ಮಾನಸಿಕ ಒತ್ತಡ

4.5

ಭಾನುವಾರ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಡಾ| ಚಂದ್ರಶೇಖರ್ ಅವರು ದಿನನಿತ್ಯದ ಮಾನಸಿಕ ಒತ್ತಡದಿಂದ ಪಾರಾಗಲು ಕೆಲವು ಸರಳ ಸೂತ್ರಗಳನ್ನು ಚೆನ್ನಾಗಿ ವಿವರಿಸಿದರು. ಕಾರ್ಯಕ್ರಮ ವೀಕ್ಷಿಸದವರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ:

"ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನಸಿಕ ಒತ್ತಡ ಎಲ್ಲರಿಗೂ ಇದ್ದದ್ದೆ. ಮಾನಸಿಕ ಒತ್ತಡಗಳಿಂದ ದೂರವಾಗಿರಲು ಹನ್ನೆರಡು ಸೂತ್ರಗಳು. ಈ ಸೂತ್ರಗಳು MENTAL HEALTH ಪದದಲ್ಲೇ ಅಡಗಿವೆ.

M - Minimze your needs ನಿಮ್ಮ ಅಗತ್ಯಗಳನ್ನು ತಗ್ಗಿಸಿ. ಅವಶ್ಯಕವಾದವುಗಳನ್ನು ಮಾತ್ರ ಪಡೆದುಕೊಳ್ಳಿ
E - Express Yourself ನಿಮ್ಮ ಭಾವನೆಗಳನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ
N - avoid Nagativa thinking ನಕಾರಾತ್ಮಕ ಯೋಚನೆಗಳಿಂದ ದೂರವಿರಿ
T - Target realistic goals ನಿಮಗನುಗುಣವಾಗಿ ಸಾಧ್ಯವಾಗುವಂತಹ ಗುರಿ, ಯೋಜನೆಗಳನ್ನು ಹಾಕಿಕೊಳ್ಳಿ
A - Activities ಯಾವಾಗಲೂ ಯಾವುದಾದರೊಂದು ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
L - Loneliness ಮಾನಸಿಕ ಒತ್ತಡದಲ್ಲಿದ್ದಾಗ ಒಂಟಿಯಾಗಿರಬೇಡಿ. ಅದು ನಿಮ್ಮಲ್ಲಿ ನಕಾರಾತ್ಮಕ ಯೋಚನೆಗಳನ್ನು ತರುತ್ತದೆ.

H - Hobbies ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ದಿನದಲ್ಲಿ ನಿಮ್ಮ ಹವ್ಯಾಸಕ್ಕಾಗಿ ಸ್ವಲ್ಪ ವೇಳೆ ಮೀಸಲಿಡಿ.
E - Environment ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ, ಸುಂದರವಾಗಿ ಇಟ್ಟುಕೊಳ್ಳಿ
A - Accept reality ವಾಸ್ತವಿಕತೆಯನ್ನು ಒಪ್ಪಿಕೊಳ್ಳಿ
L - Lifestyle ನಿಮ್ಮ ಜೀವನ ಶೈಲಿ ಶಿಸ್ತಿನದಾಗಿರಲಿ. ನಿಯಮಿತ ವ್ಯಾಯಾಮ, ವೇಳೆಗನುಗುಣವಾಗಿ ಆಹಾರ ಸೇವನೆ ಇತ್ಯಾದಿ.
T - Think positively ಸಕಾರಾತ್ಮಕವಾಗಿ ಯೋಚಿಸುವುದನ್ನು ರೂಢಿಸಿಕೊಳ್ಳಿ. ಒಳ್ಳೆ ಪುಸ್ತಕಗಳನ್ನು ಒದಿ. ಚಿಂತನೆ ಮಾಡಿ
H - Health ಆರೋಗ್ಯವೇ ಭಾಗ್ಯ. ಆರೋಗ್ಯದ ಕಡೆಗೆ ಗಮನವಿರಲಿ
"

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.