sathvik N V ರವರ ಬ್ಲಾಗ್

ಸುದ್ದಿ ಮಾತಿನ ಭಟ್ಟರು ಸುದ್ದಿಯದಾಗ…


 ‘ಸರ್, ಆಗಸತ್ತರಕ್ಕೆ ನೀವು ಬೆಳೆಸಿದ ಪತ್ರಿಕೆ ಇ೦ದೆ ಸದ್ದಿಲ್ಲದೆ ಹೊರಬರಲು ಕಾರಣವೇನು ? ಹೊಸ ಚಿ೦ತನೆಗಳು, ಮೊನಚಾದ ಬರಹಗಳು, ಅ೦ಕಣಗಳು ಒ೦ದೇ ಎರಡೇ..ಲವಲವಕೆ ಯ೦ತಹ ಹೊಸ ರೂಪವನ್ನು ಪತ್ರಿಕೆಗೆ ಪರಿಚಯಿಸಿದಿರಿ, ರಾಜಕಾರಣಿ ಗಳ ಮಾನ ಹರಾಜು ಹಾಕಿ ಪತ್ರಿಕೊಧ್ಯಮದ ಘನತೆ ಹೆಚ್ಚಿಸಿದಿರಿ…..ನೀವಿಲ್ಲದ ಪತ್ರಿಕೆ ಇನ್ನುಮು೦ದೆ ನೀರಸ…ನಿಮ್ಮೂದಿಗೆ ನಾವಿದ್ದೇವೆ..’

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ನಾಸ್ತಿಕನಾಗೋದು ಅಂದ್ರೆ....

    ಅಂದು ಕೊಂಡ ತಕ್ಷಣ ಆಯಿತೆ? ನಾವು ನಮ್ಮೆಲ್ಲ ಕಷ್ಟಗಳನ್ನು ಪರಿಪಾಟಲುಗಳನ್ನು ದೇವರ ತಲೆಗೆ ಹಾಕಿ ಒಂದು ಕ್ಷಣ ನೆಮ್ಮದಿಯ ನಿಟ್ಟುರಸಿರು ಬಿಟ್ಟುಬಿಡುತ್ತೇವೆ. ಆದರೆ ಆ ಅಧಾರದ ಬಗ್ಗೆಯೇ ಅಪನಂಬಿಕೆ ಇರುವ ನಾಸ್ತಿಕರ ಕಥೆಯೇನು? ಒಂದೆಡೆ  ತಲೆಯಲ್ಲಿನ ಒತ್ತಡಗಳನ್ನು ನಿವಾರಿಸಿಕೊಳ್ಳಲು ಇರುವ ಆಧಾರ ತಪ್ಪಿತು. ಮತ್ತೊಂದೆಡೆ  ದೇವರನ್ನು ನಂಬದೇ ಇರುವುದರಿಂದ ಆಗುವ ಭಯಂಕರ ಸಮಸ್ಯೆಗಳ ಬಗ್ಗೆ ಜನರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಪುಕ್ಕಲನಾಗಿದ್ದರೆ  ದೇವರೆ ಗತಿ!! ಒಟ್ಟಾರೆ ಸಾಕಷ್ಟು ಮನೋದಾರ್ಢ್ಯವಿಲ್ಲದೆ ನಾಸ್ತಿಕನಾಗಲು ಸಾಧ್ಯವಿಲ್ಲ. ನಾನು ದೇವರನ್ನು ನಂಬುವುದಿಲ್ಲ ಎಂದು ಹೇಳುವುದು ಸುಲಭ. ಆದರೆ ಇಡೀ ಜೀವನವೆಲ್ಲ ಹಾಗೆಯೇ ಬದುಕುವುದು ಇದೆಯಲ್ಲ ಅದು ನಿಜಕ್ಕೂ ಚಾಲೆಂಜಿಂಗ್.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಬಿರಿದ ಭಾವಗಳ ಹಿಂದೆ ಓಡುವ ಮುನ್ನ...

      ನನ್ನ ಗೆಳೆಯ. ಹೆಸರು ಬೇಡ. ತುಂಬಾ ನಾಜೂಕು ಸ್ವಭಾವ. ಅಗತ್ಯವಿಲ್ಲದಿದ್ದರೆ  ಜಪ್ಪಯ್ಯ ಅಂದರೂ ಬಾಯಿ ತೆರೆಯುವವನಲ್ಲ. ಓದು ಅವನ ಪ್ರೀತಿಯ ಹವ್ಯಾಸ. ಹಾಗಾಗಿಯೇ ಎಂ ಎಸ್ಸಿಯ ಪ್ರಥಮ ವರ್ಷದಲ್ಲಿ ಆತನಿಗೆ ಅತ್ಯಂತ ಹೆಚ್ಚು ಅಂಕ. ಎಲ್ಲ ಗುರುಗಳ ಪ್ರೀತಿಯ ಶಿಷ್ಯ. ಕಂಪ್ಯೂಟರ್ ಎಂದರೆ ಪ್ರಾಣ.  ಎಲ್ಲವೂ ಚೆನ್ನಾಗಿಯೇ ಇತ್ತು. ಆಕೆಯ ಪರಿಚಯ ಆಗುವ ತನಕ. ಆರಂಭದಲ್ಲಿ ಎಲ್ಲರ ಹಾಗೆಯೇ ಆ ವಿಷಯದ ಕುರಿತು ಆತನೂ ಉದಾಸೀನನಾಗಿ ಇದ್ದ. ಆದರೆ ಗೆಳೆಯರು ಬಿಡಬೇಕಲ್ಲ. ದಿನವೂ ಗಾಳಿ ಹಾಕತೊಡಗಿದರು. ಅವನೋ ಬಿಸಿ ಗಾಳಿ ತುಂಬಿದ ಬಲೂನಿನಂತೆ ಸ್ವಚ್ಛಂದ ಕನಸಿನ ಲೋಕದಲ್ಲಿ ಹಾರತೊಡಗಿದ. ಕನಸು ಕಾಣುವಾಗ ಯಾವಾಗ ಕೈಯಿಂದ ಪುಸ್ತಕ ಜಾರಿತೋ ತಿಳಿಯಲೇ ಇಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಇಂಗ್ಲೀಷ್ ಹೋಯ್ತು ಹಿಂದಿ ಬಂತು ಢುಂ ಢುಂ ಢುಂ...

    ನಾನು ಮೊದಲೇ ಒಂದು ವಿಷಯ ಸ್ಪಷ್ಟಪಡಿಸಿ ಬರಹವನ್ನು ಮುಂದುವರೆಸುತ್ತೇನೆ. ನನಗೆ ಕನ್ನಡ ಬಿಟ್ಟು ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ. ಇಂಗ್ಲಿಷ್ 'ಕೊಂಚ ಕೊಂಚ' ಅರ್ಥವಾದರೂ, ಹಿಂದಿ 'ಸುಟ್ಟು ತಿನ್ನಲಿಕ್ಕೂ' ಬರುವುದಿಲ್ಲ. ಬರುವುದಿಲ್ಲ ಎಂಬುದು ಹೆಮ್ಮೆಯ ವಿಷಯವಲ್ಲದಿದ್ದರೂ ಕಲಿಯಲು ಪ್ರಯತ್ನಿಸಿ ಸೋತಿದ್ದೇನೆ. ಇರಲಿ ಈಗ ನೇರ ವಿಷಯಕ್ಕೆ ಬರೋಣ. ಹಿಂದೆ ಒಮ್ಮೆ ಲೇಖನವೊಂದನ್ನು  ಓದುವಾಗ- ಹಿಂದಿ ರಾಷ್ಟ್ರಭಾಷೆ, ಅದನ್ನು ಕಲಿಯುವುದು ನಮ್ಮ ದೇಶದ ಏಕತೆಯ ಸಂಕೇತ. ಇಂಗ್ಲೀಷ್ ಎಂಬುದು ಪರಕೀಯ ಭಾಷೆ. ಅದನ್ನು ಉಪಯೋಗಿಸಿಯೇ ಬ್ರಿಟಿಷರು ನಮ್ಮನ್ನು ೨೦೦ ಹೆಚ್ಚು ವರ್ಷ ಆಳಿದರು. ಇಂಥ ದಾಸ್ಯದ ಸಂಕೇತವನ್ನು ಒಪ್ಪಬೇಕೆ? ಅಂತೆಲ್ಲ ಬರೆದಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಹಳೆ ತಿಕ್ಕಲನ್ನು ಹೇಳುವ ಹೊಸಪದಗಳು...

         ನನಗಿನ್ನೂ ಸರಿಯಾಗಿ ನೆನಪಿದೆ. ಕಾಲೇಜು ಮುಗಿಸಿ ಮನೆಗೆ ಬರುವಾಗ ಬಸ್ಸಿನಿಂದ ಇಳಿದು ಬರುವಾಗ ಫುಲ್ ಟೈಟ್ ಆದವರ ತರಹ ಗಾಳಿಯಲ್ಲಿ ತೇಲುತ್ತಿದ್ದ ದೃಶ್ಯ. ಬೆಳಿಗ್ಗೆ ೭.೩೦ಕ್ಕೆ ಮನೆ ಬಿಟ್ಟರೆ ಬರೋಬ್ಬರಿ ೪೦ ಕಿಲೋ ಮೀಟರ್ ಪ್ರಯಾಣ. ಮತ್ತೆ ಬಸ್ ಸ್ಟ್ಯಾಂಡಿನ ಸುಮಾರು ಒಂದೂವರೆ ಕಿಲೋ ಮೀಟರ್ ನಡೆದು ಕ್ಲಾಸ್ ಸೇರುವಾಗ ದಣಿವಾರಿಸಿಕೊಳ್ಳಲು ಒಂದತ್ತು ನಿಮಿಷವೂ ಉಳಿಯುತ್ತಿರಲ್ಲಿಲ್ಲ . ಬೆಳಿಗ್ಗೆಯೇ ಬೇಗ ಗಬಗಬನೇ ತಿಂದು ಬಂದ ಎರಡು ಇಡ್ಲಿ ಯಾವಾಗಲೋ ಕರಗಿ, ಹೊಟ್ಟೆಯ ಯಾವುದೇ ಮೂಲೆಯಲ್ಲಿ ಆಸ್ಯಿಡ್ ಸುರುವಿದ ಅನುಭವ. ಒಂದು ಕಡೆ ಸೆಖೆಯಿಂದ ಬೆವರು ಇಳಿಯುತ್ತಿದ್ದರೆ ಇನ್ನೊಂದು ಗಣಿತಶಾಸ್ತ್ರ ಹೇಳಿಕೊಡುವ ಮೇಡಂ ಟ್ರಿಗ್ನೋಮೆಟ್ರಿ ಕ್ಲಾಸ್ ನಲ್ಲಿ 'ಟ್ಯಾನ್+ಕಾಸ್ ತೀಟ ಏನಾಗುತ್ತೆ' ಅಂತ ಕೇಳಿ ಬೆಪ್ಪರಾಗಿಸುತ್ತಿದ್ದರು. ಇಡೀ ರಾತ್ರಿ ಬಾಯಿ ಪಾಠ ಮಾಡಿದ್ದು ವೇಸ್ಟ್ ಆಗುತ್ತಿತ್ತು. ನಾನು ಮೊದಲ ಬಾರಿಗೆ ಬ್ಯ ಬ್ಯ ಬ್ಯ ಅಂದದ್ದು ಕಾಲೇಜಿನ ದಿನಗಳಲ್ಲಿಯೇ ಇರಬೇಕು.


       ಹೈಸ್ಕೂಲ್ ದಿನಗಳಲ್ಲಿ ಹಾಳೂರಿಗೆ ಉಳಿದವನೇ ಗೌಡ ಅನ್ನೋ ಹಾಗೆ ಎಲ್ಲದರಲ್ಲೂ ನನಗೆ ಪ್ರಾಶಸ್ತ್ಯ ಸಿಕ್ಕುತ್ತಿತ್ತು. ಕನ್ನಡ ಮೀಡಿಯಂನಲ್ಲಿ ಓದಿದರೂ ನಾನು ಸೈನ್ಸ್ ನಲ್ಲಿ ಒಳ್ಳೆ ಅಂಕಗಳಿಸುತ್ತಿದ್ದೆ. ಗಣಿತದಲ್ಲಿ ೧೦೦ ಶೇಕಡಾ ಅಂಕ ತೆಗೆದಾಗ ಗಣಿತದ ಮೇಸ್ಟ್ರು ತಲೆಗೆ ಪ್ರೀತಿಯಿಂದ ಮೊಟುಕಿ 'ನಿಜ ಹೇಳಲೇ ಯಾರ ಹತ್ರ ಕಾಪಿ ಹೊಡೆದೆ' ಅಂತ ಕೇಳ್ತಿದ್ರು. ಆಗ ನಾನು ನಾಚಿ ನೀರಾಗಿ 'ಇಲ್ಲ ಸಾ, ನಾನೇ ಬರೆದಿದ್ದು' ಅಂದರೂ ಅವರಿಗೆ ನನ್ನ ಮೇಲೆ ವಿಶ್ವಾಸ ಮೂಡಿದ ಹಾಗೆ ಕಾಣುತ್ತಿರಲ್ಲಿಲ್ಲ. ಎಸ್ ಎಸ್ ಎಲ್ ಸಿ ಯಲ್ಲಿ ಅವರ ಊಹೆ ನಿಜ ಅನ್ನೋ ಹಾಗೆ ಕಡಿಮೆ ಅಂಕ ಬಂದದ್ದು ಬೇರೆ ವಿಚಾರ. ಇಷ್ಟೆಲ್ಲಾ ಆದರೂ ನಾನು ದೂರದ ಊರಿನಲ್ಲಿರುವ ಕಾಲೇಜಿಗೆ ಸೇರಿ ವಿಜ್ಞಾನಿಯಾಗಬೇಕೆಂಬ ಕನಸು ಕಂಡಿದ್ದೆ!!! ನನ್ನ ಕೈಗೆ ಸಿಕ್ಕ ವಸ್ತುಗಳ ಕರುಳು ಮೂಳೆ ಬೇರೆ ಮಾಡುತ್ತಿದ್ದ ಕಾರಣ ನನ್ನ ಅಪ್ಪ ಅಮ್ಮ ಕೂಡ ನಮ್ಮ ಮಗ ಆದರೆ ಸೈನ್ಟಿಸ್ಟೇ ಆಗುತ್ತಾನೆ ಅಂತ ಕನಸು ಹೊತ್ತಿದ್ದರು. ಆಗಷ್ಟೇ ತಂದಿದ್ದ ರೇಡಿಯೋವನ್ನು ಬಿಚ್ಚಿ ಕೂಡಿಸಲು ಬರದೆ ಕುಲಗೆಡಿಸಿದ್ದರೂ ಮಗ ವಿಜ್ಞಾನಿ ಆಗುವ ಮೊದಲ ಹೆಜ್ಜೆಯಲ್ಲಿ  ಜಯಿಸಿದ ಅಂತ ಖುಷಿಪಟ್ಟಿದ್ದರು.  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

Pages

Subscribe to RSS - sathvik N V ರವರ ಬ್ಲಾಗ್