ಕನ್ನಡದಲ್ಲಿ ಬಹುವಚನ ಪ್ರತ್ಯಯಗಳು

1.666665


ಕನ್ನಡದಲ್ಲಿ  ಬಹುವಚನ ಪ್ರತ್ಯಯ ಪ್ರಯೋಗಗಳ ದ ಬಗ್ಗೆ ಕೆಲ ದಿನಗಳ ಹಿಂದೆ ಒಂದು ಚರ್ಚೆ ನೋಡಿದೆ. ವಿಜಯ ಕರ್ನಾಟಕದಲ್ಲಿನ  "ಎರಡು ರಸ್ತೆ " ಪ್ರಯೋಗ ಸರಿಯೇ ತಪ್ಪೇ ಎಂದು. 

 

ಅದರ ನೆಪದಿಂದ ಈ ಬರಹ. 

...................................

ಕನ್ನಡದಲ್ಲಿ ಬಹು ವಚನ ಪ್ರತ್ಯಯಗಳು ಐದು ರೀತಿಯಾಗಿ ಪ್ರಯೋಗಿಸಲ್ಪಡುತ್ತವೆ.

೧. ಗಳು ......


>ನಪುಂಸಕ ನಾಮಗಳಿಗೆ
ಉದಾ.  ಕಲ್ಲುಗಳು, ಹುಳುಗಳು,  

  
>ಕೆಲ ವಿಶಿಷ್ಟ ನಾಮಗಳಿಗೆ

ಉದಾ.  ಗುರುಗಳು,  ವ್ಯಾಪಾರಿಗಳು,

 

೨. ಅವರು / ಅಂದಿರು


>ಸಂಬಂಧವಾಚಕ ನಾಮಗಳಿಗೆ

ಉದಾ. ಮಾವಂದಿರು, ತಾಯಂದಿರು  

         ಮಾವನವರು, ತಂದೆಯವರು,

೩. ಆರು / ರು


> ವಿಶೇಷಣಗಳಿಗೆ

ಉದಾ. ಸಣ್ಣವರು, ಜಾಣರು 

>ಇತರ ನಾಮಗಳಿಗೆ 

ಉದಾ. ಹುಡುಗರು 

೪. ಕಳ್ 

ಉದಾ. ಮಕ್ಕಳು 

 

೫. ಶೂನ್ಯ ಸಂದರ್ಭದಲ್ಲಿ

ಪ್ರತ್ಯಯವಿಲ್ಲದೆಯೇ ಬಹುವಚನ ಬಳಕೆಗೊಳ್ಳುವುದು.


ಉದಾ. ಆನೆ ಬಂದವು 

         ಎಲೆ ಉದುರಿದವು

 

       

( ಅಂದ ಹಾಗೆ ವಿಜಯ ಕರ್ನಾಟಕದಲ್ಲಿನ ಪದೋನ್ನತಿ ಅನ್ನೋ ಅಂಕಣ ವನ್ನು ನಾನು ಗಮನಿಸುತ್ತಿರುತ್ತೇನೆ. ಪ್ರತಿಯೊಂದು ಪದವನ್ನೂ ಶತಾಯ ಗತಾಯ ಸಂಸ್ಕ್ರುತದ್ದೆಂದು ಹೇಳುವ ಹೊಲಸು ಮನಸ್ಕತೆ ಅಲ್ಲಿ ಕಾಣುತ್ತೆ. ನನ್ನ ಪ್ರಕಾರ ಇದು ಭಾಷಾ ಶಾಸ್ತ್ರಕ್ಕೆ ಮಾಡುವ ದ್ರೋಹ.  ಅದ್ಯಾರು ಆ ಅಂಕಣ ಬರೀತಾರೋ ?...) 

 

 

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸವಿತೃ ರವರೆ, ಕೆಲವೊ೦ದು ಕಡೆ ನಾನು ಮರದ ಎಲೆಗಳೆಲ್ಲಾ ಉದುರಿದವು!, ಎ೦ತ ರಸ್ತೆಗಳು ಅ೦ತೀಯಾ! ಎ೦ಬ ವಾಕ್ಯಗಳನ್ನು ಗಮನಿಸಿದ್ದೇನೆ. ಹಾಗಾದಾಗ ಅದು ತಪ್ಪೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃ ಹೇಳಿದ್ದು ತಪ್ಪಲ್ಲ, ನೀವು ಹೇಳಿದ್ದೂ ತಪ್ಪಲ್ಲ! ಅವನು ಆಡುಮಾತಿಗೆ ಮನ್ನಣೆ ಕೊಟ್ಟಿದ್ದಾನೆ ನೀವು ವ್ಯಾಕರಣ ಹೇಳಿದ್ದೀರಿ ಅಷ್ಟೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃ, ಅರು ಬಗೆಗಿನ ವಿವರಣೆ ತಪ್ಪಾಗಿರಬಹುದೆಂದು ನನ್ನನಿಸಿಕೆ ಹಾಗೆ, ಸಾಲು ಮರದ ತಿಮ್ಮಕ್ಕ ಎಂಬಲ್ಲಿ ಸಾಲು ಎಂಬುವುದು ಬಹುವಚನವನ್ನು ಧ್ವನಿಸುವುದರಿಂದ ಅದು ಸಾಲು ಮರಗಳ ಎಂದಾಗಬೇಕೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರದೀಪ್ ಮತ್ತು ರಾಘವೇಂದ್ರ ರೆ, ನನಗೆ ಒಂದು ಸರಳ ಸಂದೇಹ... ಮಾತಾಡುವ ಭಾಷೆಯನ್ನು ಗಮನಿಸಿ ವ್ಯಾಕರಣಕಾರರು ವ್ಯಾಕರಣದ ಸೂತ್ರಗಳನ್ನು ಬರೆಯುತ್ತಾರೋ? ಅತ್ವ ವ್ಯಾಕರಣಕಾರರು ಬರೆದಂತೆ ಭಾಷಿಕರು ಮಾತಡುತ್ತಾರೋ? ನಿಮ್ಮ ಪ್ರಶ್ನೆಗಳಿಗೆ ಉತ್ತರ ಇದರಲ್ಲೇ ಅಡಗಿದೆ . ............................. "ಅರು" ಬಗೆಗೆ ತಪ್ಪು ಹೇಗೆ ಅನ್ನೋದು ಸ್ವಲ್ಪ ಬಿಡಿಸಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಣ್ಣ - ಸಣ್ಣವರು, ಸಣ್ಣವನು - ಸಣ್ಣವರು ಇವೆರಡರ ಮಧ್ಯದ ವ್ಯತ್ಯಾಸವನ್ನು ನಾನು ಹೇಳಹೊರಟದ್ದು. ನನ್ನನಿಸಿಕೆ ತಪ್ಪಾಗಿತ್ತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಈ ಬರಹಕ್ಕೆ ನನ್ನಿಂದ ವಿಶೇಷ ಧನ್ಯವಾದಗಳು. >>೫. ಶೂನ್ಯ ಸಂದರ್ಭದಲ್ಲಿ ಪ್ರತ್ಯಯವಿಲ್ಲದೆಯೇ ಬಹುವಚನ ಬಳಕೆಗೊಳ್ಳುವುದು. ಉದಾ. ಆನೆ ಬಂದವು ಎಲೆ ಉದುರಿದವು>> ಆದರೆ ಒಂದು ಸಂಖ್ಯಾಸೂಚಕ ಪದವನ್ನು ಬಳಸಿದ ನಂತರ ಬಹುವಚನ ಬಳಸದೇ ಇರಬಹುದೇ ಎನ್ನುವುದೇ ನನ್ನ ಜಿಜ್ಞಾಸೆ. ಪದೋನ್ನತಿ ಅಂಕಣ ಬರೆಯುವವರು, ಉದಯವಾಣಿಯಲ್ಲಿ (ಮಣಿಪಾಲದಲ್ಲಿ) ಹಲವು ದಶಕಗಳ ಕಾಲ ಸೇವೆಸಲ್ಲಿದಿದ್ದ ಹಿರಿಯ ಪತ್ರಕರ್ತ ಶ್ರೀ ಜಿ. ಕೆ. ಮಧ್ಯಸ್ಥ ಅನ್ನುವುದು ನಾನು ಕೇಳಿರುವ ಮಾತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ನಾಲ್ಕು ಕಲ್ಲು ತಾ" ಅಂತಾರೆ. ನಾಲ್ಕು ಕಲ್ಲುಗಳನ್ನ ತಾ ಎನ್ನುವದು ನಾಲಗೆಗೆ ತೊಡರಿದಂತಾಗುತ್ತದೆ. ತರುವ ಕಲ್ಲುಗಳ ಸಂಖ್ಯೆ ನಾಲಕ್ಕು ಅಂತ ಗೊತ್ತಾದರೆ ಸಾಕು ತರುವವನಿಗೆ! "ಎಮ್ಮಿ ಮೇಯಿಸ್ಕೊಂಡು ಬಾ" ಅಂತಾರೆ. "ಎಮ್ಮೆಗಳನ್ನು ಮೇಯಿಸಿಕೊಂಡು ಬಾ" ಎನ್ನುವುದು ನಾಲಗೆಗೆ ಅಡ್ಡಿ. ಇಲ್ಲಿ ವಚನದ ಜೊತೆಗೆ 'ಅನ್ನು' ಪ್ರತ್ಯಯವೂ ಮಾಯವಾಗಿರುವುದನ್ನು ಗಮನಿಸಬಹುದು. ಇಲ್ಲಿ ಅರ್ಥವ್ಯತ್ಯಾಸವಾಗಿಲ್ಲ. ಹುಟ್ಟಾ ಇಂಗಳೀಸ್ ಮಿಡಿಯಮ್ಮಿನ ನನ್ನ ತಮ್ಮ ನನಗೆ ಹೀಗೆ ಹೇಳಿದ್ದ " ಅಣ್ಣಾ ಬ್ರಾಂಚ್ ನೋಡು ಎಷ್ಟು ಎಲೇಸ್ ಇವೆ!" ಎಲೆಗೆ ಬಹುವಚನ ಬಳಸಬೇಕೆಂಬ ಅರಿಮೆ ಅವನಲ್ಲಿತ್ತು. ಹೇಗೆ ಎಂಬುದು ತಿಳಿದಿರಲಿಲ್ಲ! "ಎಷ್ಟು ಎಲೆ ಇದ್ದಾವೆ ನೋಡು" ಅಂದಿದ್ದರೆ ಸಾಕಿತ್ತು! 'ಬಹುವಚನ ಇಲ್ಲಿದೆ' ಎಂಬ ತಿಳಿಮೆ ಇದ್ದರೆ ಸಾಕು. ಪದಬಳಕೆಯಲ್ಲಿ ವ್ಯತ್ಯಯವಾದರೂ ತೊಂದರೆಯಾಗದು! ನಮ್ಮ ಕಡೆ "ಹೊಟ್ಟಿ ಹಸಿದಾವು" ಎಂಬ ಮಾತು ಬಳಕೆಯಲ್ಲಿದೆ. ಇಲ್ಲಿ ಹೊಟ್ಟೆ ಏಕವಚನ ಎಂಬ ಅರಿಮೆ ಬಂದರೆ ಸಾಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶರೆ ಆಸಕ್ತಿಗೆ ಧನ್ಯವಾದಗಳು. ........................... ಎರಡು ರಸ್ತೆ , ನೂರು ಪ್ರಶ್ನೆ ಇತ್ಯಾದಿ ಬಳಕೆಗಳು "ಆಡುವ ಕನ್ನಡ" ದಲ್ಲಿ ತಪ್ಪಲ್ಲ. ವಿಚಿತ್ರ ವೆನ್ನಿಸದ , ಬಾಯಿಂದ ಸಹಜವಾಗಿ ಬರುವ , ಮತ್ತು ಏನು ಹೇಳಬೇಕು ಅನ್ನೋದನ್ನು ಸರಿಯಾಗಿ ಗೊಂದಲವಿಲ್ಲದೆ ತಲುಪಿಸಬಲ್ಲ ಎಲ್ಲ ಪ್ರಯೋಗಗಳೂ (ಅವು ಪ್ರಚಲಿತ ವ್ಯಾಕರಣಕ್ಕೆ ವಿರುದ್ದವಾಗಿದ್ದರೂ!!) ಒಪ್ಪಿತವೆ... ಇಲ್ಲಿ ಒಪ್ಪುವಿಕೆ ಒಬ್ಬಿಬ್ಬರದಲ್ಲ... ಒಂದು ಹೆಚ್ಚು ಸಂಕ್ಯೆಯ ಗುಂಪಿನದು! ಹೆಚ್ಚು ಜನ ಒಪ್ಪಿಕೊಂಡ ತಪ್ಪು ಪ್ರಯೋಗಗಳು ನಾಳೆ ವ್ಯಾಕರಣದ ಇನ್ನೊಂದು ಸೂತ್ರ ವಾಗ ಬಹುದು. ಭಾಷೆ ಬೆಳೆಯುವ ಅನೇಕ ರೀತಿಯಲ್ಲಿ ಇದೂ ಒಂದು! .......................... ಆದರೆ ಬರವಣಿಗೆಯ ಕನ್ನಡದಲ್ಲಿ, ಬರೆಯುವವರು ಒಮ್ಮೆ ಯೋಚಿಸೇಕು.... ಯೋಚಿಸಬೇಕು ಏಕೆಂದರೆ... >ಆ ಪ್ರಯೋಗ awkword ಅನ್ನಿಸಬಾರದ್ದಾದ್ದರಿಂದ. >ಪತ್ರಿಕೆಗಳ ಪ್ರಭಾವ ಜನಸಾಮನ್ಯರ ಭಾಷೆಯ ಮೇಲೆ ಹೆಚ್ಚಿರುವುದರಿಂದ , ಪತ್ರಿಕೆಗಳು ತಾವೇ ತಪ್ಪು ತಪ್ಪು ಬರೆದು , ಇರುವ ವ್ಯಾಕರಣ ಸೂತ್ರಗಳನ್ನು ಗೇಲಿ ಮಾಡಿ , ಆ ತಪ್ಪನ್ನು ಒಂದು ಸಮುದಾಯದ ಮೇಲೆ ಹೇರಿ, ಜನಸಮುದಾಯ ಒಪ್ಪಿಕೊಂಡು, ಅದನ್ನ ಮತ್ತೊಂದು ವ್ಯಾಕರಣ ಸೂತ್ರವಾಗದಂತೆ (ಈಗಲೇ ನಮ ಹುಡುಗರಿಗೆ ವ್ಯಾಕರಣ ಅಂದ್ರೆ ತಲೆನೋವು.. ಅದರಲ್ಲಿ ಇನ್ನೊಂದು ! ;) ) ನೋಡಿಕೊಳ್ಳಬೇಕು. ವಿಜಯ ಕರ್ನಾಟಕದ, ಇಂತ ವಿಷಯ ಬರೆಯುವವರು , ತುಂಬಾ ಸಾಮಾನ್ಯ ಜನರಾದ್ದರಿಂದ ಅವರಿಗೆ ವ್ಯಾಕರಣದ ಬಗ್ಗೆ ಹೆಚ್ಚು ತಿಳಿವಿಲ್ಲದಿರಬಹುದು. ಮುಂದೆ ಕಲೀತಾರೆನೋ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಜಯ ಕರ್ನಾಟಕಕ್ಕೆ "ಪದೋನ್ನತಿ" ಯಂತ "ನುಡಿಯರಿಮೆ" ಗೆ ಸಂಬಂಧಪಟ್ಟ ಅಂಕಣಕ್ಕೆನೆ ಒಬ್ಬ ಒಳ್ಳೆಯ scholar ಸಿಕ್ಕಿಲ್ಲ ಅಂದರೆ ಈ ಸಾಮಾನ್ಯ ವರದಿಗಾರರ ಬಗ್ಗೆ ಯೋಚಿಸಬೇಕೆ?!...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಆಡುಭಾಷೆಯನ್ನೇ "ಭಾಷೆ"ಯನ್ನಾಗಿಸುವವರ, ನಡುವೆ ನಿಮ್ಮ ಈ ಪ್ರತಿಕ್ರಿಯೆ ನನಗೆ ಸಮಾಧಾನ ನೀಡಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.