ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ|| ಗುರುಲಿಂಗ ಕಾಪ್ಸೆ ಅವರ ಸಂದರ್ಶನ (ವೀಡಿಯೊ)

0

ನಾನು ಭಾರತದಲ್ಲಿದ್ದಾಗ ಸಾಹಿತ್ಯ ಸಮಾರಂಭಗಳಿಗೆ ಹೋಗಬೇಕು, ಸಾಹಿತಿಗಳ ಮಾತು ಕೇಳಬೇಕು ಅಂತ ಬಹಳ ಆಸೆ ಇತ್ತು. ಆದರೆ ಇಂತಹ ಕಾರ್ಯಕ್ರಮಗಳೆಲ್ಲ ನನ್ನ ಗಮನಕ್ಕೆ ಬರುತ್ತಿದ್ದುದು ಮಾರನೆ ದಿನ ವಾರ್ತಾಪತ್ರಿಕೆಗಳಲ್ಲಿ ವರದಿ ಓದಿದಾಗ. ಆದರೆ ಅಮೇರಿಕಗೆ ಬಂದ ಮೇಲೆ ನನಗೆ ಇಲ್ಲಿನ ಕನ್ನಡ ಕೂಟ ಹಾಗು ಕಳೆದ ಏಳು ವರುಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಸಾಹಿತ್ಯ ಗೊಷ್ಠಿಗೆ (http://www.sahityagoshti.org/) ಹೋಗುವುದರ ಮೂಲಕ ಕನ್ನಡ ಸಾಹಿತ್ಯದ ಚರ್ಚೆಯಲ್ಲಿ ಭಾಗವಹಿಸಲು ಮತ್ತು ಸಾಹಿತಿಗಳ ಜೊತೆ ಬೆರೆತು ಮಾತನಾಡಲು ಅನೇಕ ಅವಕಾಶಗಳು ಒದಗಿ ಕನ್ನಡ ಸಾಹಿತ್ಯದ ಹಿರಿಮೆ ಎಂತಹುದು ಎಂದು ಅರ್ಥವಾಯಿತು. ಹೋದವಾರ ಖ್ಯಾತ ಸಾಹಿತಿಗಳೂ, ಕರ್ನಾಟಕ ರಾಜ್ಯೊತ್ಸವ ಪ್ರಶಸ್ತಿ ವಿಜೇತರೂ ಹಾಗು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆದಂತಹ ಡಾ|| ಗುರುಲಿಂಗ ಕಾಪ್ಸೆ ಅವರನ್ನು ಸಂದರ್ಶನ ಮಾಡುವ ಸದಾವಕಾಶ ಒದಗಿ ಬಂತು. ಸುಮಾರು ೯೦ ನಿಮಿಷಗಳ ಕಾಲ ಅವರು ಕನ್ನಡ ಭಾಷೆ ಹಾಗು ಸಾಹಿತ್ಯದ ಬಗ್ಗೆ ವಿದ್ವತ್‍ಪೂರ್ಣವಾಗಿಯೂ ಮತ್ತು ರಸವತ್ತಾಗಿಯೂ ಮಾತನಾಡಿದರು. ಈ ಸಂದರ್ಶನದಲ್ಲಿ ಡಾ|| ಕಾಪ್ಸೆ ಅವರು ಕನ್ನಡ ಸಾಹಿತ್ಯದ ಉಗಮ, ಕನ್ನಡ ಸಾಹಿತಿಗಳು. ಕನ್ನಡ ಭಾಷೆಯ ಸ್ಥಿತಿ ಗತಿಗಳು ಹಾಗು ಅದರ ಭವಿಷ್ಯ ಇವೆ ಮುಂತಾದ ವಿಷಯಗಳ ಬಗ್ಗೆ ಬಹಳ ಸರಳವಾಗಿ ಮಾತನಾಡಿದ್ದಾರೆ. ಆತ್ಮೀಯವಾಗಿ ಅವರು ನೀಡಿದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ದಯವಿಟ್ಟು ಗಮನಿಸಿ: ಈ ಸಂದರ್ಶನವನ್ನು ನಾನು ಸಂಕಲನ ಮಾಡದೆ ಅಪ್‍ಲೋಡ್ ಮಾಡಿದ್ದೇನೆ. ನಿಮ್ಮ ಸಲಹೆಗಳೇನಾದರು ಇದ್ದರೆ ದಯವಿಟ್ಟು ತಿಳಿಸಿ. ಸಂದರ್ಶನದ ವೀಡಿಯೊ ಇಲ್ಲಿದೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಧು ಅವರೆ,

ಸಂದರ್ಶನ- ಸಂಭಾಷಣೆ ಚೆನ್ನಾಗಿದೆ.

ಅಂದಹಾಗೆ, ೧:೨೦ ರ ಸಮಯದಲ್ಲಿ ಬಂದಿರುವ "ಗಂಡರೋ ನೀವ್ ಷಂಡರೋ ಹೇಳೆಂದಳಿಂದುಮುಖಿ" ಅನ್ನುವ ಸಾಲು ಕುಮಾರವ್ಯಾಸ ಭಾರತದಲ್ಲೇ ಬರುತ್ತೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಮಪ್ರಸಾದ ಧನ್ಯವಾದಗಳು. ನಾನು ಈ ಹೊತ್ತೇ ನಿಮ್ಮ ಕಾಮೆಂಟ್ ನೋಡಿದೆ. ಗಂಡರೋ... ಸಾಲಿನ ಬಗ್ಗೆ ಮಾಹಿತಿ ನೀಡಿದ್ದಕ್ಕೆ ವಂದನೆಗಳು.
ಮಧು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.