ravikreddy ರವರ ಬ್ಲಾಗ್

ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಆ ಸಿನೆಮಾ ಸರಿ ಇಲ್ಲ ಅನ್ನುವವರು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 13, 09 ರ ಸಂಚಿಕೆಯಲ್ಲಿನ ಲೇಖನ.)

ಜೀವನಪ್ರೀತಿಯನ್ನು ನವೀಕರಿಸುತ್ತ ಆಶಾವಾದದಲ್ಲಿ ಮತ್ತು ಒಳ್ಳೆಯತನದಲ್ಲಿ ಕೊನೆಯಾಗುವ, ಈ ಆಸ್ಕರ್ ಪ್ರಶಸ್ತಿ ವಿಜೇತ ಸಿನೆಮಾವನ್ನು ಈ ಲೇಖನ ಬರೆಯುವುದಕ್ಕೆ ಸ್ವಲ್ಪ ಮುಂಚೆಯೆ ನೋಡಿದ್ದು. ಅದನ್ನು ನೋಡಿಕೊಂಡು ಹೊರಬರುತ್ತ, ಇಂತಹ ಒಳ್ಳೆಯ ಸಿನೆಮಾವನ್ನು "ಈ ಚಿತ್ರ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಅದು ಸರಿ ಇಲ್ಲ, ನಾವು ಹೇಗೆ ಇದ್ದರೂ ನಮ್ಮನ್ನು ಕೆಟ್ಟದಾಗಿ ತೋರಿಸಬಾರದು," ಎಂದು ಹೇಳುತ್ತಿರುವವರ ಮನಸ್ಥಿತಿಯವರ ಕುರಿತು ಯೋಚಿಸುತ್ತಿದ್ದೆ. ಈ ಸಿನೆಮಾದ ಬಗ್ಗೆ ಈ ರೀತಿಯ ಆಕ್ಷೇಪಣೆ ಎತ್ತುವವರು ರೋಗಗ್ರಸ್ತ ಮನಸ್ಸಿನವರೂ, ಕೀಳರಿಮೆಯಿಂದ ನರಳುತ್ತಿರುವ ಅಹಂಕಾರಿಗಳೂ, ತಮಗಿಂತ ಕೀಳಾದವರು ತಮ್ಮ ಸೇವೆಯನ್ನು ಮಾಡಲಷ್ಟೆ ಲಾಯಕ್ಕು ಎನ್ನುವ ಮನೋಭಾವದವರೂ ಆಗಿರಲೇಬೇಕು ಎಂಬಂತಹ ಕಟು ಅಭಿಪ್ರಾಯ ನನ್ನಲ್ಲಿ ಸುಳಿಯಿತು.

ಈ ಸಿನೆಮಾದ ಬಗ್ಗೆ ಜನ ಮಾತನಾಡಲು ಆರಂಭಿಸಿದಾಗಿನಿಂದ ಅಂತರ್ಜಾಲದಲ್ಲಿ, ಭಾರತದ ಮಾಧ್ಯಮಗಳಲ್ಲಿ, ಕನ್ನಡದ ಪತ್ರಿಕೆಗಳಲ್ಲಿ ಅದರ ಬಗ್ಗೆ ಬಂದ ವಿಮರ್ಶೆ ಮತ್ತು ಅಭಿಪ್ರ್ರಾಯಗಳನ್ನು ಓದುತ್ತ ಬಂದಿದ್ದೇನೆ. ಯಾವ ಸಮುದಾಯ ಅಥವ ವರ್ಗದ ಭಾರತೀಯರಿಗೆ ವಿದೇಶಗಳಲ್ಲಿ ಅವಕಾಶಗಳಿರುತ್ತವೆಯೊ ಅಥವ ಭಾರತದ ನವ-ಆರ್ಥಿಕ ವ್ಯವಸ್ಥೆಯಲ್ಲಿ ಯಾವ ವರ್ಗಗಳಿಗೆ ಹೆಚ್ಚು ಲಾಭವಾಗುತ್ತದೊ ಅಂತಹವರೆ ಈ ಸಿನೆಮಾ ನಮ್ಮ ದೇಶದ ಮಾನ ಹರಾಜು ಹಾಕುತ್ತಿದೆ ಎಂದು ಬೊಬ್ಬೆಯಿಡುವವರಲ್ಲಿ ಮುಂಚೂಣಿಯಲ್ಲಿರುವವರು. ಸುಲಭವಾಗಿ ಗುರುತಿಸಬಹುದಾದ ಒಂದು ಆರ್ಥಿಕ ಮತ್ತು ಸಾಮಾಜಿಕ ವರ್ಗಕ್ಕೆ ಸೇರಿದ ಜನ ಇವರು. ವಾಸ್ತವವನ್ನು ಮುಚ್ಚಿಟ್ಟು ಭಾವೋದ್ರೇಕ ವಿಷಯಗಳ ಮೇಲೆ ಬುಡಕಟ್ಟು ಕಟ್ಟಬಯಸುವ, ಮಧ್ಯಕಾಲೀನ ಯುಗಕ್ಕೆ ಹೋಗಬಯಸುವ ಗುಂಪಿದು. ಇದಕ್ಕೆ ಮುಂಚೆ "ವೈಟ್ ಟೈಗರ್" ಕಾದಂಬರಿ ಭಾರತದ ಮಾನ ಕಳೆಯುತ್ತದೆ ಎಂದು ಟೀಕಿಸಿದ ಗುಂಪೂ ಇದೇನೆ. ಕರ್ನಾಟಕದ ಗೃಹ ಸಚಿವರ ಮಾತನ್ನೆ ನೋಡಿ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.3 (3 votes)
To prevent automated spam submissions leave this field empty.

Slumdog Millionaire ಮತ್ತದರ Positive Effect

ನಾಳೆ ಆಸ್ಕರ್ ಪ್ರಶಸ್ತಿಗಳ ಘೋಷಣೆ ಆಗುತ್ತದೆ. ಇತ್ತೀಚಿನ ಸುದ್ದಿಗಳನ್ನು ಗಮನಿಸುತ್ತಿದ್ದರೆ ಭಾರತದ ವಸ್ತು ಇರುವ ಮತ್ತು ಭಾರತದಲ್ಲಿ ತಯಾರಾದ ಸ್ಲಮ್‌‍ಡಾಗ್ ಮಿಲಿಯನೇರ್ ಹಲವು ಪ್ರಶಸ್ತಿಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಈ ವರ್ಷ ಒಳ್ಳೊಳ್ಳೆಯ ಚಿತ್ರಗಳೇ ರೇಸ್‌ನಲ್ಲಿ ಇದ್ದಂತಿವೆ. ಅಷ್ಟಿದ್ದರೂ ಸ್ಲಮ್‌‍ಡಾಗ್ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆಯುವ ಸುದ್ದಿಯೂ ಇದೆ.
ಇಲ್ಲಿ, ನನ್ನ ಒಂದು ಸಂಶಯ ಏನೆಂದರೆ, ಅಕಾಡೆಮಿಯವರು ಬೇಕೆಂತಲೆ "ಮಿಲ್ಕ್"ಗೆ ಶ್ರೇಷ್ಠ ಚಿತ್ರ ಪ್ರಶಸ್ತಿ ಕೊಡಬಹುದು ಎಂದು. ನಾನು ಆ ಸಿನೆಮಾವನ್ನೆ ಅಲ್ಲ, ಆ ಪಟ್ಟಿಯಲ್ಲಿರುವ ಯಾವ ಚಿತ್ರವನ್ನೂ ನೋಡಿಲ್ಲ. ಹಾಗಾಗಿ ಅವುಗಳಲ್ಲಿ ನನಗೆ ಮೆಚ್ಚಿನದ್ದು ಯಾವುದು ಎಂಬ ಅಭಿಪ್ರಾಯ ಇಲ್ಲ. ಅದರೆ ಲಿಬರಲ್ ಮತ್ತು ಪ್ರಗತಿಪರ ಕಾಳಜಿಗಳನ್ನು ಪ್ರೋತ್ಸಾಹಿಸುವ ಅಕಾಡೆಮಿ ಈ ಸಲ ಅದೇ ಕಾರಣಕ್ಕೆ "ಮಿಲ್ಕ್"ನ ಕತೆ ಮತ್ತು ಅದರಲ್ಲಿರುವ ವಿಷಯದಿಂದಾಗಿ ಅದನ್ನೆ ಆಯ್ದುಕೊಳ್ಳಬಹುದು ಎನ್ನಿಸುತ್ತದೆ. ಅದರಲ್ಲಿನ ವಿಷಯ ಇವತ್ತಿನ ಅಮೆರಿಕನ್ ಲಿಬರಲ್‌ಗಳಿಗೆ ಬಹಳ ಮುಖ್ಯವಾದದ್ದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರೇಮಕ್ಕೆ ಜಿಂದಾಬಾದ್ - ಮತ್ತು, ಒಂದು (ಹಳೆಯ) ಪ್ರೇಮ ಕವನ

ಎಲ್ಲಾ ಹಾಲಿ-ಮಾಜಿ ಪ್ರೇಮಿಗಳಿಗೂ, ವಿರಹಿಗಳಿಗೂ, 2009 ರ "ಪ್ರೇಮಿಗಳ ದಿನ"ದ ಶುಭಾಶಯಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪಟ್ಟಾಭಿರಾಮ ಸೋಮಯಾಜಿ, ಯೂನಿವರ್ಸಿಟಿ ಪ್ರೊಫೆಸರ್‌ಗಳು, ಮತ್ತು ಸ್ವಾತಂತ್ರ್ಯ...

ಇವತ್ತು ಕರ್ನಾಟಕದ ಕರಾವಳಿಯಿಂದ ಕೇಳಿಸುವ ಕೆಲವೆ ಕೆಲವು ಜನಪರ, ಪ್ರಜಾಪ್ರಭುತ್ವವಾದಿ, ಜಾತ್ಯತೀತ ಧ್ವನಿಗಳಲ್ಲಿ ಪಟ್ಟಾಭಿರಾಮ ಸೋಮಯಾಜಿಯವರದೂ ಒಂದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ವಿಚಾರ ಮಂಟಪ: ಬರೆದ ನಾಲ್ವರಿಗೂ ಬಹುಮಾನಗಳು!

ವರ್ಷದ ಮೊದಲ ದಿನ ಬಂದ ಆಲೋಚನೆಯನ್ನು ಅಂದೇ ವಿಚಾರ ಮಂಟಪದಲ್ಲಿ ಮತ್ತು ನನ್ನ ಬ್ಲಾಗುಗಳಲ್ಲಿ ಪ್ರಕಟಿಸಿ, ಎರಡು ವಿಷಯಗಳಿಗೆ ಲೇಖಕರಿಂದ ಲೇಖನಗಳನ್ನು ಆಹ್ವಾನಿಸಿದ್ದೆ. ಇದಕ್ಕೆ ಸಾಕಷ್ಟು ಪ್ರಚಾರ ಸಿಗಲಿ ಎಂದು ಒಂದೆರಡು ಗ್ರೂಪ್‌ಗಳಿಗೆ, ಸಮುದಾಯ ಬ್ಲಾಗ್‌ಗಳಿಗೆ ಮತ್ತು ಪೋರ್ಟಲ್‌ಗಳಿಗೆ ಕಳುಹಿಸಿದ್ದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - ravikreddy ರವರ ಬ್ಲಾಗ್