ನೋಡು ಬಾ ನಮ್ಮೂರ!..............೮

4.75

ಮಾಂಟೆರೇ -ಸಲಿನಾಸ್ ಏರಿಯಾದಲ್ಲಿ ವಿಧ-ವಿಧವಾದ ಸುಂದರ ಲ್ಯಾಂಡ್-ಸ್ಕೇಪ್ ಗಳನ್ನೂ ನೋಡಬಹುದು. ಮನೆಗಳ ಲ್ಯಾಂಡ್ ಸ್ಕೇಪ್ ಕೂಡಾ ಬೇರೆ ಪಟ್ಟಣಗಳಿಗಿಂತ ಭಿನ್ನವಾಗಿರುತ್ತದೆ. ನನ್ನ ಮೆಚ್ಚಿನ ಒಂದು ಚಿತ್ರ ಇಲ್ಲಿದೆ. ಈ ಮನೆಯ ಮುಂದೆ ಸುತ್ತಲೂ ಹೂವಿನ ಗಿಡಗಳಿವೆ. ಇದು ನನ್ನ ಕಛೇರಿಗೆ ಹೋಗುವ ಮಾರ್ಗದಲ್ಲಿದೆ. ಹಾಗಾಗಿ ದಿನವೂ ನೋಡಿ ಅನುಭವಿಸಿ ಸಂತೋಷಪಟ್ಟಿದ್ದೇನೆ. ಮನೆಯ ಮುಂದೆ ಇರುವ ಪಿಂಕ್ ಹೂವುಗಳು ಸಣ್ಣ ಗಿಡಗಳ ಮೇಲೆ ಎಲೆ ಮತ್ತು ಗಿಡ ಕಾಣಿಸದ ಹಾಗೆ ಬಹಳ ಹೆಚ್ಚಿನರೀತಿಯಲ್ಲಿ ಹೂವು ಬಿಡುತ್ತದೆ. ವರ್ಷಕ್ಕೆ ಎರಡು ಸಾರಿ ಹೂವು ಬಿಡುವುದು. ಈ ಗಿಡಗಳಿಗೆ ಸಾಮಾನ್ಯವಾಗಿ ಕರೆಯುವ ಹೆಸರು "ಐಸ್ ಪ್ಲಾಂಟ್ " ಅಂತ. ಇದರಲ್ಲಿ ಬೇರೆ, ಬೇರೆ ಜಾತಿ ಗಿಡಗಳಿವೆ. ಹಾಗೇ ಹಲವಾರು ಬಣ್ಣಗಳ ಹೂವಿವೆ. ಹೀಗೇ ಒಂದು ದಿನ ಸೆರೆಹಿಡಿದು ಇಲ್ಲಿ ಹಾಕಿದೆ. (ನಿಮಗೆ ತೋರಿಸಲು).

ಚಿತ್ರ: ನಾನೇ ಸೆರೆಹಿಡಿದಿದ್ದು ನನ್ನ ಬ್ಲಾಕ್ಬೆರಿಯಿಂದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದನ್ನು ನೋಡಿದಾಗ ನನಗೆ ನೆನಪಿಗೆ ಬಂದಿದ್ದು "ದೂರ ಬೆಟ್ಟದಲ್ಲಿ ಪುಟ್ಟ ಮನೆ ಇರಬೇಕು, ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು" . (ಮೇಲೆ ಬರೆಯಲು ಮರೆತು ಹೋಗಿತ್ತು). ~ಮೀನಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಂಚು ನಮ್ಮಲ್ಲಿರುವ ನಾಡ ಹೆಂಚಿನಂತೆಯೇ ಇದ್ದಂತಿದೆ.ಮನೆ ಮುಂದೆ ಹಸಿರು ಮರಗಳು ಕಾಣುತ್ತಿವೆಯಲ್ಲಾ, ಅವು ಮನೆ ಮುಂದೆ ಬೇಲಿಯಲ್ಲಿವೆಯೋ? ಅಥವಾ ಕಾಂಪೌಂಡ್ ಒಳಗೆ ಇವೆಯೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಶ್ರೀಧರ್ ಮತ್ತು ಮಾಲತಿಯವರೆ,

ಹೌದು ನಮ್ಮ ಊರಿನಂತೆ ನಾಡ ಹಂಚು ಹಾಕುವುದು ಇಲ್ಲಿ ರೂಡಿ ಇದೆ. ಹಂಚಿನ ಕೆಳಗೆ ಗಳುಗಳು ಇರುವುದಿಲ್ಲ, ಮರದ (ವುಡ್ ಶೀಟ್ ) ಶೀಟ್ ಇರುತ್ತೆ. ಇಲ್ಲಿ ಮನೆಗಳನ್ನು ಪೂರ್ತಿ ವುಡ್ ನಲ್ಲೇ ಕಟ್ಟುತ್ತಾರೆ ನಮ್ಮ ತರ ಕಾಂಕ್ರೀಟ್ , ಇಟ್ಟಿಗೆ ಜಾಸ್ತಿ ಉಪಯೋಗಿಸುವುದಿಲ್ಲ.
~ಮೀನಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಸುಂದರವಾಗಿದೆ......ಇಂತ ವಾತಾವರಣ ಮನೆಯ ಸುತ್ತ ಮುತ್ತ ಇದ್ದರೆ ಮನಸ್ಸಿಗೆ ಎಷ್ಟೊ ಸಮಾಧಾನ...ನೀವೆ ಪುಣ್ಯವಂತ್ರು.....ದಿನವು ನೋಡುವ ಸೌಭಾಗ್ಯ ನಿಮ್ಮದು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಮೀನಾಕ್ಕ .

ನಳನಳಿಸುತ್ತಿರುವ ಹೂವಿನಲಿ
ಹೂವಾಗಿ ಗುಯ್ ಗುಡುತ್ತ
ಬರುವ ಜೇನಿನೊಂದಿಗೆ
ಮುತ್ತಿಡುವ ಆಸೆ

ಸೂರ್ಯನ ಬೆಳಗಿನ
ಕಿರಣಗಳಳೊಂದಾಗಿ
ಆ ಹೂವಿನ ಎದೆಯಾಳದೊಳಗಿಳಿಯುವಾಸೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.