ಎನ್ ಡಿ ಏ ಬೆಂಬಲಿಗರಿಗೆ ಚುನಾವಣೆ ಸಾದರ ಪಡಿಸಿದ ರಿಯಾಲಿಟಿ ಶೊ

3

ಮೊನ್ನೆ ಚುನಾವಣೆಯಲ್ಲಿ ಯೂ ಪಿ ಏ ಅನಿರೀಕ್ಷಿತ ಜಯಭೇರಿ ಹೊಡೆದ್ದದ್ದು ಎನ್ ಡಿ ಏ ಹಿಂಬಾಲಕರಿಗೆ ಸಹಿಸಲಾಗದ ನಿರಾಶೆ ಮತ್ತು ಕಳವಳ ಅಪೇಕ್ಷಿತ ರೀತಿಯಲ್ಲೆ ಉಂಟಾಗಿದೆ. ನನ್ನ ಸ್ನೇಹಿತರ ಗುಂಪಿನಿಂದ ಕೇಳಿಬಂದದ್ದರ ಸಾರಂಶ ಇದು. "ಅಂತೂ ನಮ್ಮ ದೇಶದ ಜನರಿಗೆ ಯಾವಾಗ್ ಬುದ್ದಿ ಬರುತ್ತೋ ಆ ದೇವ್ರಿಗೆ ಗೊತ್ತು. ಅರವತ್ತು ವರ್ಷಗಳ ಕಾಲ ದೇಶವನ್ನು ಹಾಳು ಮಾಡಿದ ಕಾಂಗ್ರೆಸ್ಸಿಗೆ ಮತ್ತೆ ಮತ ನೀಡಿದ್ದಾರೆ. ಎಲ್ಲಿ ವರೆಗೆ ನಮ್ಮ ’ಅನಕ್ಷರಸ್ತ ಮತ್ತು ಅವಿವೇಕಿ’ ಮತದಾರರು ತಮ್ಮ ಮತವನ್ನು ಈ ರೀತಿ ಮಾರಿಕೊಳ್ಳುತ್ತಾರೊ ಅಲ್ಲಿವರೆಗೂ ನಮ್ಮ ದೇಶ ಉದ್ದಾರ ಆಗಲ್ಲ. ಇನ್ನು ಟೆರರಿಸ್ಟ್ ಅಟ್ಯಾಕ್ ಒಂದರ ಮೇಲೆ ಒಂದರಂತೆ ಶುರುವಾಗತ್ತೆ ನೋಡ್ತಾ ಇರಿ". ಈ ಮಾತು ಕೇಳಿದಾಗ ನನಗನ್ನಿಸಿದ್ದು ಇದು.

ಇಂಗ್ಲಿಶ್ ಭಾಷೆಯಲ್ಲಿ ಬಳಸುವ ಒಂದು ಪದ "ಕಲೆಕ್ಟೀವ್ ವಿಸ್ಡ್ಂ". ಅಂದರೆ ಹೆಚ್ಚು ಜನರು ಸೇರಿ ತೆಗೆದುಕೊಂಡ ನಿರ್ಧಾರ ಹೆಚ್ಚು ಸೂಕ್ತವೂ ಮತ್ತು ಪಕ್ವವೂ ಆಗಿರುತ್ತದೆ. ಈ ಚುನಾವಣೆಯಲ್ಲಿ ಭಾರತದಾದ್ಯಂತ ಸರಾಸರಿ ಹೆಚ್ಚಿನ ಮತದಾರರು ನೀಡಿರುವ ನಿರ್ಧಾರ ಇದು. ’ಇಂದಿನ ಸಂದರ್ಭದಲ್ಲಿ ತಮ್ಮ ಪ್ರತಿನಿಧಿಯಾಗಿ ಲೋಕಸಭೆಗೆ ಹೋಗಲು ಹೆಚ್ಚು ಸಮರ್ಥರಾದವರು ಯೂ ಪಿ ಯೆ’. ಎನ್ ಡಿ ಏ ಬೆಂಬಲಿಗರ ಕಣ್ಣಿಗೆ ಕಾಣುವ ದೇಶದ ಸಮಸ್ಯೆಗಳು, ಭಾರತದ ಬಹು ಪಾಲು ಜನರ ಕಣ್ಣಿನಲ್ಲಿ ಪ್ರಧಾನವಾದ ಸಮಸ್ಯೆಗಳಾಗಿರಲ್ಲಿಲ್ಲ.
ಆದ್ದರಿಂದ ಅವರು ಎನ್ ಡಿ ಎ ಕಡೆ ಆಕರ್ಷಿತರಾಗಲಿಲ್ಲ. ಪ್ರಜಾಪ್ರಭುತ್ವದ ಮೂಲ ಸಿದ್ಧಾಂತವೇ ಇದಲ್ಲವೆ? ಬಹುಮತಕ್ಕೆ ಆದ್ಯತೆ.

ಎನ್ ಡಿ ಎ ಬೆಂಬಲಿಗರಿಗೆ ಭಾರತದ ಪ್ರೌಢ ಮತದಾರನ ಮತ ಬೇಕಿದಲ್ಲಿ ಅವರ ಸಮಸ್ಯೆಗಳನ್ನು, ಆಸೆ-ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು, ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿ, ಗೆದ್ದು ಬಂದಲ್ಲಿ ಮಾತಿಗೆ ತಪ್ಪದೆ ಪಾಲಿಸಬೇಕು. ಎನ್ ಡಿ ಎ ಮುಖ ಪಕ್ಷ ಭಾಜಪ ಮಾಡಿದ್ದು ಏನೆಂದರೆ ಇಡಿ ಭರತದ ಹೆಚ್ಚಿನ ಜನಸಮೂಹದ ಹಿತದ ಬಗ್ಗೆ ಯೋಚಿಸುವ ಬದಲು ಚುನಾವಣೆಯಲ್ಲಿ ಜಯಗಳಿಸಲು ಹಿಂದುಗಳನ್ನೆಲ್ಲ ಒಂದೆಡೆ ಸೇರಿಸಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ತಂತ್ರ ಬಳಸಿದರು. ಹಿಂದುಗಳ ಅಭಿಮಾನ ಮತ್ತು ರಾಮಮಂದಿರ - ಇಂತಹ ಸಮಸ್ಯೆಗಳು ದೇಶದ ಬಹುಜನರ ಸಮಸ್ಯೆಯಾಗದೆ ಹಿಂದುಗಳನ್ನು ಒಂದೆಡೆಗೆ ಆಕರ್ಷಿಸಲು ಬಳಸಿದ ತಂತ್ರವೆಂದು ನಾನು ಹೇಳಬೇಕಿಲ್ಲ. ಅಷ್ಟೇಕೆ ಅವರು ಅಧಿಕಾರಕ್ಕೆ ಬಂದಾಗ ಈ ವಿಷಯಗಳನ್ನು ಮೂಲೆಗೆ ನೂಕಿದ್ದು ಇದಕ್ಕೆ ಸಾಕ್ಷಿಯಾಗಿವೆ. ಈ ಮಧ್ಯೆ ಆಗಾಗ ನಡೆಯುತ್ತಿದ್ದ ಆತಂಕವಾದಿಗಳ ಹೇಯ ಕೃತ್ಯಗಳು ಭಾಜಪಕ್ಕೆ ಇನ್ನೊಂದು ಅಸ್ತ್ರವನ್ನು ನೀಡಿತು. ’ದೇಶದ ಭದ್ರತೆಯನ್ನು ಕಾಪಾಡಲು ಕಾಂಗ್ರೆಸ್ ಪಕ್ಷ ಅಶಕ್ತವಾದುದು ಅಥವ ಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್ ವೋಟ್ ಬ್ಯಾಂಕ್ ಪಾಲಿಸಿಯಿಂದಾಗಿ ದೇಶದ್ರೋಹಿಗಳಾಗಿದ್ದರು ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ. ನಾವಾದರೆ ದೇಶದ್ರೋಹಿ ಎಂದು ಅನುಮಾನಿಸಲು ಒಂದು ಸಣ್ಣ ಸಾಕ್ಷಿ ಸಿಕ್ಕರೂ ಸಾಕು ಅವರನ್ನು ಒದ್ದು ಜೈಲಿಗೆ ಹಾಕಲು ಮುಲಾಜು ನೋಡುವುದಿಲ್ಲ. ನಮಗೆ ಮತ ಹಾಕಿ.’ ಮುಂಬೈ ಧಾಳಿ ಆದಮೇಲಂತೂ ನಮಗೆ ಓಟು ಹಾಕುವುದರಲ್ಲಿ ಸಂದೇಹವೇ ಇಲ್ಲ ಎಂದುಕೊಂಡು ಭಾಜಪ ಚುನಾವಣೆಗೆ ಹೋದರು.

ಆದರೆ ಚುನಾವಣೆಯ ಪಲಿತಾಂಶ ತೋರಿದ ವಾಸ್ತವಿಕತೆಯೇ ಬೇರೆಯಾಗಿತ್ತು. ಇದನ್ನು ಭಾಜಪ ಅರ್ಥಮಾಡಿಕೊಂಡರೆ ಮುಂದಿನ ಚುನಾವಣೆಗಳಾಲ್ಲಿ ಮತದಾರಳ/ನ ಮನ ಓಲೈಸುವುದರಲ್ಲಿ ಯಶಸ್ವಿ ಆಗಬಹುದು. ಅಥವ ’ಈ ಮಧ್ಯ ಪಂತದ ಸಹವಾಸವೇ ಬೇಡ’ ಎನ್ನುತ್ತ ಭಾಜಪ ಸಂಪೂರ್ಣವಾಗಿ ಹಿಂದುತ್ವವಾದ ಕಡೆಗೆ ವಾಲಿಬಿಟ್ಟರೆ ಅದೊಂದು ದೊಡ್ಡ ದುರಂತ. ಕಾದು ನೋಡಬೇಕು.

ಆದರೆ ಭಾರತೀಯ ಮತದಾರರು ದೂರದೂರ ಪ್ರದೇಶಗಳಲ್ಲಿದ್ದರೂ, ಬೇರೆ ಬೇರೆ ಸಮಯಗಳಲ್ಲಿ ಮತ ಚಲಾಯಿಸಿದರೂ ಸಮಾನ ಮನಸ್ಕರಾಗಿ ಮತ ಚಲಾಯಿಸಿರುವುದು ವಿಸ್ಮಯಕಾರಿಯಾದುದು.

ಮತದಾರ ಪ್ರಭುವಿಗೆ ಅಭಿನಂದನೆಗಳು.

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ವಿಶ್ಲೇಷಣೆ ಚೆನ್ನಾಗಿದೆ. ಆದರೂ ಯು ಪಿ ಎ ಗೆಲ್ಲಲು ಅದೃಷ್ಟವೇ ಕಾರಣ ಎಂದೂ ಅನಿಸುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಶೋಕ್,
ಅನ್ಯರ ಋಣಾತ್ಮಕ ಅಂಶಗಳು "ಯುಪಿಏ"ಗೆ ಗುಣಾತ್ಮಕವಾದಂತಿದೆ
ಇವರದೇ ಆದ ಋಣಾತ್ಮಕ ಅಂಶಗಳು ಈ ಬಾರಿ ಗೌಣವಾದಂತಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿ ಮತದಾರನೂ ಅಭ್ಯರ್ಥಿ,ಪಕ್ಷ,ಆಮಿಷ, ತನಗೆ ಸಿಕ್ಕಿರುವ ಹಣ-ಹೆಂಡ,ಜಾತಿ-ಧರ್ಮ ಇವುಗಳ ಪೈಕಿ ಯಾವುದೋ ಒಂದರ ಆಧಾರದ ಮೇಲೆ ಮತ ಚಲಾಯಿಸುತ್ತಾನೆ. ಆದರೆ ಕೊನೆಗೆ ಒಟ್ಟಾರೆ ಫಲಿತಾಂಶ ನೋಡುವಾಗ ಅಚ್ಚರಿ ಮೂಡಿಸುವ trend ಕಾಣುತ್ತದೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಶ್ಲೇಷಣೆ ಬರೀ ಥಿಯರಿ ...ಥಿಯರಿ... ಪ್ರಾಕ್ಟಿಕಲ್ ಇಲ್ಲ.

<<ಅಂದರೆ ಹೆಚ್ಚು ಜನರು ಸೇರಿ ತೆಗೆದುಕೊಂಡ ನಿರ್ಧಾರ ಹೆಚ್ಚು ಸೂಕ್ತವೂ ಮತ್ತು ಪಕ್ವವೂ ಆಗಿರುತ್ತದೆ.>>
ಸೂಕ್ತವಾಗುವುದಿದ್ದರೆ ಅಷ್ಟೊಂದು ಕ್ರಿಮಿನಲ್ ಗಳು ಏಕೆ ಆರಿಸಿ ಹೋಗುತ್ತಿದ್ದರು ? ಕೊಲೆಗಾರು ಅಪರಾಧಿಗಳು ಹೇಗೆ ಸಂಸತ್ ಕಟ್ಟೆ ಹತ್ತುತ್ತಿದ್ದರು ?

ಬಿಜೆಪಿ ಹಿಂದೂ ಮಾತ್ರವಲ್ಲ ಸ್ವಿಸ್ ಬ್ಯಾಂಕ್ ಹಣ ಸಾಲ ಮನ್ನಾ ಭಯೋತ್ಪಾದನೆಯ ವಿರುದ್ಧ ಕ್ರಮ ಇತ್ಯಾದಿ ವಿಚಾರಗಳು ಪ್ರಣಾಳಿಕೆಯಲ್ಲಿದ್ದವು. ಐಡಿಯಲ್ ಎಂಬಂತಹ ಸಮಯದಲ್ಲಿ ಇವೆಲ್ಲ ವಿಶ್ಲೇಷಣೆಗಳು ಸರಿ. ನಮ್ಮ ದೇಶದಲ್ಲಿ ಹಣ, ಹೆಂಡ, ಸೀರೆ, ಸೈಕಲ್, ಅಭಿಮಾನಿ ಸಂಘಗಳು, ಜಾತಿ, ಮೀಸಲಾತಿ ಇತ್ಯಾದಿಗಳು ಇದ್ದಾವೆ. ಹಣ ಹೆಂಡ ಹಂಚಲು ಒಪ್ಪದ ರೇವು ನಾಯಕನಂತಹ ಪ್ರಾಮಾಣಿಕ ನಾಯಕರು ಸೋತು ಹೋದರು.

ನಮ್ಮ ವ್ಯವಸ್ಥೆ ಏ ಖೊಟ್ಟಿ. ಅದರಲ್ಲಿ ಚುನಾವಣಾ ಎಂಬುದು ದೊಡ್ಡ ಜೋಕು. ಅಭಿವೃದ್ಧಿ ಎಂಬುದು ಮರೀಚಿಕೆ. ಯಾರು ಬಂದರೇನು ? ವ್ಯವಸ್ಥೆ ಬದಲಾಗದೆ ದೇಶ ಮುಂದುವರಿಯುವುದಿಲ್ಲ. ಪ್ರಫುಲ್ಲ ಕುಮಾರ್ ಮಹಂತ ರಂಥವರನ್ನೇ ಭ್ರಷ್ಟರನ್ನಾಗಿ ಮಾಡಿದ ವ್ಯವಸ್ಥೆ ನಮ್ಮದು. ಡ್ರೈವರ್ ಹೇಗಿದ್ದರೇನು ? ಬಸ್ ನೆಟ್ಟಗಿಲ್ಲದೆ ಓಡಿಸಲಾದೀತೇ ?

" Public has no mind " ಎಂಬುದು ಎಲ್ಲೆಡೆ ಉದ್ರುತವಾದ ಮಾತು. ಅದು ಭಾರತದ ಚುನಾವಣೆ ಮಟ್ಟಿಗಂತೂ ನಿಜ. ಬಿಜೆಪಿ ಬರಬೇಕಿತ್ತು ಎಂದು ನಾನು ಹೇಳುತ್ತಿಲ್ಲ. ಅವರಲ್ಲೂ ಕ್ರಿಮಿನಲ್ ಗಳಿದ್ದಾರೆ. ಆದರೆ ಕಾಲು ಭಾಗ ಸಂಸದರು ಅಪರಾಧಿಗಳಾಗಿರುವುದು ನಮ್ಮ ಜನತೆ ಎಷ್ಟು ಬುದ್ದಿವಂತರು ಎಂಬುದಕ್ಕೆ ಸಾಕ್ಷಿ. ನಿಜಕ್ಕೂ ಬುದ್ದಿವನ್ತರಾಗಿದ್ದರೆ ಇಲ್ಲಿಯವರೆಗೆ ತಮ್ಮ ಕ್ಷೇತ್ರಕ್ಕೆ ಎಳ್ಳಿನಷ್ಟೂ ಒಳ್ಳೆಯದು ಮಾಡದ ಧರಂ ಸಿಂಗ್, ಖರ್ಗೆ ಸೋಲಬೇಕಿತ್ತು. ಅವರ ಕ್ಷೇತ್ರಗಳು ಅಭಿವೃದ್ಧಿಯಲ್ಲಿ ಇನ್ನೂ ಇಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಇವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಬಾರಿಯ ಚುನಾವಣಾ ಗಮನಿಸಿದರೆ ಹೆಚ್ಚಿನ ಮತದಾರರು ಹಣ ಹೆಂಡಕ್ಕೆ ಬೆಲೆ ಕೊಟ್ಟಂತಿದೆ. ಧರಂ ಸಿಂಗ್ ಅವರ ಗೆಲುವು ನಿಜವಾಗಿಯೂ ಆಶ್ಚರ್ಯಕರ. ಕ್ಷೇತ್ರದ ನಾಗರಿಗರು ಹಾಗು ಮಾದ್ಯಮಗಳು ಹೇಳುವಂತೆ ಧರಂ ಸಿಂಗ್ ರವರು ಅವರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನೇನೂ ಇಲ್ಲ.

ನನಗನ್ನಿಸುವಂತೆ ನಮಗೆ ಬದಲಾವಣೆ ಬೇಕಾಗಿತ್ತು, ಸ್ವಂತ ಬುದ್ಧಿಯುಳ್ಳ ದಿಟ್ಟ ನಾಯಕ ಬೇಕಾಗಿತ್ತು, ಅದೇ "High command" ಆದೇಶ ಪಾಲಿಸೋ ಸೇವಕನ ಆಡಳಿತವಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನೋದ್ ಮೆಹ್ತಾ ಅವರು ಓಟ್ ಲುಕ್ ನಲ್ಲಿ ಬರೆದಿರುವ ಈ ಲೇಖನ ನೋಡಿ.
http://www.outlookindia.com/fullprint.asp?choice=2&fodname=20090525&fnam\
e=AElection+Extra&sid=1

ದ್ವೇಷರಾಜಕೀಯದ ಬಗ್ಗೆ ಅವರು ವಿಶ್ಲೇಷಿಸುತ್ತಾ ದೇಶದ ಮತದಾರನ ಒಳಮನವನ್ನೂ ತೆರೆದಿಡುತ್ತಾರೆ.

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚುನಾವಣೆಯ ಸಮಯದಲ್ಲಿ ಮಾತ್ರ ರಾಮ ನೆನಪಿಗೆ ಬಂದರೆ ಹೀಗಾಗುತ್ತದೆ.
ಅಲ್ಲದೆ ಈ ಹಿಂಜರಿತದ ಸಮಯದಲ್ಲಿ ಭಾರತ ಗಟ್ಟಿಯಾಗಿದ್ದದ್ದು ವಿದ್ಯಾವಂತರ ಮತವನ್ನ್ನು ಕಾಂಗ್ರೆಸ್ ಗೆ ಕೊಟ್ಟಿವೆ.
ಆದರೆ ಈ ಜನಾದೇಶದಲ್ಲಿ ನಾನು ಮೆಚಿದ ಅಂಶವೆಂದರೆ, ಪ್ರಧಾನಿಯಾಗಲು ಹೊರಟವರನ್ನು ಮತ್ತು ಸರಕಾರವನ್ನು ಆಡಿಸುತ್ತೆವೆ ಅಂದುಕೊಂಡವರ ಹಲ್ಲು ಮುರಿದದ್ದು...... hats off for that.
ಇನ್ನು ಮುಂದಿನ ೫ ವರ್ಷ ಜನಪರ ಕೆಲಸ ಮಾಡಲಿ ಎಂದು ಆಶಿಸುವ.(ಯಾಕೆಂದರೆ ಈಗ ಖುರ್ಚಿ ಗಟ್ಟಿ ಮಾಡುತ್ತ ಇರಬೇಕಾದ ಅಗತ್ಯ ಇಲ್ಲ.)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

I completly endorse the views of Madhu Krishnamurthy.It is the arrogance to blame the common men for their choice to elect UPA. Those who do not know the ground realities and have the development phobia can speak in such an arrogance insultingcollective wisdom. Do not compare India's achievements to that of any developed country, for we the people are incomparable to those who developed other countries. The country's profile is a reflection of the masses it constitutes. However the achievements of India in the last four decades is no mean an achievement. NDA this time could not cheat the voters with its archaic ideas and jingoistic slogans

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪುಟ್ಟಸ್ವಾಮಿಯವರೆ,
ಕಾಮೆಂಟುಗಳನ್ನು ಕನ್ನಡದಲ್ಲಿ ಹಾಕಿ. ಸಂಪದದ ಕನ್ವರ್ಟರ್ ಉಪಯೋಗಿಸಿ ಕನ್ನಡದಲ್ಲಿ ಸುಲಭವಾಗಿ ಟೈಪ್ ಮಾಡಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನ್ ಡಿ ಏ, ಹಿಂಬಾಲಕರ ಪ್ರತಿಕ್ರೀಯೆ 50 ವರ್ಷಗಳ "ಕಲೆಕ್ಟೀವ್ ವಿಸ್ಡ್ಂ" ಬಗ್ಗೆ ಅಂತ ನಿಮಗೆ ತಿಳಿದಿರಲಿಕ್ಕಿಲ್ಲಾ. 50 ವರ್ಷಗಳ "ಕಲೆಕ್ಟೀವ್ ವಿಸ್ಡ್ಂ " ಬಡತನ, ಜಾತೀಯತೆ, ಭಯೊತ್ಪಾತಕತೆ, "democractic institution" ನಾಶಕ್ಕೆ ಕಾರಣವಾಗಿದೆ. ಏನ್ ಡಿ ಏ ನಲ್ಲಿ ೫೦ ವರ್ಷದಿಂದ ಪ್ರತಿಪಕ್ಷ್ಯ ನಾಯಕರಾಗಿ ದೇಶ ಸೇವೆ ಸಲ್ಲಿಸುವ ಜನರಿಗೆ ಯಾವಾಗ ಅವಕಾಶಾ? There is no benchmark for ordinary people to compare 50 years of congress with another. The only thing people of India know is how to turn to Gandhi family, which is busy naming every street and landmark after Gandhi family, instead of giving opportunity to leaders serving democratic duty as opposition, duly for 50 years. Anyway, GPS will have less names to deal with if everything is named after Gandhi family members!

Just like in a corporation, if a leader cannot perform and show results, he/she should be replaced. What do Indians do? They elect same leader over and over for 50 years. Great patience shown by Indian voters!!

Indian election is a complex thing. You cannot simplify it to two things Hindutva and toughness on terrorism, which are ofcourse serious issues as well. Its sad that 50 years of congress has kept the country reeling in poverty and corruption so much, that ordinary Indian is very busy thinking of daily meals at the cost of other serious problems facing the nation. Hence, free TV, free rice, loan waivers resonate with people while Taliban is busy acquiring nuclear missile next door, china knocking doors in Nepal. Free TV, free rice policies will not address long term issues. To change this, it requires structural changes which involves strengthing democratic institutions so that local panchayats can take local decisions. Not some Gandhi family sitting in Delhi imposing emergency whenever it feels like. Note how DR Abdul Kalam is replaced by current ineffective President Mrs Pratibha Patil. Note how congress leaders rush to Delhi to solve simple problems. No wonder Naxalites, border infiltrations etc are on the rise. This is hardly insipiring to anyone who wants to achieve good life for good cause for the country.

Yes, this is definitely about messaging. NDA has not gotten the messaging right. But then, Congress has not done any effective media campaing either. If anything only NDA had election manifesto, congress did not. NDA wanted TV debate, Congress backed out. So its hard to say what works and what does not work. In the end, law of karma will take over. Lets deal with it.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನ್ ಡಿ ಏ, ಹಿಂಬಾಲಕರ ಪ್ರತಿಕ್ರೀಯೆ 50 ವರ್ಷಗಳ "ಕಲೆಕ್ಟೀವ್ ವಿಸ್ಡ್ಂ" ಬಗ್ಗೆ ಅಂತ ನಿಮಗೆ ತಿಳಿದಿರಲಿಕ್ಕಿಲ್ಲಾ. 50 ವರ್ಷಗಳ "ಕಲೆಕ್ಟೀವ್ ವಿಸ್ಡ್ಂ " ಬಡತನ, ಜಾತೀಯತೆ, ಭಯೊತ್ಪಾತಕತೆ, "democractic institution" ನಾಶಕ್ಕೆ ಕಾರಣವಾಗಿದೆ. ಏನ್ ಡಿ ಏ ನಲ್ಲಿ ೫೦ ವರ್ಷದಿಂದ ಪ್ರತಿಪಕ್ಷ್ಯ ನಾಯಕರಾಗಿ ದೇಶ ಸೇವೆ ಸಲ್ಲಿಸುವ ಜನರಿಗೆ ಯಾವಾಗ ಅವಕಾಶಾ? There is no benchmark for ordinary people to compare 50 years of congress with another. The only thing people of India know is how to turn to Gandhi family, which is busy naming every street and landmark after Gandhi family, instead of giving opportunity to leaders serving democratic duty as opposition, duly for 50 years. Anyway, GPS will have less names to deal with if everything is named after Gandhi family members!

Just like in a corporation, if a leader cannot perform and show results, he/she should be replaced. What do Indians do? They elect same leader over and over for 50 years. Great patience shown by Indian voters!!

Indian election is a complex thing. You cannot simplify it to two things Hindutva and toughness on terrorism, which are ofcourse serious issues as well. Its sad that 50 years of congress has kept the country reeling in poverty and corruption so much, that ordinary Indian is very busy thinking of daily meals at the cost of other serious problems facing the nation. Hence, free TV, free rice, loan waivers resonate with people while Taliban is busy acquiring nuclear missile next door, china knocking doors in Nepal. Free TV, free rice policies will not address long term issues. To change this, it requires structural changes which involves strengthing democratic institutions so that local panchayats can take local decisions. Not some Gandhi family sitting in Delhi imposing emergency whenever it feels like. Note how DR Abdul Kalam is replaced by current ineffective President Mrs Pratibha Patil. Note how congress leaders rush to Delhi to solve simple problems. No wonder Naxalites, border infiltrations etc are on the rise. This is hardly insipiring to anyone who wants to achieve good life for good cause for the country.

Yes, this is definitely about messaging. NDA has not gotten the messaging right. But then, Congress has not done any effective media campaing either. If anything only NDA had election manifesto, congress did not. NDA wanted TV debate, Congress backed out. So its hard to say what works and what does not work. In the end, law of karma will take over. Indeed a reality show. Lets deal with it.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.