ರೈಲ್ವೆ ಬಜೆಟ್ ೨೦೦೯-೧೦

0

೧೩ನೇಯ ಲೋಕಸಭೆಯ ಕೊನೆಯ ರೈಲ್ವೆ ಬಜೆಟ್ ಮಂಡಿಸಿದ ರೈಲ್ವೆ ಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಪ್ರಯಾಣ ದರವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದ್ದಾರೆ. ದೂರದ ಪ್ರಯಾಣಕ್ಕೆ ಮಾತ್ರ ಈ ದರ ಕಡಿತ ಅನ್ವಯವಾಗಲಿದೆ. ಇದೇ ಅಲ್ಲದೇ ಅವರು ೪೩ ಹೊಸ ರೈಲುಗಳನ್ನು ಈ ವರ್ಷದ ಅವಧಿಯಲ್ಲಿ ಪ್ರಾರಂಭಿಸುವದಾಗಿ ಹೇಳಿದ್ದಾರೆ. ಅದರಲ್ಲಿ ಕರ್ನಾಟಕಕ್ಕೆ ಕೇವಲ ಒಂದು ರೈಲು ಲಭ್ಯವಾಗಲಿದೆ, ಅದು ಮೈಸೂರು ಮತ್ತು ಯಶವಂತಪುರಗಳ ಮಧ್ಯೆ ಪ್ರತಿದಿನ ಸಂಚರಿಸಲಿದೆ. ರೈಲು ಹಳಿಗಳನ್ನು ದ್ವಿಪಥವನ್ನಾಗಿಸುವ ಯೋಜನೆಯಲ್ಲಿ ಕರ್ನಾಟಕದ ಎರಡು ಮಾರ್ಗಗಳಿಗೆ ಸರ್ವೇ ಕಾರ್ಯಕ್ಕಾಗಿ ಗುರುತಿಸಲಾಗಿದೆ, ಅವುಗಳೆಂದರೆ: ಹೊಸಪೇಟೆ-ಸ್ವಾಮಿಹಳ್ಳಿ ಮತ್ತು ತೋರಣಗಲ್-ರಂಜಿತಪುರಾ .

ರೈಲ್ವೆ ಮಂತ್ರಿಯಾಗಿ ೫ ಬಜೆಟ್ ಮಂಡಿಸಿದ ಲಾಲು ಯಾದವ್ ಕರ್ನಾಟಕಕ್ಕೆ ಪ್ರತಿ ವರ್ಷವೂ ಕಡಿಮೆ ರೈಲುಗಳನ್ನು ನೀಡಿ ತಾವೆಷ್ಟು ಸುಸ್ಥಿರವಾಗಿದ್ದಾರೆಂದು ತೋರಿಸಿಕೊಟ್ಟಿದ್ದಾರೆ.

ಹೆಚ್ಚಿನ ವಿವರಗಳಿಗೆ ರೈಲು ಮಂತ್ರಿಗಳ ಸಂಪೂರ್ಣ ಭಾಷಣವನು ಓದಿರಿ:
http://economictimes.indiatimes.com/photo/4123287.cms

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.