ravikreddy ರವರ ಬ್ಲಾಗ್

ವಿಜ್ಞಾನವೇ, ದೇವರನ್ನು ಹುಡುಕಿಕೊಡು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 24, 2008 ರ ಸಂಚಿಕೆಯಲ್ಲಿನ ಲೇಖನ.)

ಅಮೆರಿಕ ಸರಿಯಾಗಿ 50 ವರ್ಷಗಳ ಹಿಂದೆ (1958) ಭೂಮಿಯ ಕಕ್ಷೆಯನ್ನು ದಾಟಿ ಹೋಗುವಂತಹ ರಾಕೆಟ್ ಉಡಾಯಿಸಿದ್ದು. ಕೃತಕ ಉಪಗ್ರಹವೊಂದು ಚಂದ್ರನನ್ನು ಸುತ್ತು ಹಾಕಿ ಬರುವುದು ಆ ಉಡಾವಣೆಯ ಗುರಿಯಾಗಿತ್ತು. ಆದರೆ ಉಡಾಯಿಸಿದ 77 ಸೆಕೆಂಡುಗಳಲ್ಲಿ, ಭೂಮಿಗಿಂತ ಕೇವಲ 16 ಕಿ.ಮಿ. ಮೇಲೆ ಆ ರಾಕೆಟ್ ಸ್ಫೋಟವಾಗಿ, ಮೊದಲ ಪ್ರಯತ್ನದಲ್ಲೆ ಸೋಲಾಗಿತ್ತು. ಆದರೂ, ಸೋವಿಯತ್ ರಷ್ಯಾಕ್ಕೆ ಸೋಲಬಾರದೆಂಬ ಪೈಪೋಟಿಯಲ್ಲಿ ಅವರು ಮುಂದಿನ ಒಂದೇ ವರ್ಷದಲ್ಲಿ ಮತ್ತೆ ಐದು ಸಲ ಪ್ರಯತ್ನಿಸಿದರು. ಆದರೆ ರಷ್ಯಾದ ರಾಕೆಟ್ 1959 ರಲ್ಲೆ ಚಂದ್ರನನ್ನು ಸುತ್ತಿ ಬಂತು. ಅಮೆರಿಕಕ್ಕೆ ಮೊದಲ ಯಶಸ್ಸು ಸಿಕ್ಕಿದ್ದು 1964 ರಲ್ಲಿ. ಅದಾದ ಕೆಲವೆ ತಿಂಗಳುಗಳಲ್ಲಿ (1965) ರಷ್ಯಾ ಮೊದಲ ಬಾರಿಗೆ ತನ್ನ ರೊಬೊಟ್ ಅನ್ನು ಚಂದ್ರನ ಮೇಲೆಯೆ ಇಳಿಸಿತು. ನಾಲ್ಕು ತಿಂಗಳ ನಂತರ ಅಮೆರಿಕವೂ ಅದನ್ನು ಸಾಧಿಸಿತು. ಆಮೇಲೆ ಆರಂಭವಾಗಿದ್ದು ಚಂದ್ರನ ಮೇಲೆ ಮನುಷ್ಯನನ್ನೆ ಇಳಿಸುವ ರೇಸು. 1968 ರ ಕೊನೆಯಲ್ಲಿ ಮೊದಲ ಬಾರಿಗೆ ಮನುಷ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Sorry, we are letting you go...

ಊಫ್... ಮತ್ತೆ ಇನ್ನೊಂದು ದಿನ (ಅಕ್ಟೋಬರ್ 9, 08) ಅಮೆರಿಕದ ವಾಲ್ ಸ್ಟ್ರೀಟ್ ಭಯಂಕರವಾಗಿ ಬಿತ್ತು. ಕೊನೆಯ ಒಂದು ಗಂಟೆಯಲ್ಲಿ 450 ಪಾಯಿಂಟ್‌ಗಳ free fall! ಇದು ನಮ್ಮ ಕಾಲದ global meltdown. ಮುಂದಿನ ದಿನಗಳಲ್ಲಿ ಇಡೀ ಪ್ರಪಂಚದ ಆರ್ಥಿಕ ಚಿತ್ರಣವೇ ಬದಲಾಗಲಿದೆ. ಹೊಸ ದಿನಗಳತ್ತ ಹೆಜ್ಜೆ ಇಡುತ್ತಿದೆ ವಿಶ್ವ ವ್ಯವಸ್ಥೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...

ಇಂತಹದೊಂದು ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ಆರ್ಥಿಕ ಅಭಿವೃದ್ಧಿ ಕೊನೆಗೂ ತಳವರ್ಗಗಳನ್ನೂ, ಗ್ರಾಮಾಂತರವನ್ನೂ ಮುಟ್ಟುತ್ತದೆ ಮತ್ತು ಅದು ಕಾಲಾಂತರದಲ್ಲಿ ಅಂತರ್ಜಾಲದಲ್ಲೂ ಪ್ರತಿಬಿಂಬಿಸುತ್ತದೆ ಎನ್ನುವುದೇ ಆ ವಿಶ್ವಾಸ.

ನಾನು ಬರೆಯಲಾರಂಭಿಸಿದ್ದು 2003 ರಲ್ಲಿ. ಆಗ ನನ್ನಂತಹ ವಿದೇಶದಲ್ಲಿದ್ದವನಿಗೆ ಕನ್ನಡದಲ್ಲಿ ಏನಾದರೂ ಬರೆದರೆ ಪ್ರಕಟಿಸುವ ಅವಕಾಶ ಇದ್ದದ್ದು ದಟ್ಸ್‌ಕನ್ನಡ ವೆಬ್‌ಸೈಟಿನಲ್ಲಿ. ಶಾಮಸುಂದರ್ ಮತ್ತವರ ಬಳಗ ನನ್ನಂತಹ ಅನೇಕ ಭಿನ್ನ ವೈಚಾರಿಕ ಹಿನ್ನೆಲೆ ಇರುವವರಿಗೆಲ್ಲ ವೇದಿಕೆ ಕೊಟ್ಟಿದ್ದರು. ಬಹುಶಃ, ಸಂವಾದಕ್ಕೆ ಆಸ್ಪದವಿದ್ದ ಮೊದಲ ಕನ್ನಡ ತಾಣ ಅದು.

ಅಷ್ಟಿದ್ದರೂ, ಕನ್ನಡ ಅಂತರ್ಜಾಲ ಪ್ರಪಂಚದಲ್ಲಿ ಮೊದಲಿನಿಂದಲೂ ಬಹುಸಂಖ್ಯಾತರಾಗಿದ್ದವರು ಕೋಮುವಾದಿಗಳು ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗಾಂಧೀಜಿಯ ಹಂತಕ-ಪಡೆ ವಿಶ್ರಮಿಸುವುದಿಲ್ಲ. ಭಾರತವೂ...

ಕರ್ನಾಟಕದ ಇವತ್ತಿನ ದೊಡ್ಡ ಸಮಸ್ಯೆ ಕೋಮುವಾದ ಎನ್ನುವುದು ನನ್ನ ನಂಬಿಕೆ. ಕಳೆದ ಹಲವಾರು ದಶಕಗಳಲ್ಲಿ ಕರ್ನಾಟಕ ಕಂಡ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಪ್ರಗತಿಯನ್ನೆಲ್ಲ ಇವತ್ತಿನ ಕೋಮುವಾದ ನಾಶ ಮಾಡುತ್ತಿದೆ.

ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಇತ್ತೀಚಿನ ಆರ್ಥಿಕ ಬೆಳವಣಿಗೆ ನಮ್ಮ ನೆಲದ ಅನೇಕ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಜನ, ಅವರ ಮನಸ್ಸು, ಅಭಿಪ್ರಾಯಗಳು ಹೆಚ್ಚುಹೆಚ್ಚು ಚಲನಶೀಲವೂ ಸಹನಶೀಲವೂ ಆಗುತ್ತಿದೆ. ದುಡಿದೇ ಬದುಕಬೇಕಾದ ಯುವಕ-ಯುವತಿಯರು ಸಂಕೋಲೆಗಳನ್ನು ಮತ್ತು ಸಂಕುಚಿತತೆಗಳನ್ನು ಕಳೆದುಕೊಳ್ಳುತ್ತಾ ನಡೆದಿದ್ದಾರೆ. ಆದರೆ ಹಳೆಯ ವ್ಯವಸ್ಥೆಯಿಂದ ಯಾರು ಯಾರು ಲಾಭ ಮಾಡಿಕೊಳ್ಳುತ್ತಿದ್ದರೊ ಅವರು ಇದನ್ನು ಪರಿಭಾವಿಸುವ ರೀತಿಯೆ ಬೇರೆ. ಹಿಂದೂ-ಕೋಮುವಾದವನ್ನು ಪ್ರಚೋದಿಸುವವರು ಮತ್ತು ಅದರ ಹಿಂಭಾಗದ ಇಂಜಿನ್‌ಗಳು ಇವರೆ. (ಮುಸಲ್ಮಾನ/ಕ್ರಿಶ್ಚಿಯನ್ ಕೋಮುವಾದಕ್ಕೆ ಕಾರಣಗಳು ಬೇರೆಯೆ ಇವೆ.)

ಈ ಕೋಮುವಾದದ ನಿಜವಾದ ಅಪಾಯ ಇರುವುದು ಅದು ತರಲಿರುವ status-quo ನಲ್ಲಿ, ನಿಲ್ಲಿಸಲಿರುವ ಎಲ್ಲಾ ತರಹದ ಸಂವಾದದಲ್ಲಿ ಮತ್ತು ಒಂದು ವರ್ಗ ಇನ್ನೊಂದು ವರ್ಗವನ್ನು ಶೋಷಿಸುವುದು ಸರಿ ಎನ್ನುವ ಪ್ರಚೋದನೆಯಲ್ಲಿ.

ಗಾಂಧೀಜಿ ಕೇವಲ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಆತ ನಮ್ಮದೇ ದೇಶದ ದುಷ್ಟಶಕ್ತಿಗಳ ವಿರುದ್ಧವೂ ಹೋರಾಡಿದ. ಸಮಾಜದ ದುಷ್ಟತೆಯ ವಿರುದ್ಧ ಹೋರಾಡುತ್ತಲೆ ವ್ಯಕ್ತಿಯ ದುಷ್ಟತೆಯ ವಿರುದ್ಧವೂ ಹೋರಾಡಿದ. ಅದು ಅನೇಕ ರಣಾಂಗಣಗಳಲ್ಲಿ ಏಕಕಾಲದಲ್ಲಿ ಮಾಡುತ್ತಿದ್ದ ಯುದ್ಧ. ಆದರೆ "ಅಂತರಂಗ ಶುದ್ಧಿ"ಗಿಂತ "ಬಹಿರಂಗ ಶುದ್ಧಿ"ಗೇ ಮಹತ್ವ ಕೊಟ್ಟ ಸಂಕುಚಿತ ಮನೋಭಾವದ ಕೋಮುವಾದಿಗಳು ಗಾಂಧೀಜಿಯ ಹತ್ಯೆ ಮಾಡುತ್ತಾರೆ. ಆ ಹಂತಕ ಪಡೆ ಇನ್ನೂ ವಿಶ್ರಮಿಸಿಲ್ಲ.

ಆದರೆ, ಗಾಂಧೀಜಿ ಭಾರತದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಮಾತ್ರವಲ್ಲ. ಭಾರತದ ಅಂತಃಸತ್ವವೆ, ಭಾರತದ ನೈಜರೂಪವೆ ಗಾಂಧೀಜಿ. ದುಷ್ಟತೆಯ ವಿರುದ್ಧ ಭರತಭೂಮಿಯಲ್ಲಿ ನಡೆದ ಶತಶತಮಾನಗಳ ಹೊರಾಟ ಕಳೆದ ಶತಮಾನದಲ್ಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆತನ ಸಾವು ಈಗ ವಿಷಾದ ಹುಟ್ಟಿಸುತ್ತಿಲ್ಲ...

ಈಗ ಸ್ವಲ್ಪ ಹೊತ್ತಿನ ಮುಂಚೆ ಫರೀದ್ ಜಕಾರಿಯರವರ "GPS" ನೋಡುತ್ತಿದ್ದೆ. ಫರೀದ್ ಜಕಾರಿಯ ಗೊತ್ತಲ್ಲ? ಭಾರತೀಯ ಸಂಜಾತ; ಅಮೇರಿಕದ ಪತ್ರಕರ್ತ. ಜಾಗತಿಕ ರಾಜಕೀಯ ಆಯಾಮಗಳ ಮೇಲೆ ವಸ್ತುನಿಷ್ಠ ಅಭಿಪ್ರಾಯ ಕೊಡುವ ಅಧ್ಯಯನಶೀಲ. ಬುದ್ಧಿಜೀವಿ. ಭಾರತೀಯ ಮುಸಲ್ಮಾನರ ಬಗ್ಗೆ ಮತ್ತು ಅವರಲ್ಲಿಯ ವೈಚಾರಿಕ-ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದ ಬಗ್ಗೆ ಯೋಚಿಸಿದಾಗೆಲ್ಲ ನೆನಪಿಗೆ ಬರುವ ಮುಂಬಯಿಯಲ್ಲಿ ಹುಟ್ಟಿ ಬೆಳೆದ ಲೇಖಕ. ಆದರೆ, ಫರೀದ್ ಈಗ ಅಮೆರಿಕನ್ ಪ್ರಜೆ!

ಇರಲಿ. ಇವತ್ತು ಫರೀದ್ ಜಕಾರಿಯ ಚೀನಾದ ಪ್ರಧಾನಿ ಮತ್ತು ಅಫ್ಘನ್ ಅಧ್ಯಕ್ಷನ ಸಂದರ್ಶನ ಮಾಡಿದ್ದ. ಕೊನೆಯಲ್ಲಿ ರೋಮನ್ ಸಾಮ್ರಾಟ ಮಾರ್ಕಸ್ ಅರಿಲಿಯಸ್‌‍ನ ಒಂದೆರಡು ಮಾತುಗಳನ್ನು ಉಲ್ಲೇಖಿಸಿದ. ಮಾರ್ಕಸ್ ಆಸೆಯ (ಬಯಕೆ) ದುಷ್ಟತನಗಳ ಬಗ್ಗೆ ಹೇಳಿದ್ದ. ಅದನ್ನು ಜಕಾರಿಯ ಅಮೆರಿಕದ ಮತ್ತು ಚೀನಾದ ಜನರಿಗೆ ನೆನಪಿಸಿದ. ಹಾಗೆಯೆ ಮಾರ್ಕಸ್ ಸಾವಿನ ಬಗ್ಗೆ ಹೇಳಿದ್ದ ಮಾತನ್ನೂ ಹೇಳಿದ; "ಸಾವನ್ನು ಬಯಸಬಹುದು. ಏಕೆಂದರೆ ಅದು ಎಲ್ಲಾ ಬಯಕೆಗಳಿಗೂ ಅಂತ್ಯ ಹಾಡುತ್ತದೆ."

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - ravikreddy ರವರ ಬ್ಲಾಗ್