ಈ ಮಳೆಯೇ ಹಾಗೆ...

0

ಈ ಮಳೆಯೇ ಹಾಗೆ...
ನಮ್ಮೂರಿನ ಮಳೆಯಂತಿಲ್ಲ ಇದು
ಮಳೆ ಬಂದ ಕೂಡಲೇ ಮಣ್ಣಿನ
ವಾಸನೆ ಮೂಗನ್ನು ಮೆತ್ತಿ ಕೊಳ್ಳುವುದಿಲ್ಲ...

ಈ ಮಳೆಯೇ ಹಾಗೆ...
ಮನೆ ಬಿಟ್ಟು ಹೊರಗೆ ಕಾಲಿಡಲು ಬಿಡುವುದಿಲ್ಲ
ಚರಂಡಿ ನೀರು ರೋಡಲ್ಲಿ ಹರಿದರೂ
ನಾವ್ಯಾರು ತಲೆ ಕೆಡಿಸಿಕೊಂಡಂತ್ತಿಲ್ಲ

ಈ ಮಳೆಯೇ ಹಾಗೆ...
ಬಿರುಸಿನ ಮಳೆಗೆ ಕೊಡೆ ಹಾರುವುದಿಲ್ಲ
ರೈನ್್ಕೋಟ್್ಗಳೆಡೆಯಲ್ಲಿ ಮಿಣುಕುವ
ಕಣ್ಣುಗಳು ಲಿಫ್ಟ್ ಕೇಳಿದರೂ ಕೊಡುವುದಿಲ್ಲ



ಈ ಮಳೆಯೇ ಹಾಗೆ...
ಒಮ್ಮೆ ಪಿರಿ ಪಿರಿ, ಎಡೆ ಬಿಡದೆ ಸುರಿಯೆ ಕಿರಿಕಿರಿ
ಕೆಂಪು ದೀಪದಡಿಯಲ್ಲಿ ವಿಷಣ್ಣನಾಗಿ ನಿಂತ ಗಾಡಿಗಳ
ಗಾಲಿಗಳು ಮುಂದೆ ಚಲಿಸುವುದೇ ಇಲ್ಲ

ಈ ಮಳೆಯೇ ಹಾಗೆ...
ತಂಗಾಳಿಯೊಂದಿಗೆ ನೆನಪು ಹೊತ್ತು ತರುತಿದೆ
ಕಳೆದ ಬಾಲ್ಯ, ಯೌವನದ ಮಿಡಿತ ತುಡಿತದೊಳು
ಕಣ್ಣೀರಾಗಿ ಹರಿದು, ಮತ್ತೆ ಮೋಡವಾಗುತಿದೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಂದು ರೀತಿ ಮಳೆಯೇ ಹಾಗೆ.. ಮರೆತದ್ದೆಲ್ಲವನ್ನೂ ಪುನಃ ನೆನಪಿಸುವ ಕೊಂಡಿಯ ಹಾಗೆ ನಗರಗಳಲ್ಲೋ ಚರಂಡಿಗಳ ನೀರು ರಸ್ತೆಯಲ್ಲಿ ಹರಿಯುವ ಹಾಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಮಳೆಯೇ ಹಾಗೆ...ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.