಿ ನಿಮಗೆ ಕಾಲೆಳೆಯುವ ಪ್ರತಿಕ್ರಿಯೆ ಬಿಟ್ಟು ಒಂದಾದರೂ informative ಬರಹ ಇದೆಯಾ ಅಂತ ಯೋಚಿಸಿ. ಉಳಿದವರ ಜೊತೆ ನನ್ನ ಪ್ರತಿಕ್ರಿಯೆಗಳು ಸೌಮ್ಯವಾಗಿಯೇ ಇವೆ ಅನ್ನುವುದು ನನ್ನ ನೆನಪು. ಕೆಲವೊಂದು exceptions ಇರಲೂಬಹುದು. ೨. ಇನ್ನು ತಪ್ಪು, ತಪ್ಪು ಅಂತ ಕಂಡಾಗ ( aaga ನನಗೆ samaya iddidre )ನಾನು ಅವನ್ನು ತೋರಿಸಿದ್ದೇನೆ. ಇದನ್ನು ನೀವು ಉದ್ದTaತನ ಅಂತ ಅಂದುಕೊಂಡಿಲ್ಲ ಅಂದುಕೊಂಡಿದ್ದೇನೆ. ಮತ್ತು ನನ್ನ ಎಲ್ಲ ಬರಹಗಳೂ ಪ್ರತಿಕ್ರಿಯೆಗಳೂ ವಿಮರ್ಶೆಗೆ ಓಪನ್ ಆಗಿಯೇ ಇವೆ. ನನ್ನ ಮೂಡ್/ಸಮಯದ ಮಿತಿಯಲ್ಲಿ ನಾನು ಉತ್ತರ/ ಸಮಜಾಯಿಸಿ ಕೊಡಲು ಪ್ರಯತ್ನಿಸಿದ್ದೇನೆ. ಸುಮ್ನೆ ಎಲ್ಲ ಬರಹಗಳಿಗೂ ಜೈಕಾರ ಹಾಕಕ್ಕೆ ನನಗೆ ಬರಲ್ಲ. ೩. ನನಗೇನು ಸಂಸ್ಕೃತ ದ್ವೇಶವೇ ಅಂತ ಕೇಳಿದ್ದೀರಿ. ಬಹುಶ ನೀವು ಇತ್ತೀಚಿಗೆ ನನ್ನ ಬರಹಗಳನ್ನು ಗಮನುಸ್ತಾ ಇದೀರಿ. ನಿಮ್ಮ ಆಸಕ್ತಿ ಎಷ್ಟೋ ಗೊತ್ತಿಲ್ಲ. ನನ್ನ ಸಂಸ್ಕೃತ ಸಾಹಿತ್ಯದ ಆಸಕ್ತಿ ಬಗ್ಗೆ ನನಗೆ ಹೆಮ್ಮೆಯಿದೆ. ವೇದ ವಿರೋಧಿ ಅಂತಾನೂ ಕೆಲವರು ನನ್ನನ್ನು ಚಿತ್ರಿಸುತ್ತಿದ್ದಾರೆ. ಆದರೆ ನನ್ನ ಬಳಿ ವೇದಗಳ ( ಅದರ ಮೇಲಿನ ಬರಹಗಳಲ್ಲ) collection ಇವೆ. ಗೌರವದಿಂದಾನೆ ( ಭಕ್ತಿಯಿಂದ ಅಲ್ಲ ) ಅಲ್ಲಿ ಕಣ್ಣಾಡಿಸಲು ಪ್ರಯತ್ಸಿದ್ದೇನೆ. ಮತ್ತು ವೇದಗಳ ಮತ್ತಿತರ ಸಂಸ್ಕೃತ ಸಾಹಿತ್ಯದ ಬಗ್ಗೆ ಬಗ್ಗೆ ಆರೋಗ್ಯಕರ ಚರ್ಚೆ ಶುರುವಾದರೆ ಅವಕ್ಕೆ ಪ್ರತಿಕ್ರಿಸುವುದರಲ್ಲಿ ನಾನೂ ಇರ್ತೀನಿ. ಅಷ್ಟಕ್ಕೂ ಈ ವೇದಗಳನ್ನು ನಾನು ಹುಟ್ಟಿದ ಪರಂಪರೆಯಲ್ಲಿ ವೇದಗಳ ನಿರಾಕರಣೆಯಿಲ್ಲ. ಮತ್ತು ಕನ್ನಡದಲ್ಲಿ ವೇದಗಳನ್ನು ತರುವ ಮೊತ್ತ ಮೊದಲ ಪ್ರಯತ್ನಗಳು ನಾನು ಹುತ್ತಿದ ಪರಮ್ಪರೆಯಿಂದಲೇ ಅಂತ ನಿಮಗೆ ಹೆಮ್ಮೆಯಿಂದಲೇ ಹೇಳಬಲ್ಲೆ. ( ಜಾತಿ ದ್ವೇಷ ಇಲ್ಲ ಅಂತ ಹೇಳಲು ಈ ವಿಷಯ ಬರಿಬೇಕಾಯ್ತು) ೪. ಕನ್ನಡದ್ದೇ ಪದ ಯಾಕೆ ಬೇಕು? ಅನ್ನೋ ನಿಮ್ಮ ಪ್ರಶ್ನೆಗೆ ....ದಯವಿಟ್ಟು ನೇವು ಸಂಪದದಲ್ಲಿ ಇದರ ಬಗ್ಗೆ ತುಂಬಾ ಚರ್ಚೆಗಳು ಆಗಿವೆ. ಹಿಂದಿನ ಬರಹಗಳನ್ನು ಓದಿ... ಆಗಲೂ ವಿವರಣೆ ಬೇಕು andre ನಾನು koDalu prayatnisuve.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಯಿ ಬಾಲ ಡೊ೦ಕೇ... ಉದ್ಧಟತನ ಹಲವರಿಗೆ ಉದ್ದಕ್ಕೂ ಜೀವನದುದ್ದಕ್ಕೂ ಇದ್ದದ್ದೇ.. ರೈಟ್..ಇ೦ಥಾ ಉದ್ಧಟತನಕ್ಕೆ ನಾನು ಸದಾ ಕಾಲೆಳೆಯಲು ಸಿದ್ಧ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃ ಉಲಿದ ಅಣಿಮುತ್ತುಗಳು ಇನ್ನೂ ಹಲವಿವೆ. ನೀವು ಉಧ್ಧರಿಸಿದ್ದಲ್ಲದೆ ಇನ್ನು ಕೆಲವು ಕಾಮೆಂಟುಗಳನ್ನಂತೂ ಸಂಪದದಿಂದಲೇ ಅಳಿಸಿ ಹಾಕುವಷ್ಟು ಚೆನ್ನಾಗಿ ಬರೆದಿದ್ದರು. ಸವಿತೃ ಪದೇ ಪದೇ ಆರೋಪಿಸುತ್ತಿರುವ 'ಶಾಸ್ತ್ರ ಜಡತ್ವ' ದ ಅರ್ಥವೇನೆಂದೇ ತಿಳಿಯುತ್ತಿಲ್ಲ. ಶಾಸ್ತ್ರಗಳನ್ನು ಪ್ರಶ್ನಿಸದೇ ಮೂಢನಂತೆ ಅನುಸರಿಸುವುದು ಎಂಬರ್ಥವಾಗಿದ್ದರೆ ನಾನಷ್ಟೇ ಅಲ್ಲ, ಸಂಪದಿಗರಲ್ಲಿ ಯಾರಿಗೂ ಅದು ಅನ್ವಯವಾಗದು ಎಂದು ಧೈರ್ಯವಾಗಿ ಹೇಳಬಲ್ಲೆ. ಹಲವು ಕಡೆ ಸವಿತೃ ಅವರ ಅಧಿಕಪ್ರಸಂಗಿತನವನ್ನು ಸಹಿಸಿಕೊಂಡವರೇ ಹೆಚ್ಚು. ನಾನು ಸ್ವಲ್ಪ ಹೆಚ್ಚು Reactive ಆಗಿ ಇದ್ದಿದ್ದು ಹೌದು. ಆದರೆ ಇತ್ತೀಚೆಗೆ ನಾನೂ ಕೂಡ ರಿಯಾಕ್ಟಿವ್ ಆಗಿ ಕಾಮೆಂಟಿಸುವುದನ್ನು ಕಡಿಮೆ ಮಾಡಿದ್ದೇನೆ. ಇನ್ನು ಮುಂದಾದರೂ ಸಂಪದದಲ್ಲಿ ಇಂಥಾದ್ದು ಘಟಿಸದಿರಲಿ ಅಂತ ಆಶಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃರವರಿಗೆ ನಮಸ್ಕಾರ ನನಗೆ ಈ ಲೇಖನದ ಔಚಿತ್ಯ ಅರ್ಥವಾಗಲಿಲ್ಲ. ಅಂಗ್ಲದ culture ಎಂಬ ಪದಕ್ಕೆ ಸರಿಸಮಾನವಾದ ಪದ ಕನ್ನಡದಲ್ಲಿ ಹೊಸದಾಗಿ ಸೃಷ್ಟಿ ಮಾಡುವುದೆ ? . ಅದೇ ಆದಲ್ಲಿ ನಾವು ಹೊಸದಾಗಿ ಎಷ್ಟು ಪದಗಳನ್ನು ಸೃಷ್ಟಿ ಮಾಡುತ್ತ ಹೋಗಲು ಸಾದ್ಯ? . ಅಂಗವಿಕಲ ಪದಕ್ಕೆ ಪರ್ಯಾಯವಾಗಿ ಸೃಷ್ತಿಸಿದ ವಿಕಲಚೇತನದ ವಿಮರ್ಷೆಯನ್ನು ನೀವು ಕಳೆದ ವಾರ ಓದಿರಬಹುದು. ಇದು ಹೀಗೆಯೆ. ಮತ್ತೆ ಸಂಸ್ಕೃತ ಪದದಿಂದ ಉಗಮವಾಗಿದ್ದಲ್ಲಿ ಬೇಡ ಅನ್ನುವದಾದರೆ ಕನ್ನಡದಲ್ಲಿ ಈಗ ನಾವು ಬಳಸುತ್ತಿರುವ ಬಹುತೇಕ ಪದಗಳು ಸಂಸ್ಕೃತ, ಉರ್ದು ಇಲ್ಲವೆ ಅರಬೀಯನ್ , ತಮಿಳು ಮುಂತಾದ ಬಾಷೆಗಳಿಂದಲೆ ಎರವು ಪಡೆದಿರುವುದು. ಮತ್ತೆ ನೀವು ಕೋಪಗೊಳ್ಳಲ್ಲ ಅಂದ್ರೆ 'ಸವಿತೃ' ಪದವು ಸಹ ಸಂಸ್ಕೃತವೆ ಅಲ್ಲವೆ?. ಮತ್ತೆ ಈ ಲೇಖನವನ್ನು ಹೊರತುಪಡಿಸಿ ಹೇಳುವುದಾದರೆ ಸಂಪದದಲ್ಲಿ ಒಂದು ತ್ರಿಕೋಣ ಸಂಘರ್ಷ ಸದಾ ನಡೆಯುತ್ತಿದ್ದು , ಸಂಪದದಂಗಳವು ಸಂಘರ್ಷದಂಗಳವಾಗುತ್ತಿದೆ. ಅದು ಸಾಹಿತ್ಯನಿಷ್ಟ ಸಂಘರ್ಷವಾಗಿರುತಿದ್ದ ಪಕ್ಷದಲ್ಲಿ ನಮ್ಮೆಲ್ಲರಿಗೂ ಅತೀವ ಲಾಭವೆ ಆಗುತ್ತಿತ್ತು. ಆದರೆ ಹಾಗಿಲ್ಲ. ನಾನು ಯಾರನ್ನು ದೂಷಿಸಲು ಅಥವ ಯಾರನ್ನು ಸರಿ ಎನ್ನಲು ಪ್ರಯತ್ನಿಸುತ್ತಿಲ್ಲ. ಆದರೆ ಸಂಪದದ ಅಂಗಳ ವಿದಾನಸೌದದ ಭಾವಿಯಾಗಬಾರದಲ್ಲ ಅನ್ನುವುದು ನನ್ನ ಕಳಕಳಿ. ಎಲ್ಲರೂ ಅರ್ಥ ಮಾಡಿಕೊಳ್ಳೂತಾರೆಂದೆ ನನ್ನ ಅನಿಸಿಕೆ. ನಿಮ್ಮೊಲವಿನ -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

paartha mattu naagarathna avare kannaDada padagaLe yaake annO prashne nimmadu. nimage nanna padagaLalle uttara bEku andre koDaballe. sadhyakke illi kaNNaadisi. http://enguru.blogsp... http://enguru.blogsp... http://enguru.blogsp... http://enguru.blogsp... http://enguru.blogsp... http://enguru.blogsp... http://enguru.blogsp... http://enguru.blogsp...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಕೊಟ್ಟ "ಕನ್ನಡದ ಸೊಲ್ಲರಿಮೆ" ಲೇಖನದಲ್ಲಿ ಇರುವ ಸಂಸ್ಕೃತ ಪದಗಳು ಇಂತಿವೆ : "ಶಾಲೆಯ" (ಶಾಲಾ) "ಭದ್ರವಾದ" (ಭದ್ರ) "ತತ್ವ" "ಪ್ರೇರಿತ" (ಪ್ರೇರಣಾ) "ಪ್ರತಿ" "ಸಾಧ್ಯ" (ಸಾಧು??) "ಸಂಪರ್ಕ" "ಗಮನಿಸಿ" (ಗಮ) "ಅರ್ಥ" "ಸ್ವರೂಪ" (ಸ್ವ, ರೂಪ) "ವೈಜ್ಞಾನಿಕವಾಗಿ" (ವಿಜ್ಞಾನ) "ಪದ" "ವರ್ಗ" "ಕ್ರಿಯಾರೂಪ" "ಸರ್ವನಾಮ" ... ಇತ್ಯಾದಿ ಹೀಗೆ "ಸಂಸ್ಕೃತ ಪದಗಳಿಗೆ ಪರ್ಯಾಯ ಕನ್ನಡ ಪದಗಳು ಯಾಕೆ ಬೇಕು" ಎನ್ನುವ ಲೇಖನದಲ್ಲೇ‌ ಇಷ್ಟೊಂದು ಸಂಸ್ಕೃತ ಮೂಲದ ಶಬ್ದಗಳಿರುವುದು ಏನನ್ನು ಸೂಚಿಸುತ್ತದೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂದುವರೆದು ಕನ್ನಡದಿಂದ ಸಂಸ್ಕೃತ ಪದಗಳನ್ನು ತೆಗೆದುಹಾಕಬೇಕೆನ್ನುವುದನ್ನು "ಕನ್ನಡ ಭಾಷಾ ಜಡತ್ವ" ಎಂದು ಯಾಕೆ ಕರೆಯಬಾರದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆರೋಗ್ಯವ೦ತ ಮೈಯೊಳಗಿನ ರಕ್ತ ತೆಗೆದು ಕೃತಕ ರಕ್ತ ಸೇರಿಸಿದ೦ತೆ... what a Himalayan waste of energy!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇ ವೆಬ್ ಸೈಟಿನಲ್ಲಿ ಹೀಗೊಂದು ಹೇಳಿಕೆಯಿದೆ : "ಸಂಸ್ಕೃತ ಪದಗಳನ್ನು ಕಿತ್ತುಹಾಕಬೇಕು ಎಂದು ಎಲ್ಲೂ ಯಾರೂ (ಶಂಕರಭಟ್ಟರನ್ನೂ ಸೇರಿದಂತೆ) ಹೇಳಲಿಲ್ಲ. ತಿಳುವಳಿಕಸ್ತರು ಹೇಳುತ್ತಿರುವುದು ಇಷ್ಟೇ: ಎಲ್ಲೆಲ್ಲಿ ಈಗಾಗಲೇ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದ ಪದಗಳಿವೆಯೋ ಅವುಗಳನ್ನು ಕೈಬಿಡದೆ ಬಳಸಿಕೊಂಡು ಹೋಗಬೇಕು. ಅವುಗಳ ಬದಲು ಸಂಸ್ಕೃತದ ಇಲ್ಲವೇ ಮತ್ತೊಂದು ಭಾಷೆಯ ಪದಗಳನ್ನು ಬಳಸುವುದು ಸರಿಯಲ್ಲ." ಇದನ್ನಂತೂ ಖಂಡಿತಾ ಒಪ್ಪಬಹುದು. ಈ ನಿಟ್ಟಿನಲ್ಲಿ ಯೋಚಿಸಿದರೆ 'ಸಂಸ್ಕೃತಿ' ಶಬ್ದಕ್ಕೆ ಪರ್ಯಾಯ ಅಗತ್ಯವಿಲ್ಲ. ಯಾಕೆಂದರೆ ಈ‌ ಶಬ್ದ ನೂರಕ್ಕೆ ತೊಂಭತ್ತೊಂಭತ್ತೊಂಭತ್ತರಷ್ಟು ಜನ ಈಗಾಗಲೇ "ಸಹಜವಾಗಿ" ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಈ ಬ್ಲಾಗು ಹೇಳುವಂತೆ ಅದನ್ನು ಕೈಬಿಡದೆ ಬಳಸಿಕೊಂಡು ಹೋಗಬೇಕು. ಇದರಿಂದ ತಿಳಿದು ಬರುವುದು ಏನೆಂದರೆ ಸವಿತೃ ಅವರಿಗೆ ಸ್ವಂತದ ಬಂಡವಾಳ ಏನೂ ಇಲ್ಲ. ಬೇರೆ ಯಾರೋ ಮಾಡಿದ ಸಂಶೋಧನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಮ್ಮದೇ‌ ಆದ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಅವನ್ನು ಬಳಸಿಕೊಳ್ಳುತ್ತಾರೆ ಅಷ್ಟೇ. ಇಂಥವರಿಗೆ ನನ್ನದೊಂದು ಧಿಕ್ಕಾರವಿರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಪ್ರೇಮಿ ಆ೦ಗ್ಲಲಿಪಿಯಲ್ಲಿ ಅಭಿವ್ಯಕ್ತಿ?...ಏನಿದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಪ್ರೇಮಿ ಆ೦ಗ್ಲಲಿಪಿಯಲ್ಲಿ ಅಭಿವ್ಯಕ್ತಿ?...ಏನಿದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುದ್ದಾಡಲು ಮತ್ತು ಕೆಸರು ಮೆತ್ತಿಸಿಕೊಳ್ಳಲು ಬೇಕಾಗುವಷ್ಟು ಪುರುಸೊತ್ತು-ತಾಕತ್ತಿಲ್ಲದಿದ್ದರೂ ಈ ಕೆೞಗಿನ ಕೊಣ್ಡಿಯನ್ನೊಮ್ಮೆ ಕುಟುಕಿ ಎಲ್ಲಾ ಕಮೆಣ್ಟುಗಳನ್ನೂ ಓದಿನೋಡಿರಿ. ನಿಮ್ಮ ಕಮೆಣ್ಟುಗಳಿಗೆ ಉತ್ತರ ನಾಳೆ ಇದೇ ಹೊತ್ತಿಗೆ ಸರಿಯಾಗಿ ನೀಡುವೆನು. ನನ್ನ ನಿಲುವುಗಳ ಕುಱಿತ ಸಮಜಾಯಿಸಿ ಬೇಕೆನ್ನುವವರಿಗೆ ನೀಡಬಲ್ಲೆನು. http://enguru.blogsp... ಸಂಸ್ಕೃತ ಶಬ್ದಗಳು ಕನ್ನಡಕ್ಕೆ ಹೊಱೆಯಲ್ಲ, ಹಾಗೆನ್ನುತ್ತಲೇ ನಾನು ಕನ್ನಡವ ಬೞಸುತ್ತಿರುವ ರೀತಿಯನ್ನೂ ಗಮನಿಸಿರಿ. ಸಂಸ್ಕೃತಿಗೆ 'ಕನ್ನಡತೆ' ಪರ್ಯಾಯವಲ್ಲ. - ಕೃಷ್ಣಪ್ರಕಾಶ ಬೊಳುಂಬು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಗುದ್ದಾಡಲು ಮತ್ತು ಕೆಸರು ಮೆತ್ತಿಸಿಕೊಳ್ಳಲು ಬೇಕಾಗುವಷ್ಟು ಪುರುಸೊತ್ತು-ತಾಕತ್ತಿಲ್ಲದಿದ್ದರೂ>> ಆದರೂ ಅವರಾಟ ನೋಡಲು ಪುರುಸೊತ್ತು ತಾಕತ್ತು ಎರಡೂ ಇವೆ. ಧೀರ ಧೀರ ಶೂರರು! ಈ ದಿನ ಇದೇ ಹೊತ್ತಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಬರಹಕ್ಕಿಂತ ನನ್ನ ಬಗ್ಗೆ ಪ್ರೀತಿ ತೋರಿಸುತ್ತಿರುವ ಎಲ್ಲರಿಗೂ ವಂದನೆಗಳು. ಇದುವರಗೆ ನಾನು ಗಮನಿಸಿದಂತೆ ನನ್ನ ಮತ್ತು ನರಸಿಂಹ ಭಂಗಿ ಮಾತುಗಳು ಯಾವತ್ತೂ ಚರ್ಚೆಗೆ ದಾರಿ ಮಾಡಿಕೊಡದೆ ಬರಿಯ ಜಗಳಕ್ಕೆ ದಾರಿ ಮಾಡಿಕೊಟ್ಟಿರುವುದನ್ನು ಗಮನಿಸಿ ಅವರ ಅವರ ಯಾವ ಪ್ರತಿಕ್ರಿಯೆಗೂ ವಾಪಸು ಉತ್ತರ ಕೊಡಬಾರದು ಅಂತ ನಾನು ನಿರ್ಧರಿಸಿದ್ದೇನೆ. ಈ ಮೂಲಕವಾದರೂ ನನ್ನ ಪತನವನ್ನು ನಾನು avoid ಮಾದ್ಕೊಬಹುದು ಅನ್ನೋ ಆಸೆ. ಇನ್ನು ಮಹೇಶರಿಗೆ .. ದಯವಿಟ್ಟು ವಿಷಯಕ್ಕೆ ಸಂಬಂಧಿಸಿದಂತೆ ಬರೆಯಿರಿ. ವಿಷಯದ ಬಗ್ಗೆ ಮಾತಾಡುವಾಗ ಮಾತು ಒರಟೋ ಅತ್ವಾ ಟವೆಲ್ ಸುತ್ತಿಕೊಂಡು ಹೊಡೆಯೋ ತರವೋ ನಾನು ಕೇರ್ ಮಾಡಲ್ಲ. ಚರ್ಚೆಯಿಂದ ವಿಷಯ ತಿಳುವಳಿಕೆ ಹೊರಬರುವನ್ತಿದ್ದರೆ ಸಾಕು. ಬೋಳುಮ್ಬವರಿಗೆ... ನಾನು ಇದುವರಗೆ ನಿಮ್ಮೊಡನೆ ಚರ್ಚೆ ಮಾಡಿರುವುದೇ ನೆನಪಿಲ್ಲ. ಅಂತದರಲ್ಲಿ ನೀವು ಏನೇನೋ ಪೀಠಿಕೆ ಹಾಕಿದ್ದೀರಿ. ಅದರ ಅವಶ್ಯಕತೆ ಇರಲಿಲ್ಲ. ....... ಓದುಗರೆಲ್ಲರೂ ಒಂದು ಮಾತನ್ನು ಗಮನಿಸಬೇಕು. ನಾನು ಎಲ್ಲಿಯೂ "ಎಲ್ಲ" ಸಂಸ್ಕೃತ ಪದಗಳನ್ನು ಪೂರ್ತಿ ಕಿತ್ತು ಹಾಕಿ ಅಲ್ಲಿ ಕನ್ನಡ ಪದಗಳನ್ನು ಅಷ್ಟೇ ಹುಟ್ಟು ಹಾಕಬೇಕು ಅಂತ ಹೇಳಿಲ್ಲ. ನಾನು ಹೇಳಿಲ್ಲದ ಈ ವಿಷಯವನ್ನು ನನ್ನ ಮೇಲೆ ಆರೋಪಿಸಿಕೊಂಡು ಏನೇನೋ ಪ್ರತಿಕ್ರಿಯೆ ಬರ್ದಿದ್ದೀರಿ. ಕಡೆ ಪಕ್ಷ ಇದು ನನ್ನ ನಿಲುವೆ ಅಂತ ಕೇಳೋ ಸೌಜನ್ಯವೂ... ಬೊಳುಂಬು ಅಂತವರಿಂದಲೂ ಬರಲಿಲ್ಲ. ನನ್ನ ನಿಲುವು ಅರ್ಥ ಆಗದಿದ್ದರೆ ಲೇಖನವನ್ನು ಇನ್ನೊಮ್ಮೆ ಓದಿ. ಮತ್ತೂ ಅರ್ಥ ಆಗದಿದ್ದರೆ ಕೇಳಿ. ಸ್ಪಷ್ಟಪಡಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

{ನಾನು ಹೇಳಿಲ್ಲದ ಈ ವಿಷಯವನ್ನು ನನ್ನ ಮೇಲೆ ಆರೋಪಿಸಿಕೊಂಡು ಏನೇನೋ ಪ್ರತಿಕ್ರಿಯೆ ಬರ್ದಿದ್ದೀರಿ. ಕಡೆ ಪಕ್ಷ ಇದು ನನ್ನ ನಿಲುವೆ ಅಂತ ಕೇಳೋ ಸೌಜನ್ಯವೂ} ನನ್ನನ್ನು 'ಶಾಸ್ತ್ರ ಜಡ' ಎನ್ನುವ ಮೊದಲು ನಿಮಗೆ ಈ ಸೌಜನ್ಯ ನೆನಪಿಗೆ ಬರಲಿಲ್ಲವೇ? ನಾನು ವೈದಿಕ ಪುರೋಹಿತಶಾಹಿ, ನನ್ನ ಪ್ರಕಾರ ಶರಣ ಇತ್ಯಾದಿ ಸಂಸ್ಕೃತಿಗಳು ಭಾರತೀಯ ಸಂಸ್ಕೃತಿ ಅಲ್ಲ ಎಂಬಿತ್ಯಾದಿ ಆರೋಪಗಳನ್ನು ನನ್ನ ಮೇಲೆ ಹೊರಿಸುವಾಗ ಇವೆಲ್ಲ ನನ್ನ ನಿಲುವು ಹೌದೇ ಎಂದು ವಿಚಾರಿಸುವ ಸೌಜನ್ಯ ನಿಮಲ್ಲಿತ್ತೇ? ಇಲ್ಲವೆಂದಾದ ಮೇಲೆ ಇನ್ನೊಬ್ಬರ ಮೇಲೆ ಸೌಜನ್ಯ ಇಲ್ಲ ಎಂಬ ಆರೋಪ ಹೊರಿಸುವುದು ಬೇಡ. ಅಂದ ಹಾಗೆ ನೀವು ಉಪಯೋಗಿಸಿದ ಶಬ್ದ 'ಸೌಜನ್ಯ' ಎಂಬುದು ಸಂಸ್ಕೃತ ಮೂಲದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಸಂಸ್ಕೃತ ಶಬ್ದಗಳು ಕನ್ನಡಕ್ಕೆ ಹೊಱೆಯಲ್ಲ, ಹಾಗೆನ್ನುತ್ತಲೇ ನಾನು ಕನ್ನಡವ ಬೞಸುತ್ತಿರುವ ರೀತಿಯನ್ನೂ ಗಮನಿಸಿರಿ. ಸಂಸ್ಕೃತಿಗೆ 'ಕನ್ನಡತೆ' ಪರ್ಯಾಯವಲ್ಲ. " ನನ್ನ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ತಿಳಿಸಿರುವೆನು. ಈಗಾಗಲೇ 'ಕನ್ನಡತನ' ಉಣ್ಟು. ಆದರೆ ಅದು 'ಸಂಸ್ಕೃತಿ' ಎಂಬ ಶಬ್ದಕ್ಕೆ ಪರ್ಯಾಯವಲ್ಲ. >>ಸಂಸ್ಕೃತಿ .. ಚನ್ನಾಗಿ ಕಟ್ಟಲ್ಪಟ್ಟಿರುವುದು... ಅನ್ನೋ ಅರ್ಥದಲ್ಲಿ ನನಗೆ ಯಾವ ವಿರೋಧ ಇಲ್ಲದಿದ್ದೂರೋ ಅದು "ನಮ್ಮ" ಕನ್ನಡ ಸಂಸ್ಕೃತಿಯನ್ನು, "ನಮ್ಮ" ಜಾನಪದ ಸಂಸ್ಕೃತಿ ಯನ್ನು, "ನಮ್ಮ ಸ್ವಂತಿಕೆ" ( culture ಯಾವಾಗಲೂ ಸ್ವನ್ತಿಕೆಯುಳ್ಳದ್ದು ಅನ್ನೋದನ್ನು ಗಮನದಲ್ಲಿಟ್ಟುಕೊಂಡು) ಯನ್ನು ಪ್ರತಿನಿಧಿಸುವುದಿಲ್ಲ ಅಂತಾನೆ ನನ್ನ ನಿಲುವು. ಸಂಸ್ಕೃತದ್ದು ಸಂಸ್ಕೃತಿ ಮತ್ತು ಕನ್ನಡದ್ದು ಕನ್ನಡತೆ ಎನ್ದು ವಾದಿಸಿದನ್ತಾಯಿತು. ನೀವು ಹೇೞುವುದನ್ನೇ ಒಪ್ಪುವುದಾದರೆ ಸಂಸ್ಕೃತಿಯಲ್ಲಿ ಇಲ್ಲದಿರುವುದು "ಕನ್ನಡದ ಕನ್ನಡತೆ''ಯಲ್ಲಿ ಏನಿದೆ? 'ಕಳ್ ಮಂಜ' ಎನ್ದರೇನೆನ್ದು ಈಗ ಅರ್ಥವಾಯಿತು. "ಹಾಲ್ ಮಂಜ" ಶಂಬಾ ಜೋಶಿಯವರದ್ದು ಒನ್ದು ವಾದ ಮಾತ್ರ ಮತ್ತು ಅವರಿಗೆ ಅದನ್ನು ನಿರೂಪಿಸಲು ಸಾಧ್ಯವಾಗಲಿಲ್ಲವೆನ್ನುವುದು ನಿಮ್ಮ ಮಾತಿನಲ್ಲಿಯೇ ಇದೆ. ನಿಮ್ಮೊನ್ದಿಗೆ ವಾದಕ್ಕಿಳಿಯುತ್ತಿರುವುದು ಇದೇ ಮೊದಲಾದರೂ ಮಾಯ್ಸ, ವೈಭವ, ಖವಿ ಮುನ್ತಾದವರು ಮೂಱು ವರುಷಗಳ ಹಿನ್ದೆ ಹೂಡುತ್ತಿದ್ದ ವಾದಗಳನ್ನೇ ನೀವೂ ಎತ್ತಿಹಿಡಿಯುತ್ತಿರುವಿರಿ. ಅಷ್ಟಲ್ಲದೆ ನಿಮ್ಮ ವಾದವೈಖರಿಯನ್ನೂ ಗಮನಿಸುತ್ತಿರುವೆನು. ಕನ್ನಡಿಗರಿಗೆ ಇತಿಹಾಸಪ್ರಜ್ಞೆಯಿಲ್ಲವೆನ್ನುವುದು ಬಹುಶ: ಇದೇ ಕಾರಣಕ್ಕೋ? ಕೇಶಿರಾಜನ ತಪ್ಪುಗಳನ್ನು ಎತ್ತಿತೋಱಿಸಬಲ್ಲವರಾದರೆ ಮಾತ್ರ ಸಾಲದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಇದುವರಗೆ ನಾನು ಗಮನಿಸಿದಂತೆ ನನ್ನ ಮತ್ತು ನರಸಿಂಹ ಭಂಗಿ ಮಾತುಗಳು ಯಾವತ್ತೂ ಚರ್ಚೆಗೆ ದಾರಿ ಮಾಡಿಕೊಡದೆ ಬರಿಯ ಜಗಳಕ್ಕೆ ದಾರಿ ಮಾಡಿಕೊಟ್ಟಿರುವುದನ್ನು ಗಮನಿಸಿ ಅವರ ಅವರ ಯಾವ ಪ್ರತಿಕ್ರಿಯೆಗೂ ವಾಪಸು ಉತ್ತರ ಕೊಡಬಾರದು ಅಂತ ನಾನು ನಿರ್ಧರಿಸಿದ್ದೇನೆ. ಈ ಮೂಲಕವಾದರೂ ನನ್ನ ಪತನವನ್ನು ನಾನು avoid ಮಾದ್ಕೊಬಹುದು ಅನ್ನೋ ಆಸೆ. >> ಬುದ್ಧನಿಗೆ ಜ್ಞಾನೋದಯವಾದ೦ತೆ! ಒಳ್ಳೆಯದು ಸವಿತೃರವರೇ, ನಿಮ್ಮ ಬಗ್ಗೆ ನನಗೆ ವೈಯುಕ್ತಿಕ ದ್ವೇಷ ತಿರಸ್ಕಾರ ಖ೦ಡಿತ ಇಲ್ಲ. ಆದರೆ ನೀವು ಇತರ ಸ೦ಪದಿಗರಿಗೆ(ಕಮೆ೦ಟಿಸುವ) ತಾಕೀತು ಮಾಡುವ ರೀತಿ ಅಸಹ್ಯ ಹುಟ್ಟಿಸುವ೦ಥದ್ದು ಅದಕ್ಕೇ ಸ್ವಲ್ಪ ಈ ಜುಗಲ್ ಬ೦ದಿ. ಹೆಚ್ಚು ಅರ್ಥೈಸಬೇಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.