ravikreddy ರವರ ಬ್ಲಾಗ್

ಮೊಬೈಲ್‍ನಿಂದ ಪಂಪ್‌ಸೆಟ್ ನಿಯಂತ್ರಣ ಮತ್ತು ಜನಾರ್ಧನ ಸ್ವಾಮಿ

ಹವ್ಯಾಸಿ ವ್ಯಂಗ್ಯಚಿತ್ರಕಾರರೂ, ಉತ್ತಮ ಗ್ರಾಫಿಕ್ ವಿನ್ಯಾಸಕಾರರೂ, ಮತ್ತು ಚಿಪ್ ಡಿಸೈನಿಂಗ್‌ ಕ್ಷೇತ್ರದಲ್ಲಿ ಒಂದು ಪ್ಯಾಟೆಂಟ್ ಪಡೆದಿರುವವರೂ ಆದ ಗೆಳೆಯ ಜನಾರ್ಧನ ಸ್ವಾಮಿ ನನಗೆ ಮೊದಲು ಪರಿಚಯವಾದದ್ದು 2004 ರಲ್ಲಿ; ನಾನು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಕಾರ್ಯದರ್ಶಿಯಾಗಿದ್ದಾಗ. ಅಲ್ಲಿಂದೀಚೆಗೆ ಕನಿಷ್ಠ ಹತ್ತಿಪ್ಪತ್ತು ಬಾರಿಯಾದರೂ (ಅಕ್ಷರಶಃ!) ಸ್ವಾಮಿ ಮೊಬೈಲ್ ಫೋನಿನಿಂದ ಅಥವ ಅಂತಹುದೇ ವೈರ್‌ಲೆಸ್ ಉಪಕರಣದಿಂದ ಬೋರ್‌ವೆಲ್ ಮೋಟಾರುಗಳನ್ನು ನಿಯಂತ್ರಿಸುವ ಬಗ್ಗೆ ಹೇಳುತ್ತಲೇ ಬಂದಿದ್ದಾರೆ.

ಹಳ್ಳಿಗಳಲ್ಲಿ ಬೋರ್‌‍‌ವೆಲ್ ಇಟ್ಟುಕೊಂಡು ಕೃಷಿ ಮಾಡುತ್ತಿರುವವರು ಕರೆಂಟ್ ಹೋಗಿಬಂದಾಗಲೆಲ್ಲ ತಮ್ಮ ಪಂಪ್‌‍ಸೆಟ್ ಇಟ್ಟಿರುವ ಜಾಗಕ್ಕೆ ತೀರ್ಥಯಾತ್ರೆ ಮಾಡುವ ಅನಿವಾರ್ಯ ಕೆಲಸ ಒಂದಿದೆ. ಕರ್ನಾಟಕದ ಬಯಲುಸೀಮೆಯಲ್ಲಿ ಕೃಷಿ ಮಾಡುವವರು, ವಿಶೇಷವಾಗಿ ತೋಟಗಾರಿಕೆ ಮಾಡುವವರು, ತಮ್ಮ ಬೋರ್‌ವೆಲ್‌ನಲ್ಲಿ ಸಾಕಷ್ಟು ರಭಸವಾಗಿ ಬರುವ ನೀರು ಇಲ್ಲದೆ ಇದ್ದರೆ ಒಂದು ಸುಮಾರಾದ ಮಣ್ಣಿನ ಅಥವ ಸಿಮೆಂಟಿನ ಟ್ಯಾಂಕ್ ಕಾಟ್ಟಿಕೊಂಡಿರುತ್ತಾರೆ. ಕರೆಂಟ್ ಇರುವಾಗಲೆಲ್ಲ ಆ ಟ್ಯಾಂಕಿಗೆ ನೀರು ತುಂಬಿಸಿ, ನಂತರ ಅದರಿಂದ ರಭಸವಾಗಿ ಹರಿಯುವ ನೀರನ್ನು ಪಾತಿಗಳಿಗೆ ಹರಿಸುತ್ತ ಹೋಗುತ್ತಾರೆ. ಇದನ್ನು ನೀರು ಕಟ್ಟುವುದು ಎಂತಲೂ ಅನ್ನುತ್ತಾರೆ. ಇಲ್ಲಿ ಮೊದಲಿಗೆ ಟ್ಯಾಂಕ್ ತುಂಬಿಸುವ ಕೆಲಸ ಇದೆಯಲ್ಲಾ, ಅದೆ ದೊಡ್ಡ ಸಮಸ್ಯೆ. ದಿನವೂ ಹತ್ತಾರು ಗಂಟೆಗಳ ಕಾಲ ತುಂಬಿಸಬೇಕು. ಕರೆಂಟ್ ಬಂದು ಹೋಗುವ ಲೋಡ್-ಶೆಡ್ಡಿಂಗ್ ಸಮಯದಲ್ಲಂತೂ ಆಫ್ ಆದ ಬೋರ್‍ವೆಲ್ಲನ್ನು ಮತ್ತೆ ಚಾಲೂ ಮಾಡಲು ಮನೆಯಿಂದ ತೋಟಕ್ಕೆ ಓಡಬೇಕು. ಕೆಲವೊಂದು ಕಡೆ ಓಡಿದರೂ ನಿಧಾನವಾಗಿ ಬಿಡುತ್ತದೆ. ಕರೆಂಟ್ ಬಂದ ತಕ್ಷಣ ಸೈಕಲ್‌ಗಳಲ್ಲಿ ಅಥವ್ ಬೈಕ್‌ಗಳಲ್ಲಿ ತಮ್ಮ ತೋಟದತ್ತ ದೌಡಾಯಿಸುವ ಜನರನ್ನು ನಾನು ಏಳೆಂಟು ವರ್ಷಗಳ ಹಿಂದೆ ಸ್ವತಃ ಕಂಡಿದ್ದೆ. ಅವರು ಹಾಗೆ ಓಡಲು ಮುಖ್ಯ ಕಾರಣ ಅಕ್ಕಪಕ್ಕದ ತೋಟದವರು ಈಗಾಗಲೆ ತಮ್ಮ ಪಂಪ್‍ಸೆಟ್‍ಗಳನ್ನು ಆನ್ ಮಾಡಿಬಿಟ್ಟಿದ್ದರೆ ಇವರ ಪಂಪ್‌ಸೆಟ್‌ ಆನ್ ಆಗಲು ಇರಬೇಕಾದ ವೋಲ್ಟೇಜ್ ಇರುವುದಿಲ್ಲ. ಎಷ್ಟೋ ಸಲ ಒಂದು ಬೆಳೆಯ ಭವಿಷ್ಯ ಒಂದೆರಡು ದಿನದ ನೀರು ಹರಿಸುವಿಕೆಯ ಮೇಲೆ ಅವಲಂಭಿಸಿರುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಈ ತಲೆಮಾರಿನ ಕನಸು ಮತ್ತು ಆದರ್ಶದ ಗಳಿಗೆ...

[ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನೂ ಎರಡು ದಿನ ಇರುವಾಗ, ವಿಕ್ರಾಂತ ಕರ್ನಾಟಕದ ನವೆಂಬರ್ 14, 2008 ರ ಸಂಚಿಕೆಗೆ ಬರೆದ ಲೇಖನ.]

"ಕರಿಯಗಂಡು, ಬಿಳಿಹೆಣ್ಣಿನ ಮಗನಾದ ಬರಾಕ್ ಹುಸೇನ್ ಒಬಾಮ ಎಂಬ ಸೆನೆಟರ್ ಮುಂದಿನ ಏಳೆಂಟು ವರ್ಷ ಅಂತಹ ದೊಡ್ಡ ತಪ್ಪುಗಳನ್ನು ಮಾಡದಿದ್ದರೆ ಈ ದೇಶದ ಅಧ್ಯಕ್ಷನೂ ಆಗಬಹುದು!" ಹಾಗೆಂದು ನಾನು ಬರೆದಿದ್ದು ವಿಕ್ರಾಂತ ಕರ್ನಾಟಕದ ಜುಲೈ 7, 2007 ರ ಸಂಚಿಕೆಯಲ್ಲಿ. ಕರ್ನಾಟಕದಲ್ಲಿ ಅಂತರ್ಜಾತಿ ವಿವಾಹಕ್ಕೆ ಅಪಾರ ಪ್ರೋತ್ಸಾಹ ಕೊಟ್ಟ ಮೈಸೂರಿನ ಚಿಂತಕ ರಾಮದಾಸರು ತೀರಿಕೊಂಡಾಗ ಬರೆದ ಲೇಖನದಲ್ಲಿ ನಾನು ಹಾಗೆ ಮೇಲಿನಂತೆ ಬರೆದದ್ದು. ಆ ಸಮಯದಲ್ಲಿ ಬಹುಪಾಲು ಜನರ ಊಹೆ ಇದ್ದದ್ದು, ಈ ಬಾರಿ ಹಿಲ್ಲರಿ ಕ್ಲಿಂಟನ್ ಅಮೆರಿಕದ ಅಧ್ಯಕ್ಷಳಾಗಲಿದ್ದಾಳೆ ಎಂದು. ಅದೇ ದಿಕ್ಕಿನಲ್ಲಿ ಯೋಚಿಸುತ್ತ, ಈ ಲೇಖನ ಬರೆಯುವುದಕ್ಕೆ ನಾಲ್ಕು ತಿಂಗಳಿನ ಮೊದಲು ಬರಾಕ್ ಒಬಾಮ ಅಮೆರಿಕದ ಸಿಲಿಕಾನ್ ಕಣಿವೆಯ ಬಳಿ ಆಯೋಜಿಸಿದ್ದ ಸಭೆಯೊಂದರಲ್ಲಿ ಆತನ ಭಾಷಣ ಕೇಳಿಕೊಂಡು ಬಂದಿದ್ದ ನಾನು, ಈ ಸಲ ಅಲ್ಲದಿದ್ದರೂ ಕ್ಲಿಂಟನ್‌ಳ ಅವಧಿ ಮುಗಿದ ನಂತರವಾದರೂ ಖಂಡಿತ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷನಾಗುವುದು ಸಾಧ್ಯ ಎನ್ನುವ ತೀರ್ಮಾನಕ್ಕೆ ಬಂದಿದ್ದೆ. ಆದರೆ, ಅಮೆರಿಕದ ಜನ ನನ್ನಂತಹ ಕೋಟ್ಯಾಂತರ ಜನರ ಊಹೆಗಳನ್ನೆಲ್ಲ ಹುಸಿ ಮಾಡಿಬಿಟ್ಟಿದ್ದಾರೆ; ಕನಸಿದ್ದಕ್ಕಿಂತ ಹೆಚ್ಚಿನ ಮಟ್ಟದ್ದನ್ನು ಕೊಟ್ಟುಬಿಟ್ಟಿದ್ದಾರೆ. ಈ ಒಂದೇ ಕಾರಣಕ್ಕೆ ಅಮೆರಿಕದ ಜನತೆ ವಿಶ್ವದ ಅನೇಕ ಜನರ ಪ್ರೀತಿಯನ್ನು ಗಳಿಸಿಕೊಂಡು ಬಿಟ್ಟಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಭೈರಪ್ಪ, ಫ್ರೊ. ರಾಮದಾಸ್, ಮತ್ತು ಒಬಾಮ.

ಅಮೆರಿಕದಲ್ಲಿನ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಒಬಾಮ ಅಧ್ಯಕ್ಷನಾಗಿ ಚುನಾಯಿತನಾಗುವುದು ಈಗ a foregone conclusion. ಈ ಸಮಯದಲ್ಲಿ ಒಬಾಮ ಗೆಲ್ಲದಿದ್ದರೆ ಅದು ಅಮೆರಿಕದ ರಾಜಕೀಯ ಚರಿತ್ರೆಯಲ್ಲಿ ಒಂದು ಅತಿದೊಡ್ಡ upset ಆಗಲಿದೆ. ಅದು ಆಗುವ ಸಂಭವ ಕಮ್ಮಿ. ಹಾಗಾಗಿಯೇ, ಬಹಳಷ್ಟು ಪತ್ರಕರ್ತರು ಈಗಾಗಲೆ ಒಬಾಮ ಗೆದ್ದಿದ್ದಾನೆ ಎಂದೇ ಭಾವಿಸಿಬಿಟ್ಟಿದ್ದಾರೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಗೆಳೆಯ ಪ್ರೊ. ಪೃಥ್ವಿ ದತ್ತ ಚಂದ್ರ ಶೋಭಿ ಮತ್ತು ನಾನು ಓಕ್‌ಲ್ಯಾಂಡ್‌ನಲ್ಲಿ ಬರಾಕ್ ಒಬಾಮನ ಭಾಷಣ ಕೇಳಲು ಹೋಗಿದ್ದೆವು. ಅವನ ಮಾತು ಕೇಳಿಕೊಂಡು ಬಂದ ನಂತರ ನನಗಿದ್ದ ಒಂದು ಸಂಶಯ, "ಈ ದೇಶದ ಜನ ಒಬ್ಬ ಕಪ್ಪು ಮನುಷ್ಯನನ್ನು ಅಧ್ಯಕ್ಷನನ್ನಾಗಿ ಆರಿಸಲು ಸಿದ್ಧವಾಗಿದ್ದಾರೆಯೇ?" ಅಂತ. ಹಾಗಾಗಿಯೆ ನನಗೆ ಮೊದಲಿನಿಂದಲೂ ಒಬಾಮಾನ ಗೆಲ್ಲುವಿಕೆ ಬಗ್ಗೆ ಸ್ವಲ್ಪ ಸಂಶಯ ಇತ್ತು. ಏನೇ ಹೇಳಿ, ಸದ್ಯದ ಸವಾಲಿಗೆ ಸನ್ನದ್ಧವಾಗುವ ಈ ದೇಶದ ಜನರ ತಾಕತ್ತು ನಿಜಕ್ಕೂ ಬೆರಗು ಮೂಡಿಸುತ್ತದೆ. ಅಮೆರಿಕ ಯಾವ ಮಟ್ಟದಲ್ಲಿ Transform ಆಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಕೆಳಗಿನ ಲೇಖನ ಸಹಕಾರಿಯಾಗುತ್ತದೆ ಎಂದು ಭಾವಿಸುತ್ತೇನೆ.

ಹಾಗೆಯೆ, ನನ್ನ ಯುವಮಿತ್ರರು ಒಂದು ಆದರ್ಶದ ಕನಸನ್ನು ಧೈರ್ಯದಿಂದ ಕಾಣಲು, ತಮಗಿಷ್ಟವಾದ ಯುವಕ-ಯುವತಿಯನ್ನು ಭವಿಷ್ಯ ಮತ್ತು ಭೂತದ ಯಾವೊಂದು ಅಂಜಿಕೆ ಮತ್ತು ಭಯ ಇಲ್ಲದೆ ಉತ್ಕಟವಾಗಿ ಪ್ರೇಮಿಸಲು ಮತ್ತು ಮದುವೆಯಾಗಲು, ಜನಾಂಗೀಯ ದ್ವೇಷವನ್ನು ಪ್ರೇರೇಪಿಸುವ ಸಮಾಜದ್ರೋಹಿಗಳ ಚಿಂತನೆಗಳನ್ನು ಭಸ್ಮ ಮಾಡಲು, ಈ ಕೆಳಗಿನ ಲೇಖನ ಪ್ರೇರೇಪಿಸಲಿ ಎಂದು ಆಶಿಸುತ್ತೇನೆ. ಒಬಾಮಾನ ಯಶಸ್ಸು ಅಂತರ್ಜಾತಿ ವಿವಾಹಕ್ಕೆ ಸ್ಫೂರ್ತಿಯಾಗಲೆಂದೂ ಬಯಸುತ್ತೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸರ್ಕಾರಿ ದುಡ್ಡು ಮತ್ತು ಬೇಕಾಬಿಟ್ಟಿ ಖರ್ಚು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 7, 2008 ರ ಸಂಚಿಕೆಯಲ್ಲಿನ ಲೇಖನ.)

ಕ್ಯಾಲಿಫೋರ್ನಿಯ ಜನಸಂಖ್ಯೆಯ ದೃಷ್ಟಿಯಲ್ಲಿ ಅಮೆರಿಕದ ಅತಿದೊಡ್ಡ ರಾಜ್ಯ. ಹಾಗೆಯೆ, ಉದಾರವಾದಿ, ಪ್ರಭಾವಶಾಲಿ, ಶ್ರೀಮಂತ ರಾಜ್ಯ ಸಹ. ಸಾಫ್ಟ್‌ವೇರ್ ಮತ್ತು ಇಂಟರ್ನೆಟ್ ತಂತ್ರಜ್ಞಾನ ಉತ್ತುಂಗಕ್ಕೆ ಏರುತ್ತಿದ್ದ 1999 ರ ಕಾಲದಲ್ಲಿ ಸಿಲಿಕಾನ್ ಕಣಿವೆಯ ಈ ರಾಜ್ಯವನ್ನು ಒಂದು ಸ್ವತಂತ್ರ ದೇಶವಾಗಿ ಪರಿಗಣಿಸಿದ್ದರೆ ಅದು ಪ್ರಪಂಚದ ಆರನೆಯ ಅಥವ ಏಳನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗುತ್ತಿತ್ತು. ಆಗ 125 ಕೋಟಿ ಜನಸಂಖ್ಯೆಯ ಚೀನಾಕ್ಕಿಂತ ಕೇವಲ 3 ಚಿಲ್ಲರೆ ಕೋಟಿ ಜನಸಂಖ್ಯೆಯ ಈ ರಾಜ್ಯವೆ ಆರ್ಥಿಕವಾಗಿ ದೊಡ್ಡದು! ಆ ದಿನಗಳಲ್ಲಿ ಕ್ಯಾಲಿಫೋರ್ನಿಯಾದ ಗವರ್ನರ್ ಆದವನು ಗ್ರೇ ಡೇವಿಸ್. ಆತ ಅಧಿಕಾರಕ್ಕೆ ಬಂದ ಸಮಯದಲ್ಲಿ ಖರ್ಚು ಮಾಡಲಾಗದಷ್ಟು ದುಡ್ಡು ರಾಜ್ಯದ ಬೊಕ್ಕಸಕ್ಕೆ ಬಂದು ಬೀಳುತ್ತಿತ್ತು. ಯಾವಾಗಲೂ ಉಳಿತಾಯದ ಬಜೆಟ್ಟೆ.

"ಆಹಾ! ಹಾಲು-ತುಪ್ಪದ ಹೊಳೆ ಎಲ್ಲೆಲ್ಲೂ!" ಎಂದು ಹಾಡುತ್ತ ಕುಣಿಯುತ್ತ ಇರುವಾಗಲೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗೋಮೂತ್ರ, ಗೋಹತ್ಯೆ, ಮತಾಂತರ - ಅವಧಿ, ಜೋಗಿ, ಕೆಂಡಸಂಪಿಗೆ

ಕನ್ನಡದ ಅಂತರ್ಜಾಲ ಪ್ರಪಂಚ ಬದಲಾದ ಕಾಲಘಟ್ಟವನ್ನು ದಾಖಲಿಸುತ್ತ ಎರಡು ವಾರಗಳ ಹಿಂದೆ "ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ," ಎಂಬ ಬ್ಲಾಗ್ ಲೇಖನ ಬರೆದಿದ್ದೆ. ಆ ಲೇಖನದಲ್ಲಿ ಪ್ರಾಸಂಗಿಕವಾಗಿ ಮಂಗಳೂರಿನ ಡಾ. ಕಕ್ಕಿಲಾಯರ "ಆರೋಗ್ಯ ಸಂಪದ" ತಾಣವನ್ನು ಉದಾಹರಿಸಿದ್ದೆ. ಡಾ. ಕಕ್ಕಿಲಾಯರ ಹಲವಾರು ಲೇಖನಗಳನ್ನು ಓದಿದ್ದ ನನಗೆ ಅವರ ಇತ್ತೀಚಿನ ಲೇಖನವಾದ "ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ?" ನಮ್ಮ ಸದ್ಯದ ಸ್ಥಿತಿಗೆ ಬಹಳ ಪ್ರಸ್ತುತವಾಗಿ ಕಂಡಿತು. ಖುಷಿಯ ವಿಚಾರ ಏನೆಂದರೆ, ಇದಾದ ನಂತರ ಅವಧಿಯವರೂ ಕಕ್ಕಿಲಾಯರವರ ಈ ಲೇಖನವನ್ನು ಅವರ ಬ್ಲಾಗಿನಲ್ಲಿಯೂ ಪ್ರಕಟಿಸಿ ಅದಕ್ಕೆ ಅಂತರ್ಜಾಲದ ಕನ್ನಡ ಓದುಗರಲ್ಲಿ ವಿಸ್ತೃತವಾದ ವೇದಿಕೆ ಒದಗಿಸಿಕೊಟ್ಟರು. ತನ್ನ ಓದುಗ ವಲಯದಲ್ಲಿ ಜನಪ್ರಿಯವಲ್ಲದ ಇಂತಹ ಲೇಖನವನ್ನು ಚರ್ಚೆಗೆ ತೆರೆದಿಟ್ಟ ಅವಧಿಯ ಕಾರ್ಯ ಶ್ಲಾಘನೀಯವಾದದ್ದು.

ಇವತ್ತು ಬೆಳಿಗ್ಗೆಯ "ಕೆಂಡಸಂಪಿಗೆ" ಮುಖಪುಟ ನಿಜಕ್ಕೂ ಶಾಕ್ ಉಂಟುಮಾಡಿತು. ಪ್ರತಿದಿನವೂ ಓದುವ ಮತ್ತು ಪ್ರತಿದಿನವೂ ಬರೆಯುವ ಕನ್ನಡದ ಇತ್ತೀಚಿನ ಜನಪ್ರಿಯ ಲೇಖಕ ಜೋಗಿ ಇಲ್ಲಿಯತನಕ ಎಲ್ಲರ ಪರವೂ ಇರುವಂತೆ ಬರೆದುಕೊಂಡು ಬಂದವರು. ಕವಿ, ಕವಿತೆ, ಕವಿಸಮಯ, ಕತೆ, ಕಾದಂಬರಿ, ಸಾಹಿತ್ಯ್ಯ, ರಸಾನುಭವ, ಇಂತಹ ಯಾರಿಗೂ ನೋವುಂಟು ಮಾಡದ, ಆದರೆ ಓದುಗರನ್ನು ಯಾವುದೊ ಒಂದು ತೃಪ್ತಿಯಲ್ಲಿ ನಿಲ್ಲಿಸುವ ಬರವಣಿಗೆ ಮಾಡಿಕೊಂಡು ಬಂದವರು. ಮತ್ತು ಅದೇ ಕಾರಣಕ್ಕೆ ಅಪಾರ ಓದುಗರನ್ನು (ವಿಶೇಷವಾಗಿ ಯುವಓದುಗರನ್ನು) ಸೃಷ್ಟಿಸಿಕೊಂಡವರು. ವಿವಾದಾಸ್ಪದ ವಿಷಯಗಳಿಂದ ದೂರ ಉಳಿದವರು. ಆದರೆ ಅವರು ತಮ್ಮ ಇವತ್ತಿನ ಲೇಖನದಲ್ಲಿ ಒಂದಲ್ಲ, ಹಲವಾರು ವಿಷಯಗಳ ಮೇಲೆ ತಮ್ಮ ಖಚಿತ ನಿಲುವುಗಳನ್ನು ಜಾಹೀರು ಮಾಡಿಬಿಟ್ಟಿದ್ದಾರೆ. ಗೋಮೂತ್ರದ craze ಗೆ ಹಿನ್ನೆಲೆ, "ಗೋವಿನ ಪಾವಿತ್ರ್ಯವನ್ನು ಸಾರಲು ಗೋಮೂತ್ರಕ್ಕೆ ವೈದ್ಯಕೀಯ ಗುಣಗಳನ್ನು ಆರೋಪಿಸಿರುವುದು" ಎಂದು ಬರೆದಿದ್ದಾರೆ. ಬಹುಶ: ಭೈರಪ್ಪನವರ ಇತ್ತೀಚಿನ ಅಭೂತಪೂರ್ವ-ಸತ್ಯಸ್ಯಸತ್ಯ-ದಾರ್ಶನಿಕ-ಬೋಲ್ಡ್-ಸುದೀರ್ಘ ತಪಸ್ವಿನ-ಕ್ರಾಂತಿಕಾರಿ-ಸಂಶೋಧನಾತ್ಮಕ-ಸತ್ಯದ ಪ್ರಪ್ರಥಮ ಅನಾವರಣ-ಮಹಾನ್ ಆದ ಮತಾಂತರದ ಮೇಲಿನ ಅಗ್ರ-ಲೇಖನಕ್ಕೆ ಪ್ರತಿಕ್ರಿಯಿಸುತ್ತ, ಪರೋಕ್ಷವಾಗಿ ಎನ್ನುವುದಕ್ಕಿಂತ ನೇರವಾಗಿಯೆ, ಭೈರಪ್ಪನವರನ್ನು "ನೀವು ಮನುಷ್ಯರಂತೆ ಕಾಣಿಸುವುದಿಲ್ಲ," ಎಂದುಬಿಟ್ಟಿದ್ದಾರೆ. ಹೀಗೆ ಹೇಳುವ ಮೂಲಕ ಜೋಗಿ ಒಂದೇ ದಿನದಲ್ಲಿ ತಮ್ಮ ಅರ್ಧಕ್ಕರ್ಧ ಅಭಿಮಾನಿಗಳನ್ನು ಕಳೆದುಕೊಂಡು ಬಿಟ್ಟಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆ ಅಲ್ಲ ಎಂದುಕೊಳ್ಳುತ್ತೇನೆ. ಅದಕ್ಕೆ ಕೆಲವು ಸಾಕ್ಷಿಗಳು ಆ ಲೇಖನಕ್ಕೆ ಈಗಾಗಲೆ ಬಂದಿರುವ ಪ್ರತಿಕ್ರಿಯೆಗಳಲ್ಲಿಯೆ ಇದೆ. ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳಿಂದ ಏನಾಗುತ್ತಿದೆ ಅಂದರೆ, people, especially writers, will not have an option to be neutral. They will have to choose between right and wrong.

ಪುಣ್ಯಪುರುಷರೂ, ಸಂತರೂ ಆದವರ ಸನ್ನಿಧಿಯಲ್ಲಿ ಒಬ್ಬ ಮನುಷ್ಯ "ಈ ತಪಸ್ವಿಗಳು ಶಾಪ ಕೊಟ್ಟರು. ಆ ಧರ್ಮದ್ರೋಹಿಗಳು ಬೀದಿಗೆ ಬಿದ್ದರು," ಎಂದುಬಿಟ್ಟ. ಸಂತರು ಗಾಬರಿಬಿದ್ದರು. ನಮ್ಮ ಪುರಾಣಗಳಲ್ಲಿ ಒಂದು ಕಲ್ಪನೆ ಇದೆ. ಅದು, "ಯಾರಿಗಾದರೂ ಕೆಟ್ಟದು ಬಯಸಿದರೆ, ಅಂದರೆ ಶಾಪ ಕೊಟ್ಟರೆ, ಕೊಟ್ಟವರ ತಪ:ಶಕ್ತಿ ಕರಗಿ ಬಿಡುತ್ತದೆ," ಎನ್ನುವುದು. ಹಾಗಾಗಿಯೆ, ಪುರಾಣಗಳಿಂದಲೆ ಹೊಟ್ಟೆಹೊರೆಯುವ ಆ ಸಂತರು ಗಾಬರಿಬಿದ್ದದ್ದು. ಪ್ರಜಾರಾಜ್ಯ ಎಂಬ ಈ ಕಲಿಕಾಲದಲ್ಲಿ ತಮ್ಮ ತಪ:ಶಕ್ತಿ ಕಳೆದುಕೊಳ್ಳಲು ಯಾರು ಇಷ್ಟಪಡುತ್ತಾರೆ, ಅಲ್ಲವೆ? ಜೊತೆಗೆ, ಎದ್ದವರು ಬೀಳುವ, ಬಿದ್ದವರು ಮೇಲೆ ಏಳುವ ಕಾಲ ಇದು. ಅದಕ್ಕಾಗಿಯೆ ಸಂತರು "ಶಾಂತಂ ಪಾಪಂ, ನಾನು ಯಾರಿಗೂ ಶಾಪ ಕೊಡಲಿಲ್ಲ," ಎಂದರಂತೆ. ಪಾಪ ಆ ಸಂತರ ಪರವಾಗಿ ಸುಳ್ಳುಸುಳ್ಳೆ ಏನನ್ನೊ ಹೇಳಿಬಿಟ್ಟ ರಾಮಾನುಯಾಯಿ "ಯದ್ವಾ-ತದ್ವಾ ಈಶ್ವರಪ್ಪ !!" ಬಗ್ಗೆ "ಸುದ್ದಿ ಮಾತು" ಬ್ಲಾಗಿನಲ್ಲಿ ಲೇಖನವೊಂದು ಪ್ರಕಟವಾಗಿತ್ತು. ನಾಲ್ಕೈದು ವರ್ಷಗಳ ಹಿಂದೆ ಇದೇ ಈಶ್ವರಪ್ಪನವರು ಗೋಮಾಂಸ ಭಕ್ಷಕರ ನಾಲಿಗೆ ಸೀಳುವುದಾಗಿ ಹೇಳಿದ್ದರು. ಆಗ ಸಕಾರಣವಾಗಿಯೆ ಭಯಭೀತನಾಗಿದ್ದ ನಾನು ಏನೇನೊ ಕಾರಣಗಳನ್ನು ಕೊಟ್ಟುಕೊಂಡು ನಿರೀಕ್ಷಣಾ ಜಾಮೀನು ಹಾಕಿಕೊಂಡಿದ್ದೆ. ಆ ನಿರೀಕ್ಷಣಾ ಜಾಮೀನು ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿತ್ತು. ಬಹುಶಃ ಆ ತಾಣದಲ್ಲಿನ ತಾಂತ್ರಿಕ ಸುಧಾರಣೆಗಳಿಂದಾಗಿ ಎರಡು ಮೂರು ವರ್ಷಗಳ ಹಿಂದಿನ ಲೇಖನಗಳು ಅಲ್ಲಿ ಈಗ ಸಿಗುತ್ತಿಲ್ಲ. ಅದಕ್ಕಾಗಿಯೆ ಆ ಜಾಮೀನನ್ನು ಇಲ್ಲಿ ಈಗ ಹಾಕಿಕೊಳ್ಳುವ ಮೂಲಕ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - ravikreddy ರವರ ಬ್ಲಾಗ್