ಹೀಗಾದರೆ ಹೇಗೆ?....

0

ಹೀಗಾದರೆ ಹೇಗೆ.
wikipediaದಲ್ಲಿ ದೂರದರ್ಶನ ನೇರ ಮನೆಗೆ (dd direct plus) ಎಂಬ ಕೀ ವರ್ಡ್ ಕೊಟ್ಟು ಸರ್ಚಿಸಿದೆ. ಪಟ್ಟಿ ಬಂತು. ಆ ಪಟ್ಟಿಯಲ್ಲಿ ಹೊಸ ಚಾನೆಲ್ ಗಳ ಸೇರ್ಪಡೆಯಾಗಿದೆ!! ಅದು ಯಾವುದು ಡಿಸ್ಕವರಿ, ನ್ಯಾಷನಲ್ ಜಿಯೋಗ್ರಫಿಕ್ ನಂಥ ಜನಪ್ರಿಯ ಚಾನೆಲ್ ಗಳು. ನನ್ನ ಸಂತೋಷಕ್ಕೆ ಪಾರ ಉಂಟೇ? ಮನೆಗೆ ಹೋಗಿ ಗಡಿಬಿಡಿಯಲ್ಲಿ ಧಾರಾವಾಹಿ ನೋಡುತ್ತಿದ್ದ ಅಪ್ಪ ಅಮ್ಮನನ್ನು ಎಬ್ಬಿಸಿ ನಾನು ಮತ್ತೊಮ್ಮೆ ಡಿಟಿಎಚ್ ರಿಸಿವರ್ ನಲ್ಲಿ ಆಟೋ ಸರ್ಚ್ ಕೊಟ್ಟೆ. ನನ್ನ ಮನಸ್ಸಿನಲ್ಲಿ ಕ್ಷಣಗಣನೆ ಅರಂಭವಾಯಿತು. ಅಬ್ಬ ಎಷ್ಟು ಒಳ್ಳೇ ಚಾನೆಲ್ ಗಳು.. ಈ ಚಾನೆಲ್ ಗಳನ್ನು ನೋಡಲು ಅಮ್ಮ ಅಪ್ಪನ ಧಾರಾವಾಹಿಯ ಸಮಯ ಕಿತ್ತುಕೊಳ್ಳುವುದು ಹೇಗೆ? ತಮ್ಮನಿಗೂ ನನಗೂ ಚಾನೆಲ್ ನೋಡುವ ವಿಷಯದಲ್ಲಿ ಜಗಳ ಬಂದರೆ ಅವನಿಗೆ ಯಾವ ಆಮೀಷ ಒಡ್ಡಿ ನನಗೆ ಬೇಕಾದ ಚಾನೆಲ್ ನೋಡಬಹುದು ಇತ್ಯಾದಿ. ಅಷ್ಟರಲ್ಲಿ ಅಮ್ಮ ನನಗೆ 'ಎಷ್ಟು ಹೊತ್ತು ನಿನ್ನ ರಿಪೇರಿ? ಧಾರಾವಾಹಿ ಮುಗಿದ ಮೇಲೆ ಮಾಡಿದ್ದರೆ ಆಗ್ತಾ ಇರಲಿಲ್ವಾ?'(ಧಾರಾವಾಹಿಗಳು ಎಲ್ಲಿಯದರೂ ಮುಗಿರುವುದನ್ನು ನೀವು ಕೇಳಿದ್ದೀರಾ?!) ಅಂದಾಗ ನಾನು ಈ ಲೋಕಕ್ಕೆ ಬಂದೆ. ಅಷ್ಟು ಹೊತ್ತಿಗೆ ಸರ್ಚ್ ಮುಗಿದ್ದಿತ್ತು. programme list ನಲ್ಲಿ ಹೊಸ ಚಾನೆಲ್ ಗಳ ಹೆಸರೇ ಇಲ್ಲ. ತಲೆ ಬಿಸಿಯಾಗಿ ಮತ್ತೊಮ್ಮೆ ಸರ್ಚ್ ಮಾಡಿದೆ. ಹ್ಹು ಹ್ಹು.. ಎಲ್ಲಿ ಬರುತ್ತೆ? ಹಾಕಿದ್ದರೆ ಅಲ್ವಾ ಬರೋದು. ಕೇವಲ ವಿಕಿಯಲ್ಲಿ ಕಿಡಿಗೇಡಿಗಳು ತಪ್ಪು ತಪ್ಪು ಮಾಹಿತಿ ತುಂಬಿದ್ದಾರೆ. ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಅನ್ನುವ ಹಾಗೆ ತೆಪ್ಪಗೆ ಎದ್ದು ಧಾರಾವಾಹಿ ನೋಡುವ ಆನ್ನುವ ವೇಳೆಗೆ ಅದು ಮುಗಿದು ವಾರ್ತೆ ಶುರುವಾಗಿತ್ತು. ವಿಶೇಷ ಅಂದರೆ ದೂರದರ್ಶನದ ಸಿಬ್ಬಂದಿ ತಮ್ಮ ಪ್ರೋಗ್ರಾಮ್ ಲಿಸ್ಟ್ ಅನ್ನು ೨೦೦೮ ರ ಫೆಬ್ರವರಿಯ ನಂತರ ಅಪ್ ಡೇಟ್ ಮಾಡಲೆ ಇಲ್ಲ. ಅಂಥ ಹೊಣೆಗೇಡಿಗಳು ಇವರು. ಹೀಗಾದರೆ ಹೇಗೆ ವಿಕಿಯನ್ನು ನಂಬುವುದು?

ಮಾಹಿತಿಗಾಗಿ ಕೊಂಡಿ:
http://en.wikipedia.org/wiki/DD_Direct_Plus

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೋಗಿ ಆ ಪುಟ ಸರಿ ಮಾಡೋದಲ್ವ ಮತ್ತೆ? ಹೇಗೆ ಅಂತ ತಲೆ ಮೇಲೆ ಕೈ ಇಟ್ಟು ಕೂತರೆ ಆಗುತ್ತೊ :)

ವಿಕಿಯನ್ನು "ongoing project" ತರಹ ಟ್ರೀಟ್ ಮಾಡಿದರೆ ಉತ್ತಮ. ಅದರಲ್ಲಿರುವ ಮಾಹಿತಿ ನಿಮಗೆ ರೆಫರೆನ್ಸ್ ಮೆಟೀರಿಯಲ್ ಆಗಲಿಕ್ಕಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿಪ್ರಸಾದ್,
ನೀವು ಹೇಳಿದ ಹಾಗೆ ಆನ್ ಗೋಯಿಂಗ್ ಪ್ರೊಜೆಕ್ಟ್ ಅಂತ ತೆಗೆದುಕೊಂಡರೆ ಅದರ ಉಪಯೋಗ ಮಾಡೋದು ಯಾವಾಗ.. ತೀರ ಸರಳವಾಗಿ ಸಾರ್ವಜನಿಕರ ಹಸ್ತಕ್ಷೇಪ ಇದ್ದರೆ ಈ ಪ್ರಾಬ್ಲಮ್ ಅನ್ಸುತ್ತೆ.. ಅಲ್ಲದೇ ಅದನ್ನು ಸರಿಪಡಿಸಲು ಅದರ ಸರಿಯಾದ ವಿವರಗಳು ಕೂಡ ನನಗೆ ತಿಳಿದಿರಲಿಲ್ಲ..

ಸಾತ್ವಿಕ್ ಎನ್ ವಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.