ವಿಜಯ ಕರ್ನಾಟಕದ ಹೊಗಳು ಭಟ್ಟರು : ಭಾಗ-2

0

ಹೊಗಳುವುದಕ್ಕೆ ಮುಂಚೆ ಆಗಿರುವ ಮಾತುಕತೆ ಇದು. "ವಿಕ್ರಾಂತ ಕರ್ನಾಟಕ"ದ ಗೌರವ ಸಂಪಾದಕರಾದ ರವೀಂದ್ರ ರೇಷ್ಮೆ ಆ ಪತ್ರಿಕೆಯ ಏಪ್ರಿಲ್ 10, 2009 ರ ಸಂಚಿಕೆಯ ಸಂಪಾದಕೀಯದಲ್ಲಿ ಬರೆದಿರುವ ಬರಹ ಇದು.

"ವಿ.ಕ. ಭಟ್ಟರ ವಿಚಿತ್ರ ವ್ಯಾಕುಲ.."

ಸ್ನೇಹಿತರೊಂದಿಗೆ ಕಾಫಿಶಾಪ್‌ನಲ್ಲಿ ಕುಳಿತಿರುವಾಗಲೆ ಅಂದು ಸಂಜೆ ಮೊಬೈಲ್ ಫೋನ್ ರಿಂಗಣಿಸಿತು. ಅಷ್ಟಾಗಿ ಪರಿಚಿತವಲ್ಲದ, ಅಪರೂಪಕ್ಕೊಮ್ಮೆ ಬಳಸಿರಬಹುದಾದ ನಂಬರ್ ಅದಾದ್ದರಿಂದ ಕುತೂಹಲದಿಂದಲೇ ಕೇಳಿಸಿಕೊಂಡದ್ದಾಯಿತು.

"ನಾನು ವಿಶ್ವೇಶ್ವರ ಭಟ್ ಮಾತಾಡ್ತಿರೋದು."

"ಹೇಳಿ ಭಟ್ಟರೇ, ಚೆನ್ನಾಗಿದ್ದೀರಾ? ಏನಾದ್ರೂ ತುರ್ತಾಗಿ ಮಾತಾಡೋದಿತ್ತಾ?"

"ಹೌದೌದು, ಇವತ್ತು ನನ್ನ ಕೈಗೆ ನಿಮ್ಮ ವಿಕ್ರಾಂತ ಕರ್ನಾಟಕವನ್ನು ಯಾರೋ ತಂದುಕೊಟ್ರು. ಅದ್ರಲ್ಲಿರೋ ಒಂದು ಬಾಕ್ಸ್ ಐಟೆಮ್‌ನಲ್ಲಿ ನಾನು ಅನಂತಕುಮಾರರು ಕೇಂದ್ರ ಸಚಿವರಾಗಿದ್ದಾಗ ಅವರ ಪಿ.ಎ. ಆಗಿದ್ದೆ ಅಂತ ತಪ್ಪಾಗಿ ಬರೆದಿದ್ದು ನೋಡಿ ಬೇಜಾರೆನಿಸಿ ಫೋನ್ ಮಾಡ್ದೆ..."

"ಅಯ್ಯೋ ನಮ್ಮಂತಹ ಪುಟ್ಟ ಪತ್ರಿಕೆಯಲ್ಲಿ ಆಕಸ್ಮಿಕವಾಗಿ ನುಸುಳಿರಬಹುದಾದ ಒಂದು ಸಣ್ಣ ಲೋಪ ಕುರಿತು ಇಷ್ಟ್ಯಾಕೆ ತಲೆ ಕೆಡಿಸಿಕೊಳ್ತೀರಾ ಭಟ್ರೆ? ನೀವು ಕನ್ನಡದ ಅತ್ಯಧಿಕ ಪ್ರಸಾರದ ದಿನಪತ್ರಿಕೆಯ ಬಾಸ್ ಅಲ್ಲವ..."

"ಇಲ್ಲಿ ಸಣ್ಣ ಪತ್ರಿಕೆ, ದೊಡ್ಡ ಪತ್ರಿಕೆ ಅಂತಲ್ಲ ರೇಷ್ಮೆಯವರೇ, ನಿಮ್ಮಲ್ಲಿ ಆಗಾಗ್ಗೆ ನನ್ನ ವಿಚಾರದಲ್ಲಿ ಇದೇ ತರ ತಪ್ಪು ತಪ್ಪಾಗಿ ನನ್ನನ್ನು ಪರಿಚಯಿಸ್ತಾನೇ ಇರ್‍ತೀರಿ. ಅನಂತಕುಮಾರರು ಕೇಂದ್ರದಲ್ಲಿ ಪ್ರವಾಸೋದ್ಯಮ ಮಂತ್ರಿ ಆಗಿದ್ದಾಗ ನಾನವರ ವಿಶೇಷ ಕರ್ತವ್ಯಾಧಿಕಾರಿ ಆಗಿದ್ದೆನೆ ಹೊರತು ಪಿ.ಎ. ಅಲ್ಲ, ಅದೂ ನನಗೆ ಡೆಪ್ಯುಟಿ ಕಮಿಶ್‌ನರ್ ದರ್ಜೆಯ ಸ್ಥಾನಮಾನ ನೀಡಿದ್ರು ನಿಮಗೆ ಗೊತ್ತಾ?"

"ಹೌದೌದು ನನಗಿದು ಗೊತ್ತಿತ್ತು. ಹಿಂದೆ 2001 ರ ‘ಲಂಕೇಶ್ ಪತ್ರಿಕೆ'ಯಲ್ಲಿ ಬೆಂಗಳೂರಿನ ಅಶೋಕಾ ಹೋಟೆಲ್ಲನ್ನು ಖಾಸಗಿಯವರಿಗೆ ಪರಭಾರೆ ಮಾಡಲಾದ ಹಗರಣ ಕುರಿತು ನಾನು ವರದಿ ಮಾಡಿದಾಗ ನಿಮ್ಮನ್ನು ಓಎಸ್‌ಡಿ ಅಂತಲೆ ಸೂಚಿಸಿದ್ದೆ ಅಂತ ನನಗೆ ಚೆನ್ನಾಗಿ ನೆನಪಿದೆ..."

"ಇರಬಹುದು. ಆಗಲೂ ಅಷ್ಟೆ, ನಾನು ಅನಂತಕುಮಾರರ ವ್ಯಾಪ್ತಿಗೆ ಬರ್‍ತಾ ಇದ್ದ ಆರು ಸಾಂಸ್ಕೃತಿಕ ಪ್ರತಿಷ್ಠಾನಗಳ ಉಸ್ತುವಾರಿಯನ್ನು ಮಾತ್ರ ನೋಡ್ಕೋತಾ ಇದ್ದೆ. ಮುಂದೆ ಅವರೇ ಖಾತೆ ಬದಲಾವಣೆಯಿಂದಾಗಿ ಅರ್ಬನ್ ಡೆವಲಪ್‌ಮೆಂಟ್ ಸಚಿವರಾದಾಗ ಒಂದೇ ವಾರದಲ್ಲಿ ನಾನಲ್ಲಿಂದ ಹೊರಗೆ ಬಂದುಬಿಟ್ಟೆ. ಯಾಕಂದ್ರೆ ನನಗೆ ಈ ರಿಯಲ್ ಎಸ್ಟೇಟು, ಲ್ಯಾಂಡ್ ಡೀಲುಗಳ ಬಗ್ಗೆ ಆಸಕ್ತೀನೆ ಇರ್‍ಲಿಲ್ಲ."

"ಅದಾಯಿತಲ್ಲ ಭಟ್ರೆ, ಇನ್ನೇನಾದ್ರೂ ಸ್ಪಷ್ಟೀಕರಣ ಇದೆಯಾ?"

"ನೀವೇನೂ ಸ್ಪಷ್ಟೀಕರಣ ಹಾಕಬೇಕಿಲ್ಲ, ಆದರೆ ನನ್ನ ಬಗ್ಗೆ ಅಪಾರ್ಥವಾಗದ ಹಾಗೆ ನೋಡಿಕೊಳ್ಳಿ. ನಾನು ಬೆಂಗಳೂರಿನ ಜರ್ನಲಿಸ್ಟ್‌ಗಳ ಪೈಕಿ ಅತಿ ಹೆಚ್ಚಿನ ಯುನಿವರ್ಸಿಟಿ ಡಿಗ್ರಿಗಳನ್ನು ಹೊಂದಿರೋನು ಅನ್ನೋದು ತಮಗೆ ಗೊತ್ತಿರಲಿ... ನಾನು 1986 ರ ಕರ್ನಾಟಕ ಯುನಿವರ್ಸಿಟಿ ಎಂಎಸ್‌ಸಿ ಜಿಯಾಲಜಿನಲ್ಲಿ ಫಸ್ಟ್ ರ್‍ಯಾಂಕ್ ಕೂಡ ತಗೊಂಡಿದ್ದೆ..."

"ಆ ಡಿಗ್ರಿ, ರ್‍ಯಾಂಕುಗಳಿಂದ ನಮ್ಮ ಪತ್ರಿಕೋದ್ಯಮಕ್ಕೆ ಏನು ವ್ಯತ್ಯಾಸ ಆದೀತು ಹೇಳಿ ಭಟ್ರೆ? ನಾನು ಕೂಡ ಅದೇ ಯೂನಿವರ್ಸಿಟಿಯಿಂದಲೆ 1974 ರ ಎಂಎಸ್‌ಸಿ ಬಾಟನಿಯಲ್ಲಿ ಫಸ್ಟ್ ರ್‍ಯಾಂಕ್ ಪಡೆದಿದ್ದೆ... ಸೋ ವಾಟ್?"

"ಹಾಗೇನೆ ನಾನು ವಿ.ಕ.ದ ಸಂಪಾದಕನಾದಾಗಿಂದಲೂ ಅನಂತಕುಮಾರರ ಫೋಟೋ ಬಳಸಿಕೊಂಡು ಮುಖಪುಟದ ವರದಿ ಹಾಕಿದ್ದು ಬರೀ 10-12 ಸಾರಿ ಇದ್ದೀತು ಅಷ್ಟೇ. ಅದರಲ್ಲೂ ಮೊದಲ ಐದು ವರ್ಷ ಅನಂತಕುಮಾರರ ಬಗ್ಗೆ ಫ್ರಂಟ್‌ಪೇಜ್‌ನಲ್ಲಿ ಏನೂ ಬರೀಕೂಡ್ದೂಂತ ನಮ್ಮ ಅಂದಿನ ಪ್ರಕಾಶಕ ವಿಜಯ್ ಸಂಕೇಶ್ವರ್‌ರೇ ನಿರ್ಬಂಧ ವಿಧಿಸಿದ್ರು ಕೂಡ..."

ಒಂದು ಬಾಕ್ಸ್ ಐಟಂನಿಂದಾಗಿ ತಮಗೆ ಅಪಮಾನವಾಯಿತೆಂದು ಹಲುಬುವ ಭಟ್ಟರು, ‘ಅನಂತ ನಿಷ್ಠ’ ಎಂಬ ಆ ಐಟಂನ ಲೇಖಕ- ‘ವಿಕ್ರಾಂತ’ದ ಸಂಸ್ಥಾಪಕ- ಕ್ಯಾಲಿಫೋರ್ನಿಯಾ ನಿವಾಸಿ- ಯುವ ಕನಸುಗಾರ ರವಿ ಕೃಷ್ಣಾ ರೆಡ್ಡಿಯವರ ಚುನಾವಣಾ ರಾಜಕೀಯದ ಶುದ್ಧೀಕರಣದ ಪ್ರಯೋಗವನ್ನು ಮೊನ್ನೆ ಭಾನುವಾರದ ಸಂಪಾದಕೀಯದಲ್ಲಿ ಗೇಲಿಮಾಡಿ ಸಮಾಧಾನ ಮಾಡಿಕೊಂಡಿದ್ದಾರೆ.

ಮೌಲ್ಯಾಧಾರಿತ ಬದಲಾವಣೆಗಾಗಿ ಹಂಬಲಿಸುವ ಪ್ರಾಮಾಣಿಕ ಹೋರಾಟಗಾರರನ್ನು ಹಂಗಿಸುವ ಈ ಹೈ-ಫೈ ಸಂಪಾದಕರು ರೆಡ್ಡಿಯವರಂತೆಯೆ ಅಮೆರಿಕಾದಿಂದ ಸ್ವದೇಶಕ್ಕೆ ಮರಳಿ ಅಧಿಕಾರರೂಢ ಭಾಜಪದ ಅಭ್ಯರ್ಥಿಯಾಗಿ ಚಿತ್ರದುರ್ಗದಿಂದ ಕಣಕ್ಕಿಳಿದಿರುವ ಜನಾರ್ಧನ ಸ್ವಾಮಿಯನ್ನು ಮಾತ್ರ ತಾಯ್ನಾಡಿನ ಋಣ ತೀರಿಸಬಂದ ದೇಶಭಕ್ತನ ಪಟ್ಟಕ್ಕೇರಿಸಿದ್ದಾರೆ!

ರವೀಂದ್ರ ರೇಷ್ಮೆ

ಇಲ್ಲಿಯ ಇನ್ನೊಂದು ಸತ್ಯ ಏನೆಂದರೆ, ನಾನು ಬರೆದಿದ್ದ "ಜಾತಿಅಹಂ, ಸ್ಪೃಶ್ಯ/ಅಸ್ಪೃಶ್ಯ, ನಿಜವಾಗಿ ’ಹಿಂದುಳಿದವರು’, ಒಳಮೀಸಲಾತಿ, ’ಅನಂತ ನಿಷ್ಠ’ ಭಟ್..." ಲೇಖನದಲ್ಲಿ ಎಲ್ಲಿಯೂ ಯಾರನ್ನೂ ಪಿ.ಎ. ಎಂದು ಬರೆದಿರಲಿಲ್ಲ.

ಇದೇ ವಿಷಯದ ಬಗ್ಗೆ ಮತ್ತೊಬ್ಬರು ಬರೆದಿರುವ ಮೂರನೆ ಭಾಗ ಸೋಮವಾರ ಹಾಕುತ್ತೇನೆ.

ವಿಜಯ ಕರ್ನಾಟಕದ ಹೊಗಳು ಭಟ್ಟರು : ಭಾಗ-1

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರವಿ
ಇದು ಈ ವಾರದ ವಿಕ್ರಾಂತದಲ್ಲೂ ಪ್ರಕಟವಾಗಿದೆ....

ನನ್ನಿ
ದೃಶ್ಯ ಪ್ರದೀಪ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಬಹುದು, "ಕನ್ನಡ ಓದುಗರ ಯೋಗ್ಯತೆ ಅಷ್ಟೇ ಕಾಣ್ರಿ" ಎನ್ದು ನೀವು ನೀವು ತೀರ್ಮಾಸಿನಿಸಿಕೊಣ್ಡಿರಬಹುದು.
ಚುನಾವಣಾ ರಾಜಕೀಯದ ಶುದ್ಧೀಕರಣದ ಪ್ರಯೋಗ ಎಲ್ಲೀವರೆಗೆ ಬನ್ದಿದೆ? ಪಿ.ಎ. ಎಂದು ಬರೆದಿರುವುದು ಪ್ರಕಟವಾಗಿತ್ತು. ಬರೆಹದ ಕೊಣ್ಡಿಯನ್ನೀಯುವ ಮುನ್ನ ಎಡಿಟ್ ಮಾಡಿದ್ದೀರೋ ಗೊತ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇವೆಲ್ಲವುಗಳಿ೦ದ ನೀವು ಏನು ಹೇಳ ಹೊರಟಿದ್ದೀರಿ? ಅದನ್ನೇ ಸ್ಪಷ್ಟವಾಗಿ ನಾಲ್ಕು ಸಾಲುಗಳಲ್ಲಿ ಹೇಳಿದರೆ ಅರ್ಥಮಾಡಿಕೊಳ್ಳಲು ಸುಲಭವಾಗಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರು ಹೇಳಹೊರಟಿರುವುದು ಇಷ್ಟೇ - "ವಿ.ಕ.ದಲ್ಲಿ ನೀವು ಏನೇನು ಓದಿದ್ದೀರಾ...ಅದೆಲ್ಲವೂ ಸುಳ್ಳು. ನಿಜವೇನೆನ್ದು ನಾನು ಮತ್ತು ನನ್ನ ಪತ್ರಿಕೆಯ ಸಂಪಾದಕರು ಸೇರಿ ತೋರಿಸಿಕೊಡುತ್ತೇವೆ."

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಜಕೀಯದಲ್ಲಿ ಸಂಪೂರ್ಣ ಬದಲಾವಣೆ ತರಲಿಚ್ಚಿಸುವ ಒಬ್ಬ ಹಾಗೂ ಅವರ ಬಗ್ಗೆ ವೈಯಕ್ತಿಕ ಅಸಮಾಧಾನ ಹೊಂದಿರುವ ಮತ್ತೊಬ್ಬ. ಇಬ್ಬರೂ ಅನುಭವಸ್ಥ ಪತ್ರಿಕೋದ್ಯಮಿಗಳು. ಕ್ರಿಯಾಶೀಲತೆಯಿಂದ ತಮ್ಮನ್ನು ತಾವು ಜನರಿಂದ ಗುರುತಿಸಿಕೊಳ್ಳಬೇಕೆ ಹೊರತು ಈ ರೀತಿಯ ವೈಯಕ್ತಿಕ ಠೀಕೆ ಪ್ರತ್ಯುತ್ತರಗಳಿಂದಲ್ಲ.
ಇದು ಯಾಕೊ ಅತಿಯಾಗ್ತಿದೆ. ಸಂಪದಿಗರ ಸಮಯಕ್ಕೂ ಬೆಲೆ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್ ಹೇಳಿರುವುದು ೧೦೦% ನಿಜ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಹೊಗಳುವುದಕ್ಕೆ ಮುಂಚೆ ಆಗಿರುವ ಮಾತುಕತೆ ಇದು. "ವಿಕ್ರಾಂತ ಕರ್ನಾಟಕ"ದ ಗೌರವ ಸಂಪಾದಕರಾದ ರವೀಂದ್ರ ರೇಷ್ಮೆ ಆ ಪತ್ರಿಕೆಯ ಏಪ್ರಿಲ್ 10, 2009 ರ ಸಂಚಿಕೆಯ ಸಂಪಾದಕೀಯದಲ್ಲಿ ಬರೆದಿರುವ ಬರಹ ಇದು"

ಏಪ್ರಿಲ್ ೧೦ರಂದು ಬರೆಯುವಷ್ಟು ನಿಧಾನ ತೋರಿಸಿದ್ದೇಕೆ? ವಿ ಕ ದಲ್ಲಿ ಹೊ(ತೆ)ಗಳುವಿಕೆಯ ಲೇಖನ ಬಂದಿರುವುದು ದಿನಾಂಕ ಮಾ ೨೯ ಹಾಗು ಏ ೫ ರಂದು. ಏಪ್ರಿಲ್ ೧೦ರ ಸಂಚಿಕೆ ಹೊರ ಬಂದಿದ್ದು ಎಂದು? ಇದರ ಬಗ್ಗೆ ಯಾಕೆ ತಾವು ಪ್ರಶ್ನಿಸಲಿಲ್ಲ?

ಲೇಖನದಲ್ಲಿ ಪಿ.ಎ ಎಂದು ಎಲ್ಲೂ ಬರೆದಿಲ್ಲ ಅನ್ನುವುದಾದರೆ ಭಟ್ಟರು ಆ ಪ್ರಶ್ನೆ ಕೇಳಲು ಕಾರಣ? ಅದು ಸಣ್ಣ ಪತ್ರಿಕೆಯಿಂದಾದ ಸಣ್ಣ ತಪ್ಪು ಎಂದು ಸಂಪಾದಕರು ಯಾಕೆ ಸಮಜಾಯಿಷಿ ಕೊಡಬೇಕಿತ್ತು? ಇಲ್ಲ ಹಾಗೆ ಬರೆದಿಲ್ಲ ಎಂದು ಇದೇ ಕೊಂಡಿ ಕೊಟ್ಟು ತೋರಿಸಬಹುದಿತ್ತಲ್ಲವೇ? ಯಾಕೆ ಸಂಪಾದಕರು ಈ ರೀತಿ ಮಾಡಿದರು ಎಂದು ಯಾಕೆ ಪ್ರಶ್ನಿಸಿಲ್ಲ?

ಯುವ ಕನಸುಗಾರ ರವಿ ಕೃಷ್ಣಾ ರೆಡ್ಡಿಯವರ ಬಗ್ಗೆ ಭಟ್ಟರು ಬರೆದಿರುವ ಬಗ್ಗೆ, ಯುವ ಕನಸುಗಾರರು ಬ್ಲಾಗ್ ಗಳಲ್ಲಿ ಬರೆದಿರುವುದರ ಬಗ್ಗೆ ಯಾಕೆ ಮಾನ್ಯ ಸಂಪಾದಕರು ಏನೂ ಬರೆದಿಲ್ಲ? ಅಥವಾ ಈ ಬ್ಲಾಗ್ ಓದಿ ಮುಂದೆ ಈ ರೀತಿ ಬರೆಯುವರೇನೊ " ಇನ್ನು ಯುವಕರಾದ ಯುವ ಕನಸುಗಾರ ರೆಡ್ಡಿಯವರು ಯಾಕೆ ಭಟ್ಟರ ಹೇಳಿಕೆ ಬಗ್ಗೆ ಈ ರೀತಿ ತಲೆ ಕೆಡಿಸಿಕೊಂಡಿದ್ದಾರೊ ಗೊತ್ತಗುತ್ತಿಲ್ಲ"

ಭಟ್ಟರ ಎರಡು ಚಿಕ್ಕ ಲೇಖನಗಳ ಬಗ್ಗೆ ತಾವು ಯಾಕೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದೀರಿ? ಒಮ್ಮೆ ತಾವು ಹೇಳಿಲ್ಲವೆ " Last Laugh will be mine" ನೋಡೋಣ ಬಿಡಿ, ಯಾರದ್ದು "LAst Laugh " ಮತ್ತು ಯರಾದ್ದು "Lost Laugh" ಎಂದು. ಭಟ್ಟರ ಹೇಳಿಕೆಯನ್ನ ಚಾಲೆಂಜ್ ಆಗಿ ತೆಗೆದುಕೊಂಡು ಚುನಾವಣೆಗೆ ನಿಲ್ಲಿ, ಇಲ್ಲ ನಾನು Disappoint ಮಾಡಿಲ್ಲ ಎಂದು ಪ್ರತಿ ಸವಾಲು ಹಾಕಿ, ನಿಮ್ಮ ರಾಜಕೀಯದ ಶುದ್ದಿಕರಣದ ಪ್ರಯತ್ನ ಕೇವಲ ಒಂದು ಚುನಾವಣೆಗೆ ಸೀಮಿತ ಅಲ್ಲ ಎಂದು ನಿರೂಪಿಸಿ. ಇಡೂಗಂಟು ಹೋದರು ಪರವಾಗಿಲ್ಲ ೨೪೪ ವೋಟ್ ಸಿಕ್ಕಿದೆ ಚಿನ್ಹೆ ಬದಲಾದರೂ ಎಂದು ಹೇಳಿ. ಇಬ್ಬರೂ ಒಟ್ಟಿಗೆ ಒಂದೇ ಕ್ಷೇತ್ರದಲ್ಲಿ ಸ್ಪ್ರಧಿಸೋಣ, ನಮ್ಮಿಬ್ಬರಲ್ಲಿ ಯಾರಿಗೆ ಹೆಚ್ಚು ಮತ ಹುಟ್ಟುತ್ತೆ ನೋಡೋಣ ಎಂದು ಅಹ್ವಾನ ನೀಡಿ. ಸುಮ್ಮನೆ ಬ್ಲಾಗ್ ನಲ್ಲಿ /ಪತ್ರಿಕೆ ಗಳಲ್ಲಿ ಬರೆಯುವುದಕ್ಕಿಂತ ಇದು ಯೋಗ್ಯ ಮಾರ್ಗ. ಜನರೇ ತೀರ್ಮಾನಿಸಲಿ.