ಮಾರಮ್ಮನ ಹಿಂದಿರುವ ವಿಜ್ಞಾನ!

0

ಬೆಂಗಳೂರಿನ ಮಲ್ಲೇಶ್ವರದ ಪರಿಚಯ ನಿಮಗಿದ್ದರೆ, ಇತ್ತೀಚೆಗಷ್ಟೇ ನೂರು ವಸಂತಗಳನ್ನ ಪೂರೈಸಿದ ಭಾರತೀಯ ವಿಜ್ಞಾನ ಮಂದಿರ ಮತ್ತೆ ಅದಕ್ಕೇ ಒತ್ತಿಕೊಂಡಿರುವ ಸರ್ಕಲ್ ಮಾರಮ್ಮನ ದೇವಸ್ಥಾನವನ್ನ  ನೋಡಿರಬಹುದು. ಪ್ರತಿದಿನ ಅದರ ಎದುರಿಗೆ ಹಾದು ಹೋಗ್ವಾಗ ಮನಸ್ಸಿಗೆ ಬರುವ ಲಹರಿಗಳು ಅನೇಕ.


 ಒಂದೇ ಗೋಡೆಯ ಅಕ್ಕ ಪಕ್ಕಕ್ಕಿರುವ ಎರಡು ಕಟ್ಟಡಗಳನ್ನ ಸಂದರ್ಶಿಸುವ ಜನರು ಎರಡು ಪ್ರತ್ಯೇಕ ಪಂಗಡಕ್ಕೆ ಅಂದರೆ ಒಮ್ಮೊಮ್ಮೆ, ಎರಡು ಬೇರೆ ಬೇರೆ ಗ್ರಹಗಳಿಂದ ಬಂದವರೇನೋ ಎಂಬಷ್ಟು ವಿಭಿನ್ನರು J


 ಒಂದು ಕಡೆ ಆಗ್ತಿರೋದಕ್ಕೆಲ್ಲಾ ದೇವರೇ ಕಾರಣ ಅಂತ ಪ್ರತಿಯೊಂದರ ಭಾರವನ್ನೂ ದೇವರ ಮೇಲೇ ಹಾಕುವ ಮಂದಿ; ಇನ್ನೊಂದು ಕಡೆ ಆಗಿದ್ದಕ್ಕೆಲ್ಲಾ ವೈಜ್ಞಾನಿಕ ಕಾರಣ ಹುಡುಕೋ ಮಂದಿ.


 ಚಲನೆಯ ನಿಯಮಗಳನ್ನ ಆಳವಾಗಿ ಅಭ್ಯಸಿಸಿ ಹೊಸ ಹೊಸ ಸಿದ್ಧಾಂತಗಳನ್ನ ಅರಿಯೋ ಪ್ರಯತ್ನದಲ್ಲಿ ಆ ಕಡೆಯವರಾದ್ರೆ… ಮಾರಮ್ಮನ ಆಣತಿಯಿಲ್ಲದೇ ’ತೃಣ ಮಪಿ ನ ಚಲತಿ’ ಅಂತ ನಂಬಿರೋವ್ರು ಈ ಕಡೆ.


 ಆಚೆ ಬದಿಯವ್ರು ವೆಲಾಸಿಟಿ, ಕೈನೆಟಿಚ್ ಎನರ್ಜಿ ಅಂತ ತಲೆ ಕೆಡಿಸಿಕೊಂಡ್ರೆ


ಈಚೆ ಬದಿಯವ್ರು ಇದೇ ತತ್ವದಿಂದ ನಿರ್ಮಿಸಿದ ವಾಹನಗಳ ಪೂಜೆಗೆ ದೇವಸ್ಥಾನಕ್ಕೆ ಬರೋವ್ರು.


 “ಮಾರಮ್ಮನಿಗೆ ನಮಸ್ಕಾರ ಮಾಡೋ ಭಕ್ತರು ವಿಜ್ಞಾನಕ್ಕೂ ಕೈಮುಗಿಯೋ ಹಾಗೆ ಮಾಡಿಸೋಕ್ಕೇ ಅಮ್ಮ ಈ ದೇವಸ್ಥಾನ ಕಟ್ಟಿಸಿಕೊಂಡಳಾ?!! J”  ಅಂತಾನೂ ಕೆಲವೊಮ್ಮೆ ಅನ್ನಿಸತ್ತೆ, ಯಾಕೋ ಗೊತ್ತಿಲ್ಲ.


 ಎರಡೂ ಸ್ಥಳಗಳಿಗೂ ಹೋಗುವ ಜನರೂ ಇದ್ದೇ ಇರ್ತಾರೆ, ಇರಲ್ಲ ಅಂತಲ್ಲ. ವಿಜ್ಞಾನಿಗಳೂ ದೇವರ ಅಸ್ತಿತ್ವವನ್ನ ಅಥವಾ ಒಂದು ಸೂಪರ್ ನ್ಯಾಚುರಲ್ ಶಕ್ತಿಯನ್ನ ಖಂಡಿತಾ ಒಪ್ಪಬಹುದು. ಹಾಗೆಯೇ ದೇವರನ್ನ ನಂಬುವವರು ಕೂಡ ಪ್ರತಿಯೊಂದಕ್ಕೂ ವೈಜ್ಞಾನಿಕ ಕಾರಣ ಕೊಡಬಹುದು. ಆದ್ರೆ ಈ ಸ್ಥಳದಲ್ಲಿ ಹೇಗೆ ಎರಡೂ ಅಕ್ಕ ಪಕ್ಕದಲ್ಲೇ ಇದ್ದೂ ಬೇರೆ ಬೇರೆ ಅನ್ನಿಸ್ತು, ಅದನ್ನ ನಿಮ್ಜೊತೆ ಹಂಚಿಕೊಳ್ಳಬೇಕೆನ್ನಿಸಿ ಬ್ಲಾಗಿಸಿದೆ. J


  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರೇಖಾ, <<ವಿಜ್ಞಾನಿಗಳೂ ದೇವರ ಅಸ್ತಿತ್ವವನ್ನ ಅಥವಾ ಒಂದು ಸೂಪರ್ ನ್ಯಾಚುರಲ್ ಶಕ್ತಿಯನ್ನ ಖಂಡಿತಾ ಒಪ್ಪಬಹುದು.>> ಈ ಮಾತಿಗೂ, ದೇವರ ಹೆಸರಿನಲ್ಲಿ ಹಣಸಂಪಾದನೆ ಮಾಡುವ, ವ್ಯಾಪಾರ ಕೇಂದ್ರಗಳ ತರಹ ಇರುವ, ದೇವಸ್ಥಾನಗಳಿಗೂ ಏನು ಸಂಬಂಧ? ದೇವರಿದ್ದಾನೆ ಎಂದು ನಂಬುವ (ಆಸ್ತಿಕ) ವ್ಯಕ್ತಿ ದೇವಸ್ಥಾನಗಳಿಗೆ ಹೋಗದೇ ಬದುಕಲು ಅಸಾಧ್ಯವೇ? - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆ ಸರ್, <<ವಿಜ್ಞಾನಿಗಳೂ ದೇವರ ಅಸ್ತಿತ್ವವನ್ನ ಅಥವಾ ಒಂದು ಸೂಪರ್ ನ್ಯಾಚುರಲ್ ಶಕ್ತಿಯನ್ನ ಖಂಡಿತಾ ಒಪ್ಪಬಹುದು.>> ಅಂತಾ ನಾನು ಹೇಳಿದ್ದು ಎರಡೂ ಒಟ್ಟಿಗೇ ಇರುತ್ತವೆ, ಅಲ್ಲಿ ಇವೆ ಅನ್ನೋದಕ್ಕೆ ಉದಾಹರಣೆ ಆಗಿ ಅಷ್ಟೇ. ಇದಕ್ಕೂ ವ್ಯಾಪಾರ ಕೇಂದ್ರ ದಂತಿರುವ ದೇವಸ್ಥಾನಗಳಿಗೂ ಏನೇ ಸಂಬಂಧ ಇಲ್ಲ್ಲ!! ಆಸ್ತಿಕರು ದೇವಸ್ಥಾನಗಳಿಗೆ ಹೋಗದೇ ಬದುಕುವುದು ಖಂಡಿತಾ ಅಸಾಧ್ಯ ಅಲ್ಲ. -ರೇಖಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂಂ... ಈಗ ನೆಮ್ಮದಿಯಾಯ್ತು. ನೀವೇನಾದ್ರೂ ಅದು ಅಸಾಧ್ಯ ಅಂತ ಅಂದಿದ್ರೆ, ನಾನಂತಿದ್ದೆ "ನಾನಿದ್ದೀನಲ್ಲಾ...?!" ಅಂತ! :) ಧನ್ಯವಾದಗಳು. - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ದೇವಸ್ಥಾನಕ್ಕೆ ಹೋಗದ ಆಸ್ತಿಕರು ಅಂತ ತಿಳಿದು ಸಂತೋಷ ಆಯ್ತು. ಇದನ್ನ ಮೊದಲೇ ಹೇಳಬಾರದಿತ್ತೇ? ನಿಮ್ಮ ಜೊತೆ ಜ್ಯೋತಿಷ್ಯದ ವಿಷಯಗಳಲ್ಲಿ ಸಾಕಷ್ಟು ಜಗಳವಾಡಿದ್ದೆ, ನೀವು ನಾಸ್ತಿಕರು ಅಂತ ಊಹಿಸಿ. ಎಲ್ಲ ವೇಸ್ಟ್ ಮಾಡಿದ್ರಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಟರೆಸ್ಟಿಂಗ್ observation ರೇಖಾ. "ವಿಜ್ಞಾನಿಗಳೂ ದೇವರ ಅಸ್ತಿತ್ವವನ್ನ ಅಥವಾ ಒಂದು ಸೂಪರ್ ನ್ಯಾಚುರಲ್ ಶಕ್ತಿಯನ್ನ ಖಂಡಿತಾ ಒಪ್ಪಬಹುದು". ಒಪ್ಪಬಹುದು ಅಲ್ಲ, ಒಪ್ಪುತ್ತಾರೆ. ಇಸ್ರೋ ದ ಪ್ರತೀ ಉಪಗ್ರಹ ಉಡಾವಣೆ ಗಳ ಮೊದಲು ಜ್ಯೋತಿಷ್ಯ ನೋಡಿ, ಗಣಪತಿ ಪೂಜೆ ಮಾಡಿಯೇ ಮುಂದುವರೆಯೋದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದ ಅಬ್ದುಲ್ ಅವ್ರೇ, ಎಲ್ಲರ ನಂಬಿಕೆಯೊ ಒಂದೇ ಥರ ಇರಲ್ಲ ಅನ್ನಿಸಿ ಹಾಗಂದೆ ಅಷ್ಟೇ. -ರೇಖಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

//ಇಸ್ರೋ ದ ಪ್ರತೀ ಉಪಗ್ರಹ ಉಡಾವಣೆ ಗಳ ಮೊದಲು ಜ್ಯೋತಿಷ್ಯ ನೋಡಿ, ಗಣಪತಿ ಪೂಜೆ ಮಾಡಿಯೇ ಮುಂದುವರೆಯೋದು. ತಪ್ಪು... ಇದು ನಿಜವಲ್ಲ. ಮೂಲಭೂತವಾಗಿ ಇದು ಮುಖ್ಯಸ್ಥನಾದವನ ನಂಬಿಕೆಯ ಮೇಲೆ ನಿಂತಿರುತ್ತೆ. ಅದನ್ನು ಎಲ್ಲ್ಲಾ ವಿಜ್ಞಾನಿಗಳ ನಂಬಿಕೆ ಎನ್ನುವುದು ಸರಿಯಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಚೆ ಬದಿಯವ್ರು ವೆಲಾಸಿಟಿ, ಕೈನೆಟಿಚ್ ಎನರ್ಜಿ ಅಂತ ತಲೆ ಕೆಡಿಸಿಕೊಂಡ್ರೆ ಈಚೆ ಬದಿಯವ್ರು ಇದೇ ತತ್ವದಿಂದ ನಿರ್ಮಿಸಿದ ವಾಹನಗಳ ಪೂಜೆಗೆ ದೇವಸ್ಥಾನಕ್ಕೆ ಬರೋವ್ರು. ಇವೆರಡು ಸಾಲುಗಳು ಇಷ್ಟ ಆಯ್ತು. -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದ ಪ್ರಸನ್ನ, - ರೇಖಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಧ್ಯಾತ್ಮ ಮತ್ತೆ ವಿಜ್ನಾನ ಹಾಲು ಮತ್ತು ಆಲ್ಕೋಹಾಲು ಇದ್ದಂತೆ. ಒಬ್ಬನಿಗೆ ಹಾಲೇ ಅಮೃತವಾದರೆ ಇನ್ನೊಬ್ಬನಿಗೆ ಹಾಲಿಗಿಂತ ಆಲ್ಕೋಹಾಲೇ ಮೇಲು. ಅವರವರ ಭಾವಕ್ಕೆ ತಕ್ಕಂತೆ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಆಧ್ಯಾತ್ಮ ಮತ್ತೆ ವಿಜ್ನಾನ ಹಾಲು ಮತ್ತು ಆಲ್ಕೋಹಾಲು ಇದ್ದಂತೆ>> ಈ ಉಪಮೆ ಸಮಂಜಸವೇ? <<ಒಬ್ಬನಿಗೆ ಹಾಲೇ ಅಮೃತವಾದರೆ ಇನ್ನೊಬ್ಬನಿಗೆ ಹಾಲಿಗಿಂತ ಆಲ್ಕೋಹಾಲೇ ಮೇಲು. ಅವರವರ ಭಾವಕ್ಕೆ ತಕ್ಕಂತೆ.. :)>> ಇದು ನಿಜ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[cite]ಆಧ್ಯಾತ್ಮ ಮತ್ತೆ ವಿಜ್ನಾನ ಹಾಲು ಮತ್ತು ಆಲ್ಕೋಹಾಲು ಇದ್ದಂತೆ. [/cite] ಹು ನಿಜ. ಯಾವುದು ಯಾವುದು ಎನ್ನುವುದೇ ಜಿಜ್ಞಾಸೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಹು ನಿಜ. ಯಾವುದು ಯಾವುದು ಎನ್ನುವುದೇ ಜಿಜ್ಞಾಸೆ. :) >> ಅದು ಜಿಜ್ಞಾಸೆ ಮಾಡುವವನ ಮೇಲೆಯೂ ಅವಲಂಬಿತವಾಗಿರುತ್ತದೆ ಅಲ್ಲವೇ ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಮ್.. ವಿಜ್ನಾನಿಯೊಬ್ಬನಿಗೆ ವಿಜ್ನಾನ ಹಾಲು, ಆಧ್ಯಾತ್ಮ ಆಲ್ಕೋಹಾಲು. ಆಧ್ಯಾತ್ಮಿಯೊಬ್ಬನಿಗೆ ಆಧ್ಯಾತ್ಮ ಹಾಲು, ವಿಜ್ನಾನ ಆಲ್ಕೋಹಾಲು. ಅಷ್ಟೆ. ಇದರಲ್ಲಿ ನಾನು ಎರಡನೆ ಕೆಟಗರಿಯವನು. :) ಯಾಕೆಂದರೆ ವಿಜ್ನಾನಕ್ಕೆ ಪ್ರಾಯೋಗಿಕ ಪ್ರಾತ್ಯಕ್ಷಿಕೆಯ ಮಿತಿಯಿದೆ. ಆಧ್ಯಾತ್ಮಕ್ಕೆ ಇಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಧ್ಯಾತ್ಮ ಮತ್ತು ವಿಜ್ಞಾನ ಬೇರೆಯೇನಲ್ಲ. ಆದರೆ ಆಚರಣೆಗಳ ಹಿಂದಿರುವ ನಂಬಿಕೆಗಳನ್ನು ಪರೀಕ್ಷಿಸದೇ ನಂಬುವುದು ಸರಿಯಲ್ಲ. ಆಧ್ಯಾತ್ಮ ಮನಸ್ಸಿನ ಒಳವ್ಯಾಪಾರ ಎನ್ನುವುದು ನನ್ನ ಅಭಿಪ್ರಾಯ. ನಾಸ್ತಿಕನೂ ಆಧ್ಯಾತ್ಮಿಕ ವ್ಯಕ್ತಿಯಾಗಿರುವುದು ಸಾಧ್ಯವಿಲ್ಲವೇ..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಧ್ಯಾತ್ಮಕ್ಕೆ ಮತ್ತು ಆಸ್ತಿಕ ನಂಬಿಕೆಗಳಿಗೆ ಸಂಬಂಧವಿಲ್ಲ. ನಿಮ್ಮ ಮಾತುಗಳನ್ನು ನಾನೂ ಒಪ್ಪುತ್ತೇನೆ ಮಹೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಆದರೆ ಆಚರಣೆಗಳ ಹಿಂದಿರುವ ನಂಬಿಕೆಗಳನ್ನು ಪರೀಕ್ಷಿಸದೇ ನಂಬುವುದು ಸರಿಯಲ್ಲ >> ದೇವರ ಅಸ್ತಿತ್ವವನ್ನು ಹೇಗೆ ಪರೀಕ್ಷಿಸುವುದು? ಸಾಧ್ಯವಿಲ್ಲ ಎಂದ ಮೇಲೆ ದೇವರನ್ನು ನಂಬಲು ಹೇಗೆ ಸಾಧ್ಯ? ಅಲ್ಲವೇ? << ಆಧ್ಯಾತ್ಮ ಮನಸ್ಸಿನ ಒಳವ್ಯಾಪಾರ ಎನ್ನುವುದು ನನ್ನ ಅಭಿಪ್ರಾಯ >> ನನ್ನದೂ. ಅಂದಹಾಗೆ ಅದನ್ನು ಪರೀಕ್ಷಿಸಲು ಬರುವುದೇ? << ನಾಸ್ತಿಕನೂ ಆಧ್ಯಾತ್ಮಿಕ ವ್ಯಕ್ತಿಯಾಗಿರುವುದು ಸಾಧ್ಯವಿಲ್ಲವೇ >> ಖಂಡಿತಾ. ಆದರೆ ಎಲ್ಲಾ ಆಧ್ಯಾತ್ಮವಾದಿಗಳೂ ನಾಸ್ತಿಕರಾಗಬೇಕಿಲ್ಲ :) ನಾನೊಬ್ಬ ಉದಾಹರಣೆ ಅದಕ್ಕೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲಿಗೆ ತಡವಾಗಿದ್ದಕ್ಕೆ ಕ್ಷಮೆ. ಮಹೇಶ್ ರವರೆ, //ದೇವರ ಅಸ್ತಿತ್ವವನ್ನು ಹೇಗೆ ಪರೀಕ್ಷಿಸುವುದು? ಸಾಧ್ಯವಿಲ್ಲ ಎಂದ ಮೇಲೆ ದೇವರನ್ನು ನಂಬಲು ಹೇಗೆ ಸಾಧ್ಯ? ಅಲ್ಲವೇ? ಪರೀಕ್ಷೆ ಮಾಡಬೇಕೆನ್ನುವವರು ಯಾರು ಎನ್ನುವುದರ ಮೇಲೆ ಪರೀಕ್ಷಿಸುವುದು ಹೇಗೆ ಎನ್ನುವುದು ನಿಂತಿದೆ. ಕಾಯಿಲೆಯ ಬಗ್ಗೆ ಕೇಳಲು ವೈದ್ಯರ ಬಳಿಗೆ ಹೋದರೆ ಅವರು ಪರೀಕ್ಷಿಸುವ ರೀತಿಯೇ ಬೇರೆ, ಶಾಸ್ತ್ರದವನ ಬಳಿ ಹೋದರೆ ಅವನು ಪರೀಕ್ಷಿಸುವ ರೀತಿಯೇ ಬೇರೆ ಆದರೆ ಎರಡನ್ನೂ ನಂಬುವವರಿದ್ದಾರೆ. ನೀವು ಯಾವುದನ್ನು ನಂಬುತ್ತೀರೆನ್ನುವುದು ನಿಮಗೆ ಬಿಟ್ಟದ್ದು. //ಅಂದಹಾಗೆ ಅದನ್ನು ಪರೀಕ್ಷಿಸಲು ಬರುವುದೇ? ಪರೀಕ್ಷಕನ ಮೇಲೆ ಅವಲಂಬಿತವಾಗಿದೆ. //ಎಲ್ಲಾ ಆಧ್ಯಾತ್ಮವಾದಿಗಳೂ ನಾಸ್ತಿಕರಾಗಬೇಕಿಲ್ಲ :) ನನ್ನ ಪ್ರಶ್ನೆಯನ್ನು ಗಮನಿಸಿದರೆ, ಜನಪ್ರಿಯ ನಂಬಿಕೆಯಾದ ಆಧ್ಯಾತ್ಮವಾದಿಗಳು ಆಸ್ತಿಕರು ಎನ್ನುವುದಕ್ಕೆ ಅಪವಾದವಿರಬಾರದೇಕೆನ್ನುವ ಸೂಚನೆಯಿದೆ. ಆದರೆ ಆಧ್ಯಾತ್ಮಿಕವಾದಿಗಳು ನಾಸ್ತಿಕರಾಗಿಯೇ ಇರಬೇಕು ಎನ್ನುವ ಮಾತನ್ನು ನಾನು ಎಲ್ಲಿಯೂ ಹೇಳಿಲ್ಲ. :) ವಂದನಗಳೊಂದಿಗೆ. ಮೊದ್ಮಣಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀರ್ಕಜೆಯವ್ರೇ, ಚೆನ್ನಾಗಿ ಹೇಳಿದ್ರಿ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

'ಚನ್ನಾಗಿ ಹೇಳಿದ್ರಿ' ' ಸರಿಯಾಗಿ ಹೇಳಿದ್ರಿ' ಎಂದು ಪ್ರತಿಕ್ರಿಯಿಸುವ ಸಂಪದಿಗರಿಗೆ (ರೇಖಾ ರವರಿಗೆ ಮಾತ್ರ ಅಲ್ಲ್). ಗಹನವಾದ ಪ್ರೌಢವಾದ ಚರ್ಚೆಗಳು ನಡೆಯುತ್ತಿರುವಾಗ ಈ ರೀತಿಯ ಕಮೆಂಟುಗಳನ್ನು ಹಾಕಬೇಡಿ. ಅವು ಜಗಳವಾಡುತ್ತಿರುವವರನ್ನು ಹುರಿದುಂಬಿಸುವ ಮಾತುಗಳಂತೆ ಕಾಣುತ್ತವೆ. ನನ್ನ ಮತ್ತು ನಿಕರ್ಜೆಯವರ ವಿಚಾರಗಳು ಎಷ್ಟೇ ಬಿನ್ನವಾಗಿದ್ದರೂ, ನಾವು ಇಲ್ಲಿ ತಾತ್ವಿಕ ನೆಲೆಯಲ್ಲಿ ಚರ್ಚೆಯನ್ನಷ್ಟೆ ಮಾಡುತ್ತಿರುವುದು. ಅದಕ್ಕೆ ಈ ರೀತಿಯ ಪ್ರತಿಕ್ರಿಯೆಗಳು ಮೆರಗು ಕೊಡುವುದಿಲ್ಲ ಎಂದು ನನ್ನ ಭಾವನೆ. ನಿಮಗೆ ಯಾರದಾದರೂ ದ್ರುಷ್ಟಿಕೋನದ ಬಗ್ಗೆ ಸಹಮತವಿದ್ದಲ್ಲಿ, ' ಇವರ ಅಭಿಪ್ರಾಯಕ್ಕೆ ನನ್ನ ಸಮ್ಮತಿ ಇದೆ' ಎಂದು ಹೇಳುವುದು ಹೆಚ್ಚು ಸಭ್ಯ ಮತ್ತು ಚರ್ಚೆಗೆ ಒಮ್ಮೊಮ್ಮೆ ಉಪಯುಕ್ತವೂ ಆಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಮ್.. ಚೆನ್ನಾಗಿ ಹೇಳಿದ್ರಿ ಎಂದು ಹುರಿದುಂಬಿಸುವಂತೆ ಅರ್ಥ ಕೊಡುವುದು ನಿಜ, ಆದರೆ ಹಾಗೆಯೇ ಅರ್ಥ ಕೊಡಬೇಕೆಂದೇನೂ ಇಲ್ಲ. "ನನಗೆ ಇಷ್ಟವಾಯಿತು" ಎಂಬರ್ಥವೂ ಬರುತ್ತದೆ. ರೇಖಾ ಯಾವ ಅರ್ಥದಲ್ಲಿ ಹೇಳಿದ್ದೋ ನಾ ಕಾಣೆ.. To be on the safer side, "ನಿಮ್ಮ ಪ್ರತಿಕ್ರಿಯೆ ಇಷ್ಟವಾಯಿತು" ಎಂದು ಹೇಳುವುದು ಹೆಚ್ಚು ಸರಿಯಾಗಬಹುದೇನೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಅವು ಜಗಳವಾಡುತ್ತಿರುವವರನ್ನು ಹುರಿದುಂಬಿಸುವ ಮಾತುಗಳಂತೆ ಕಾಣುತ್ತವೆ.>> ಜಗಳವಾಡುತಿದ್ದೀರಿ ಎಂದು ನೀವೇ ಹೇಳಿದ ಮೇಲೆ , ಇನ್ನು ನಿಮ್ಮನ್ನ ಏನಕ್ಕೆ ಹುರಿದುಂಬಿಸಬೇಕು ಅಂತ ತಿಳಿಲಿಲ್ಲ :( <<ನನ್ನ ಮತ್ತು ನಿಕರ್ಜೆಯವರ ವಿಚಾರಗಳು ಎಷ್ಟೇ ಬಿನ್ನವಾಗಿದ್ದರೂ, ನಾವು ಇಲ್ಲಿ ತಾತ್ವಿಕ ನೆಲೆಯಲ್ಲಿ ಚರ್ಚೆಯನ್ನಷ್ಟೆ ಮಾಡುತ್ತಿರುವುದು. ಅದಕ್ಕೆ ಈ ರೀತಿಯ ಪ್ರತಿಕ್ರಿಯೆಗಳು ಮೆರಗು ಕೊಡುವುದಿಲ್ಲ ಎಂದು ನನ್ನ ಭಾವನೆ.>> ಒಂದು ಕಡೆ ಜಗಳ ಅನ್ನುತ್ತಿರ ,ಇಲ್ಲಿ ಚರ್ಚೆ ಅನ್ನುತ್ತೀದ್ದಿರಿ ;) ಅವರಿಗೆ ಸರಿ ಅನ್ನಿಸಿದ್ದನ್ನ , ಅವರು ಹೇಗೆ ಬೇಕಾದರೂ ವ್ಯಕ್ತ ಪಡಿಸಬಹುದು ಅನ್ನುವುದು ನನ್ನ ಅನಿಸಿಕೆ (ತಾತ್ವಿಕ ನೆಲೆಗಟ್ಟಿನ ಒಳಗೆ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಅವು ಜಗಳವಾಡುತ್ತಿರುವವರನ್ನು ಹುರಿದುಂಬಿಸುವ ಮಾತುಗಳಂತೆ ಕಾಣುತ್ತವೆ.>> ಇದಕ್ಕೆ, ಆ ಮಾತುಗಳು "ಜಗಳವಾಡುತ್ತಿರುವವವರನ್ನು ಹುರಿದುಂಬಿಸಲು ಬಳಸುವ" ಮಾತುಗಳಂತೆ ಕಾಣುತ್ತವೆ, ಅನ್ನುವ ಅರ್ಥ ಅಷ್ಟೇ. ಈ ಮಾತುಗಳನ್ನು ಆಡುವವರು, "ಅಲ್ಲಿ ಜಗಳ ನಡೆಯುತ್ತಿದೆ ಅಂತ ಭಾವಿಸಿಕೊಂಡು" ಅಲ್ಲಿ ಓರ್ವನನ್ನು ಹುರಿದುಂಬಿಸಲು ಈ ಮಾತುಗಳನ್ನು ಆಡಿದಂತಾಗುತ್ತದೆ. ಆದರೆ ಅಲ್ಲಿ ನಡೆಯುತ್ತಿರುವುದು ತಾತ್ವಿಕ ಚರ್ಚೆ ಅಷ್ಟೇ. ಆದರೆ, ಅದು ಇತರರಿಗೆ ಅರ್ಥ ಆಗುತ್ತಿಲ್ಲ ಅನ್ನುವುದು ಬೇರೆ ವಿಚಾರ! ಅವರು ಜಗಳವಾಡುತ್ತಿದ್ದಾರೆ ಅನ್ನುವ ಅರ್ಥವೇ ಇಲ್ಲ ಅಲ್ಲಿ. ಮಾತುಗಳಿಗೆ ಗುಣವಿಶೇಷಣ ಅಷ್ಟೇ. :) -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿಡಿಸಿ ಹೇಳಿದ್ದಕ್ಕೆ ಧನ್ಯವಾದಗಳು ಸರ್ :) ಸೂಚನೆ : ಇದು ತಾತ್ವಿಕ ನೆಲೆಗಟ್ಟಿನ ಮೇಲೆ ನಡೆಯುತ್ತಿರುವ ಚರ್ಚೆ ಅಷ್ಟೇ ,ಜಗಳವಲ್ಲ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ summer_glau ಅವ್ರೇ, ನೀರ್ಕಜೆಯವ್ರಿಗೆ ನಾನು ಹೇಳಿದ್ದು ಅವರ ಪ್ರತಿಕ್ರಿಯೆಯಾಗಿದ್ದ: "ಆಧ್ಯಾತ್ಮ ಮತ್ತೆ ವಿಜ್ನಾನ ಹಾಲು ಮತ್ತು ಆಲ್ಕೋಹಾಲು ಇದ್ದಂತೆ. ಒಬ್ಬನಿಗೆ ಹಾಲೇ ಅಮೃತವಾದರೆ ಇನ್ನೊಬ್ಬನಿಗೆ ಹಾಲಿಗಿಂತ ಆಲ್ಕೋಹಾಲೇ ಮೇಲು. ಅವರವರ ಭಾವಕ್ಕೆ ತಕ್ಕಂತೆ.. :)" ಅನ್ನುವುದು ಚೆನ್ನಾಗಿದೆ- ಅಂದರೆ ಉಪಮೆ ತಮಾಶೆಯಾಗಿದೆ ಅಂತ ಅಷ್ಟೇ ನನ್ನ ಅನಿಸಿಕೆಯಾಗಿತ್ತು. ಅದು ಜಗಳ/ ತಾತ್ವಿಕ ಚರ್ಚೆ ಇದ್ಯವುದಕ್ಕೂ ಹುರಿದುಂಬಿಸುವ ಉದ್ಗಾರ ಅಲ್ಲ. ಹಾಗನಿಸಿದ್ದರೆ ದಯವಿಟ್ಟು ನೊಂದುಕೊಳ್ಳಬೇಡಿ. ನಾನು ಮತ್ತಷ್ಟು ಬಿಡಿಸಿ ಹೇಳಿದ್ದರೆ ಬಹುಶ: ಸರಿಯಾಗುತ್ತಿತ್ತೇನೋ. ನಿಮ್ಮ ಸಭ್ಯತೆಯ ಬಗ್ಗೆ ತಿಳಿಹೇಳಿದ ಮಾತು ನನಗೊಬ್ಬಳಿಗೇ ಅಲ್ಲ ಅಂತ ನೀವು ಹೇಳಿದ್ರೂ, ಸ್ಪಷ್ಟೀಕರಣ ನೀಡಾಬೇಕಾದ್ದು ನನ್ನ ಕರ್ತವ್ಯ ಎಂದುಕೊಂಡು ಹೇಳುತ್ತಿದ್ದೇನೆ. ನನ್ನಿ :-) ರೇಖಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೇಖಾ ಅವರೇ, ಹನ್ನೆರಡು ವರ್ಷಗಳ ಹಿಂದೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS)ಯನ್ನು ಸೇರಿ ಅದರ ಕ್ಯಾಂಪಸ್ ನಲ್ಲಿ ದೇವಸ್ಥಾನವೊಂದನ್ನು ಕಂಡಾಗ ನನಗೂ ಹೆಚ್ಚು ಕಡಿಮೆ ಈಗ ನಿಮಗನ್ನಿಸಿದಂತೆಯೇ ಅನ್ನಿಸಿತ್ತು. ನಿಮ್ಮ ಬರಹದ ಶೀರ್ಷಿಕೆ ಆಕರ್ಷಕವಾಗಿದೆ. ಬರಹದೊಡನೆ ಒಂದೆರಡು ಫೋಟೋಗಳಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತೇನೋ. ಬರಹದ ಒಟ್ಟಭಿಪ್ರಾಯದ ಹಿನ್ನೆಲೆಯಲ್ಲಿ, Indian Institute of Science ಗೆ 'ಭಾರತೀಯ ವಿಜ್ಞಾನ ಸಂಸ್ಥೆ' ಎನ್ನುವುದಕ್ಕಿಂತ 'ಭಾರತೀಯ ವಿಜ್ಞಾನ ಮಂದಿರ' ಎಂಬ ಹೆಸರೇ ಹೆಚ್ಚು ಹೊಂದುತ್ತದೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರಿಯವರಿಗೆ ಧನ್ಯವಾದಗಳು. ನಿಜ ಕೆಲವು ಚಿತ್ರಗಳನ್ನ ಸೇರಿಸಬೇಕಾಗಿತ್ತು :-(( -ರೇಖಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.