ಭಗತ್ ಸಿಂಗ್ ನೆನಪಿನಲ್ಲಿ...

5

ಪ್ರಸ್ತುತ ಎಲ್ಲರಿಗೂ ಭಗತ್ ಸಿಂಗ್ ಪರಿಚಯವಿರುವುದರಿಂದ ಅವರ ಬಯಾಗ್ರಫಿ ಬರೆಯುವುದು ನಮ್ಮ ಈ ತಲೆಮಾರಿಗೆ ಅಗತ್ಯವಿಲ್ಲ. ಅಗತ್ಯವಿದ್ದರೆ ಅದು ಮುಂದಿನ ತಲೆಮಾರಿಗೆ ಏಕೆಂದರೆ ಈಗಾಗಲೇ 'ಕ್ರಾಂತಿಕಾರಿ ಭಯೋತ್ಪಾದಕ'ರೆಂದು ಕರೆಯಲ್ಪಡುವ ಕ್ರಾಂತಿಕಾರಿಗಳ ಅರಿವು ಮುಂದಿನ ಜನಾಂಗಕ್ಕೆ ಯಾವ ರೀತಿ  ಬಿಂಬಿಸಲಾಗುವುದೋ ನಾ ಕಾಣೆ! ಭಗತ್ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಕಾರಣೀಭೂತವಾದ  ಜಲಿಯನ್ ವಾಲಾ ಬಾಗಿಗೆ ಹೋಗಿ ಬಂದ ನಂತರ ಕಾಡಿದ್ದು ಕೇವಲ ಭಗತ್ ಅಲ್ಲ, ಬಹುತೇಕ ಹುತಾತ್ಮರಾದ ಎಲ್ಲರೂ. ಆದರೆ ಅವರೆಲ್ಲರ ಮಧ್ಯೆ ನನಗೆ ಎದ್ದು ನಿಂತು ಕಾಣುವ ವ್ಯಕ್ತಿತ್ವ ಭಗತ್ ರದ್ದು. ಅವರ 'ನಾನೇಕೆ ನಾಸ್ತಿಕ' ಲೇಖನ ಕೂಡ ಒಂದು ಕಾರಣ.


"ಕ್ರಾಂತಿಕಾರಿಯೆಂದರೆ ಅಸ್ತಿತ್ವದಲ್ಲಿರುವ ಸಮಾಜದ ವ್ಯವಸ್ಥೆಯನ್ನು, ಅಂದರೆ ಆಳ್ವಿಕೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿ ನವೀನ ರೀತಿಯಲ್ಲಿ ಹಾಗೂ ಉತ್ತಮ ಮಾದರಿಯ ಆಧಾರದ ಮೇಲೆ ಕ್ರಮಬದ್ಧವಾದ ಕಾರ್ಯಕ್ರಮಗಳ ಮೂಲಕ ಸಮಾಜದ ಪುನರ್ನಿರ್ಮಾಣ ಎಂದರ್ಥ. ಹೀಗೆ ಮಾಡುವುದು ಅಗತ್ಯ, ಇಲ್ಲವಾದಲ್ಲಿ ಅದು ಕ್ರಾಂತಿಯಾಗುವುದಿಲ್ಲ." ಎಂಬ ವಿಚಾರ ಧೋರಣೆಯ ಭಗತ್ ಉಳಿದ ಕ್ರಾಂತಿಕಾರಿಗಳಿಗಿಂತ ವಿಭಿನ್ನರಾಗಿ ಕಾಣುವುದೂ ಇಂಥ ಚಿಂತನೆಗಳಿಗೆ. ಬಾಕುನಿನ್, ಮಾರ್ಕ್ಸ್, ಲೆನಿನ್ ಮತ್ತೂ ಟ್ರಾಟ್ ಸ್ಕಿ ಬರಹಗಳನ್ನು ಹೆಚ್ಚಾಗಿ ಅಭ್ಯಸಿಸಿದ ಭಗತ್ ಅವರು ನಡೆಸಿದ ಯಶಸ್ವೀ ಕ್ರಾಂತಿಗಳಿಂದ ಬಹುವಾಗಿ ಪ್ರಭಾವಿತರಾದರು. ಇದರ ಪರಿಣಾಮವಾಗಿಯೇ ಸೋಷಿಯಲಿಸಂನತ್ತ ಅವರ ಮನಸ್ಸು ವಾಲಿತು, ಅಷ್ಟೇ ಅಲ್ಲ ತಮ್ಮ ಸಂಘದ ಪ್ರಮುಖ ಧ್ಯೇಯವನ್ನೂ ಅದೇ ಆಗಿಸಿದರು.  

 

 

 

ತಮ್ಮಲ್ಲಿ ದೇಶಪ್ರೇಮ ಬೆಳೆಯಲು ತಂದೆ ಕಾರಣ ಎನ್ನುವ ಭಗತ್ ಪ್ರಾರಂಭದಲ್ಲಿ ದೈವ ಭಕ್ತಿಯನ್ನಿಟ್ಟುಕೊಂಡಿದ್ದರೂ ಕ್ರಮೇಣ ಅವರಲ್ಲಿ ನಾಸ್ತಿಕತೆ  ಬೆಳೆಯಲಾರಂಭಿಸಿತು. ದೇವರಿಲ್ಲ ಎಂದು ಒಪ್ಪಿಕೊಂಡಾಕ್ಷಣ ದೇವರನ್ನು ಒಪ್ಪಿಕೊಳ್ಳಿಸಲು ಪ್ರೇರೇಪಿಸುವ ಎಷ್ಟೋ ಕಾರಣಗಳು ಬಂದೊದಗುತ್ತವೆ. ಇದರ ಅರಿವಿಲ್ಲದಿರಲಿಲ್ಲ. ಶುದ್ಧ ನಾಸ್ತಿಕತೆಯನ್ನು ವಿವರಿಸುತ್ತಾ ಅವರು ಹೀಗೆನ್ನುತ್ತಾರೆ,

"ದೇವರಲ್ಲಿ ನಂಬಿಕೆಯಿರುವವನು ಅದನ್ನು ಕಳೆದುಕೊಳ್ಳುವುದಕ್ಕೆ ಅವನಲ್ಲಿರುವ ಸ್ವಪ್ರತಿಷ್ಟೆಯು ಹೇಗೆ ತಾನೇ ಕಾರಣವಾದೀತು? ಇದು ಎರಡು ವಿಧದಲ್ಲಿ ಮಾತ್ರ ಸಾಧ್ಯ.ಒಂದೋ ಆ ಮನುಷ್ಯ ತಾನು ದೇವರ ಪ್ರತಿಸ್ಪರ್ಧಿಯೆಂದು ಯೋಚಿಸಲು ಆರಂಭಿಸಬೇಕು ಇಲ್ಲವೇ ತಾನೇ ದೇವರೆಂದು ಭಾವಿಸಿರಬೇಕು. ಈ ಎರಡೂ ಸಂದರ್ಭಗಳಲ್ಲಿ ಅವನು ಶುದ್ಧ ನಾಸ್ತಿಕನಾಗಲು ಸಾಧ್ಯವಿಲ್ಲ. ಮೊದಲನೆಯ ಸಂದರ್ಭದಲ್ಲಿ ಅವನು ತನ್ನ ಪ್ರತಿಸ್ಪರ್ಧಿಯ ಅಸ್ತಿತ್ವವನ್ನು ನಿರಾಕರಿಸಲು ಹೋಗುವುದೇ ಇಲ್ಲ. ಎರಡನೆಯ ಸಂದರ್ಭದಲ್ಲಿ ಪ್ರಕೃತಿಯ ಮರೆಯಲ್ಲಿದ್ದು ಪ್ರಜ್ಞಾಪೂರ್ವಕವಾಗಿ ಚಲನವಲನಗಳನ್ನು ನಿಯಂತ್ರಿಸುವ ಶಕ್ತಿಯೊಂದರ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ. ಆದರೆ ಆತ ತನ್ನನ್ನೇ ಆ ದೇವರೆಂದುಕೊಳ್ಳುತಾನೋ ಅಥವಾ ಆ ಪರಮ ಶಕ್ತಿಯು  ತನ್ನಿಂದ ಭಿನ್ನವಾಗಿದೆಯೆಂದು ಭಾವಿಸುತ್ತಾನೋ ಎಂಬುದು ಮುಖ್ಯವಲ್ಲ, ಬದಲು, ಮೂಲಭೂತ ಶಕ್ತಿಯೊಂದಿಗೆ ಮತ್ತು ಅದರಲ್ಲಿ ಅವನಿಗೆ ನಂಬಿಕೆಯಿದೆ ಎನ್ನುವುದಷ್ಟೇ ಇಲ್ಲಿ ಮುಖ್ಯ ಅಂತಹ ಸಂದರ್ಭಗಳಲ್ಲಿ ಅವನು ನಾಸ್ತಿಕನಾಗುವುದು ಸಾಧ್ಯವೇ ಇಲ್ಲ"

 

ಸ್ವತಂತ್ರ ಚಿಂತನೆಯನ್ನು ಬೆಂಬಲಿಸುತ್ತಿದ್ದ ಭಗತ್ ಅಹಿಂಸೆಯ ಬಗ್ಗೆ ಒಳವಿದ್ದವರೂ ಆಗಿದ್ದರು. ಕ್ರಾಂತಿಕಾರಿ ಎಂದರೆ ಹಿಂಸೆ ಪ್ರಚೋದಕರು ಎಂದು ಬಿಂಬಿಸಲಾಗುವ ಜನರಿಗೆ ಅವರ ಈ ಮಾತುಗಳು ಮತ್ತು ಅವರು ಅನುಸರಿಸಿದ ದಾರಿಯ ಸಮರ್ಥನೆಯನ್ನು ನೀಡುತ್ತವೆ  "ಅತ್ಯಂತ ಅಗತ್ಯವಾದಾಗ ಮಾತ್ರ ಒಂದು ಭೀಕರ ಅನಿವಾರ್ಯತೆಯಾಗಿ ಬಲ ಪ್ರಯೋಗವು ಸಮರ್ಥನೀಯ. ಆದರೆ ಎಲ್ಲಾ ಸಾಮೂಹಿಕ ಚಳುವಳಿಗಳು ಅಹಿಂಸಾ ತತ್ವವನ್ನು ತಮ್ಮ ಧೋರಣೆಯನ್ನಾಗಿ ಅನುಸರಿಸುವುದು ಅತ್ಯಗತ್ಯ"  ಈ ವಿಚಾರದಿಂದ ಭಗತ್ ನಮ್ಮೊಂದಿಗೆ ನಮ್ಮ ಬದಿಯಲ್ಲಿ ನಿಲ್ಲುತಾರೆ ಆದ್ದರಿಂದ ಹೆಚ್ಚು ಮನಸ್ಸನ್ನು ಸ್ಪರ್ಷಿಸುತ್ತಾರೆ. ಏಕೆಂದರೆ ಹಿಂಸೆ ನಮಗೆ ಸ್ವಾಭಾವಿಕ. ಅಹಿಂಸೆ ಹೊಸತು. 'ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎನ್ನುವುದು ಆದರ್ಶವಾದರೆ ಹೊಡೆದವನ ಕೆನ್ನೆಗೆ ಬಾರಿಸುವುದು ವಾಸ್ತವ!

 

ಅವರನ್ನು ಗಲ್ಲಿಗೇರಿಸಿದಾಗ ಅಂತಹ ಮಹಾನ್ ಭವಿತವ್ಯದ ಚಿಂತಕ ಮತ್ತು ಅದನ್ನು ಬಹುತೇಕ ಪಾಲಿಸಬಲ್ಲ ವ್ಯಕ್ತಿಯನ್ನು ಬಹುಬೇಗ ಕಳೆದುಕೊಂಡಾಗ ನಷ್ಟವಾದದ್ದು ಭಾರತ ಮಾತೆಗೆ, ನಮಗೆ! ಆದರೆ ಒಬ್ಬ ಕ್ರಾಂತಿಕಾರಿ ಈ ರೀತಿ national icon ಆಗಲು ಅದು ಪ್ರಧಾನ ರೀತಿ ಕಾರಣವಾಯಿತು. ರಾಣಿ ಲಕ್ಷ್ಮೀಬಾಯಿ, ಚೆನ್ನಮ್ಮ, ತಾತ್ಯಾ ಟೋಪೆ, ಆಜಾದ್ ಇವೆ ಮೊದಲಾದ ಹೆಸರುಗಳನ್ನೂ ನೆನೆಸಿಕೊಂಡಾಗ ನೆಟ್ಟಗಾಗುವ  ರೋಮಸಂಕುಲ ಭಗತರನ್ನೂ ನೆನೆಸಿಕೊಂಡಾಗ ಆಗುವುದು ವಿಶೇಷವೇನಲ್ಲ. ಆಗದಿದ್ದರೆ ಸಲ್ಲ!

 


ಜೈಲಿನಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿದ್ದ ಭಗತ್ ಬರೆದ ಈ ಮಾತುಗಳು ಅವರ ವ್ಯಕ್ತಿತ್ವಕ್ಕೆ, ಅವರ ಬದುಕಿಗೆ ಇಟ್ಟ ಕನ್ನಡಿ - "ಶ್ರೇಷ್ಠ ಧ್ಯೇಯಕ್ಕಾಗಿ ನನ್ನ ಪ್ರಾಣಾರ್ಪಣೆ ಮಾಡುತ್ತಿರುವೆನೆಂಬ ಸಾರ್ಥಕ ಕಲ್ಪನೆಗಿಂತ ಬೇರೆ ಎಂತಹ ಸಾಂತ್ವನ ನನಗೆ ಬೇಕಾಗಿದೆ? ಒಬ್ಬ ದೈವ ಭಕ್ತನಾದ ಹಿಂದುವೇನೋ ಮರುಜನ್ಮದಲ್ಲಿ ಒಬ್ಬ ರಾಜನಾಗಿ ಹುಟ್ಟುವ ಕನಸು ಕಾಣಬಹುದು, ಇಸ್ಲಾಂ ಮತ್ತು ಕ್ರೈಸ್ತ ಧರ್ಮದವರು ಎಲ್ಲಾ ಸುಖ - ಸಂತೋಷಗಳನ್ನು ಸವಿಯಬಹುದಾದ ಸುಂದರ ಸ್ವರ್ಗದ ಕನಸು ಕಾಣಬಹುದು; ಇಲ್ಲಿಯ ನೋವು ಮತ್ತು ತ್ಯಾಗಗಳಿಗೆ ಪ್ರತಿಯಾಗಿ ದೊರೆಯಬಹುದಾದ ಪುರಸ್ಕಾರವನ್ನವರು ನಿರೀಕ್ಷಿಸಬಹುದು. ಆದರೆ ನಾನಾದರೋ ಏನೆನ್ನು ಅಪೇಕ್ಷಿಸಲಿ? ಹಗ್ಗವು ನನ್ನ ಕುತ್ತಿಗೆಯ ಸುತ್ತ ಬಿದ್ದು ನನ್ನ ಕಾಲ ಕೆಳಗಿನ ಹಲಗೆಯನ್ನು ಎಳೆದು ಹಾಕಿದಾಗ, ಆ ಕ್ಷಣವೇ ನನ್ನ ಕಡೆಯ ಕ್ಷಣ ಎಂಬುದು ನನಗೆ ಚೆನ್ನಾಗಿ ಗೊತ್ತು. ನಾನು ಅಥವಾ ಇನ್ನೂ ನಿಷ್ಕೃಷ್ಟವಾಗಿ ಅಧ್ಯಾತ್ಮದ ಪರಿಭಾಷೆಯಲ್ಲಿ ಹೇಳಬೇಕೆಂದರೆ, ನನ್ನ ಆತ್ಮ ಅಲ್ಲಿಗೆ ಕೊನೆಯಾಗುತ್ತದೆ. ಮುಂದೆ ಏನೂ ಉಳಿಯುವುದಿಲ್ಲ. ಅಂತ ಅದ್ಭುತವಾದ ಕೊನೆ ಇದಲ್ಲದಿದ್ದರೂ ಹೋರಾಟದ ನನ್ನ ಪುಟ್ಟ ಜೀವನವೇ ಒಂದು ಪುರಸ್ಕಾರವಾಗಿರುತ್ತದೆ - ಆ ಅರ್ಥದಲ್ಲಿ ಅದನ್ನು ತೆಗೆದುಕೊಳ್ಳುವ ಎದೆಗಾರಿಕೆ ನನ್ನಲ್ಲಿದ್ದರೆ! ಇದಕ್ಕಿಂತ ಬೇರೇನೂ ಇಲ್ಲ. ಸ್ವಾರ್ಥ ಸಾಧನೆಯ ಯಾವ ಉದ್ದೇಶವೂ ಇಲ್ಲದೆ, ಇಲ್ಲಿಯಾಗಲಿ ಅಥವಾ ಇಲ್ಲಿನದಾಚೆಯಾಗಲಿ ಯಾವ ಪುರಸ್ಕಾರವನ್ನೂ ಪಡೆಯುವ ಅಭಿಲಾಷೆಯಿಲ್ಲದೆ, ಸ್ವಾತಂತ್ರ್ಯದ ಧ್ಯೇಯಕಾಗಿ ನಾನು ನಿಷ್ಕಾಮ ಮನೋಭಾವದಿಂದ ನನ್ನ ಜೀವನವನ್ನು ಮುಡಿಪಾಗಿರಿಸಿದ್ದೇನೆ"

 

ಇಪ್ಪತ್ತರ ಹರೆಯದಲ್ಲೇ ಇಂಥಹ ಮೇಧಾವಿ ಚಿಂತನೆಗಳು ಅದನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ ಮತ್ತು ಅತೀವ  ಧೈರ್ಯ ಹೊದಿದ್ದ ಭಗತ್ ನಮಗೆಲ್ಲಾ ಸ್ಪೂರ್ತಿಯಾಗಬೇಕು. ದೇಶಕ್ಕಾಗಿ ಜೀವ ತೆತ್ತ ಈ ಚೇತನಕ್ಕೆ ಅವರ ಹುಟ್ಟು ಹಬ್ಬದ ಕಾರಣ  ನೀಡುತ್ತಾ ಕೊನೆಯದಾಗಿ ಭಗತ್ ಸಿಂಗರ ಮಾತುಗಳೊಂದಿಗೆ ಈ ಬರಹವನ್ನು ಮುಗಿಸುತ್ತಿದ್ದೇನೆ, ನನ್ನ ಬರಹಗಳಿಗೂ ಈ ಮಾತುಗಳು ಅನ್ವಯವಾಗುವುದರಿಂದ. - 

"ಕುರುಡಾಗಿ ಅನುಸರಿಸುವ ಉದ್ದೇಶದಿಂದ ಇದನ್ನು ಓದಬೇಡಿ ಮತ್ತೂ ಇದರಲ್ಲಿ ಬರೆದಿರುವುದೆಲ್ಲವನ್ನು ಪ್ರಶ್ನಾತಿತವೆಂದು ಹಾಗೆಯೇ ಸ್ವೀಕರಿಸಬೇಡಿ.ಓದಿರಿ, ವಿಮರ್ಶಿಸಿರಿ ಹಾಗೂ ಅದರ ಬಗ್ಗೆ ಚಿಂತಿಸಿರಿ ಮತ್ತೂ ಅದರ ನೆರವಿನಿಂದ ನಿಮ್ಮದೇ ಸ್ವತಂತ್ರ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಿ."

 

 

 ಚಿತ್ರಕೃಪೆ: 

quicktake.files.wordpress.com

marvisirmed.com

ಆಧಾರ : 

'ನಾನೇಕೆ ನಾಸ್ತಿಕ - ಭಗತ್ ಸಿಂಗ್' (ಅನು: ಗಾಯತ್ರಿ) 


ಇದನ್ನೂ ಓದಿ:

http://en.wikipedia.org/wiki/Bhagat_Singh

http://www.iloveindia.com/indian-heroes/bhagat-singh.html
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಈಗಿನ ಯಾಂತ್ರೀಕ್ರತ ಬದುಕಿನಲ್ಲಿ ಇಂತಹ ಮೌಲ್ಯಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೋ...... ಕಾಲಾಯ ತಸ್ಮೈ ನಮಃ ಅಂತಹಾ ಮಹಾನ್ ಆತ್ಮವನ್ನು ನೆನಪಿಸಿದ್ದಕ್ಕಾಗಿ ಶರಣು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಮೌಲ್ಯಗಳು ಎಷ್ಟು ಪ್ರಭಾವ ಬೀರುತ್ತವೋ ನನಗೂ ಅರಿಯದು. ಆದರೆ ಮರೆಯದಿದ್ದರೆ ಒಂದಲ್ಲ ಒಂದು ದಿನ ಪ್ರಭಾವ ಬೀರಲೂ ಬಹುದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ಬರೆದಿದ್ದೀರ. ಪುಸ್ತಕದಂಗಡಿಯಲ್ಲಿ ಭಗತ್ ಸಿಂಗ್‌ ಅವರ‌ "ನಾನೇಕೆ ನಾಸ್ತಿಕ" ಹೊತ್ತಿಗೆ ನೋಡಿದಾಗ ಪ್ರತಿ ಬಾರಿಯೂ ಕೊಳ್ಳಬೇಕು ಅನಿಸುತ್ತದೆ. ಆದರೆ ಇಲ್ಲಿಯವರೆಗೂ ಕೊಳ್ಳಲು ಆಗಿಲ್ಲ. ನಿಮ್ಮ ಬರಹವನ್ನು ಓದಿದ ಮೇಲೆ ಈ ಸಲ ಖಂಡಿತವಾಗಿಯೂ ಖರೀದಿಸಲೇ ಬೇಕು ಅಂತ ತೀರ್ಮಾನಿಸಿದ್ದೇನೆ. -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಚಾರ್ಯರೇ, ನಾನು ಭಗತರ ಕಟ್ಟಾ ಅಭಿಮಾನಿ..ನನ್ನ ಕಛೇರಿಯಲ್ಲಿ ನಾನು ಕುಳಿತುಕೊಳ್ಳುವ ಸ್ಥಳದಲ್ಲಿ ಭಗತ್, ಆಜಾದರು, ಹಾಗು ಸುಭಾಷರ ಭಾವಚಿತ್ರ ಹಾಕಿಕೊಂಡಿದ್ದೇನೆ. <<ಅವರನ್ನು ಗಲ್ಲಿಗೇರಿಸಿದಾಗ ಅಂತಹ ಮಹಾನ್ ಭವಿತವ್ಯದ ಚಿಂತಕ ಮತ್ತು ಅದನ್ನು ಬಹುತೇಕ ಪಾಲಿಸಬಲ್ಲ ವ್ಯಕ್ತಿಯನ್ನು ಬಹುಬೇಗ ಕಳೆದುಕೊಂಡಾಗ ನಷ್ಟವಾದದ್ದು ಭಾರತ ಮಾತೆಗೆ, ನಮಗೆ!>> ಆದರೆ ನಮ್ಮ ವಿಪರ್ಯಾಸ ನೋಡಿ..ಯಾರು ಭಗತರ,ರಾಜ್ ಗುರು,ಸುಖ್ ದೇವ್ ರವರ ಗಲ್ಲಿಗೆ ಕಾರಣರಾದರೋ ಅವರನ್ನು ಇಂದಿಗೂ ಕೂಡ ಮಹಾನ್ ವ್ಯಕ್ತಿಯಂದು ಪೂಜಿಸುತ್ತಾರೆ. ಆದಷ್ಟು ಬೇಗ "ನಾನೇಕೆ ನಾಸ್ತಿಕ" ಹೊತ್ತಿಗೆಯನ್ನು ಕೊಂಡು ಓದುತ್ತೇನೆ. ಆಚಾರ್ಯರೇ ಹಾಗೆ ಆಜಾದರ ಜೀವನ ಚರಿತ್ರೆ ಬಗ್ಗೆ ಒಂದು ಹೊತ್ತಿಗೆಯಿದೆ "ಅಜೇಯ". ತಾವು ಬಹುಷ ಓದಿದ್ದೀರೆಂದು ಭಾವಿಸುತ್ತೇನೆ. ಇಲ್ಲದಿದ್ದರೆ ಕೊಂಡು ಓದಿ. ಮತ್ತೊಮ್ಮೆ ಭಗತರನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಚೆನ್ನಾಗಿದೆ ಲೇಖನ...ಎಷ್ಟು ಬೇಗ "ನಾನೇಕೆ ನಾಸ್ತಿಕ"ಓದುತ್ತೀನೋ ಅನ್ನಿಸ್ತಿದೆ ..ಧನ್ಯವಾದಗಳು.... ವಂದನೆಗಳೊಂದಿಗೆ ವಾಣಿ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಇದರ ಬಗ್ಗೆ ಸ೦ಪದದಲ್ಲಿ ಶೀಘ್ರದಲ್ಲೇ ಒ೦ದು ನಾಟಕ ಬರ್ತಾ ಇದೆ ನಿರೀಕ್ಷಿಸಿ. ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧೯೩೦ರಲ್ಲಿ ಗಾಂಧೀ ಇರ್ವಿನ್ ಒಪ್ಪಂದದ ಸಮಯದಲ್ಲಿ ಸುಮಾರು ೧೧೦೦೦ ಕೈದಿಗಳನ್ನು ಬಿಡುಗಡೆ ಮಾಡಲಾಯಿತು. ಆದರೆ ಆ ಪಟ್ಟಿಯಲ್ಲಿ ಭಗತ್, ಸುಖದೇವ್ ಮತ್ತು ರಾಜಗುರು ಇವರ ಹೆಸರಿರಲಿಲ್ಲ. ಭಗತ್ ಗಾಂಧೀ ವಿಚಾರಗಳನ್ನು ವಿರೋಧಿಸುತ್ತಿದ್ದುದೆ ಅಲ್ಲದೆ ಅದರ ಮುಂದಾಗುವ ಪರಿಣಾಮಗಳನ್ನೂ ಎಚ್ಚರಿಸಿದ್ದರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ, 'ನಾನೇಕೆ ನಾಸ್ತಿಕ' ಭಗತ್ ಬದುಕಿನ ಒಂದು ಕನ್ನಡಿ ಇದ್ದಂತೆ ಏಕೆಂದರೆ ಅದು ಕೇವಲ ಅವರ ನಾಸ್ತಿಕತೆಯ ದೃಷ್ಟಿ ಅಲ್ಲ, ಅವರ ಚಿಂತನೆಯ ದೃಷ್ಟಿಕೋನವೂ ಹೌದು. ದಯವಿಟ್ಟು ಓದಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿನ್ನೆ ರಾತ್ರಿಯೆಲ್ಲಾ ಅವನದೇ ನೆನಪು. ಆಚಾರ್ಯರಿ೦ದ ಬೆಳಿಗ್ಗೆ ಹಾಗೂ ಆರ೦ಭದಲ್ಲಿಯೇ ನನಗೊ೦ದು ಸು೦ದರ ಲೇಖನದ ಕೊಡುಗೆ. ಮನಸ್ಸು ಒಮ್ಮೆ ಹೆಮ್ಮೆಯಿ೦ದ ಬೀಗಿತು. ರಾಣಿ ಲಕ್ಷ್ಮೀ ಬಾಯಿ, ತಾತ್ಯಟೋಪೆ, ಭಗತ್ ಮು೦ತಾದವರನ್ನು ನೆನೆಸದಿದ್ದರೆ ನಾವು ಭಾರತೀಯರು/ಹಿ೦ದೂ ಎನ್ನುವುದಕ್ಕಿ೦ತ ಮನುಷ್ಯರೇ ಅಲ್ಲ ಎನ್ನುವುದೇ ಸೂಕ್ತವೇನೋ? ನಾನು ಬಹುಪಾಲು ಇಷ್ಟಪಡುವ ವ್ಯಕ್ತಿತ್ವಗಳಳಿ ಭಗತ್ ಸಿ೦ಗರದೂ ಒ೦ದು. ನಮಗಾಗಿ ತನ್ನನ್ನು ಅರ್ಪಿಸಿದ ಆ ಆತ್ಮಕ್ಕೊ೦ದು ಶ್ರಧ್ಧಾ೦ಜಲಿಯನ್ನು ಅರ್ಪಿಸುತ್ತಿದ್ದೇನೆ. ಸಾಧ್ಯವಾದರೆ ನನಗೊ೦ದು ಪುಸ್ತಕದ ಕಾಪಿ ( ನಾನೇಕೆ ನಾಸ್ತಿಕ) ಯಾ ಎಲ್ಲಿ ದೊರೆಯುವುದೆ೦ಬುದರ ( ಕೊರಿಯರ್/ಅ೦ಚೆ ಮೂಲಕ ತರಿಸಿಕೊಳ್ಳಲಾಗುವ೦ತೆ) ಬಗ್ಗೆ ಮಾಹಿತಿ ನೀಡಿದರೂ ಸಾಕು. ಸು೦ದರ ಲೇಖನ. ಶುಭ ಮು೦ಜಾವಿಗೊ೦ದು ಸಾರ್ಥಕ್ಯ ನೀಡಿತು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಬಳಿ ಇರುವುದು ಒಂದೇ ಕಾಪಿ. ಇಲ್ಲಿ ನನಗೆ ಕನ್ನಡ ಪುಸ್ತಕಗಳು ಎಲ್ಲಿ ಸಿಗುತ್ತವೆ ಎಂದೂ ಅರಿಯದು. ಪ್ರಸನ್ನರನ್ನು ಸಂಪರ್ಕಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಪುಸ್ತಕದ ಬೆಲೆ+30 ರೂಪಾಯಿ ಕೊರಿಯರ್‍ ವೆಚ್ಚವನ್ನು ನವಕರ್ನಾಟಕ ಪ್ರಕಾಶನಕ್ಕೆ ಕಳುಹಿಸಿದರೆ ನಿಮಗೆ ಆ ಪುಸ್ತಕವನ್ನು ಅಂಚೆ ಮೂಲಕ ಕಳುಹಿಸುತ್ತಾರೆ. ಹೆಚ್ಚಿನ ಮಾಹಿತಿಗೆ: http://navakarnataka... ತಡವಾದರೂ ಪರವಾಗಿಲ್ಲ ಎನ್ನುವುದಾದರೆ ನಾನೇ ತಂದು ಕೊಡುತ್ತೇನೆ. -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ತಡವಾದರೂ ಪರವಾಗಿಲ್ಲ ಎನ್ನುವುದಾದರೆ ನಾನೇ ತಂದು ಕೊಡುತ್ತೇನೆ.>> ಆ ಮೂಲಕವಾದರೂ ನಿಮ್ಮೊ೦ದಿಗೆ ಮುಖತ: ಭೇಟಿಯಾಗುವುದಿದ್ದಲ್ಲಿ ಅದು ನನ್ನ ಭಾಗ್ಯವೆನ್ನುತ್ತೇನೆ. ಆದ್ದರಿ೦ದ ಪುಸ್ತಕದ ಬೆಲೆ ಜೊತೆಗೆ ಕೊರಿಯರ್ ಗೆ ಅ೦ಥ +೩೦.೦೦ ಎಲ್ಲಾ ಬ೦ದ್. ನೀವೇ ತ೦ದುಕೊಡಬೇಕು.ಎಷ್ಟು ತಡವಾದರೂ ಪರವಾಗಿಲ್ಲ. ಸೀರಿಯಲ್ ಆಗಿ ತ೦ದುರ್ವ ಬೆತ್ತಲೆ ಜಗತ್ತು ಹೊಸ ಕ೦ತು, ಬೆಳಗೆರೆ ಪುಸ್ತಕ, ಕವಲು ಮು೦ತಾದವಿನ್ನೂ ದ೦ಡಿಯಾಗಿದೆ ಅಲ್ಲಿಯವರೆಗೂ ಓದಲು. ಸ೦ತೋಷವಾಯಿತು ನಿಮ್ಮ ಅಭಿಮಾನದ ಮಾತುಗಳಿ೦ದ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಯ್ತು! ನಿಮ್ಮ ನೆಪದಲ್ಲಿಯಾದರೂ "ನಾನೇಕೆ ನಾಸ್ತಿಕ" ಪುಸ್ತಕ ಹೊಂದುವ ಭಾಗ್ಯ ನನಗೂ ಸಿಗಲಿ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಇ೦ದಿನ ವಿಜಯ ಕರ್ನಾಟಕದಲ್ಲಿ ಪ್ರತಾಪ್ ಸಿ೦ಹರ ಲೇಖನ ಓದಿದ್ರಾ? ಅದ್ರಲ್ಲಿ ೨೬ ವರ್ಷದ ಭಗತ್ ಗೆ ಎಷ್ಟು ಜನಪ್ರಿಯತೆ ಇತ್ತೋ ಅಷ್ಟೇ ಜನಪ್ರಿಯತೆ ೬೨ ವರ್ಷದ ಗಾ೦ಧಿಗೆ ಇತ್ತ೦ತೆ. . ಒ೦ದು ಹ೦ತಕ್ಕೆ ಗಾ೦ಧಿ ಭಗತ್ ಗೆ ಹೆದರ್ತಿದ್ರಾ ? ತನ್ನ ನಾಯಕ ಪಟ್ಟವನ್ನ ಎಲ್ಲಿ ಭಗತ್ ತಗೊ೦ದು ಬಿಡ್ತಾನೆ ಅ೦ತ . ವಿಚಿತ್ರ ಆದರೂ ಸತ್ಯ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದಿನ ಕಾಲದಲ್ಲಿ ಆಗಿದ್ರೆ, ಗಾಂಧೀ ಗುಂಪಿನವರೇ ಭಗತನನ್ನು ಕುತಂತ್ರದಿಂದ ಕೊಲ್ಲಿಸಿದರು ಅನ್ನುವ ಅಪವಾದ ಬಂದು ಸಾಬೀತು ಕೂಡ ಆಗಿಬಿಡ್ತಿತ್ತು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್, ಭಗತ್ ಸದನದಲ್ಲಿ ಬಾಂಬ್ ಹಾಕಿದಾಗಲೇ ದೇಶದಲ್ಲಿ ಸಂಚಲನವನ್ನು ಮೂಡಿಸಿದ್ದರು. ಅದರ ಮೇಲೆ ಒಂದು ವಾಸ್ತವ ರಾಜ್ಯದ ಸ್ಪಷ್ಟವಾದ ಕನಸು ಅವರಿಗಿದ್ದುದರಿಂದ ಒಬ್ಬ ಉತ್ತಮ ನಾಯಕನಾಗಿರುತ್ತಿದ್ದರು ಎನ್ನುವುದರಲ್ಲಿ ಸಂದೇಹವಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಡಿನ ಸ್ವಾತಂತ್ರ್ಯಕ್ಕೆ ಹೋರಾಡಿದವರ ಸಂಖ್ಯೆ ಲಕ್ಷದಷ್ಟಿದ್ದರೂ ನೆನೆಸುವುದಿಲ್ಲ ನಾವು ಅವರೆಲ್ಲರ ಮರೆವು ಮನುಜನಿಗೆ ವರದಂತೆ ಅದಕೆ ನಮ್ಮ ಎಲ್ಲಾ ಸರ್ಕಾರಗಳ ಕೊಡುಗೆ ಅಪಾರವಂತೆ ಆ ಗಾಂಧಿ ಜನಿಸಿದ ನಾಡಿನಲ್ಲಿ ನಕಲಿ ಗಾಂಧಿಗಳೇ ತುಂಬಿಕೊಂಡಿಹರಲ್ಲಾ ಸದ್ಯಕ್ಕೀಗ ಇಲ್ಲಿ ಗಾಂಧಿ ನೆಹರೂ ಅವರುಗಳನ್ನುಳಿದು ಅನ್ಯರ ನೆನೆಸಿದರೆ ಈ ನಾಡಿನಲ್ಲಿ ಪಾಪವೆಂದೆನಿಸುವುದು ಭಾರತರತ್ನನಾದ ಆರೋಪಿ ರಾಜೀವ ಗಾಂಧಿ ನಾಡಿನ ಅನ್ಯ ವೀರ ಪುತ್ರರತ್ನರ ನೆನೆಯರು ನಮ್ಮ ಮಂದಿ ಚಿತ್ರ ನಟರ ಜನ್ಮದಿನಕ್ಕೆ ಇಲ್ಲಿ ಮೆರವಣಿಗೆ ವೀರಯೋಧರ ನೆನಪುಗಳು ಸೀಮಿತವಾಗಿವೆ ಬರವಣಿಗೆಗೆ ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ ಹುಟ್ಟಿದರೂ ಭ್ರಷ್ಟರ ನಡುವೆ ನಿಷ್ಟನಾಗಿ ಹೆಚ್ಚುದಿನ ಉಳಿಯಲಾರ ವೀರರ ನೆನಪಿನಲಿಂದು ಕಂಬನಿ ಮಿಡಿದು ನಾಡಿಗಾಗಿ ಹೋರಾಡುವೆವೆನ್ನೋಣ ಸ್ವಾರ್ಥವನೆಲ್ಲಾ ತೊರೆದು! ಸಂತೋಷ್, ಉತ್ತಮ ಬರಹಕ್ಕಾಗಿ ಧನ್ಯವಾದಗಳು! ಇಂದು ನನ್ನವರಿಗೆ ನನ್ನಿಂದ ರವಾನೆಯಾದ ಮುಂಜಾವಿನ ಸಂದೇಶ ಭಗತಸಿಂಗನ ಬಗ್ಗೆಯೇ ಇತ್ತು! - ಆತ್ರಾಡಿ ಸುರೇಶ ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ ಹುಟ್ಟಿದರೂ ಭ್ರಷ್ಟರ ನಡುವೆ ನಿಷ್ಟನಾಗಿ ಹೆಚ್ಚುದಿನ ಉಳಿಯಲಾರ> ಸತ್ಯವಾದ ಮಾತುಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮವಾದ ಲೇಖನ. ಇಂದಿನ ರಾಜಕಾರಣಿಗಳ ಮನಸ್ಥಿತಿ ಗಮನಿಸಿದರೆ ಮುಂದಿನ ಪೀಳಿಗೆಗೆ ಭಗತ್ ಸಿಂಗ್ ರಾಜಗುರು ಸುಖದೇವ್ ರಂತಹ ಕ್ರಾಂತಿಕಾರಿಗಳು ಭಯೋತ್ಪಾದಕರಂತೆ ಚಿತ್ರಿಸಲ್ಪಡುವರೇನೊ ಎನ್ನುವ ನಿಮ್ಮ ಸಂಶಯ ಭಯ ಹುಟ್ಟಿಸುತ್ತದೆ. ಪಾರ್ಲಿಮೆಂಟಿಗೆ ದಾಳಿ ಇಟ್ಟ ಅಫ್ಜಲ್ ನ ರಕ್ಷಣೆಗೆ ನಿಂತಿರುವ ಇಂದಿನ ಸೋನಿಯ "ಗಾಂಧಿ" ಮತ್ತು ತಂಡಕ್ಕೂ, ಅಂದು ಭಗತ್ ರನ್ನು ಗಲ್ಲಿಗೇರಿಸುವ ವಿರುದ್ದ ಚಕಾರವೆತ್ತದ ಮಹಾತ್ಮ "ಗಾಂಧಿ"ಗೂ ಎಷ್ಟು ಅಜಗಜಾಂತರ!! ಯರಿಗೋ ಮನೆ ಬಾಡಿಗೆ ಸಿಗುವುದಿಲ್ಲ ಎಂದು ಕುಟುಕು ಕಾರ್ಯಾಚರಣೆ ನಡೆಸುವ ಮಾಧ್ಯಮಗಳಿಗೆ, ಇಂತ ಸ್ವಾತಂತ್ರ ವೀರರ ಬಗ್ಗೆ ಒಂದು ಸಣ್ಣ ಕಾರ್ಯಕ್ರಮ ನಡೆಸುವ ಯೋಚನೆಯೂ ಇದ್ದಂತಿಲ್ಲ. ಇನ್ನೂ ಇಂತಹ ಕುಟುಕು ಕಾರ್ಯಾಚರಣೆಯನ್ನು ಅಕ್ಷರ ರೂಪದಲ್ಲಿ ಬೆಂಬಲಿಸುವ ಜನಕ್ಕೂ ಇಂತಹ ಕ್ರಾಂತಿಕಾರಿಗಳ ಬಗ್ಗೆ ಎಲ್ಲೂ ಉಲ್ಲೇಖಿಸಲೂ ಹೊಳೇಯುವುದಿಲ್ಲ!!! ಇಂದಿನ ವಿ.ಕ ದಲ್ಲಿ ಪ್ರತಾಪ್ ಸಿಂಹ, ಭಗತ್ ಸಿಂಗ್ ನ ಬಗ್ಗೆ ಒಂದು ಉತ್ತಮವಾದ ಲೇಖನ ಬರೆದಿದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಭಯ ಹುಟ್ಟಿದ್ದು ನಾನೇಕೆ ನಾಸ್ತಿಕದಲ್ಲಿ ಬರೆದ ಬಿಪಿನ್ ಚಂದ್ರರ ಮುನ್ನುಡಿಯಿಂದ. ಭಗತ್ ಬಗ್ಗೆ ಆಳವಾದ ಅಧ್ಯಯನ ಮಾಡಿಯೂ ಅವರೇ ಕ್ರಾಂತಿಕಾರಿಗಳನ್ನು ಭಯೋತ್ಪಾದಕ ಎನ್ನಬೇಕಾದರೆ ಮುಂದೆ ಏನಾಗಬಹುದು....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋಮವಾರದ ಶುಭ ಮು೦ಜಾವಿಗೆ ಒ೦ದು ಸಾರ್ಥಕ ಜೀವದ ನೆನಪು ಮಾಡಿಸಿದ ನಿಮಗೆ ಧನ್ಯವಾದಗಳು ಸ೦ತೋಷ್. ದೇಶಕ್ಕಾಗಿ ಪ್ರಾಣರ್ಪಣೆ ಮಾಡಿದ ಮಹಾನ್ ಚೇತನಕ್ಕೊ೦ದು ನಮನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಲೇಖನ , ಬೆಂಗಳೂರಿನ ತುಂಬಾ ರಾಜಕೀಯ ನಾಯಕರ ಮತ್ತು ಗಲ್ಲಿ ರೌಡಿಗಳ ಕಟ್ ಔಟ್ ಕಾಣಿಸಿದವೇ ಹೊರತು ಈ ಹೋರಾಟಗಾರನ ಚಿತ್ರಪಟ ಎಲ್ಲೂ ಕಾಣಿಸಲಿಲ್ಲ , ಈಗಿನ ಮಕ್ಕಳಿಗೆ ಎಷ್ಟು ಗೊಂದಲ ಅಂದ್ರೆ ಯಾರನ್ನು ಅವರು ಆದರ್ಶವಾಗಿ ಕಾಣಬೇಕೆಂದು ತಿಳಿಯುತ್ತಿಲ್ಲ , ಎಂಟು ವರ್ಷದ ನಮ್ಮ ಅಕ್ಕನ ಮಗ " ನಾನು ದೊಡ್ಡವನಾದ ಮೇಲೆ ಸೋಮಣ್ಣನ ತರ ಆಗ್ತೀನಿ ಅಂತಾನೆ , ಯಾಕೋ ಅಂದ್ರೆ ಅವರ ಫೋಟೋ ಬೆಂಗಳೂರು ತುಂಬಾ ಇದೆ ಅಂತಾನೆ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇತಿಹಾಸ ಅಂತ ಪುಸ್ತಕಗಳಲ್ಲಿ ಮುದ್ರಿಸಿ ಲೈಬ್ರರಿಗಳಲ್ಲಿ ಧೂಳು ಹಿಡಿಸೋ ಮಂದಿಗೆ ಸೆಲೆಬ್ರಿಟಿಗಳು ಕಾಣುತ್ತಾರೆಯೇ ಹೊರತು ಇಂಥವರಲ್ಲ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯರೆ, ದೇಶ ಭಕ್ತ ಭಗತ್ ಸಿಂಗ್ ಬಗ್ಗೆ ಹೆಚ್ಹಿನ ಮಾಹಿತಿಗಾಗಿ ಇಲ್ಲಿದ ನೋಡಿ http://www.shahidbha... ಇಂತೀ ನಿಮ್ಮ ಪ್ರೀತಿಯ ಸಂದೀಪ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಗತನ ಹುಟ್ಟು ಹಬ್ಬದ ದಿನ ಅವನನ್ನ ನೆನಪಿಸಿ ಒಳ್ಳೆ ಕೆಲಸ ಮಾಡಿದ್ರಿ ಸಂತೋಷ್,ಧನ್ಯವಾದಗಳು :) ,ಹಿಂದೊಮ್ಮೆ ಬರೆದಿದ್ದೆ ಭಗತನ ಬಗ್ಗೆ ನಾನು http://sampada.net/a... (ಒಂದು ಸಲಹೆ.ಅಕ್ಷರಗಳು ಡುಮ್ಮು ಡುಮ್ಮಾಗಿವೆ ಸ್ವಲ್ಪ ಸ್ಲಿಮ್ ಮಾಡ್ರಿ ಓದೋಕು ಚೆನ್ನಾಗಿರುತ್ತೆ ;) ) ರಾಕೇಶ್ ಶೆಟ್ಟಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

(ಒಂದು ಸಲಹೆ.ಅಕ್ಷರಗಳು ಡುಮ್ಮು ಡುಮ್ಮಾಗಿವೆ ಸ್ವಲ್ಪ ಸ್ಲಿಮ್ ಮಾಡ್ರಿ ಓದೋಕು ಚೆನ್ನಾಗಿರುತ್ತೆ ;) ) ಮುಂಚೆ ಡುಮ್ಮಾಗಿದ್ದು ಜಾಸ್ತಿಯಾಗಿತ್ತು. ಈಗ ಸ್ಲಿಮ್ಮಾಗಿರೋದು ಜಾಸ್ತಿಯಾಗಿದೆ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬ್ಲಾಗಿನಲ್ಲಿ ಟೈಪ್ ಮಾಡಿದ್ದೆ. ಅದನ್ನು ಇಲ್ಲಿ ಕಾಪಿ ಪೇಸ್ಟ್ ಮಾಡುವಾಗ ಆಗುತ್ತಿರುವ ಅವಾಂತರ! ಏನೇನು ಸೆಟ್ಟಿಂಗ್ ಪ್ರಯತ್ನಿಸಿದರೂ ಸಾಧ್ಯವಾಗ್ತಾ ಇಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ font ಟ್ಯಾಗ್ ಉಪಯೋಗಿಸುವುದಕ್ಕೆ ಆಗುವುದಿಲ್ಲ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಮ್ಮೆ ನೋಟ್ ಪ್ಯಾಡ್ ಗೆ ನಕಲಿಸಿ, ಮತ್ತೆ ಅಲ್ಲಿಂದ ಇಲ್ಲಿಗೆ ನಕಲಿಸಿ, ನೋಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಲೇಖನವನ್ನು ಈ ಮುಂಚೆ ನಿಮ್ಮ ಬ್ಲಾಗಿನಲ್ಲಿ ಓದಿದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಷ್, ನಾನೇ ಭಗತ್ ಅವರ ಹುಟ್ಟು ಹಬ್ಬಕ್ಕೆ ಲೇಖನ ಬರೆಯಬೇಕೆಂದಿದ್ದೆ. ಮೌಲ್ಯಧಾರಿತ ಲೇಖನ. ಕಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕಾಲಿಕ ಬರಹಕ್ಕೆ ಅಭಿನಂದನೆಗಳು ಸಂತೋಷ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ವಂದನೆಗಳು. ರಾತ್ರಿ ಇದನ್ನು ಬರೆದು, ಪ್ರತಿಕ್ರಿಯೆಗಳು ಹೇಗಿರಬಹುದೆಂದು ಮೊದಲ ಬಾರಿಗೆ ಭಯ ಪಟ್ಟಿದ್ದೆ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.