ಹೊರನಾಡಿನ ಬಗ್ಗೆ ಮಾಹಿತಿ ಕೊಡಲಾದೀತಾ?

0

ಜನವರಿ ಒಂದನೇ ತಾರೀಖಿಗೆ ಹೊರನಾಡಿಗೆ ಹೊರಡಬೇಕೆಂದಿದ್ದೇವೆ.
ಹತ್ತಿರದ ರೈಲ್ವೇ ಸ್ಟೇಷನ್ ಶಿವಮೊಗ್ಗ ಅಥವ ಶಿವಮೊಗ್ಗ (ಕಡೂರಿನಿಂದ ಚಿಕ್ಕಮಗಳೂರಿಗೆ ಹತ್ತಿರವಾಗುತ್ತದೆ).
ಆದರೆ ಹೊರನಾಡಿಗೆ ಹತ್ತಿರದ ಸ್ಥಳ ಯಾವುದು ಶಿವಮೊಗ್ಗ ಅಥವ ಚಿಕ್ಕಮಗಳೂರಾ? ಎಲ್ಲಿ ಇಳಿದರೆ ಹತ್ತಿರವಾಗುತ್ತದೆ?
ಹಾಗೆ ಒಳ್ಳೆಯ ಹೋಟೆಲ್ ಹಾಗು ಟ್ಯಾಕ್ಸಿ ಏಜೆನ್ಸಿ ಇದ್ದರೆ ತಿಳಿಸಿ
ಶ್ರಿಂಗೇರಿ , ಕಲಶ ಹತ್ತಿರದ ಸ್ಥಳಗಳೆಂದು ಗೊತ್ತು ಇನ್ನಾವುದಾದರೂ ವೀಕ್ಷಣೀಯ ಸ್ಥಳಗಳಿವೆಯಾ?
ಏನ್ರಿ ಯಾವಾಗಲೂ ಬರೀ ಮಾಹಿತಿ ಕೋರುತ್ತೀರಾ ಎಂದು ದೂರಬೇಡಿ. ಇದು ಕೊನೆಸಲವಂತೂ ಅಲ್ಲ :)
ಮುಂದೆಯೂ ತೊಂದರೆ ಕೊಡಲೇಬೇಕಾಗುತ್ತದೆ ಕ್ಷಮಿಸಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಗೂಗಲ್‌ನಲ್ಲಿ ಬೇಕಾದಷ್ಟು ವಿವರಗಳು ಸಿಗುತ್ತವಲ್ಲ ರೂಪಾ, ಈ ಲಿಂಕ್ ಪ್ರಯತ್ನಿಸಿ.
http://www.karnatakavision.com/horanadu-annapoorneshwari-temple.php

"ಏರಿದವನು ಚಿಕ್ಕವನಿರಬೇಕು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಯತ್ನಿಸಿದೆ ಆದರೆ
ಹೊರನಾಡಿನಿಂದ ಶಿಮೊಗ್ಗಕ್ಕಿರುವ ದೂರ ಸಿಗಲಿಲ್ಲ.

ನೀವು ಹೇಳಿದ ಲಿಂಕ್‌ನಿಂದ ಆಗಲೆ ಕಾಪಿ ಮಾಡಿದ್ದ್ದೇನೆ.

ಇನ್ನಷ್ಟು ಮಾಹಿತಿಯನ್ನು ಸ್ಥಳೀಯರ್ಯಾರಾದರೂ ಇದ್ದರೆ ಕೊಡಬಹುದೇನೊ ಎಂಬ ಯೋಚನೆಯಷ್ಟೆ

ರೂಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಾ ಅವರಿಗೆ, ನಮಸ್ಕಾರ.

ಹೊರನಾಡಿಗೆ ಹೋಗಿ ಬನ್ನಿ, ಒಳ್ಳೆಯ ಸ್ಥಳ. ನಿಮಗೆ ಖುಶಿಯಾಗುತ್ತದೆ.

ನನ್ನ ಊರು ಕಾರ್ಕಳ. ನಾನು ಕುದುರೆಮುಖ ರಸ್ತೆಯ ಮೂಲಕ ಕಳಸ (ನೀವು ಬರೆದಂತೆ ’ಕಲಶ’ ಅಲ್ಲ) ಹೊರನಾಡಿಗೆ ಹೋಗುವುದು, ಆದ್ದರಿಂದ ಬೆಂಗಳೂರಿನಿಂದ ಬರುವ ನಿಮಗೆ ಯಾವ ದಾರಿ ಒಳ್ಳೆಯದು ಮತ್ತು ಯಾವ ಊರಿನ ಮೂಲಕ ಸುಲಭ ಎಂದು ನಿಖರವಾಗಿ ಹೇಳುವುದು ನನಗೆ ಕಷ್ಟ. ಬೆಂಗಳೂರಿನಿಂದ ಕುದುರೆಮುಖ/ಕಳಸ/ಹೊರನಾಡು ಈ ಪೈಕಿ ಒಂದು ಊರಿಗೆ ರಾಜಹಂಸ ಬಸ್ ಸಹ ಇದೆ ಎಂದು ನೆನಪು (ನೀವು ಬಸ್ ಪ್ರಯಾಣಕ್ಕೆ ಎರಡನೆ ಪ್ರಾಶಸ್ತ್ಯ ಕೊಡುವುದಾದರೆ ಅದು ನಿಮಗೆ ಹಿಡಿಸಲಿಕ್ಕಿಲ್ಲ).

ಶೃಂಗೇರಿ (ನೀವು ಬರೆದಂತೆ ‘ಶ್ರಿಂಗೇರಿ’ ಅಲ್ಲ)ಗೂ ಹೋಗಿ ಬನ್ನಿ, ಶಾರದಾಂಬೆಯ ದರ್ಶನದಿಂದ ಪುನೀತರಾಗುವಿರಿ.

(ಆ ಪ್ರದೇಶಗಳಲ್ಲಿ ಇದು ತೀವ್ರ ಚಳಿಯ ಸೀಸನ್ ಎಂಬುದು ನೆನಪಿರಲಿ. ಹಾಗೆಯೇ, ಹೆದರಿಸಲಿಕ್ಕಲ್ಲ, ಆದರೂ ನಕ್ಸಲ್ ಕಾಟ ಇದೆಯೆನ್ನುವುದೂ ಗೊತ್ತಿರಲಿ)

ಸುಖಕರ ಪ್ರಯಾಣ, ಪ್ರವಾಸ ನಿಮ್ಮದಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವಮೊಗ್ಗೆಯಿಂದ ತೀರ್ಥಹಳ್ಳಿ ಕೊಪ್ಪ ದಾರಿಯಲ್ಲಿ ಶೃಂಗೇರಿ ತಲುಪಬಹುದು. ಅಲ್ಲಿಂದ ಕುದುರೆಮುಖ ಕಳಸ ಮೂಲಕ ಹೊರನಾಡು ತಲುಪಬಹುದು. ಹೊರನಾಡಿಗೆ ಚಿಕ್ಕಮಗಳೂರು ಹತ್ತಿರದ ಸ್ಥಳ. ನೀವು ಬೆಂಗಳೂರಿನಿಂದ ಪ್ರಯಾಣ ಬೆಳೆಸುತ್ತಿದ್ದರೆ ಶಿವಮೊಗ್ಗಕ್ಕೆ ಹೋಗುವ ಪ್ರಮೇಯವಿಲ್ಲ. ಒಳ್ಳೆಯ ಹೋಟೆಲಗಳಿಗಿಂತ ಶೃಂಗೇರಿ ಮತ್ತು ಹೊರನಾಡಿನ ಮಧ್ಯೆ ಇರುವ ಭಗವತಿ ಪ್ರಕೃತಿ ಶಿಬಿರದಲ್ಲಿ ಉಳಿಯಿರಿ. ಇದರ ಬಗ್ಗೆ ವಿವರಗಳಿಗಾಗಿ ನನ್ನ ಬ್ಲಾಗ್ ನೋಡಿ. ಈಗ ಈ ಶಿಬಿರ ದುರಸ್ಥಿಯಲ್ಲಿದೆ ಎಂದು ತಿಳಿಯಿತು. ದುರಸ್ಥಿ ಕೆಲಸ ಪೂರ್ಣಗೊಂಡಿದ್ದರೆ ತನಗೆ ಲಭ್ಯವಾಗಬಹುದು. ಇದೊಂದು ಅತ್ಯಂತ ಸುಂದರ ತಾಣ.
ಇನ್ನು ಶೃಂಗೇರಿಯಿಂದ ಹೊರನಾಡಿಗೆ ಪಯಣಿಸಬೇಕಾದರೆ ಸೂತನಬಿ/ಹನುಮಾನ್ಗುಂಡಿ ಫಾಲ್ಸ್ ದಾರಿಯಲ್ಲೆ ಸಿಗುತ್ತದೆ. ಶೃಂಗೇರಿ ಸಮೀಪ ಕಿಗ್ಗದಲ್ಲಿರುವ ಋಷ್ಯಶೃಂಗೇಶ್ವರ ದೇವಸ್ಥಾನ ಒಮ್ಮೆ ಭೇಟಿ ಕೊಡಲು ಪ್ರಶಸ್ಥವಾದ ಸ್ಥಳ ಅಲ್ಲಿಂದ ಸುಮಾರು ೧೨ ಕಿ.ಮೀ ದೂರದಲ್ಲಿ ಸಿರಿಮನೆ ಜಲಪಾತ ನೋಡಬಹುದು. ಶೃಂಗೇರಿಯ ಸಮೀಪ ಹರಿಹರಪುರವಿದೆ ಅಲ್ಲಿಯೂ ಶಾರದಾ ಪೀಠವಿದೆ. ಸಮೀಪದಲ್ಲೆ ಶಕಟಪುರದಲ್ಲಿ ಭವ್ಯವಾದ ದೇವಸ್ತಾನವೊಂದನ್ನು ನಿರ್ಮಿಸಲಾಗಿದೆ ಅದೂ ಸಹ ಉತ್ತಮ ಧಾರ್ಮಿಕ ಸ್ಥಳ. ಕಳಸದಲ್ಲಿ ಕಳಸೇಶ್ವರ ದೇವಸ್ತಾನಕ್ಕೆ ಭೇಟಿಕೊಡಬಹುದು. ಛಿಕ್ಕಮಗಳೂರಿನಿಂದ ಆಲ್ದೂರು, ಬಾಳೇಹೊಳೆ, ಬಾಳೆಹೊನ್ನೂರು ಜಯಪುರ ಶೃಂಗೇರಿ. ಅಥವ ಬಾಳೆಹೊನ್ನೂರಿನಿಂದ ಎಡಕ್ಕೆ ತಿರುಗಿದರೆ ಕಳಸ, ಹೊರನಾಡು ತಲುಪಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗಳೂರಿಂದ ಕಳಸ ಹೊರನಾಡಿಗೆ ಹೋಗಲು ಚಿಕ್ಕಮಗಳೂರಿಗೂ ಹೋಗಬೇಕಿಲ್ಲ. ಹಾಸನ ಬೇಲೂರು ಮೂಡಿಗೆರೆ ಕೊಟ್ಟಿಗೆಹಾರ ಮೂಲಕ ಕಳಸ ಸೇರಬಹುದು. ಅಲ್ಲಿಗೆ ಹೊರನಾಡು ಬಹಳ ಹತ್ತಿರ. ಭದ್ರಾ ನದಿ ದಾಟಿ ಹೋದರಾಯ್ತು.

ಬೆಂಗಳೂರಿಂದ ಕುದುರೆಮುಖ ( ಮಲ್ಲೇಶ್ವರ) ಕ್ಕೆ ಒಂದು ಬಸ್ ಇತ್ತು. ಅದು ಹೋಗುತ್ತಿದ್ದುದು ಇದೇ ದಾರಿಯಲ್ಲೇ ಎಂದು ನೆನಪು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಕ್ಕ

ಹಂಸಾನಂದಿಯವರು ಹೇಳಿದ ದಾರಿಯೇ ಹತ್ತಿರ,ಇಲ್ಲಿಂದ ಕಳಸಕ್ಕೆ ನಿಮಗೆ ಖಾಸಗಿ ಬಸ್ ಇದೆ, ಗಾಂಧಿನಗರದಿಂದ ಹೊರಡುತ್ತದೆ ಸಮಯ ರಾತ್ರಿ ೧೦ಕ್ಕೆ ಇರ್ಬೇಕು. ಸರ್ಕಾರಿ ಬಸ್ ಕೂಡ ಇದೆ ಆದರೆ ಸೀಟ್ ಮೊದಲೇ ಬುಕ್ ಮಾಡ್ಕೊಳ್ಳಿ.

ಕಳಸದಲ್ಲಿ ನೀವು ಕಳಸೇಶ್ವರ ದೇವಸ್ಥಾನ ನೋಡಬಹುದು, ಅದು ಬಿಟ್ಟರೆ ಶೃಂಗೇರಿ,ಹೊರನಾಡು ಇವೆಯಲ್ಲ , ಇಲ್ಲ ವನ ಸಿರಿ ನೋಡುವ ಆಸೆ ಇದ್ದರೆ ಕುಧುರೆ ಮುಖ ಇದ್ದೆ ಇದೆ.

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.