ಬಿರಿದ ಭಾವಗಳ ಹಿಂದೆ ಓಡುವ ಮುನ್ನ...

4.666665

      ನನ್ನ ಗೆಳೆಯ. ಹೆಸರು ಬೇಡ. ತುಂಬಾ ನಾಜೂಕು ಸ್ವಭಾವ. ಅಗತ್ಯವಿಲ್ಲದಿದ್ದರೆ  ಜಪ್ಪಯ್ಯ ಅಂದರೂ ಬಾಯಿ ತೆರೆಯುವವನಲ್ಲ. ಓದು ಅವನ ಪ್ರೀತಿಯ ಹವ್ಯಾಸ. ಹಾಗಾಗಿಯೇ ಎಂ ಎಸ್ಸಿಯ ಪ್ರಥಮ ವರ್ಷದಲ್ಲಿ ಆತನಿಗೆ ಅತ್ಯಂತ ಹೆಚ್ಚು ಅಂಕ. ಎಲ್ಲ ಗುರುಗಳ ಪ್ರೀತಿಯ ಶಿಷ್ಯ. ಕಂಪ್ಯೂಟರ್ ಎಂದರೆ ಪ್ರಾಣ.  ಎಲ್ಲವೂ ಚೆನ್ನಾಗಿಯೇ ಇತ್ತು. ಆಕೆಯ ಪರಿಚಯ ಆಗುವ ತನಕ. ಆರಂಭದಲ್ಲಿ ಎಲ್ಲರ ಹಾಗೆಯೇ ಆ ವಿಷಯದ ಕುರಿತು ಆತನೂ ಉದಾಸೀನನಾಗಿ ಇದ್ದ. ಆದರೆ ಗೆಳೆಯರು ಬಿಡಬೇಕಲ್ಲ. ದಿನವೂ ಗಾಳಿ ಹಾಕತೊಡಗಿದರು. ಅವನೋ ಬಿಸಿ ಗಾಳಿ ತುಂಬಿದ ಬಲೂನಿನಂತೆ ಸ್ವಚ್ಛಂದ ಕನಸಿನ ಲೋಕದಲ್ಲಿ ಹಾರತೊಡಗಿದ. ಕನಸು ಕಾಣುವಾಗ ಯಾವಾಗ ಕೈಯಿಂದ ಪುಸ್ತಕ ಜಾರಿತೋ ತಿಳಿಯಲೇ ಇಲ್ಲ. ಕುಂತರೂ ನಿಂತರೂ ಅವಳದೇ ಮಾತು. ಅವೇ ಮಾತು ಕೇಳಿ ಕೇಳಿ ಅವನ ಹತ್ತಿರ ಸುಳಿಯದೇ ಹೋದರು ಅದೇ ಗೆಳೆಯರು. 

    ಇಷ್ಟೇ ಆಗಿದ್ರೆ ಮುಗಿತಿತ್ತೇನೋ ಆದರೆ ಆಕೆಯೂ ಕೂಡ ಆತನ ಪ್ರೀತಿಗೆ ಸಮ್ಮತಿಸಿದ್ದು ಮಂಗನಿಗೆ ಹೆಂಡ ಕುಡಿಸಿದಂತಾಯ್ತು. ಎಂದೂ ಸರಿಯಾಗಿ ತಲೆಯೇ ಬಾಚದವನು, ಇನ್ ಶೆರ್ಟ್ ಮಾಡಿ ಕನ್ನಡಿಯ ಮುಂದೆ ಕಾಲು ಗಂಟೆ ನಿಲ್ಲದಿದ್ದರೆ ಆತನಿಗೆ ತೃಪ್ತಿಯೇ ಇರುತ್ತಿರಲ್ಲಿಲ್ಲ.  ಇದರ ಫಲಿತಾಂಶವೆಂಬಂತೆ  ಗಾನ್ ಪೇಷೇಂಟ್ ನ ಬ್ಲೆಡ್ ಪ್ರೆಸರ್ ಇಳಿಯುವಂತೆ ಮಾರ್ಕಗಳು ಇಳಿಯತೊಡಗಿದವು. ಆದರೆ ಅವನು "ಮಗ ಇನ್ನು ಮುಳುಗಿದ' ಅಂತ ತಿಳಿದುಕೊಂಡವರಿಗೆ ಅಚ್ಚರಿಯಾಗುವಾಗುವ ಹಾಗೆ ಕಷ್ಟಪಟ್ಟು ಸುಧಾರಿಸಿಕೊಂಡು ಓದಿದನಾದರೂ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೂ ಕಡೆಗೆ ಆ ಹುಡುಗಿ ಸಿಕ್ಕಲ್ಲಿಲ್ಲ. ಆಕೆಗೆ ಮದುವೆ ಗೊತ್ತಾಯ್ತು. ಒಂದು ದಿನ ಅತ್ತು ಕರೆದು 'ನೀನು ನನ್ನನ್ನು ತಂಗಿ ಅಂದುಕೋ' ಅಂದಳು. ಅವನಿಗೆ ಅಳಲು ಕಣ್ಣಿನಲ್ಲಿ ನೀರಿರಲಿಲ್ಲ. ಎಚ್ಚೆತ್ತು ದಿನ ಇಡೀ ಹೆಣ್ಣು ಕುಲವನ್ನೇ ಶಪಿಸಿದ. ಆತನಿಗೆ ಆ ಆಘಾತದಿಂದ ಹೊರಬರಲು ಒಂದೆರಡು ವರ್ಷಗಳೇ ಬೇಕಾಯಿತು.

ಇಷ್ಟೆಲ್ಲ ಆದಮೇಲೆ ಒಂದು ವಿಷಯ ಹೇಳದಿದ್ರೆ ವಿಷಯ ಅಪೂರ್ಣ ಆಗುತ್ತೆ. ಎಂ ಎಸ್ಸಿ ಫೈನಲ್ ಇಯರ್ ಫಲಿತಾಂಶ ಬಂದಾಗ ನನ್ನ ಗೆಳೆಯನ ಹುಡುಗಿ ಪ್ರಥಮ ರ್ಯಾಂಕ್(rank) ಬಂದಿದ್ದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಾತ್ವಿಕ್ ಬುದ್ದಿ ಇಲ್ವಾ ನಿಮಗೆ ಹೀಗಾ ಮಾಡ್ಕೊಲ್ಲೋದ್ ನೀವು ? <<ಹೆಸರು ಬೇಡ>> ನೀವೇ ಅನ್ಕೊಳ್ತಿವಿ :) :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ, ಸ್ವಾಮಿಗಳೇ ತಮ್ಮ ಪಾದ ತೋರಿಸಿ :) ನಾನು ಅಷ್ಟು ಸ್ಪಷ್ಟವಾಗಿ ಹೇಳಿದ್ದೇನೆ. ಅವನು ನನ್ನ ಗೆಳೆಯ ಅಂತ. ನಾವಿಬ್ಬರೂ ಬೇರೆ ಬೇರೆ ವಿಭಾಗದವರು. ನಾನು ಎರಡನೇ ಸ್ಥಾನಕ್ಕೆ ಬಂದದ್ದು ಓದದ್ದೇ ಇದ್ದ ಕಾರಣಕ್ಕೆ ಸ್ವಾಮಿ. ನನಗೂ ಈ ಕಥೆಗೂ ಸಂಬಂಧ ಇಲ್ಲ. ಇದು ನನ್ನ ಗೆಳೆಯನ ಕಥೆ. :) ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕರೆ ಎಷ್ಟೋ ಕೇಸುಗಳು ಬಿದ್ದೋದ್ವು ಇಂಥವು ಗೊತ್ತುಂಟೋ ? ಬಹುಷಃ ಆ ಹುಡುಗಿಗೆ ಈಗಾಗಲೇ ಮಾಡುವೆ ಆಗಿರಬೇಕು ಅದಕ್ಕೆ ಈಗ ಹೀಗೆ ಕಥೆ ಬದಲಿಸ್ತಿದ್ದಿರಾ ಆಲ್ವಾ ? ಇರಲಿ ಹೇಳ್ಕೊಳ್ಳಿ ಸ್ವಾಮಿ ಪ್ರೀತಿಲಿ ಮೋಸ ಹೋದೋರು ನೀವೊಬ್ರೆ ಅಲ್ಲ ಅ.ಭಾ.ವಿ.ಪ್ರದ ದೊಡ್ಡ ದಂಡೆ ಇದೆ ನಮ್ಮಲ್ಲಿ. :) :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೆ ಹೇಳಬೇಕು ಅಂತ ಇದ್ದೆ ಅರವಿಂದ ಅದನ್ನ ನೀವು ಹೇಳಿದ್ರಿ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕ ಹೇಳೂದು ಹುಡುಗಿಯರ ಮುಂದೆ ಬಾಳ ಶ್ಯಾಣಾ ಆಗಕ ಹೋಗಬಾರದು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಬೆಂಗಳೂರು ಗೆಳತಿಯರ ಹಂಗ ಇದ್ದಾಳ ಅನ್ಸುತ್ ನೋಡ್ರಿ ನಿಮ್ಮ ಹುಡುಗಿ..... -ಅಶ್ವಿನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಬೆಂಗಳೂರು ಲವ್ ಸ್ಟೋರಿ ಅಲ್ರಿ ಅಶ್ವಿನಿ ಲವ್ ಇನ್ ಮಂಗಳೂರು ಧಾರಾವಾಹಿ :) :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಅಶ್ವಿನಿಯವರೇ, >>>ನನ್ನ ಬೆಂಗಳೂರು ಗೆಳತಿಯರ ಹಂಗ ಇದ್ದಾಳ ಅನ್ಸುತ್ ನೋಡ್ರಿ ನಿಮ್ಮ ಹುಡುಗಿ.....>>> ನನ್ನ ಹುಡುಗಿ ಅಲ್ಲ ರಿ. ನಾನು ಹುಡುಗಿಯರು ಹೇಗೆ 'ಕೆಲವು' ಸ್ವಾರ್ಥಕ್ಕಾಗಿ ಪ್ರೀತಿ ಎಂಬ ಪವಿತ್ರ ಭಾವನೆಯನ್ನು ಮಿಸ್ ಯೂಸ್ ಮಾಡ್ತಾರೆ ಅಂತ ಹೇಳೋಕೆ ಹೊರಟೆ (ಈ ಪಟ್ಟಿಯಲ್ಲಿ ಹುಡುಗರು ಇರುತ್ತಾರೆ). ಆಕೆಗೆ ರ್ಯಾಂಕ್ ಬೇಕಿತ್ತು ಆತ ಇರೋ ತನಕ ಅವಳು ಫಸ್ಟ್ ರ್ಯಾಂಕ್ ಬರಲು ಸಾಧ್ಯವೇ ಇರಲಿಲ್ಲ. ಹೀಗೆ ಮಾಡಿ ಗೆದ್ದಳು ಅಷ್ಟೇ. ಸಾತ್ವಿಕ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಮ್ಕಿರಪ್ಪ ಸಾತ್ವಿಕ್ಕು ಬೆಂಕಿ ಇಲ್ದೆ ಹೋಗೆ ಆಡೋದ್ ಉಂಟೆ :) :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೂರಲ್ಲೂ ಇಂತಹವರು ಇರಬಹುದು...ನಿಮಗೆ ತಿಳಯದೆ ಇರಬಹುದಷ್ಟೆ. ಸ್ನೇಹಿತರೆಂದರೆ ಅವರಿಗೆ ತಪ್ಪು ಸರಿಗಳನ್ನು ತಿಳಿಸಿ ಕೋಡಬೇಕು ...ಹೀಗೆ ಬೇರೆಯವರ ಮುಂದೆ ಅವರ ವಿಡಂಬನೆ ಮಾಡಬರಡು( ಸ್ನೇಹಿತರು ಎಂದು ಕರೆದ ಮೇಲೆ) ಸ್ಪ್ರಹಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್, ಎಲ್ಲ ಹುಡುಗರು ಇಲ್ಲೇ ಅನ್ಸುತ್ತೆ ತಪ್ಪು ಮಾಡೋದು, ಓದ್ತಾ ಇರ್ಬೇಕಾದ್ರ ಯಾಕ್ ಬೇಕರಿ ಈ ಪ್ರೀತಿ ಪ್ರೇಮಾ?? ಅದ್ರು ಇರ್ಲಿ ಅವಳನ್ನ ಪ್ರೀತಿಸಿದರೆ ಸರಿ, ಅದಕ್ಕಾಗಿ ಓದು ಬಿಡೋ ಅವಶ್ಯಕತೆ ಏನ್ರಿ?? ಅವ್ರ ಎಚ್ಚರಿಕೆ ಯಲ್ಲಿ ಅವ್ರಿದ್ರೆ ಹಿಗಾಗ್ತಿರಲಿಲ್ಲೇನೋ ನೋಡ್ರಿ. -- ಅಶ್ವಿನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.