rashmi_pai ರವರ ಬ್ಲಾಗ್

ಕಳೆದು ಹೋದ ಬೀಗದ ಕೀ

ನಮ್ಮ ಪಿಜಿಯ ಮೂರನೇ ಮಹಡಿಯಲ್ಲಿದ್ದ ನನ್ನ ರೂಮಿನಿಂದ 6 ನೇ ಮಹಡಿಗೆ ಹೋಗುತ್ತಿದ್ದೆ, ಬಟ್ಟೆ ಒಗೆಯೋಕೆ. ಬಟ್ಟೆ ತುಂಬಿದ ಬಕೆಟ್ ಹಿಡ್ಕೊಂಡು ಒಂದೊಂದೇ ಮೆಟ್ಟಿಲು ಹತ್ತುತ್ತಿರಬೇಕಾದರೆ 5ನೇ ಮಹಡಿಯಲ್ಲಿ ನೀಲಿ ಡಸ್ಟ್ ಬಿನ್ ಪಕ್ಕ ಒಂದು ಪುಟ್ಟ ಬೀಗದ ಕೀ ಬಿದ್ದಿತ್ತು. ಅಂಥದ್ದೇ ಕೀ ನನ್ನಲ್ಲಿಯೂ ಇತ್ತು. ಆದರೆ ನನ್ನ ಕೀ ಯಾವತ್ತೂ ಪರ್ಸ್‌ನಲ್ಲೇ ಇರುತ್ತೆ. ಅದು ಬಿದ್ದರೂ ನನ್ನ ರೂಂನಲ್ಲೇ ಬೀಳಬೇಕು. ಐದನೇ ಮಹಡಿಯಲ್ಲಿ ಬೀಳೋಕೆ ಹೇಗೆ ಸಾಧ್ಯ? ಎಂದು ನನ್ನನ್ನ ನಾನೇ ಸಮಧಾನಿಸುತ್ತಾ ಬಟ್ಟೆ ಒಗೆಯಲು ಹೋದೆ. ಬಟ್ಟೆ ಒಗೆಯುವಾಗಲೂ ಆ ಕೀ ತುಂಬಾನೇ ಕಾಡುತ್ತಿತ್ತು. ಯಾರ ಕೀ ಆಗಿರಬಹುದು? ಯಾವ ಹುಡುಗಿಯ ಕೈಯಿಂದ ಬಿತ್ತೇನೋ...ಕೀ ಕಳೆದುಕೊಂಡ ಹುಡುಗಿಯ ಸ್ಥಿತಿ ಹೇಗಿರುತ್ತದೋ ಏನೋ? ಮನಸ್ಸಲ್ಲಿ ಸಾಲು ಸಾಲು ಪ್ರಶ್ನೆಗಳು.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಂದಮಾಮನಲ್ಲಿಂದ ಬಂದವ..

ರಿಮೋಟ್ ಕೈಯಲ್ಲಿ ಹಿಡಿದು ಚಾನೆಲ್ ಬದಲಿಸುತ್ತಾ ಕುಳಿತಿದ್ದೆ.

ಥಟ್ಟನೆ ಅವನು ಬಂದು ನನ್ನ ಮಡಿಲಲ್ಲಿ ಮಲಗಿದ.

ನೀನ್ಯಾರು? ಎದ್ದೇಳು...

ನಿನಗೆ ಗೊತ್ತಿಲ್ವಾ ನಾನ್ಯಾರೆಂದು? ಕಳ್ಳಿ!

ನೀನ್ಯಾರೆಂದು ನನಗೆ ಗೊತ್ತಿಲ್ಲ... ಮನೆಯೊಳಗೆ ಹೇಗೆ ಬಂದೆ?

ಸೆಕ್ಯೂರಿಟಿ....ನಾ ಕೂಗತೊಡಗಿದೆ.

ಪ್ರಿಯೇ...ಗಾಬರಿಯಾಗಬೇಡ...ನಾನ್ಯಾರೆಂದು ಗೊತ್ತಿಲ್ಲವೇ?

ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳು ನೋಡೋಣ...ಮೆಲ್ಲನೆ ನನ್ನ ಗಲ್ಲ ಹಿಂಡಿದ..

ಮೈ ಬೆವರುತ್ತಿತ್ತು... ನನಗೆ ಗೊತ್ತಿಲ್ಲ...

ಅಂತ ಹೇಳಿದೆ ತಾನೇ? ನಡಿ ಹೊರಗೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಮುಚ್ಚಿದ ಬಾಗಿಲು

ವನ ಕೋಣೆಯ ಬಾಗಿಲು ಮುಚ್ಚಿಯೇ ಇರುತ್ತಿತ್ತು. ಬೆಳಗ್ಗೆ ಸುಮಾರು ಏಳು ಗಂಟೆಯ ಹೊತ್ತಿಗೆ ಯಶು ಆತನ ಕೋಣೆಯ ಬಳಿ ಹಾಲು ತೆಗೆದುಕೊಂಡು ಬರುತ್ತಿದ್ದಳು. ಅವನ ಕೋಣೆಯ ಬಾಗಿಲು ತೆರೆಯಲು ಯಾವುದೇ ಕಾಲಿಂಗ್ ಬೆಲ್‌ನ ಆವಶ್ಯಕತೆ ಇರುತ್ತಿರಲಿಲ್ಲ. ಯಶು ಧರಿಸಿದ್ದ ಕಾಲ್ಗೆಜ್ಜೆಯ ಸದ್ದು ಕೇಳಿದರೆ ಸಾಕು ಬಾಬು ಬಾಗಿಲು ತೆರೆಯುತ್ತಿದ್ದ. ಯಶುವಿನ ಕೈಯಿಂದ ಹಾಲಿನ ಪಾತ್ರೆ ತೆಗೆದುಕೊಂಡು ಅದನ್ನು ಇನ್ನೊಂದು ಪಾತ್ರೆಗೆ ಹಾಕಿ ಖಾಲಿ ಬಾಟಲಿಯನ್ನು ಆಕೆಗೆ ಕೈಗಿತ್ತು ಮತ್ತೆ ಬಾಗಿಲು ಮುಚ್ಚಿಕೊಳ್ಳುತ್ತಿದ್ದ. ಸುಮಾರು 25ರ ಹರೆಯದ ಆ ಯುವಕ ಏನು ಮಾಡುತ್ತಿದ್ದಾನೆ?  ಎಂದು ಯಾರಿಗೂ ಗೊತ್ತಿರಲಿಲ್ಲ. ಯಶು ಏನಾದರೂ ಪ್ರಶ್ನೆ ಕೇಳಿದರೆ 'ಹಾಂ.. ಹೂಂ' ಎಂಬ ಉತ್ತರವನ್ನು ಮಾತ್ರ ನೀಡುತ್ತಿದ್ದ.

ಅಂದ ಹಾಗೆ ಬಾಬು 'ಕಯ್ಯೂರ್‌' ಎಂಬ ಈ ಗ್ರಾಮಕ್ಕೆ ಯಾಕಾಗಿ ಬಂದನೆಂದು ಯಾರಿಗೂ ಈವರೆಗೆ ಗೊತ್ತಿಲ್ಲ. ಮಾತಿಗೆ ಸಿಗುವ ಹುಡುಗ ಅವನಲ್ಲ. ಕಾಣಲು ಸ್ಪುರದ್ರೂಪಿ, ಉದ್ದನೆಯ ಪೈಜಾಮ ಹಾಕಿ ಎಡ ತೋಳಲ್ಲಿ ಒಂದು ಜೋಳಿಗೆ ಸಿಕ್ಕಿಸಿ ಕೆಲವೊಂದು ದಿನ ಆ ಊರಲ್ಲಿ ಒಂದಿಷ್ಟು ತಾಸು ಸುತ್ತಾಡುವುದನ್ನು ಬಿಟ್ಟರೆ ಬೇರೇನು ಮಾಡುತ್ತಿದ್ದಾನೆ ಎಂದು ಯಾರೂ ಕೇಳುತ್ತಿರಲಿಲ್ಲ. ಇರಲಿ ಬಿಡಿ, ನಮಗೆ ಯಾಕೆ ಈ ಉಸಾಬರಿ ಎಂದು ಹೇಳುವವರೇ ಬಹುತೇಕ ಮಂದಿ. ಏನೋ ಪ್ರಾಜೆಕ್ಟ್ ಮಾಡಲಿಕ್ಕೆ ಬಂದಿದ್ದಾನಂತೆ ಅವ ಎಂದು ಯಾರೋ ಹೇಳಿದ್ದರು.

ಆದರೆ ಬಾಬು ಇಲ್ಲಿಗೆ ಬಂದು ತಿಂಗಳಾಯ್ತು. ಯಾರಲ್ಲೂ ಹೆಚ್ಚಿಗೆ ಮಾತುಕತೆಯಿಲ್ಲ. ಆತನ ಕೋಣೆಯ ಕಿಟಿಕಿ ಬಾಗಿಲು ಸದಾ ಮುಚ್ಚಿಕೊಂಡೇ ಇರುತ್ತದೆ. ಯಶು ಹಾಲು ತಂದಾಕ್ಷಣ ಮಾತ್ರ ಒಂದೆರಡು ನಿಮಿಷ ಬಾಗಿಲು ತೆರೆದು ಕೊಳ್ಳುತ್ತದೆ. ಮತ್ತೆ...ಅದೇ ಮುಚ್ಚಿದ ಬಾಗಿಲು.

ಅಪರೂಪಕ್ಕೊಮ್ಮೆ ಕಣ್ಣೇಟ್ಟನ್‌ರ  ಚಹಾದಂಗಡಿಗೆ ಬಂದು ಕಟ್ಟನ್ ಚಾಯ ಕುಡಿಯುವುದನ್ನು ಬಿಟ್ಟರೆ ಆತ ಬೇರೆ ಕಡೆಯಿಂದ ಯಾವುದೇ ವಸ್ತು ಖರೀದಿಸುವುದನ್ನು ಈವರೆಗೆ ಯಾರೂ ಕಂಡವರಿಲ್ಲ. ಇವನೇನು ಗಾಳಿ ಮಾತ್ರ ಸೇವಿಸಿ ಬದುಕುತ್ತಾನೆಯೇ? ಅಥವಾ ಮನೆಯೊಳಗೆಯೇ ಎಲ್ಲಾ ವಸ್ತುಗಳನ್ನು ಉತ್ಪಾದಿಸುವ ಯಂತ್ರವಿದೆಯೇ? ಎಂದು ಜನರಾಡಿಕೊಳ್ಳುತ್ತಿದ್ದರು. ಆತನ ಕೋಣೆಯ ಬಳಿ ಯಶು ಬಿಟ್ಟರೆ ಬೇರೆ ಯಾರೂ ಸುಳಿದಾಡುತ್ತಿರಲಿಲ್ಲ. ಯಶು ಅಂದರೆ ಬಾಬು ಬಾಡಿಗೆಗೆ ಇದ್ದಾನಲ್ಲಾ ಆ ಮನೆಯ ಮಾಲೀಕರ ಮಗಳು. ಇಗಷ್ಟೇ ಹತ್ತನೇ ಕ್ಲಾಸು ಮುಗಿಸಿದ್ದಾಳೆ. ಯಶುಗೆ ಬಾಬುವನ್ನು ಕಂಡರೆ ಏನೋ ಆಕರ್ಷಣೆ. ಆದರೆ ಅವನು ಒಂದು ದಿನವಾದರೂ ಯಶುವಿನ ಮುಖ ಸರಿಯಾಗಿ ನೋಡಿರಲೇ ಇಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.9 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಹಿಸಿಕೊಳ್ಳುವುದಕ್ಕಿಂತ ತಿರುಗೇಟು ನೀಡುವುದೇ ಒಳ್ಳೇದು ಎಂದು ಅನಿಸಲ್ವಾ?

ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು ಮುಂದುವರಿದಿದ್ದೇವೆ, ಅಬಲೆಯಲ್ಲ ಸಬಲೆ ಎಂದು ನಾನೂ ಸೇರಿದಂತೆ ಮಹಿಳೆಯರೆಲ್ಲಾ ಗಟ್ಟಿಯಾಗಿ ಕೂಗಿ ಹೇಳುತ್ತಿದ್ದೇವೆ. ಹೆಣ್ಣು ಅಬಲೆಯಿಂದ ಸಬಲೆಯಾಗಿ ಬಡ್ತಿ ಪಡೆದಿದ್ದರೂ ದೌರ್ಜನ್ಯ , ಕಿರುಕುಳಗಳು ಮಾತ್ರ ಅವಳ ನೆರಳಂತೆ ಹಿಂಬಾಲಿಸುತ್ತಿವೆ. ಹಳ್ಳಿಯಲ್ಲಿದ್ದರೂ, ನಗರದಲ್ಲಿದ್ದರೂ ಮಹಿಳೆ ದೌರ್ಜನ್ಯಕ್ಕೊಳಗಾಗುವುದು ತಪ್ಪಿಲ್ಲ. ಅಲ್ಲಿ ಹಾಗಾಯ್ತು, ಇಲ್ಲಿ ಹೀಗಾಯ್ತು ಎಂದು ಎಂಬ ವರದಿಗಳನ್ನೋದಿದಾಗ ಅಯ್ಯೋ ಪಾಪ ಎಂದು ಎನಿಸುತ್ತದೆ. ಆದರೆ ಇದಕ್ಕೆ ಪರಿಹಾರ ಏನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (15 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಿಎಂಟಿಸಿ ಬಸ್ಸು ಪ್ರಯಾಣ: ಅನುಭವಗಳ ಬುತ್ತಿಯಿಂದ...

ಯಾವತ್ತೂ ನಮಗಾಗಿ ಪ್ರಾರ್ಥಿಸಬಾರದಂತೆ, ಇನ್ನೊಬ್ಬರಿಗೆ ಪ್ರಾರ್ಥಿಸಬೇಕು ಅಂತಾರಲ್ಲ...ನಾವೂ ಹಾಗೆ ಇನ್ನೊಬ್ಬರಿಗಾಗಿ ಪ್ರಾರ್ಥಿಸುತ್ತೇವೆ. ಅದ್ಯಾವಾಗ ಗೊತ್ತಾ? ಬಸ್ ಸ್ಟಾಪ್ ನಲ್ಲಿ ನಿಂತಿರುವಾಗ...ಬಸ್ ಸ್ಟಾಪ್ ನಲ್ಲಾ? ಆಶ್ಚರ್ಯ ಆಯ್ತಾ? ಹೌದಪ್ಪಾ...ಪಿಜಿಯಿಂದ ಅವಸರವಸರವಾಗಿ ಓಡಿಕೊಂಡು ಬಂದು ಹರಿಶ್ಚಂದ್ರ ಘಾಟ್! ಬಸ್ ಸ್ಟಾಪ್ ನಲ್ಲಿ ಶಿವಾಜಿನಗರಕ್ಕೆ ಹೋಗುವ ಬಸ್ ಗಾಗಿ ಕಾಯುತ್ತಿರುವಾಗ ಅಲ್ಲಿನ ಜನಸಂಖ್ಯೆ ಜಾಸ್ತಿಯಿದ್ದರೆ...ದೇವರೆ ಇವರೆಲ್ಲ ಮೆಜೆಸ್ಟಿಕ್ ಗೋ, ಮಾರ್ಕೆಟ್ ಕಡೆಗೋ ಹೋಗುವವರಾಗಿರಲಿ...ಶಿವಾಜಿನಗರಕ್ಕೆ ಹೋಗುವ ಬಸ್ ನವರಂಗ್ ನಿಂದ ಬರುವಾಗಲೇ ಜನರನ್ನು ತುಂಬಿಸಿಕೊಂಡು ಬರ್ತಿದೆ. ಇನ್ನು ಇವರೆಲ್ಲರೂ ಅದೇ ಬಸ್ ಗೆ ಬಂದ್ರೆ ಪಡ್ಚ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - rashmi_pai ರವರ ಬ್ಲಾಗ್