rasikathe ರವರ ಬ್ಲಾಗ್

ಕಾಣೆಯಾದ ಕಾಗದಗಳು !!!

ಕಾಣೆಯಾದ ಕಾಗದಗಳು


ಕಾಗದಗಳು ! ಅರ್ಥಾತ್ ಕಾಗದದ ಕಾಗದಗಳು (ಪೇಪರ್ ಲೆಟರ್ಸ್) ಮರೆಯಾಗಿ ಹೋಗಿವೆ. ಈ- ಪತ್ರಗಳ ಕಾಟದಿಂದ ಅವುಗಳು ಔಟ್ ಡೇಟೆಡ್ ಆಗಿ ಸತ್ತು ಹೋಗಿವೆ. ಅದನ್ನು ನೆನೆಸಿಕೊಂಡರೆ ಒಂದು ತರಹ ವ್ಯಥೆಯಾಗುವುದಷ್ಟೇ ಅಲ್ಲ, ಭಾವುಕತೆ ಕಟ್ಟೆ ಒಡೆದು ಕಣ್ಣಿನಲ್ಲಿ ನೀರೇ ಬರುತ್ತೆ. ಕಾಗದಗಳು ಎಷ್ಟೊಂದು ಎಮೋಶನಲ್ ಅಂದರೆ, ನೀವು ಹಳೆಯದೊಂದು ಪತ್ರವನ್ನು ಓದಿ ನೋಡಿ, ಆಗ ಅನುಭವವಾಗುತ್ತೆ. ಕೈಬರಹದಿಂದ ಬರೆದ ಕಾಗದಗಳು ವಿಷಯವಷ್ಟೇ ಅಲ್ಲ,  ಭಾವನೆಗಳನ್ನು ಕಟ್ಟಿ, ಒದುವಾಗ ಒಂದು ದೃಶ್ಯವನ್ನೇ ತರಿಸುವಂತಹ ಶಕ್ತಿಯನ್ನು ಹೊಂದಿರುತ್ತಿದ್ದವು. ಮನಸ್ಸಿನ ಮೇಲೆ ಪರಿಣಾಮ ಬೀರುವುದರಲ್ಲೂ ಯಶಸ್ವಿಯಾಗಿದ್ದವು. ಕಾಗದಗಳ ನೆನಪಿನ ದಾರಿಯಲ್ಲಿ ಪಯಣಿಸಿದಾಗ........

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (6 votes)
To prevent automated spam submissions leave this field empty.

ರೂಢಿ ನಾಮ .....3

ರೂಢಿ ನಾಮ .....ಮುಂದುವರೆದ ಭಾಗ !

ಅಮ್ಮಾಲಿಯ ಅಪ್ಪಟೆಮೂಗಿನ ವಿಷಯ ಹೇಳುತ್ತಿದ್ದೆ ಕಡೆಯ ಸಂಚಿಕೆಯಲ್ಲಿ. ಅವರಿಗೆ "ಅಪ್ಪಟೆ ಮೂಗಿನ ಚಪ್ಪಟೆ ಚಿಟ್ಟೆ" ಅಂತ ಕರೆಯುತ್ತಿದ್ದರು ಹುಡುಗರೆಲ್ಲ. ಅಮ್ಮಾಲಿ ಹೀಗೇ ಒಂದು ದಿನ ಮಲ್ಲಿಗೆ ಹೂವಿನ ಸುವಾಸನೆ ಸವಿಯುತ್ತಿರುವಾಗ, ಹೂವಿನೊಳಗಿರುವ ಹುಳ ಹೊೞೆಗೆ ಹೋಗಿ ಮೂಗಿನ ಮಧ್ಯೆ ಗೋಡೆಯನ್ನು ತಿಂದು ಹಾಕಿತು ಅಂತ ಪ್ರತೀತಿ ಇದೆ.( ಅರ್ಥಾತ್ ಹಾಗಂತ ಹೇಳುವುದು ರೂಢಿಯಲ್ಲಿದೆ). ಅಂದಿನಿಂದ ಮೂಗು ಅಪ್ಪಟೆಯಾಯಿತಂತೆ. ಈ ವಿಷಯ ಇಲ್ಲಿಗೇ ಬಿಡೋಣ...ರೂಢಿನಾಮಕ್ಕೆ ಬರೋಣ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ರೂಢಿ ನಾಮ ! ಭಾಗ -೨

ರೂಢಿ ನಾಮ ! ಭಾಗ -೨

ಅಚ್ಚಣ್ಣಿ, ನಿಂಗಣ್ಣಿ ಅವರ ಗುಂಪಿಗೆ ಇನ್ನಷ್ಟು ಹೆಸರುಗಳನ್ನು ಸೇರಿಸುವುದು ಮರೆತಿದ್ದೆ. ಪುಟಾಣಿ, ಪೂಣಿ- ಪುಟಾಣಿ ಅನ್ನೋವ್ರು ಅವರ ಮನೆಗೆ ಬೇಬಿಯಾಗಿದ್ದರು ಅಂತ ಕಾಣತ್ತೆ. ಸಣ್ಣವಳಿದ್ದಾಗಿಂದ "ಪುಟಾಣಿ" ಅಂತ ಕರೆದ್ರು, ದೊಡ್ಡವಳಾದಮೇಲೂ ಪುಟಾಣಿ ಅಂತ ಕರೆದ್ರು, ಹಾಗೇ ಕರೀತಲೇ ಇದ್ದರು. ಪುಟಾಣಿಗೆ ಮದುವೆಯಾಗಿ, ಒಂದಷ್ಟು ಪುಟಾಣಿಗಳು ಹುಟ್ಟಿ, ಅವುಕ್ಕೆಲ್ಲಾ ಮದುವೆಯಾಗಿ, ಇನ್ನಷ್ಟು ಪುಟಾಣಿಗಳು ಹುಟ್ಟಿದಮೇಲೂ ಪುಟಾಣಿ "ಪುಟಾಣಿ" ಯಾಗೇ ಉಳಿದರು. ನಾನು ನೋಡಿದಂತೆ "ಪುಟಾಣಿ" ದೊಡ್ಡದಾಗೇ ಇದ್ದರು (ಗಾತ್ರದಲ್ಲಿ). ಮೆದುಳಿನ ಗಾತ್ರ ಚಿಕ್ಕದಿತ್ತೇನೋ???

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ರೂಢಿ ನಾಮ ! ! Nick Name !

 

ತಲೆ ಬರಹ ಈ ಲೇಖನಕ್ಕೆ ಸರಿಯಾಗಿ ಕೊಟ್ನೋ ಇಲ್ಲವೋ ಗೊತ್ತಾಗ್ತಿಲ್ಲ. ಆದರೇನು, ಹೇಳಿ ಕೇಳಿ ಬರೆಯುತ್ತಿರುವುದು "ರೂಡಿ ನಾಮದ" ಮೇಲೆ ಅಂದಮೇಲೆ ಏನಾದರೇನು "ತಲೆ ಬರಹ", ಅದೇ ನಮ್ಮ ರೂಡಿಯಲ್ಲವೇ? ಈ ಲೇಖನ ಓದುವ ಮೊದಲು ನನ್ನ ಹಿಂದಿನ ಹೆಸರುಗಳ ಮೇಲಿನ ಲೇಖನ ವನ್ನು ಓದಿ "ಹೆಸರಿನ ಹಸಿರು" ಇದನ್ನೋದಿ. ಹೆಸರುಗಳ ಬಗ್ಗೆ ಎಷ್ಟು ಬರೆದರೂ ತಮಾಷೆ ಇದ್ದೇ ಇರುತ್ತದೆ. ಹೆಸರಿನ ಹಸಿರಲ್ಲಿ ವಿವಿಧ ಹೆಸರುಗಳ ಮೋಜುಗಳನ್ನ ಬರೆದಿದ್ದೆ. ಇದರಲ್ಲಿ ರೂಡಿ ನಾಮ ಅಂದರೆ, ನಿಕ್ ನೇಮ್ ಅಂತ ಇಂಗ್ಲೀಷ್ ನಲ್ಲಿ ಹೇಳ್ತೀವಲ್ಲ ಅದರ ಬಗ್ಗೆ ಸ್ವಲ್ಪ ಉಲ್ಲೇಖಿಸಿ ಮಜಾ ತಗೋಳಣಾ ಅಂತ ಅನ್ನಿಸ್ತು. ಸರಿಯಾಗಿದೆ ಅಲ್ವೇ "ನಾಣಿ ಯವರೆ" ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಮಕ್ಕಳ ಆರೋಗ್ಯ.....೨ ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್!

ಮಕ್ಕಳ ಆರೋಗ್ಯ.....೨ಫೀಟಲ್ ಆಲ್ಕೋಹಾಲ್ ಸಿಂಡ್ರೋಮ್!ಗರ್ಭಿಣಿಯಾದಾಗ ಸರಿಯಾದ ಆಹಾರ ಸೇವಿಸಬೇಕು, ಮಗುವಿನ ಬೆಳವಣಿಗೆ ಮತ್ತು ಆರೋಗ್ಯ ಚೆನ್ನಾಗಿರುವುದಕ್ಕೆ. ಮಗುವಿನ ಎಲ್ಲಾ ತರಹ ಬೆಳವಣಿಗೆ, ಉತ್ತಮವಾದ ಭೌತಿಕ (ಫಿಸಿಕಲ್) ಮತ್ತು ಮಾನಸಿಕ ಬೆಳವಣಿಗೆಗಳಿಗೆ ಪೌಷ್ಟಿಕವಾದ ಆಹಾರ ಅತ್ಯವಶ್ಯಕ. ಅಷ್ಟೇ ಅಲ್ಲದೆ, ಯಾವುದೇ ತರಹ ಟಾಕ್ಸಿಕ್ ಅಂಶಗಳನ್ನೂ ಸೇವಿಸಬಾರದು( ಆಲ್ಕೋಹಾಲ್, ಸಿಗರೇಟ್, ಡ್ರಗ್ಸ್(ಹಿರೋಯಿನ್, ಆಮ್ಫೆಟಮಿನ್ ಮುಂತಾದವು). ಇದರಿಂದ ಬೆಳೆಯುವ ಮಗುವಿನ ಮೇಲೆ ದುಶ್ಪರಿಣಾಮ ಉಂಟಾಗಿ ಮಗುವಿಗೆ ಬುದ್ಧಿ ಮಾಂದತೆ ( ಮೆಂಟಲ್ ರಿಟಾರ್ಡೇಶನ್), ಅಂಗಾಂಗಗಳ ಕೊರತೆ, ಮತ್ತು ಬೌತಿಕ ಬೆಳವಣಿಗೆಯ ಕೊರತೆ, ಇನ್ನೂ ಮುಂತಾದ ದುಶ್ಪರಿಣಾಮಗಳು ಆಗುವ ಸಾಧ್ಯತೆ ಹೆಚ್ಚಾಗಿರುತ್ತೆ.ಗರ್ಭಿಣಿಯಾದಾಗ ಆಲ್ಕೋಹಾಲ್ ಸೇವಿಸುವುದರಿಂದ ಮಗುವಿಗೆ ಉಂಟಾಗುವ ಒಂದು ಸಿಂಡ್ರೋಮ್ ಗೆ "ಫೀಟಲ್ ಆಲ್ಕೋಹಾಲ್" ಎಂದು ಹೆಸರು. ಯಾವುದೇ ತರಹ ಆಲ್ಕೋಹಾಲ್, ಎಷ್ಟೇ ಪ್ರಮಾಣದ್ದಾದರೂ ಮಗುವು ಇದಕ್ಕೆ ತುತ್ತಾಗಬಹುದು. ಒಂದು ಸಂಶೋಧನೆಯ ಪ್ರಕಾರ ಗರ್ಭಿಣಿಯಾದಾಗ ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

Pages

Subscribe to RSS - rasikathe ರವರ ಬ್ಲಾಗ್