ಉಂಟೆಂದಡುನ್ಟು , ಇಲ್ಲ ಎನ್ದಡೆ ಇಲ್ಲ,

0

http://sampada.net/blog/madhava_hs/29/10/2007/6064

ಈ ಕೊಂಡಿಯಲ್ಲಿ....... "ದ್ವೈತ, ಅದ್ವೈತ, ವಿಶಿಶ್ಟಾದ್ವೈತ - ಯಾವುದು ಸರಿ?", ಎಂಬ ಚರ್ಚೆಯಲ್ಲಿ .
"ಅವೆಲ್ಲ ಸರಿ.. ಯಾವಾಗ.. ಆತ್ಮ ಅಂದ್ರೇನು? ಪರಮಾತ್ಮ ಅಂದ್ರೇನು?.. ಅದು ದಿಟವಾಗ್ಲೂ ಇದ್ಯಾ? ಇಲ್ಲ ಬರೀ ಬುರುಡೆಯ? ಇವೆಲ್ಲ ಪ್ರೆಶ್ನೆಗಳಿಗೆ ಉತ್ರ ಸಿಕ್ಕಿದಾಗ...
ಸಿಗದ ತನಕ ಅವೆಲ್ಲ ಬರೀ ಕಲ್ಪನೆ ಇಲ್ಲ ಬರೀ ನಂಬಿಕೆ." ಎಂಬ ಮಹೇಶರ ಪ್ರಶ್ನೆ ...ನನಗೆ ಶರಣರು ಈ ಬಗ್ಗೆ ಏನು ಹೇಳ್ತಾರೆ ಅಂತ ಹುಡುಕೋದಿಕ್ಕೆ ಪ್ರೇರೇಪಿಸಿತು. offcource ಆತ್ಮ , ಪರಮಾತ್ಮಗಳ ಸ್ವರೂಪಗಳೂ ಸಹಾ ಮೇಲಿನ ಸಿಧಾಂತಗಳಲ್ಲಿ ಬೇರೆ ಬೇರೆ ಯಾಗಿ ವರ್ಣನೆಯಾಗಿದೆ. ಆದರೂ ಅವುಗಳು ( ಎಲ್ಲಕ್ಕಿಂತ ಮೊದಲು) ಇವೆಯೋ ಇಲ್ಲವೋ ಎಂದು ತಿಳಿದುಕೊಂಡು / ಅವುಗಳ ಸ್ವರೂಪ ವನ್ನು ಗ್ರಹಿಸಿ ನಾವು ಸಿಧಾನ್ತಗಳ ಬಗ್ಗೆ ಮಾತಾಡುವುದು ಒಳ್ಳೆಯದು.

ಕೆಲವು ವಚನಗಳು ನನ್ನ ಕಣ್ಣಿಗೆ ಬಿದ್ದವು. ಅವುಗಳನ್ನು ಇಲ್ಲಿ ಬರೆಯುತ್ತಿದ್ದೇನೆ. ಸುಲಿದ ಬಾಳೆ ಹಣ್ಣಿನಂತಹ ಕನ್ನಡದಲ್ಲಿರುವ ಈ ವಚನಗಳು self explanatory . ನಮ್ಮ ಸೀಮಿತ ಅರಿವಿನ ವ್ಯಾಪ್ತಿಯಲ್ಲಿ ಈ ವಚನಗಳನ್ನು ಅರ್ಥ ಮಾಡಿಕೊಂಡರೆ .. ಅವು ಅರ್ಥವಾಗುವುದಕ್ಕಿಂತ ಅಪಾರ್ಥವಾಗುವ ಸಂಭವವೇ ಹೆಚ್ಚು. ಆದರೂ ಈ ವಚನಗಳು ನಮಗೆ ಅವರ ಚಿಂತನೆಯ ಬಗ್ಗೆ ಸ್ವಲ್ಪ ವಾದರೂ ಸುಳಿವನ್ನು ಕೊಡುವುದಾದರೆ ಅದಕ್ಕಿಂತ ಹೆಚ್ಚಿನ ಭಾಗ್ಯವೇನಿಲ್ಲ . ತಿಳಿದವರು ಯಾರಾದ್ರೂ ಈ ವಚನಗಳ ಬಗ್ಗೆ ಸ್ವಲ್ಪ ವಿವರವಾಗಿ ಬರೆಯಿರಿ.

ನನಗೆ ಇಲ್ಲಿ ಶರಣರ ವಚನಗಳು ಏಕೆ ಮುಖ್ಯವಾಗಿತ್ತೆ ಅಂದ್ರೆ ಆವ್ರು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಋುಷಿಗಳು. ( ಋಷಿ=ಸತ್ಯವನ್ನು ಅರಸುವವ=seer). ಅವರಲ್ಲಿ ನಾನು ಎಲ್ಲಿಯೂ ಕುರುಡು ಭಕ್ತಿ / ನಂಬಿಕೆಯನ್ನು ಕಂಡಿಲ್ಲ.

1. ಉಂಟೆಂದಡುನ್ಟು , ಇಲ್ಲ ಎನ್ದಡೆ ಇಲ್ಲ, ಅದು ತನ್ನ ವಿಶ್ವಾಸದ ಭಾವ ,
ತನಗೆ ಅನ್ಯಭಿನ್ನವಿಲ್ಲ, ಅರ್ಕೇಶ್ವರ ಲಿಂಗ ತಾನಾದ ಕಾರಣ..........................ಮಧುವಯ್ಯ

2.ಉಂಟೆಂಬ ವಸ್ತು ಇಲ್ಲೆಂಬ ಪ್ರಮಾಣ ಬಹುದು
ಆಚಾರಕ್ಕಿಕ್ಕುವುದಿದು ಭಕ್ತಿಯೆ?
ಉಂಟೆಂಬ ಉಧ್ಭಾವಿಯಲ್ಲ, ಇಲ್ಲೆಂಬ ನಿರ್ಭಾವಿಯಲ್ಲ,
ಇದು ಕಾರಣ ಕೂಡಲಚೆನ್ನಸನ್ಗಾ
ಸಜ್ಜನ ಶುದ್ದ ಶಿವಾಚಾರಿಗಲ್ಲದೇ ಲಿನ್ಗೈಕ್ಯವಳವಡದು.....................ಚೆನ್ನಬಸವಣ್ಣ

3. ಉನ್ಟೆಮ್ಬಲ್ಲಿಯೇ ಜ್ಞಾನಕ್ಕೆ ದೂರ ; ಇಲ್ಲಾ ಎಮ್ಬಲ್ಲಿಯೇ ಸಮಯಕ್ಕೆ ದೂರ;
ತನುವಿಗೆ ಬಂದ ಪ್ರಾಪ್ತಿಯ ಅನುಭವಿಸುವುದಕ್ಕೆ ಒಡಲಾಯಿತ್ತು
ಪ್ರಾಪ್ತಿಯನುಮ್ಬುದು ಘಟವೋ, ಆತ್ಮನೋ?
ಒಂದನಹುದು, ಒಂದನಲ್ಲಾ ಎನಬಾರದು
ಇಲ್ಲಾ ಎನ್ದಡೆ ಕ್ರೀವಂತರಿಗೆ ಭಿನ್ನ; ಅಹುದೆನ್ದಡೆ ಆರಿದಾತಂಗೆ ವಿರೋಧ
ತೆರಪಿಲ್ಲದ ಘನವ ಉಪಮಿಸಲಿಲ್ಲ
ಕಾಮ ಧೂಮ ಧೂಳೇಶ್ವರನ ಮುಂದೆ ಹೋಗಲಿಲ್ಲ , ಹಿಂದೆ ಉಳಿಯಲಿಲ್ಲ...................ಮಾದಾರ ಧೂಳಯ್ಯ

4.ಉಂಟೆಂಬುದು ಭಾವದ ನೆಂಬುಗೆ, ಇಲ್ಲ ಎಂಬುದು ಚಿತ್ತದ ಪ್ರಕೃತಿ
ಉಭಯಾನಾಮ ನಷ್ಟವಾಗಿ ನಿಂದುಳುಮೆ
ಐಘಟದೂರ ರಾಮೇಶ್ವರಲಿನ್ಗ ಇಕ್ಕಿದ ಗೊತ್ತು.......................ಮೆರೆ ಮಿನ್ಡಯ್ಯ

5. ಉಂಟು ಇಲ್ಲಾ ಎಮ್ಬುದನರಿತು ನುಡಿವುದು ಕ್ರೀಯೋ? ನಿಃಕ್ರೀಯೋ ?
ಇವೆಲ್ಲವನರಿತು ನುಡಿವುದು ಘಟದೊಳಗಣ ಮಾತಲ್ಲದೇ ಅದು ಮಾಯಾವಾದದ ಇರವು,
ಭಾವಕಾಯವಲ್ಲಿ ಸಿಕ್ಕಿ ಸಕಲವನಡೊಗೂಡಿ ಭೋಗನ್ಗಳನುಣುತ
ನಾನಲ್ಲ ಎಂಬ ಮಾಯಾವಾದಿಗಳ ಮಾತು
ಕನ್ನದ ಬಾಯಲ್ಲಿ ಸಿಕ್ಕಿದ ಕಳ್ಳನ ಬಾಯಾಲಿನನ್ತೆ ಬಲ್ಲವರು ಮೆಚ್ಚುವರೆ?
ಶರೀರವುಳ್ಳನ್ನಕ್ಕ ಇಷ್ಟಪ್ರಾಣ ಮುಕ್ತನಾಗಬೇಕು
ಇದೆ ನಿಶ್ಚಯ , ಸದಾಶಿವಮೂರ್ತಿ ಲಿನ್ಗವನರಿವುದಕ್ಕೆ...............ಅರಿವಿನ ಮಾರಿತನ್ದೆ

6.ಉಂಟು ಉನ್ಟೆಮ್ಬನ್ನಕ್ಕ ಸನ್ದೇಹಕ್ಕೀಡಾಗದೆ ,
ಇಲ್ಲಾ ಇಲ್ಲಾ ಎಂದು ಶೂನ್ಯಕ್ಕೊಳಗಾಗದೆ
ಇಂತೀ ಕ್ರೀಯ ಒಳಗಿನಲ್ಲಿ, ನಿಃಕ್ರೀಯ ತೆರಪಿನಲ್ಲಿ ,
ಉಭಯಚಕ್ಶು ಒಡಗೂಡಿ ಕಾಬಂತೆ ,
ನೋಡುವುದು , ಉಭಯ ನೋಡಿಸಿಕೊಂಬು ದು ಒಂದೇ
ಕ್ರೀಯಲ್ಲಿ ಇಷ್ಟ , ಅರಿವಿನಲ್ಲಿ ಸ್ವಸ್ಥ
ಈ ಉಭಯ ನೀನಾಹನ್ನಕ್ಕ ದೃಷ್ಟವಾದೆಯಲ್ಲ ,
ನಿಃಕಳನ್ಕ ಮಲ್ಲಿಕಾರ್ಜುನಾ .............ಮೋಳಿಗೆ ಮಾರಯ್ಯ

7. ಉಂಟಾದುದು ಉಂಟೆ? ಉನ್ಟಾದುದನಿಲ್ಲವೆಮ್ಬುದು ಮಿಥ್ಯೆ
ಅದು ತಾ ನಾಮ ರೂಪು ಕ್ರಿಯೆ ಇಲ್ಲವಾಗಿ ಇಲ್ಲ
ಇಲ್ಲವಾದುದನುನ್ಟನ್ದಡೆ ಘಟಿಸದು ,
ಉಂಟು ಇಲ್ಲ ವೆಂಬ ಉಳುಮೆಯಿಲ್ಲದೆ ನಿಜ ತಾನೇ , ಸೌರಾಷ್ಟ್ರ ಸೋಮೆಶ್ವರ ................ಅದಯ್ಯ

ನಾನು ಉಂಟು / ಇಲ್ಲ ಎಂಬುದರ ಬಗ್ಗೆ ಶರಣರು ಏನು ಹೇಳುತ್ತಾರೆ ಎಂಬಲ್ಲಿ ಮಾತ್ರ ಈ ವಚನಗಳಲ್ಲಿ ಗಮನಹರಿಸಿದ್ದೇನೆ. ಇವು ನನ್ನ ಕಣ್ಣಿಗೆ ಬಿದ್ದ ಕೆಲವೇ ಕೆಲವು ವಚನಗಳು.
ಆತ್ಮ -ಪರಮಾತ್ಮದ ಸ್ವರೂಪ ದ ಬಗ್ಗೆ / ಸಂಬಂಧದ ಬಗ್ಗೆ ಅವರು ವಿವರವಾಗಿ ಹೇಳಿದ್ದಾರೆ . ನಾನು ಆ ಬಗ್ಗೆ ಇಲ್ಲಿ ಗಮನ ಹರಿಸಿಲ್ಲ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಾಯಕದ ಮೇಲೆ ತತ್ವ ಬೆಳೆಸಿದ ಶರಣರು 'ಆತ್ಮ'ದ ಬಗ್ಗೆ ಪರ-ವಿರೋಧ ಎರಡರ ಕಡೆಯೂ ನಿಲವನ್ನು ತಳೆದಿಲ್ಲ ಅಂತ ನನಗನ್ನಿಸುತ್ತದೆ.
ಇಲ್ಲಿ 'ಆತ್ಮ' ಎಂಬ 'ಭಾವ' ವನ್ನು ಒಬ್ಬರು ಬೇರೆಯವರ ಮೇಲೆ ಹೇರಲಾಗದು ಎಂದು ಶರಣರು ಹೇಳಿದ್ದಾರೆ ಅನ್ನಿಸುತ್ತದೆ.

'ಎನ್ನ ಕಾಲೇ ಕಂಬವು ದೇಹವೇ ದೇಗುಲ' ಎಮ್ಬ ಬಸವಣ್ಣನವರ ವಚನದಲ್ಲಿ 'ಆತ್ಮ' ದ ಬಗ್ಗೆ ಮಾತೇ ಇಲ್ಲ. ಬಸವಣ್ಣನವರು 'ಆತ್ಮ'ವನ್ನು ಕಡೆಗಣಿಸಿದ್ದಾರೆ( ಅಂದರೆ ಅದರ ಬಗ್ಗೆ ಏನೂ ಹೇಳಿಲ್ಲ).

ತಿರುಳು: 'ಅತ್ಮ'ದ ಬಗ್ಗೆ ತೀರ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆಟೇ.

---ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೈಭವ...
ಶರಣರಲ್ಲಿ ಕಾಯಕದ ಬಗ್ಗೆ ಇದ್ದ ಗೌರವವನ್ನು / ಪ್ರಾಮುಖ್ಯತೆಯನ್ನು ಗುರುತಿಸಿ ಬರೆದಿದ್ದಕ್ಕೆ ನಂನಿ
>>ಬಸವಣ್ಣನವರು 'ಆತ್ಮ'ವನ್ನು ಕಡೆಗಣಿಸಿದ್ದಾರೆ
ನನ್ನ ಪ್ರಕಾರ ಶರಣರ ಜೀವನಾನುಭಾವಕ್ಕೆ ಬಹಳಷ್ಟು dimensions ಇವೆ. ಕಾಯಕ ಅಂತದ್ದರಲ್ಲಿ ಒಂದು. ನಾವು ಕೇವಲ ಕಾಯಕ ಪ್ರಜ್ಞೆ ಗೆ ಸಿಮಿತಗೊಳಿಸಿದರೆ ತಪ್ಪಾಗಬಹುದು?!.

>>ಕಾಯಕದ ಮೇಲೆ ತತ್ವ ಬೆಳೆಸಿದ ಶರಣರು 'ಆತ್ಮ'ದ ಬಗ್ಗೆ ಪರ-ವಿರೋಧ ಎರಡರ ಕಡೆಯೂ ನಿಲವನ್ನು ತಳೆದಿಲ್ಲ ಅಂತ ನನಗನ್ನಿಸುತ್ತದೆ..
ನನಗೆ ಈ ಯಾವ ವಚನಗಳಲ್ಲಿಯೂ ಇಬ್ಬಂಧಿತನ ಕಂಡಿಲ್ಲ!.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಇಬ್ಬಂದಿತನ ಎಂದು ಹೇಳಿಲ್ಲ.

ನಾನು ಹೇಳಿರುವುದು ಶರಣರು 'ಆತ್ಮ'ದ ಬಗ್ಗೆ ತಲೆ ಕೆಡಿಸಿಕೊಳ್ಳಕ್ಕೆ ಹೋಗಿಲ್ಲ ಬದಲಾಗಿ ದೇಹದ ಬಗ್ಗೆ ಹೆಚ್ಚು ತಲೆ ಕೆಡಿಕೊಂಡಿದ್ದಾರೆ.
ದೇಹ ಅಂದರೆ ಕಾಯಕನೂ ಆಗಬಹುದು ಅಲ್ಲವೆ.

ನನಗೆ ಗೊತ್ತಿರುವ ಮಟ್ಟಿಗೆ 'ಕಾಯಕ'ವೇ ಶರಣರ ಬೇರು ಮಂತ್ರ. ಬಸವಣ್ಣನವರ 'ದೇಹವೇ ದೇಗುಲ' ವಚನದಲ್ಲಿ ಇದನ್ನು ನೀವು ಕಾಣಬಹುದು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮದ ಬಗ್ಗೆ ಅವರು ತಲೆ ಕೆಡಿಸಿಕೊಳ್ಳದಿದ್ದರೆ ಇಷ್ಟಲಿಂಗದ ಅವಶ್ಯಕತೆಯೇನು? .. ಇಡೀ ಧರ್ಮದ ಸಿಧಾಂತದ ಆಧಾರ ಸ್ತಮ್ಬವಾದ "ಷಟ್ ಸ್ಥಲ" ಗಳಿಗೆ ಅರ್ಥ ವೇನು? ...
ಭಕ್ತ -ಭವಿ ಎಂದು ವಿನ್ಗಡಿಸುವ ಅವಶ್ಯಕತೆಯೇನು?
ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿನ್ಗಿ-ಶರಣ-ಐಕ್ಯ ಎಂದು ಷಟ್ಸ್ಥಲಗಳಾಗಿ ವಿನ್ಗಡಿಸುವ.. ಮತ್ತೆ ಅವುಗಳಲ್ಲಿ ನೂರಾಒಂದು ಸ್ಥಲಗಳನ್ನು ಹೇಳುವ ಅವಶ್ಯಕತೆಯೇನು?..

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಿ ನೀವು ವೀರಶೈವ ಮತದ ಆಚರಣೆಗಳನ್ನು ಶರಣರ ತತ್ವಕ್ಕೆ ತಕೊಂಬರ್ತಾ ಇದ್ದೀರ.
ವೀರಶೈವ ಮತ ಶರಣರ ಹೊತ್ತಿಗೊ ಮುಂಚೆನೂ ಇತ್ತು. ವೀರಶೈವ ಮತಕ್ಕೂ ಶರಣರ ತತ್ವಕ್ಕೂ ಸಿಕ್ಕಾಪಟ್ಟೆ ಬೇರೆತನಗಳಿವೆ.
ಎಲ್ಲ ಶರಣರೂ ಲಿಂಗ ಕಟ್ಟಿದ್ರಾ ? ನನಗೆ ಐಬು.. ಅಲ್ಲಮಪ್ರಬು ಲಿಂಗ ಕಟ್ಕೊಂಡಿದ್ದನೆ?

ಒಂದು ಕಡೆಯಂತೂ ಅಲ್ಲಮ ಪ್ರಬು, ಡೋಂಗಿಯಾಗಿ ಲಿಂಗ ಕಟ್ಟಿಕೊಂಡು ತಾವು 'ಶರಣರು' ಎನ್ನುವವರನ್ನು ಹೀಗಳೆದಿದ್ದಾನೆ.
ಈ ವಚನಗಳನ್ನ ನೋಡಿ:-

ಅಂಗದ ಕೈಯಲ್ಲಿ ಲಿಂಗ, ಮನದ ಕೈಯಲ್ಲಿ ಸಂಸಾರ,
ಎಂತಯ್ಯ ನಿನ್ನ ಪ್ರಾಣಲಿಂಗವೆಂಬೆ?
ಹೊರಗೆ ಕುರುಹಾಗಿ ತೋರುತ್ತಿದೆ.
ತನುವಿಗೆ ತನು ಸಯವಾಗದು ಮನಕ್ಕೆ ಮನ ಸಯವಾಗದು
ಎಂತಯ್ಯ ನಿನ್ನ ಪ್ರಾಣಲಿಂಗವೆಂಬೆ?

ನೀವು ಇಲ್ಲಿಂದ ಕೇಳಬಹುದು
http://www.vachanasahitya.org/DetailSong.asp?id=814&TableName=undefined

ಅಯ್ಯ, ಸಾತ್ವಿಕ ಶರಣರ ನುಡಿ ಹುಸಿಯೆ?
ಅದು ದಿಟ, ಅದು ದಿಟ
ಒಳಗೆಂಬುದೆ ದೇವಲೋಕ, ಹೊರಗೆಂಬುದೆ ಮರ್ತ್ಯಲೋಕ
ಈ ಎರಡು ಲೋಕಕ್ಕೆ ಹೊರಗಾಗಿ ನಾವಿರಲು
ಈ ಎರಡು ಲೋಕದೊಳಗೆಯೂ ತಾವೆ ಇರಲಿ ಗುಹೇಶ್ವರ

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>>ವೀರಶೈವ ಮತಕ್ಕೂ ಶರಣರ ತತ್ವಕ್ಕೂ ಸಿಕ್ಕಾಪಟ್ಟೆ ಬೇರೆತನಗಳಿವೆ.
ಈ ಮಾತಿಗೆ ನನ್ನ ಸಹಮತಿಯಿಲ್ಲ. ಆದರೂ ಇಲ್ಲಿ ಈ ವಾಕ್ಯದ ಚರ್ಚೆ ಬೇಡ. ಇನ್ನೊಮ್ಮೆ ಎಲ್ಲರೂ ಮಾಡುವ.

>>ಒಂದು ಕಡೆಯಂತೂ ಅಲ್ಲಮ ಪ್ರಬು, ಡೋಂಗಿಯಾಗಿ ಲಿಂಗ ಕಟ್ಟಿಕೊಂಡು ತಾವು 'ಶರಣರು' ಎನ್ನುವವರನ್ನು ಹೀಗಳೆದಿದ್ದಾನೆ
ಅಲ್ಲಮ ಅಲ್ಲಿನ ಎಲ್ಲ ಶರಣರಿಗೂ ಮಾಗದರ್ಶಕನಾಗಿ ಕೆಲಸಮಾಡಿದ್ದಾನೆ. ಹಾಗಾಗಿ ಯಾವಯಾವಾಗ ಇತರ ಶರಣರು ತಪ್ಪಿದರೋ ಆಗೆಲ್ಲ ತಪ್ಪನ್ನು ತಿದ್ದಿ ಸರಿ ಮಾಡಿದ್ದಾನೆ. ಅಂತಹ ಸಮಯದ ಒಂದು ವಚನ ಇದು.

>>ಎಲ್ಲ ಶರಣರೂ ಲಿಂಗ ಕಟ್ಟಿದ್ರಾ ? ನನಗೆ ಐಬು.. ಅಲ್ಲಮಪ್ರಬು ಲಿಂಗ ಕಟ್ಕೊಂಡಿದ್ದನೆ?
ಎಲ್ಲ ಶರಣರೂ ಇಷ್ಟಲಿಂಗ ಧಾರಿಗಳೇ. ಅಲ್ಲಮರೂ ಇಷ್ಟ ಲಿಂಗಧಾರಿಗಳೇ. ಇದರಲ್ಲಿ ಯಾವುದೇ ಸಂದೇಹವಿಲ್ಲ .
ಪ್ರಭು ಇಷ್ಟ ಲಿಂಗ ಏಕೆ ಬೇಕು ಎಂಬಲ್ಲಿ ಹೀಗೆ ಹೇಳ್ತಾನೆ.
http://www.vachanasahitya.org/DetailSong.asp?id=773&TableName=undefined
ಅರಿಯದ ಕಾರಣ ಕುರುಹು ಹಿಡಿವೆನಲ್ಲದೆ
ಅರಿದ ಬಳಿಕ ಇನ್ನೇನೋ?
ಬಿಟ್ಟಡೆ ಸಮಯ ವಿರೋಧ , ಬಿಡದಿದ್ದಡೆ ಜ್ನಾನವಿರೋಧ
ಗುಹೇಶ್ವರಲಿಂಗವು ಉಭಯದಳದ ಮೇಲೈದಾನೆ ಕಾಣಾ ಸಿದ್ಧರಾಮೆಶ್ವರ

ಇದನ್ನೂ ಒಮ್ಮೆ ಓದಿ.
http://www.vachanasahitya.org/DetailedKirPoem.asp?id=1198&TableName=Keer...

>>ನೋಡಿ ನೀವು ವೀರಶೈವ ಮತದ ಆಚರಣೆಗಳನ್ನು ಶರಣರ ತತ್ವಕ್ಕೆ ತಕೊಂಬರ್ತಾ ಇದ್ದೀರ.
ಇಲ್ಲಿ ಮತದ ದೃಷ್ಟಿಯಿಂದ ನಾನು ಬರೆದಿಲ್ಲ. ಶರಣರ ವಚನೆಗಳನ್ನು ಷಟ್ಸ್ಥಲ್ಲ ಗಳಿಗೆ ಅನುಸಾರವಾಗಿ ವಿಂಗಡಿಸಿದ್ದಾರೆ. ಇಷ್ಟ ಲಿಂಗ ಅಥವ ಷಟ್ ಸ್ಥಲ ದ ಹೊರತಾಗಿ ನಾನು ವಚನಕಾರರನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನನ್ನ ಪ್ರಕಾರ ಈ ಷಟ್ಸ್ಥಲ ವಚನಗಳು ನಮ್ಮ ಶರಣರು ತಮ್ಮ ಅನುಭಾವದಿಂದ ಮರ್ಜಿಸಿ ತೆಗೆದ ಸಾರ.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಿದ್ದು::

"ಇನ್ನೊಮ್ಮೆ ಎಲ್ಲರೂ ಮಾಡುವ" ಎಂಬುದು "ಇನ್ನೊಮ್ಮೆ ಬೇರೆ ಎಲ್ಲಾದರೂ ಮಾಡುವ " ಎಂದಾಗಬೇಕು

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಿದ್ದು::

"ಇನ್ನೊಮ್ಮೆ ಎಲ್ಲರೂ ಮಾಡುವ" ಎಂಬುದು "ಇನ್ನೊಮ್ಮೆ ಬೇರೆ ಎಲ್ಲಾದರೂ ಮಾಡುವ " ಎಂದಾಗಬೇಕು

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ದೇಹ ಅಂದರೆ ಕಾಯಕನೂ ಆಗಬಹುದು ಅಲ್ಲವೆ.

ನಿಜ ಎರಡು ಮಹಾ ವಾಕ್ಯಗಳು ಒಂದೇ ರೀತಿ ಇವೆ.
೧.ಕಾಯಕವೇ ಕೈಲಾಸ ...ಯಾವ ವಚನಕಾರ ಅಂತ ಸರಿಯಾಗಿ ತಿಳಿದಿಲ್ಲ.
೨.ಕಾಯವೇ ಕೈಲಾಸ..... ಬಸವಣ್ಣ

ಇಲ್ಲಿ ಕಾಯವೇ ಕೈಲಾಸ ಎಂಬುದನ್ನೂ ತೆಗೆದುಕೊಂಡರೆ ..
ನಮ್ಮ ಕಾಯದ ಆತ್ಮ ಕೈಲಾಸದ ಶಿವನಿಗೆ ಸಮನಾಗಿ ಬಳಕೆಯಾಗಿಲ್ಲವೇ? ( ಶಿವೊಹಂ ಅಥ್ವಾ ಸೋಹಂ ಮಹಾವಾಕ್ಯಗಳು ಕೊಡುವ ಅರ್ಥವನ್ನೇ ಈ ವಾಕ್ಯ ಕೊಡುವಿದಲ್ಲವೆ ?)

ನನ್ನ ಪ್ರಕಾರ ಶರಣರು ಕಾಯಕ್ಕಿಂತ ಕಾಯಕಕ್ಕೆ , ಕಾಯಕ್ಕಿಂತ ಆತ್ಮ ಕ್ಕೆ ಬೆಲೆಕೊಟ್ಟರು.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರಿದಡೆ ಆತ್ಮನಲ್ಲ ; ಅರಿಯದಿದ್ದಡೆ ಆತ್ಮನಲ್ಲ;
ತೋರಿತ್ತಾದಡೆ ವಿಷಯ; ತೋರದಿದ್ದಡೆ ಶೂನ್ಯವೆನಿಸುಗು ;
ಬೊಮ್ಮದ ಅರಿವಿನ್ನೆಲ್ಲಿಯದೋ ?
ಅವು ತಾನರಿವಾಗಿದ್ದು , ಸ್ವಾನುಭಾವದ ಹೊರೆಯಲ್ಲಿದ್ದು,
ಸನ್ನಿಧಿ, ನಿತ್ಯನಿಜಾನನ್ದಾತ್ಮ
ಉರಿಲಿಂಗ ಪೆದ್ಡಿ ಪ್ರಿಯ ವಿಶ್ವೇಶ್ವರನೆನ್ದರಿವುದು. ---------------------ಉರಿಲಿಂಗ ಪೆದ್ಡಿ
http://www.vachanasahitya.org/DetailSong.asp?ID=1118&TableName=SONGS

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಂಡೆ ಕಾಣೆ ನೆಂಬುದು ಕಂಗಳ ಭ್ರಮೆ
ಕೂಡಿದೆನಗಲಿದೆ ನೆಂಬುದು ಕಾಯದ ಭ್ರಮೆ
ಆರಿದೆನ್ ಅರಿದೆನೆಂಬುದು ಚಿದೋಹಂ ಭ್ರಮೆ
ಓದುವೆಗಂಗಳ ಜಿನುಗು ಓದು ಮನದ ಭ್ರಮೆ
ಇಹ ಪರಂಗಳನಾಸೆಗೈವುದು ಜೀವ ಭ್ರಮೆ
ಸೌರಾಷ್ಟ್ರ ಸೋಮೆಶ್ವರನ್ನೆಂಬುದು ಸಕಲ ಭ್ರಮೆ

...ಆದಯ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.